ಭಾರತವಿಲ್ಲದೇ ಬದುಕುತ್ತಾ ಬಾಂಗ್ಲಾ? – ಪಾಕ್ನಂತೆ ಬಿಕ್ಷಾ ಪಾತ್ರೆ ಹಿಡಿಯುತ್ತಾ?
ಮಿಲಿಟರಿ ಬಳಸದೆ ಭಾರತ ಯುದ್ಧ!
ಬಾಂಗ್ಲಾದೇಶದ ಆಡಳಿತಸೂತ್ರವನ್ನು ತನ್ನ ಕೈವಶ ಮಾಡಿಕೊಂಡಿರುವ ಮೊಹಮ್ಮದ್ ಯೂನಸ್ ಸರ್ಕಾರಕ್ಕೆ ಪಾಕಿಸ್ತಾನದ ಜತೆಗೆ ಬೆಚ್ಚಗಿನ ಸ್ನೇಹ ಜೋರಾಗಿದೆ. ಹೀಗಾಗಿ ಭಾರತದ ಜತೆ ಬಾಂಗ್ಲಾದೇಶ ಕ್ಯಾತೆ ತೆಗೆಯುತ್ತಲೇ ಇದೆ. ಬಾಂಗ್ಲಾದೇಶದಲ್ಲಿ ಅಳಿದುಳಿದಿದ್ದ ಹಿಂದುಗಳ ಪೈಕಿ ನೌಕರಿಗಳಲ್ಲಿದ್ದವರೆಲ್ಲ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿನಿತ್ಯ ಅಲ್ಲಿ ಮುಸ್ಲಿಂರು ಹಿಂದೂಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಹೀಗೆ ಸಾಕಷ್ಟು ವಿಚಾರದಲ್ಲಿ ಬಾಂಗ್ಲಾ ಬಾಲ ಬಿಚ್ಚುತ್ತಿದೆ. ಆದ್ರೆ ಭಾರತ ಇವೆಲ್ಲವನ್ನೂ ನೋಡಿಕೊಂಡು ಸುಮ್ಮನಿದೆ.. ಒಂದು ಕ್ಷಣ ಸಿಡಿದು ನಿಂತ್ರೆ ಬಾಂಗ್ಲಾ ಭೂಪಟದಲ್ಲಿಯೇ ಇರಲ್ಲ..
ಇದನ್ನೂ ಓದಿ :ರೋಹಿತ್ ಶರ್ಮಾ ಕಳಪೆ ಪ್ರದರ್ಶನ – ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ಒಲಿಯುತ್ತಾ?
ಅಂಕಿ-ಅಂಶದ ಪ್ರಕಾರ ಬಾಂಗ್ಲಾ ಸರ್ಕಾರದ ಬಳಿ 11.48 ಲಕ್ಷ ಟನ್ಗಳಷ್ಟು ಆಹಾರಧಾನ್ಯ ದಾಸ್ತಾನಿದೆ. ಈ ಪೈಕಿ 7.48 ಲಕ್ಷ ಟನ್ ಅಕ್ಕಿಯಿದೆ. ವರ್ಷಕ್ಕೆ ಬಾಂಗ್ಲಾದೇಶದ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದಕ್ಕೆ ಬೇಕಾಗುವ ಧಾನ್ಯದ ಪ್ರಮಾಣ 26.52 ಲಕ್ಷ ಟನ್. ಕಮ್ಮಿಯಾಗೋ ಆಹಾರಧಾನ್ಯಕ್ಕೆ ಹೊಸದಾಗಿ ಬತ್ತದ ಬೆಳೆ ಕೈಗೆ ಬರುತ್ತದೆ ಅಂತ ಹೇಳಿದ್ರು, ಬೆಳೆ ಕೈ ಕೋಟ್ರೆ ಏನು ಅನ್ನೋ ಪ್ರಶ್ನೆಗಳಿಗೆ ಉತ್ತರವಿಲ್ಲ. ನಾವು ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಯಾವುದೇ ದೇಶ ಕೇವಲ ಪಡಿತರದ ಬೇಡಿಕೆ ಈಡೇರಿಸಿದರೆ ಸಾಲದು. ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿಯೂ ಕೈಗೆಟಕುವ ದರದಲ್ಲಿರಬೇಕಾಗುತ್ತದೆ. ಇಲ್ಲದಿದ್ದರೆ ಹಣದುಬ್ಬರ ಏರಿ ಅರಾಜಕತೆಗೆ ದಾರಿಯಾಗುತ್ತದೆ. ಬಾಂಗ್ಲಾದೇಶದ ಆಹಾರಧಾನ್ಯ ಕೊರತೆ 2 -3 ವರ್ಷದಲ್ಲಿ ಸರಿ ಹೋಗಲ್ಲ, ಮತ್ತಷ್ಟು ಜಾಸ್ತಿನೇ ಆಗುತ್ತೆ.. ಯಾಕೆ ಅಂತ ಕೇಳೂಬಹುದು.. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದಲ್ಲಿ ನಿರಂತರವಾಗಿ ನೆರೆ ಕಾಡುತ್ತಿದೆ. ಹಾಗೇ ಸಮುದ್ರದ ಉಬ್ಬರಗಳು ಆಹಾರ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಸಮುದ್ರ ತೀರಕ್ಕೆ ಹೊಂದಿಕೊಂಡಿದ್ದ ಬಹುದೊಡ್ಡ ಬತ್ತ ಬೆಳೆಯುವ ಪ್ರದೇಶವು ಸಮುದ್ರದ ಉಬ್ಬರದಿಂದ ಮಣ್ಣನ್ನು ಲವಣಮಯವಾಗಿಸಿಕೊಳ್ಳುತ್ತೆ.. ಆಗ ಆ ಭೂಮಿ ಕೃಷಿಗೆ ಯೋಗ್ಯವಾಗಿರುವುದಿಲ್ಲ. 2050ರ ಹೊತ್ತಿಗೆ ಬಾಂಗ್ಲಾದೇಶದ ಶೇ. 17ರಷ್ಟು ಭೂಭಾಗ ಸಮುದ್ರ ತಳ ಸೇರಿರುತ್ತದೆ ಎಂದು ಅಧ್ಯಯನ ವರದಿಗಳು ಸಾರಿವೆ. ಈಗಾಗಾಲೇ ಕೃಷಿ ಅವಲಂಬಿಸಿದ್ದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಇಂದಿಗೂ ಮುಂದಿಗೂ ಬಾಂಗ್ಲಾದೇಶದ ಆಹಾರ ಬೇಡಿಕೆಗೆ ಪೂರೈಕೆ ಜಾಲವಾಗಬಲ್ಲ ಏಕೈಕ ದೇಶ ಅಂದ್ರೆ ಅದು ಭಾರತ ಮಾತ್ರ.
ಮಿಲಿಟರಿ ಬಳಸದೆ ಬಾಂಗ್ಲಾ ಜೊತೆ ಭಾರತ ಯುದ್ಧ
ಈಗ ಬಾಂಗ್ಲಾದೇಶವು ಭಾರತದಿಂದ 50 ಸಾವಿರ ಟನ್ ಆಹಾರ ಸಾಮಾಗ್ರಿಗಳನ್ನ ಖರೀದಿಗೆ ಮುಂದಾಗಿದೆ. ಒಂದು ವೇಳೆ ಆಹಾರ ಸಾಮಾಗ್ರಿ ಹಾಗೂ ಭವಿಷ್ಯದಲ್ಲಿ ಅಲ್ಲಿಗೆ ವ್ಯಾಪಾರವಾಗಿಹೋಗಲಿರುವ ಅಕ್ಕಿಯನ್ನು ಭಾರತ ತಡೆದರೆ ಏನಾಗುತ್ತೆ ಅನ್ನೋದನ್ನ ತಡದ್ರೆ ಬಾಂಗ್ಲಾ ಕತೆ ಪಿಚ್ಚರ್ ಬೀಡುತ್ತೆ.. ಮಿಲಿಟರಿಯನ್ನು ಬಳಸದೆಯೇ ಬಾಂಗ್ಲಾದೇಶದ ಮೇಲೆ ಶಸ್ತ್ರಪ್ರಯೋಗ ಮಾಡಿದಂತಾಗುತ್ತದೆ ಭಾರತ. ಪಾಕಿಸ್ತಾನಕ್ಕೆ ಸಿಂಧು ನದಿಯ ನೀರಿನ ಪಾಲಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೊಮ್ಮೆ “ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದು ಸಾಧ್ಯವಿಲ್ಲ” ಎಂದು ಹೇಳಿದ್ದಾಗಿ ವರದಿಯಾಗಿತ್ತು.. ಭಾರತಕ್ಕೆ ಮಗ್ಗಲ ಮುಳ್ಳಾಗಿರೋ ಬಾಂಗ್ಲಾದೇಶಕ್ಕೂ ಅಕ್ಕಿ ವಿಚಾರದಲ್ಲೂ ಅಂಥದೇ ಮಾತುಗಳನ್ನ ಹೇಳಬೇಕು ಅನಿಸುತ್ತೆ.. ಅದ್ರೆ ಅಲ್ಲೂ ಮನುಷ್ಯರೇ ಇರೋದ್ ಅಲ್ವಾ ನಾವು ಯೋಚಿಸಿದ್ರೆ, ಅಲ್ಲಿರೋ ಮನುಷ್ಯರು ಮಣ್ಣು ತಿನ್ನೋ ಕೆಲಸ ಮಾಡುತ್ತಿದ್ದಾರೆ. ನಾವು ಹಾಕಿದ ಬಿಕ್ಷೆಯಲ್ಲೇ ಬದುಕುತ್ತಿರೋ ಬಾಂಗ್ಲಾ ಪಾಕ್ ಜೊತೆ ಸೇರಿ ನಮ್ಮ ಮೇಲೆ ಕತ್ತಿ ಮಸೆಯುತ್ತಿದೆ. ಒಂದು ವೇಳೆ ಅಕ್ಕಿ ವಿಚಾರದಲ್ಲಿ ಭಾರತ ಗಟ್ಟಿಯಾದ ನಿರ್ಧಾರ ತೆಗೆದುಕೊಂಡ್ರೆ, ಬಾಂಗ್ಲಾ ಹಸಿವಿನಿಂದ ಸಾಯೋದ್ ಪಕ್ಕಾ.