ತಾಲಿಬಾನ್ ಮೇಲೆ ಮುಗಿ ಬಿದ್ದಿದ್ದೇಕೆ PAK? – ಅಫ್ಘಾನ್ ಕೈಯಲ್ಲಿ ಪಾಕ್ ಸರ್ವನಾಶ?
ಭಾರತದ ಪರಮ ಶತ್ರು ಪಂಚರ್?

ತಾಲಿಬಾನ್ ಮೇಲೆ ಮುಗಿ ಬಿದ್ದಿದ್ದೇಕೆ PAK? – ಅಫ್ಘಾನ್ ಕೈಯಲ್ಲಿ ಪಾಕ್ ಸರ್ವನಾಶ?ಭಾರತದ ಪರಮ ಶತ್ರು ಪಂಚರ್?

ತಾಲಿಬಾನ್ ಮೇಲೆ ಮುಗಿ ಬಿದ್ದ ಪಾಕ್!

ಅಫ್ಘಾನಿಸ್ತಾನದ ಬರ್ಮಾಲ್ ಜಿಲ್ಲೆಯ 7 ಗ್ರಾಮದ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ದಾಳಿಯಲ್ಲಿ  ಮಕ್ಕಳು ಸೇರಿದಂತೆ  15ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಡಿಸೆಂಬರ್ 24 ರ ರಾತ್ರಿ ಅಫ್ಘಾನಿಸ್ತಾನದ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಸೇನೆ ದಾಳಿ ನಡೆಸಿದೆ. ಪಾಕಿಸ್ತಾನದ ಫೈಟರ್ ಜೆಟ್‌ಗಳು ಈ ಬಾಂಬ್ ದಾಳಿ ನಡೆಸಿವೆ ಎಂದು ತಾಲಿಬಾನ್ ಹೇಳಿದೆ.

ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ನಾಶ!

ಈ ವೈಮಾನಿಕ ದಾಳಿಯಿಂದ ಸಾಕಷ್ಟು ಹಾನಿಯಾಗಿದ್ದು,  ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವೇ ಸಂಪೂರ್ಣವಾಗಿ ನಾಶವಾಗಿದೆ. ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಈ ದಾಳಿಯಲ್ಲಿ ತಾಲಿಬಾನ್ ತರಬೇತಿ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅನೇಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡುತ್ತೇವೆಂದು ಶಪಥ

ಇನ್ನು ಪಾಕಿಸ್ತಾನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ತಾಲಿಬಾನ್ ಆಡಳಿತ ಪಾಕಿಸ್ತಾನಕ್ಕೆ ಶೀಘ್ರದಲ್ಲೇ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದೆ.  ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಅಫ್ಘಾನ್ ರಕ್ಷಣಾ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಇದರೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರನ್ನು ಬಾಂಬ್ ದಾಳಿಗೆ ಗುರಿಪಡಿಸಲಾಗಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನವು ತನ್ನ ಭೂಮಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ತಾಲಿಬಾನ್ ತಿಳಿಸಿದೆ. ಈಗ ಪಾಕಿಸ್ತಾನದಲ್ಲಿ ತಾಲಿಬಾನ್‌ ಭಯ ಹೆಚ್ಚಾಗುತ್ತಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿತ್ತು. ಮಾರ್ಚ್ ನಂತರ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನದ ಎರಡನೇ ದಾಳಿ ಇದಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮತ್ತು ಕ್ರೂರ ಕೃತ್ಯ ಎಂದು ತಾಲಿಬಾನ್ ಸ್ಪಷ್ಟವಾಗಿ ಹೇಳಿದೆ. ಮೃತರಲ್ಲಿ ಹೆಚ್ಚಿನವರು ವಜಿರಿಸ್ತಾನ್ ಪ್ರದೇಶದ ನಿರಾಶ್ರಿತರು ಎಂದು ವರದಿಯಾಗಿದೆ. ಈ ದಾಳಿಯ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಬೆದರಿಕೆ ಹಾಕಿದೆ. ಅಫ್ಘಾನಿಸ್ತಾನವನ್ನು 2021 ರಲ್ಲಿ ತಾಲಿಬಾನ್ ವಶಪಡಿಸಿಕೊಂಡಿದೆ.. ಹೀಗಾಗಿ ತನ್ನ ನೆಲೆ ಮೇಲೆ ಪಾಕ್ ದಾಳಿ ಮಾಡಿಕೊಂಡಿರುವುದನ್ನ ಯಾವುದೇ ಕಾರಣಕ್ಕೂ ತಾಲಿಬಾನ್ ಸಹಿಸಿಕೊಳ್ಳಲ್ಲ..

ಕಂಪ್ಲೀಟ್ ಹಳ್ಳ ಹಿಡಿ ಪಾಕ್ ಅಫ್ಘಾನ್ ಸಂಬಂಧ

ಪಾಕಿಸ್ತಾನ ನಡೆಸಿದ ವಾಯುದಾಳಿಯು ಪಾಕ್ ಮತ್ತು ಅಫ್ಘಾನ್ ನಡುವಿನ ಬಾಂದ್ಯವನ್ನು ಸಂಪೂರ್ಣವಾಗಿ ಹಳ್ಳ ಹಿಡಿದು ಹೋಗಿದೆ.  ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನದ ಸೇನೆಯ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದ ಉಗ್ರ ಸಂಘಟನೆಗೆ ಆಶ್ರಯ ನೀಡುತ್ತಿರುವ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಕೆಂಡ ಕಾರುತ್ತಲೇ ಇತ್ತು. ತನ್ನ ಸೈನಿಕರ ಮೇಲಿನ ದಾಳಿಗೆ ಪ್ರತಿಯಾಗಿ ವಾಯುದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದ್ರೆ ಪಾಕಿಸ್ತಾನದ ಈ ಆರೋಪವನ್ನು  ತಳ್ಳಿ ಹಾಕಿರುವ ಅಫ್ಘನ್ ತಾಲಿಬಾನ್​, ಪಾಕಿಸ್ತಾನ ನಡೆಸಿರುವ ದಾಳಿಯಿಂದ ಬಲಿಯಾಗಿದ್ದು ಸಾರ್ವಜನಿಕರೇ ಹೊರತು ಭಯೋತ್ಪಾದಕರು ಅಲ್ಲ ಎಂದು ಗುಡುಗಿದೆ. ಹೀಗಾಗಿ ತಾಲಿಬಾನ್ ಪಾಕಿಸ್ತಾನ ಮುಟ್ಟಿನೊಡಿಳ್ಳುವಂತೆ ದಾಳಿ ಮಾಡೋದು ಪಕ್ಕಾ. ಪಾಕಿಸ್ತಾನದ ವಿರುದ್ಧ ಅಫ್ಘಾನ್ ಪ್ರತೀಕಾರ ಪ್ರತಿಜ್ಞೆ ಮಾಡುತ್ತಿದ್ದಂತೆ , ಪಾಕ್‌ಗೆ ತಾಲಿಬಾನ್ ಭಯ ಶುರವಾಗಿದೆ. ಪಾಕ್‌  ಸರ್ವನಾಶ ಆಗುತ್ತಾ ಅನ್ನೋ ಬಗ್ಗೆ ಇಡೀ ಜಗತ್ತೇ ಚರ್ಚೆ ಮಾಡುತ್ತಿದೆ.. ಭಾರತ ಶತ್ರು ರಾಷ್ಟ್ರವಾದ ಪಾಕಿಸ್ತಾನ ಪಂಚರ್ ಆಗೋದು ಪಕ್ಕಾ ಅನ್ನೋ ಮಾತು ಕೇಳಿ ಬರ್ತಿದ್ದು, ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದಂತಾಗಿದೆ.

Kishor KV

Leave a Reply

Your email address will not be published. Required fields are marked *