ಭಾರತಕ್ಕೆ ಮತ್ತೆ ಶುರುವಾಯ್ತು ಫಾಲೋ ಆನ್ ಭೀತಿ! – ಫಾಲೋ ಆನ್ ರೂಲ್ಸ್ ಎಂದರೇನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯದಲ್ಲೇ ಈ ಫಾಲೋ ಆನ್ ರೂಲ್ಸ್ ಸಾಕಷ್ಟು ಸದ್ದು ಮಾಡಿತ್ತು. ಆದ್ರೆ ಆವತ್ತು ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಜವಾಬ್ದಾರಿಯುತವಾಗಿ ಆಡಿದ್ರಿಂದ ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡಿತ್ತು. ಬಟ್ ಈಗ ನಾಲ್ಕನೇ ಪಂದ್ಯದಲ್ಲೂ ಅದೇ ಭೀತಿ ಕಾಡ್ತಿದೆ. ಪ್ರಸ್ತುತ ಭಾರತ 164 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಮುಗಿಸಿದೆ. 310 ರನ್ಗಳ ಭಾರೀ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ 3ನೇ ದಿನ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 111ರನ್ಗಳಿಸಬೇಕಿಕು. ಒಂದು ವೇಳೆ ಭಾರತ ಶನಿವಾರ 275 ರನ್ ಗಳಿಸಲು ವಿಫಲವಾದರೆ ಆಸ್ಟ್ರೇಲಿಯಾ ಫಾಲೋ ಆನ್ ಏರುವ ಸಾಧ್ಯತೆ ಇದೆ.
ಇದನ್ನೂ ಓದಿ: ಬ್ಯಾಟಿಂಗ್ ಕ್ರಮಾಂಕ ಬದಲಾದ್ರೂ ಬದಲಾಗದ ನಸೀಬು! – HITಮ್ಯಾನ್ ನಿವೃತ್ತಿ ಟೈಮ್ ಬಂತಾ?
ಫಾಲೋ ಆನ್ ರೂಲ್ಸ್ ಎಂದರೇನು?
ಈ ಫಾಲೋ ಆನ್ ರೂಲ್ಸ್ ಏನು ಅನ್ನೋದು ಕೆಲವ್ರಿಗೆ ಗೊತ್ತಿಲ್ಲ. ಅದನ್ನ ಸಿಂಪಲ್ಲಾಗಿ ಹೇಳ್ತೇನೆ ನೋಡಿ. ಈಗ ಆಸ್ಟ್ರೇಲಿಯಾ ತಂಡ ಫಸ್ಟ್ ಬ್ಯಾಟಿಂಗ್ ಮಾಡಿ 474 ರನ್ ಗಳನ್ನ ಕಲೆ ಹಾಕಿದೆ. ಇನ್ನಿಂಗ್ಸ್ ಆರಂಭಿಸಿರೋ ಭಾರತ 164 ರನ್ ಗಳಿಗೆ ಔಟ್ ಆಗಿದೆ. ಬಟ್ ನಾಳಿನ ಪಂದ್ಯದಲ್ಲಿ ಭಾರತ 275 ರನ್ ಗಳಿಸಲೇಬೇಕು. ಅಂದ್ರೆ ಈಗಿರೋ 164 ರನ್ ಗಳಿಗೆ 111 ರನ್ ಸೇರಿಸ್ಬೇಕು. ಈ 111 ರನ್ ಗಳಿಸದೇ ಭಾರತ ಆಲೌಟ್ ಆದ್ರೆ ಆಗ ಆಸ್ಟ್ರೇಲಿಯಾ ಫಾಲೋ ಆನ್ ಹೇರುವ ಅವಕಾಶ ಪಡ್ಕೊಳ್ಳುತ್ತೆ. MCC ಕಾನೂನು 14.1.1 ರ ಪ್ರಕಾರ ಮೊದಲು ಬ್ಯಾಟಿಂಗ್ ಮಾಡಿದ ತಂಡ 200 ರನ್ಗಳಿಗಿಂತ ಹೆಚ್ಚು ಮುನ್ನಡೆ ಸಾಧಸಿದ್ರೆ ಫಾಲೋ ಆನ್ ಹೇರಬಹುದು. ಅಂದ್ರೆ ಬ್ಯಾಟಿಂಗ್ ಮಾಡ್ತಿರೋ ಭಾರತ ಆಸ್ಟ್ರೇಲಿಯಾ ಈಗಾಗ್ಲೇ ಕಲೆಹಾಕಿರುವ ರನ್ಸ್ ಪೈಕಿ 200 ರನ್ ಗಳಿಗಿಂತ ಹೆಚ್ಚು ಹಿನ್ನಡೆ ಸಾಧಿಸಿ ಆಲೌಟ್ ಆದ್ರೆ ಆಸ್ಟ್ರೇಲಿಯಾ ಫಾಲೋ ಆನ್ ರೂಲ್ಸ್ ಹೇರುತ್ತೆ. ಆಗ ಆಲೌಟ್ ಆಗಿರೋ ಭಾರತ ಮತ್ತೆ ಆ 200 ರನ್ ಗಳನ್ನ ಚೇಸ್ ಮಾಡೋಕೆ ಶುರು ಮಾಡ್ಬೇಕು. 200 ರನ್ ಗಳಿಸುವಷ್ಟ್ರಲ್ಲೇ ಭಾರತ ಆಲೌಟ್ ಆದ್ರೆ ಆಸ್ಟ್ರೇಲಿಯಾ ಪಂದ್ಯವನ್ನ ಗೆಲ್ಲುತ್ತೆ. ಅಕಸ್ಮಾತ್ 300 ರನ್ ಕಲೆಹಾಕಿದ್ರೆ ಆ 200 ರನ್ ಗಳನ್ನ ಮೈನಸ್ ಮಾಡಿ ಆಸ್ಟ್ರೇಲಿಯಾ ಉಳಿದ 100 ರನ್ ಗಳಿಸಿದ್ರೂ ಮ್ಯಾಚ್ ವಿನ್ ಆಗುತ್ತೆ.