ಪವಿತ್ರಾಗೆ ಚಿಕ್ಕ ಸೊಸೆ ಪಟ್ಟ? – ಫೋಟೋ ವೈರಲ್, ಮತ್ತೆ ರಾದ್ಧಾಂತ!
ದಚ್ಚು ಅಮ್ಮನ ಜೊತೆ ಪವಿ ಸಲುಗೆ

ಪವಿತ್ರಾಗೆ ಚಿಕ್ಕ ಸೊಸೆ ಪಟ್ಟ? – ಫೋಟೋ ವೈರಲ್, ಮತ್ತೆ ರಾದ್ಧಾಂತ!ದಚ್ಚು ಅಮ್ಮನ ಜೊತೆ ಪವಿ ಸಲುಗೆ

ದರ್ಶನ್ ಮತ್ತು ಪವಿತ್ರಗೌಡ ಸಂಬಂಧ ಇವತ್ತು ನಿನ್ನೆದಲ್ಲ.. 2014 ರಿಂದಲೂ ಇಬ್ಬರು ರಿಲೇಷನ್ ಶಿಫ್‌ನಲ್ಲಿ ಇದ್ದಾರೆ. ಮನೆಯಲ್ಲಿ ಮುದ್ದಿನ ಹೆಂಡತಿ ಇದ್ದರು, ಇವರಿಬ್ಬರ ಸಂಬಂಧ ಜೋರಾಗಿತ್ತು.. ಒಂದಿಷ್ಟು ದಿನ ಗುಟ್ಟಾಗಿದ್ದ ಸಂಬಂಧ ವಿಜಯಲಕ್ಷ್ಮೀಯಿಂದ ರಟ್ಟಾಗಿ ಹೋಗಿತ್ತು.. ಗಂಡ ಹೆಂಡತಿ ನಡುವೆ ಗಲಾಟೆಗೆ ಕಾರಣವಾಗಿದ್ದೇ ಈ ಪವಿತ್ರಗೌಡ ಅನ್ನೋದು ಕೂಡ ಗೊತ್ತಿರದ ವಿಷ್ಯ ಏನು ಅಲ್ಲ.. ಯಾಕಂದ್ರೆ ಸಾಕಷ್ಟು ಮಾಧ್ಯಮಗಳಲ್ಲಿ ಆಗ ಈ ವಿಚಾರ ಬಂದಿತ್ತು. ಹಾಗೇ ಪವಿತ್ರಗೌಡ ದರ್ಶನ್ ಮತ್ತು ಫ್ಯಾಮೀಲಿ ಜೊತೆ ಹಂಚಿಕೊಂಡ ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಹಾಕಿದ್ರು.. ನಂತ್ರ ಇದನ್ನ ವಿಜಯ ಲಕ್ಷ್ಮೀ ನೋಡಿ ಡಿಲೀಟ್ ಕೂಡ ಮಾಡಿಸಿದ್ರು.. ವಿಷ್ಯ ಅದಲ್ಲ, ಈಗ ವರೈಲ್ ಆಗ್ತೀರೋ ಫೋಟೋ..

ಪವಿತ್ರಾಗೆ ಸಿಕ್ಕಿತ್ತಾ ಚಿಕ್ಕಸೊಸೆ ಪಟ್ಟ?

ದರ್ಶನ್​ ಅವರ ಕುಟುಂಬ ಪವಿತ್ರಾ ಗೌಡ ಅವರನ್ನು ಒಪ್ಪಿಕೊಂಡಿದ್ದ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ದರ್ಶನ್​ ತಾಯಿ ಮತ್ತು ಸೋದರಿಯ ಜೊತೆಗಿನ ಪವಿತ್ರಾ ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಿವೆ. ಅದು ದಾಸನ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿದೆ.

ಪವಿತ್ರಾಳನ್ನ ದೂರ ಇಟ್ಟಿದ್ರೆ ಹೀಗೆಲ್ಲಾ ಆಗ್ತಾ ಇರಲಿಲ್ವಾ?

ದರ್ಶನ್​ ಕೊಲೆ ಆರೋಪ ಹೊತ್ತು ಜೈಲು ಸೇರುವಂತೆ ಆಗಿದ್ದು ಪವಿತ್ರಾ ಗೌಡಳಿಂದ..ತೂಗುದೀಪ್‌ ಫ್ಯಾಮಿಲಿ ಪವಿತ್ರಾಳನ್ನ ಮೊದಲಿಂದಲೂ ದೂರವಿಟ್ಟು ವಿಟ್ಟಿದ್ರೆ ದರ್ಶನ್ ಬದುಕಲ್ಲಿ ಇಂಥಾ ಅನಾಹುತ ನಡೀತಾನೇ ಇರ್ಲಿಲ್ಲ ಅನ್ನೋದು ಅಭಿಮಾನಿಗಳ ಮಾತು. ಆದ್ರೆ ಅಚ್ಚರಿ ಅಂದ್ರೆ ತೂಗುದೀಪ ಫ್ಯಾಮಿಲಿ ಪವಿತ್ರಾಳನ್ನ ಚಿಕ್ಕಸೊಸೆ ಅಂತ ಒಪ್ಪಿಕೊಂಡು ಬಿಟ್ಟಿತ್ತಂತೆ. 2014ರಿಂದಲೂ ರಿಲೇಷನ್​ ಶಿಪ್​ನಲ್ಲಿದ್ದ ಪವಿತ್ರಾನ ದರ್ಶನ್ ತನ್ನ ತಾಯಿ ಮತ್ತು ಸೋದರಿಗೆ ಪರಿಚಯ ಮಾಡಿಸಿದ್ರು. ದಚ್ಚು ಅಮ್ಮ ಕೂಡ ಪವಿತ್ರಾಳನ್ನ ಅಯ್ಯೋ ನನ್ನ ಮುದ್ದಿನ ಸೊಸೆ.. ಚಿಕ್ಕ ಸೊಸೆ ಅಂತೆಲ್ಲಾ ಮುದ್ದು ಮಾಡಿದ್ರು.. ಜೊತೆ ಜೊತೆಗೆ ಫೋಟೋ ತೆಗೆಸಿಕೊಂಡಿದ್ರು..  ದರ್ಶನ್ ಸೋದರಿ ದಿವ್ಯಾ ಮತ್ತು ತಾಯಿ ಮೀನಾ ತೂಗುದೀಪ ಜೊತೆಗಿರುವ ಫೋಟೋಗಳನ್ನ ಖುದ್ದು ಪವಿತ್ರಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಕಿದ್ದರು. ಆಮೇಲೆ ವಿಜಯಲಕ್ಷ್ಮೀ  ಅವರಿಗೆ ಹೆದರಿಕೊಂಡು ಡಿಲೀಟ್ ಮಾಡಿದ್ದರು. ಈಗ ಫೋಟೋಸ್ ವೈರಲ್ ಆಗ್ತಾ ಇದೆ.. ಅವತ್ತು ತುಗೂದೀಪ ಫ್ಯಾಮೀಲಿ ದರ್ಶನ್ ಮತ್ತು ಪವಿತ್ರಗೌಡಗೆ ಬುದ್ಧಿ ಹೇಳಿದ್ರೆ, ದರ್ಶನ್‌ಗೆ ಇಂತಹ ಸ್ಥಿತಿ ಬರ್ತಿರಲಿಲ್ಲ ಅನ್ನೋ ತರದಲ್ಲಿ ಚರ್ಚೆ ಆಗ್ತಿದೆ.

Kishor KV

Leave a Reply

Your email address will not be published. Required fields are marked *