ರೋಹಿತ್‌ಗೆ ಗಂಭೀರ್ ಶತ್ರು..! – ಟೀಮ್ ಇಂಡಿಯಾ ಮನೆಯೊಂದು 3 ಬಾಗಿಲು
ಬಣ ರಾಜಕೀಯಕ್ಕೆ ಸೋಲುತ್ತಿದೆ ಭಾರತ

ರೋಹಿತ್‌ಗೆ ಗಂಭೀರ್ ಶತ್ರು..! – ಟೀಮ್ ಇಂಡಿಯಾ ಮನೆಯೊಂದು 3 ಬಾಗಿಲುಬಣ ರಾಜಕೀಯಕ್ಕೆ ಸೋಲುತ್ತಿದೆ ಭಾರತ

ಒನ್ ಟೀಮ್..ಒನ್ ಫ್ಯಾಮಿಲಿ.. ಒಗ್ಗಟ್ಟಿದ್ದಲ್ಲಿ ಗೆಲುವಿನ ಗುರಿ ನಮ್ದೇ ಅನ್ನೋದ್ರಲ್ಲಿ ನೋ ಡೌಟ್. ಯಾವಾಗ ಮನೆಯೊಂದು ಮೂರು ಬಾಗಿಲು ಆಗುತ್ತೋ.. ಆಗ ಗೆಲುವು ಕೂಡಾ ದೂರ ದೂರ ಹೋಗ್ತಾ ಇರುತ್ತೆ. ಸದ್ಯ ನಮ್ಮ ಟೀಮ್ ಇಂಡಿಯಾದ್ದು ಇದೇ ಪರಿಸ್ಥಿತಿ. ಪರ್ತ್​ನಲ್ಲಿ ಗೆಲುವಿನೊಂದಿಗೆ ಹೆಜ್ಜೆ ಇಟ್ಟಿದ್ದ ಟೀಮ್ ಇಂಡಿಯಾ, ಇನ್ನೆರೆಡು ಟೆಸ್ಟ್ ನಲ್ಲಿ ಪಲ್ಟಿ ಹೊಡೆದಿತ್ತು. ಗಾಬಾ ಟೆಸ್ಟ್ ನಲ್ಲಿ ಮಳೆರಾಯನೇ ಉಪಕಾರ ಮಾಡಿದ್ದಕ್ಕೆ ಡ್ರಾ ಆಯ್ತು. ಈ ರೀತಿ ಸಾಲು ಸಾಲು ಸೋಲಿನ ಸರಪಳಿ ಟೀಮ್ ಇಂಡಿಯಾವನ್ನ ಸುತ್ತುತ್ತಿರೋದು ಯಾಕೆ ಅಂತಾ ನೋಡ್ತಾ ಹೋದ್ರೆ, ಗೋಚರಿಸೋದು ಮನೆಯೊಂದು ಮೂರು ಬಾಗಿಲು. ಟೀಮ್ ಇಂಡಿಯಾದಲ್ಲಿ ಬಣಗಳು ಶುರುವಾದ್ವಾ? ಗಂಭೀರ್ ಮತ್ತು ರೋಹಿತ್ ನಡುವೆ ಯಾವುದೂ ಸರಿಯಿಲ್ವಾ? ಕೋಚ್, ಕ್ಯಾಪ್ಟನ್​​ಗಳ ಕಚ್ಚಾಟದಲ್ಲಿ ಆಟಗಾರರು ಬಡವಾದ್ರಾ?, ಪ್ಲೇಯಿಂಗ್​ ಇಲೆವೆನ್ ಡಿಸಿಷನ್​, ಸ್ಟ್ರಾಟಜಿಯಲ್ಲಿ ಪ್ಲಾನ್ ತಲೆಕೆಳಗಾಗ್ತಿರೋದು ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಮ್ಯಾಚ್ – ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೇಗಿದೆ?

ಸ್ಪಿನ್ ದಿಗ್ಗಜ ಆರ್. ಅಶ್ವಿನ್ ದಿಢೀರ್ ನಿವೃತ್ತಿ ಹೊಂದಿದ್ರು. ಅಷ್ಟೇ ವೇಗದಲ್ಲೇ ತವರಿಗೂ ವಾಪಸ್ ಆದ್ರು. ಆಸ್ಟ್ರೇಲಿಯಾ ಬ್ಯಾಟರ್‌ಗಳ ವಿರುದ್ಧ ಆರ್. ಅಶ್ವಿನ್ ಒಳ್ಳೇ ಸ್ಪಿನ್ನರ್ ಆಗಿದ್ರು. ಅವರ ರೆಕಾರ್ಡ್ಸ್ ಕೂಡಾ ಹಾಗೇ ಇದೆ. ಆದ್ರೆ, ನಾಯಕನಾಗಿ ರೋಹಿತ್ ಗೆ ಇದನ್ನೆಲ್ಲಾ ಹ್ಯಾಂಡ್ಲ್ ಮಾಡಲು ಆಗಿಲ್ಲ. ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾಗೆ ಡಿಸಿಷನ್ ಮೇಕಿಂಗ್ ಫ್ರೀಡಂ ಇಲ್ವಾ ಎಂಬ ಪಶ್ನೆ ಅಶ್ವಿನ್ ನಿವೃತ್ತಿ ನಂತರ ಎಲ್ಲರಲ್ಲೂ ಮೂಡಿದೆ. 3 ಟೆಸ್ಟ್​ ಪಂದ್ಯಗಳಿಂದ ಒಂದು ಟೆಸ್ಟ್​ಗೆ ಒಬ್ಬರಂತೆ ಸುಂದರ್, ಅಶ್ವಿನ್, ಜಡೇಜಾರನ್ನು ಕಣಕ್ಕಿಳಿಸಿದ್ದಾರೆ. ಲೆಫ್ಟಿ ಬ್ಯಾಟರ್​ಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎದುರು ಸುಂದರ್ ಅಥವಾ ಅಶ್ವಿನ್ ಬೆಸ್ಟ್ ಚಾಯ್ಸ್​ ಆಗಿತ್ತು. ಅಶ್ವಿನ್‌ಗೆ ಒಂದು ಟೆಸ್ಟ್ ಮ್ಯಾಚ್ ಬಿಟ್ರೆ ಅವಕಾಶವೇ ಸಿಗಲಿಲ್ಲ. ಅಶ್ವಿನ್ ಕಣಕ್ಕಿಳಿಸೋ ವಿಚಾರದಲ್ಲಿ ಕೋಚ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಮಧ್ಯೆ ಅಂಡರ್‌ಸ್ಟ್ಯಾಂಡಿಂಗೇ ಇರಲಿಲ್ಲ.

ಗಂಭೀರ್ ಏರಿಗೆಳೆದರೆ, ರೋಹಿತ್ ನೀರಿಗೆಳಿತಾರಾ? – ದ್ರಾವಿಡ್ ಜೊತೆ ಇದ್ದ ಸಂಬಂಧ ಗಂಭೀರ್ ಜೊತೆಗಿಲ್ವಾ?

ಡ್ರೆಸ್ಸಿಂಗ್ ರೂಮ್​ನಲ್ಲಿ ಕೋಚ್ ಮತ್ತು ಕ್ಯಾಪ್ಟನ್ ನಡುವೆ ಕೋಲ್ಡ್ ವಾರ್ ನಡೀತಾನೇ ಇರುತ್ತದೆ. ರೋಹಿತ್ ಶರ್ಮಾ, ಗೌತಮ್ ಗಂಭೀರ್​ ನಡುವೆ ಸಮನ್ವಯತೆ ಇಲ್ಲ. ಶ್ರೀಲಂಕಾ, ಬಾಂಗ್ಲಾ, ನ್ಯೂಜಿಲೆಂಡ್ ಸರಣಿಯಲ್ಲೂ ಇವರಿಬ್ಬರ ನಡುವೆ ಯಾವುದೂ ಸರಿಯಿಲ್ಲ ಅನ್ನೋದು ಪ್ರೂವ್ ಆಗಿತ್ತು. ದ್ರಾವಿಡ್ ಜೊತೆಗಿದಂತೆ ಗಂಭೀರ್ ಜೊತೆ ರೋಹಿತ್​ ಶರ್ಮಾ ಇಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ಮೂವರು ಲೆಫ್ಟ್​ ಹ್ಯಾಂಡ್ ಬ್ಯಾಟರ್ಸ್ ಇದ್ದಾರೆ. ರೋಹಿತ್​​​ ಒಂದು ತೀರ.. ಗಂಭೀರ್​ದೊಂದು ರಾಗ.. ಇವರಿಬ್ಬರ ಮನಸ್ಥಿತಿಗಳ ನಡುವಿನ ವ್ಯತ್ಯಾಸವೇ ತಂಡದ ಸೋಲಿಗೆ ಕಾರಣವಾಗ್ತಿದೆ.

ಟೀಮ್ ಇಂಡಿಯಾ ಸೆಲೆಕ್ಷನ್‌ನಲ್ಲೂ ಗಂಭೀರ್ ಕೈ? – ಗಂಭೀರ್ ಹೇಳಿದಂತೆ ಮಾಡ್ತಿದ್ದಾರಾ ಅಜಿತ್ ಅಗರ್ಕರ್?

ಸೆಲೆಕ್ಟರ್​ ಅಜಿತ್ ಅಗರ್ಕರ್​, ಆಸ್ಟ್ರೇಲಿಯನ್ ಕಂಡೀಷನ್ಸ್​ಗೆ ಅನುಗುಣವಾಗಿ ತಂಡವನ್ನು ಪ್ರಕಟಿಸಬೇಕು. ಇದನ್ಯಾವುದು ತಲೆಕೆಡಿಸಿಕೊಳ್ಳದ ಅಜಿತ್, ನ್ಯೂ ಪೇಸರ್​ ಹರ್ಷಿತ್ ರಾಣಾಗೆ ಮಣೆ ಹಾಕಿದ್ದಾರೆ. ಇದಕ್ಕೆ ಕಾರಣ ಕೋಚ್ ಗಂಭೀರ್ ಪ್ರಭಾವ ಎನ್ನಲಾಗ್ತಿದೆ. ಇದರಿಂದ ಸೆಲೆಕ್ಷನ್​ನಲ್ಲಿ ಕ್ಯಾಪ್ಟನ್ ರೋಹಿತ್ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ರೋಹಿತ್ ಶರ್ಮಾ, ಗೌತಮ್ ಗಂಭೀರ್, ಅಜಿತ್ ಅಗರ್ಕರ್​​​ ನಡುವಿನ ಬಣ ರಾಜಕೀಯದಲ್ಲಿ ಟೀಮ್ ಇಂಡಿಯಾ ಮಾತ್ರ ಸಾಲು ಸಾಲು ಸೋಲು ಎದುರಿಸುತ್ತಿದೆ. ನೀವೇ ನೋಡಿ ವೀಕ್ಷಕರೇ, ಇಲ್ಲಿ ಟೀಮ್ ಇಂಡಿಯಾ ಆಡಿದ್ದು ಮೂರು ಟೆಸ್ಟ್ ಮ್ಯಾಚ್. ಕಣಕ್ಕಿಳಿಸಿದ್ದು ಮೂವರು ಬೇರೆ ಬೇರೆ ಸ್ಪಿನ್ನರ್‌ಗಳನ್ನ. ಒಂದು ಮ್ಯಾಚ್‌ಗೆ ರವೀಂದ್ರ ಜಡೇಜಾ, ಮತ್ತೊಂದಕ್ಕೆ ಆರ್. ಅಶ್ವಿನ್, ಇನ್ನೊಂದು ಮ್ಯಾಚ್‌ಗೆ ವಾಷಿಂಗ್ಟನ್ ಸುಂದರ್.. ಈ ಬಗ್ಗೆ ಡಿಸಿಶನ್ ತಗೊಳ್ಳೋದು ಕೋಚಾ, ಇಲ್ಲಾ ಕ್ಯಾಪ್ಟನ್ನಾ, ಇವರ ನಡುವಿನ ಭಿನ್ನಾಭಿಪ್ರಾಯಗಳಿಂದ ತಂಡಕ್ಕೆ ಮಾತ್ರ ಸರಿಯಾಗಿಯೇ ಹೊಡೆತ ಬೀಳ್ತಿದೆ ಅಷ್ಟೇ.

ಟೀಮ್ ಇಂಡಿಯಾದಲ್ಲಿ ಕೋಚ್, ಕ್ಯಾಪ್ಟನ್ ನಡುವೆ ಭಿನ್ನಾಭಿಪ್ರಾಯ ಇದೇ ಮೊದಲಲ್ಲ. ಸೌರವ್ ಗಂಗೂಲಿ, ಗ್ರೆಗ್ ಚಾಪೆಲ್‌. ವಿರಾಟ್ ಕೊಹ್ಲಿ ಆ್ಯಂಡ್​ ಅನಿಲ್ ಕುಂಬ್ಳೆ ನಡುವಿನ ಹಗ್ಗ ಜಗ್ಗಾಟ ಎಲ್ಲರಿಗೂ ಗೊತ್ತಿದೆ. ಇದೀಗ ಇವರ ಪಟ್ಟಿಗೆ ಹೊಸ ಸೇರ್ಪಡೆಯಾಗ್ತಿದ್ದಾರೆ ಕ್ಯಾಪ್ಟನ್  ರೋಹಿತ್ ಶರ್ಮಾ ಅಂಡ್ ​ಕೋಚ್  ಗೌತಮ್ ಗಂಭೀರ್.

ಇಲ್ಲಿ ಒಂದಂತೂ ಸ್ಪಷ್ಟ.. ನಾಯಕ ರೋಹಿತ್ ಶರ್ಮಾ ಇಷ್ಟಪಡದ ಹಲವು ನಿರ್ಧಾರಗಳನ್ನು ಗೌತಮ್ ಗಂಭೀರ್ ತೆಗೆದುಕೊಳ್ಳುತ್ತಿದ್ದಾರೆ. ಗಂಭೀರ್ ಕೋಚ್ ಆಗಿ ಯಾವಾಗ ಎಂಟ್ರಿಕೊಟ್ರೋ ಅಲ್ಲಿಂದ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಲೇ ಇಲ್ಲ. ರೋಹಿತ್ ಶರ್ಮಾ ಯಾವಾಗ್ಲೂ ಡಿಸ್ಟರ್ಬಿಂಗ್ ಮೈಂಡ್ ಸೆಟ್‌ನಲ್ಲೇ ಇರ್ತಾರೆ. ತಂಡದ ಹೊರಗೆ ನಡೆಯೋ ಈ ಬೆಳವಣಿಗೆಳು ತಂಡ ಮೈದಾನದಲ್ಲಿ ಇದ್ದಾಗ ಎಫೆಕ್ಟ್ ಆಗ್ತಿದೆ. ಕೋಚ್, ಕ್ಯಾಪ್ಟನ್ ಇಬ್ಬರೂ ತಂಡದ ಗೆಲುವಿಗೆ ಶ್ರಮಿಸಿದರೆ ಮಾತ್ರ ಟೀಮ್ ಇಂಡಿಯಾ ಉದ್ಧಾರವಾಗುತ್ತೆ.

Shwetha M

Leave a Reply

Your email address will not be published. Required fields are marked *