ಬ್ಯಾಟಿಂಗ್ ಕ್ರಮಾಂಕ ಬದಲಾದ್ರೂ ಬದಲಾಗದ ನಸೀಬು! – HITಮ್ಯಾನ್ ನಿವೃತ್ತಿ ಟೈಮ್ ಬಂತಾ?
5 ಬಾಲ್.. 3 ರನ್.. ರೋಹಿತ್ ಶರ್ಮಾಗೆ ಏನಾಯ್ತು?

ಮೊದ್ಲೆಲ್ಲಾ ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬಂದ್ರೆ ಹೊಡಿಬಡಿ ಆಟ ಆಡ್ತಿದ್ರು. ಅರ್ಧ ಗಂಟೆ ಕ್ರೀಸ್ನಲ್ಲಿ ನಿಂತ್ರೂ ಕೂಡ 50+ ರನ್ ಬಾರಿಸ್ತಿದ್ರು. ಬಟ್ ಈಗ ಟೆಸ್ಟ್ ಕ್ರಿಕೆಟ್ನಲ್ಲೂ ಕೂಡ 5 ನಿಮಿಷ ಬ್ಯಾಟಿಂಗ್ ಮಾಡೋಕೆ ಆಗ್ತಿಲ್ಲ. ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲೂ ಪೆವಿಲಿಯನ್ ಪರೇಡ್ ನಡೆಸಿದಂತಿದೆ ಅವ್ರ ಪರ್ಫಾಮೆನ್ಸ್. ಮೆಲ್ಬೊರ್ನ್ ನಲ್ಲಿ ನಡೆಯುತ್ತಿರೋ ನಾಲ್ಕನೇ ಪಂದ್ಯದಲ್ಲೂ ಅದೇ ರಿಪೀಟ್ ಆಗಿದೆ. ಯಶಸ್ವಿ ಜೈಸ್ವಾಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ ಒಂದಂಕಿ ಮೊತ್ತದ ರನ್ ಕೂಡ ಸ್ಕೋರ್ ಮಾಡ್ಲಿಲ್ಲ. 5 ಬಾಲ್ ಗಳನ್ನ ಫೇಸ್ ಮಾಡಿ 3 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಕ್ಯಾಚ್ ಕೊಟ್ಟು ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಕಳಪೆ ಪ್ರದರ್ಶನ – ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ಒಲಿಯುತ್ತಾ?
ಆಸ್ಟ್ರೇಲಿಯಾ ಸರಣಿಯಲ್ಲಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಎರಡನೇ ಪಂದ್ಯಕ್ಕೆ ಜಾಯ್ನ್ ಆಗಿದ್ರು. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಿದ್ರು. ಬಟ್ ಒಮ್ಮೆಯೂ 20ರ ಗಡಿ ದಾಟಿರಲಿಲ್ಲ. ಕಳಪೆ ಫಾರ್ಮ್ ಅವ್ರ ಬೆನ್ನತ್ತಿತ್ತು. ಹೀಗಾಗಿ ಒಂದಷ್ಟು ಮಾಜಿ ಕ್ರಿಕೆಟಿಗರು ಎಂದಿನಂತೆ ಓಪನರ್ ಆಗಿ ಕಣಕ್ಕಿಳಿದ್ರೆ ಆಡ್ಬೋದೇನೋ ಅಂತಾ ಸಜೇಷನ್ ಕೊಟ್ಟಿದ್ರು. ಹೀಗಾಗಿ ಶುಭ್ಮನ್ ಗಿಲ್ರನ್ನ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡಿ ಕೆಎಲ್ ರಾಹುಲ್ರನ್ನ 3ನೇ ಸ್ಲಾಟ್ಗೆ ಕಳಿಸಿದ್ರು. ರೋಹಿತ್ ಶರ್ಮಾ ಓಪನರ್ ಆಗಿ ಬಂದ್ರು. ಬಟ್ ಆರಂಭಿಕರಾಗಿ ಕಣಕ್ಕಿಳಿದರೂ ಕಮ್ ಬ್ಯಾಕ್ ಮಾಡಲಾಗಲಿಲ್ಲ. ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಬೋಲ್ಯಾಂಡ್ಗೆ ಕ್ಯಾಚ್ ನೀಡಿ ಔಟಾದರು.
4 ಇನ್ನಿಂಗ್ಸ್ ಗಳಲ್ಲಿ ಒಟ್ಟಾರೆ ಗಳಿಸಿದ್ದೇ 22 ರನ್!
ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಶರ್ಮಾ ಇಂದಿನ ಇನ್ನಿಂಗ್ಸ್ ಕೂಡ ಸೇರಿ ಒಟ್ಟು 5 ಇನ್ನಿಂಗ್ಸ್ ಗಳಿಂದ 22 ರನ್ ಗಳಿಸಿದ್ದಾರೆ. 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 3 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 10 ರನ್ ಕಲೆಹಾಕಿದ್ರು. ಇನ್ನು ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 10 ರನ್ ಬಾರಿಸಿದ್ರು. ಬಟ್ 2ನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೂ ಮುನ್ನವೇ ಮಳೆ ಕಾರಣದಿಂದ ಪಂದ್ಯ ಡ್ರಾ ಆಗಿತ್ತು. ಇದೀಗ ನಾಲ್ಕನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 3 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ 4 ಇನ್ನಿಂಗ್ಸ್ ಗಳಲ್ಲಿ ಕಣಕ್ಕಿಳಿದು 22 ರನ್ ಗಳನ್ನ ಮಾತ್ರ ಕಲೆ ಹಾಕಿದ್ದಾರೆ. ಸದ್ಯ ರೋಹಿತ್ ಅವರ ಬ್ಯಾಟಿಂಗ್ ನೋಡ್ತಿದ್ರೆ ಅವ್ರಲ್ಲಿ ಕಾನ್ಫಿಡೆನ್ಸ್ ಕೊರತೆ ಕಾಣ್ತಿದೆ. ಅಡಿಲೇಡ್, ಬ್ರಿಸ್ಬೇನ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದ ರೋಹಿತ್, ಇಂದೂ ಕೂಡ ತಂಡಕ್ಕೆ ನೆರವಾಗಲಿಲ್ಲ. ಈ ಮೂಲಕ ರೋಹಿತ್ ಗೆ ಟೆಸ್ಟ್ ಆಡಲು ಆಸಕ್ತಿ, ತಾಳ್ಮೆ ಇಲ್ಲ ಎಂಬ ಕಾಮೆಂಟ್ಸ್ ಕೇಳಿ ಬರ್ತಿವೆ.
14 ಇನ್ನಿಂಗ್ಸ್ ಗಳಲ್ಲಿ ಒಂದೇ ಅರ್ಧಶತಕ!
ರೋಹಿತ್ ಶರ್ಮಾ ಆಸಿಸ್ ಸರಣಿಯಲ್ಲಿ ಮಾತ್ರ ಅಲ್ಲ. 2024ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಬ್ಯಾಟಿಂಗ್ ತೀರ ಕಳಪೆಯಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಕೊನೆಯ 14 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ 50+ ರನ್ ಗಳಿಸಿದ್ದಾರೆ. ಬಹುತೇಕ್ ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟ್ ಆಗಿದ್ದಾರೆ. ಅವರು ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 11ರ ಸರಾಸರಿಯಲ್ಲಿ 155 ರನ್ಗಳಿಸಿದ್ದಾರೆ.