IND VS AUS ಬಾಕ್ಸಿಂಗ್ ಡೇ ಟೆಸ್ಟ್.. BOXING DAY ಎಂದರೇನು?
ಜಾಸ್ತಿ ಜೋಶ್, ಗ್ರೌಂಡ್ ಫುಲ್ ಯಾಕೆ?
ಬಾಕ್ಸಿಂಗ್ ಡೇ ಟೆಸ್ಟ್.. ಏನಿದು ಬಾಕ್ಸಿಂಗ್ ಡೇ? ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಮ್ಯಾಚ್ನ್ನ ಬಾಕ್ಸಿಂಗ್ ಡೇ ಟೆಸ್ಟ್ ಅಂತಾನೆ ಕರೆಯಲಾಗ್ತಿದೆ. ಸಾಮಾನ್ಯವಾಗಿ ಬಾಕ್ಸಿಂಗ್ ಡೇ ಟೆಸ್ಟ್ ಅನ್ನೋದನ್ನ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್ ನಲ್ಲಿ ಕೇಳಿದ್ದೀವಿ. ಅಷ್ಟಕ್ಕೂ ಈ ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೆ ಏನು? ಬಾಕ್ಸಿಂಗ್ ಡೇ ಅನ್ನೋ ಹೆಸರು ಯಾಕೆ ಬಂತು? ಇಷ್ಟೊಂದು ಹೈಪ್ ಪಡೆಯೋಕೆ ಇದ್ರ ಸ್ಪೆಷಾಲಿಟಿ ಏನು? ಈ ಬಗ್ಗೆ ಕ್ರಿಕೆಟ್ ಫಾಲೋವರ್ಸ್ಗಳೆಲ್ಲಾ ತಿಳಿದುಕೊಳ್ಳಲೇಬೇಕಾಗಿರೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Max FIRST Review! – ಕಥೆಯಲ್ಲಿ ಸಸ್ಪೆನ್ಸ್.. ನೋಡುಗರು ಥ್ರಿಲ್.. ಇದಕ್ಕಿಂತ ಇನ್ನೇನು ಬೇಕು?
ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಾಲ್ಕನೇ ಟೆಸ್ಟ್ ಮ್ಯಾಚ್ ನಡೆಯಲಿದೆ. ಡಿಸೆಂಬರ್ 26ರಿಂದ 30ರವರೆಗೆ ನಡೆಯುವ ಟೆಸ್ಟ್ ಮ್ಯಾಚ್ನ್ನ ಮಾತ್ರ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳಲಾಗುತ್ತೆ. ಬೇರೆ ಡೇಟ್ನಲ್ಲಿ ನಡೆಯೋ ಟೆಸ್ಟ್ ಮ್ಯಾಚ್ನ್ನ ಬಾಕ್ಸಿಂಗ್ ಡೇ ಅನ್ನೋದಿಲ್ಲ. ಕೇವಲ ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ನಡೆಯೋ ಮ್ಯಾಚ್ನ್ನ ಮಾತ್ರ. ಅದು ಕೂಡ ಈ ಡೇಟ್ನಲ್ಲಿ ಎಲ್ಲಾ ದೇಶಗಳಲ್ಲೂ ನಡೆಯೋ ಟೆಸ್ಟ್ ಮ್ಯಾಚ್ನ್ನ ಬಾಕ್ಸಿಂಗ್ ಡೇ ಮ್ಯಾಚ್ ಅನ್ನೋದಿಲ್ಲ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಈ ಮೂರು ದೇಶಗಳಲ್ಲಿ ಮಾತ್ರ ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಟೆಸ್ಟ್ ಮ್ಯಾಚ್ ನಡೆಯುತ್ತೆ ಅನ್ನೋದಾದ್ರೆ ಅದನ್ನ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಅಂತಾರೆ. ಇದು ಕ್ರಿಸ್ಮಸ್ ಹಬ್ಬದ ಮರುದಿನವೇ ನಡೆಯೋದ್ರಿಂದ ಈ ಕಾರಣಕ್ಕಾಗಿ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಅಂತಾ ಕರೀತಾರೆ. ಡಿಸೆಂಬರ್ 26ರಿಂದ ಪಂದ್ಯ ಆರಂಭವಾದ್ರೆ ಮಾತ್ರ ಅದು ಬಾಕ್ಸಿಂಗ್ ಡೇ ಆಗುತ್ತೆ. ಡಿಸೆಂಬರ್ 25 ಅಂದ್ರೆ ಕ್ರಿಸ್ಮಸ್ ಹಬ್ಬದ ದಿನ ಅಥವಾ ಹಬ್ಬ ಮುಗಿದು ಎರಡು ದಿನಗಳ ಬಳಿಕ ಅಂದ್ರೆ ಡಿಸೆಂಬರ್ 27, 28 ಅಂತಾ ಇಟ್ಕೊಳ್ಳಿ ಈ ಡೇಟ್ನಂದು ಮ್ಯಾಚ್ ಆರಂಭವಾದ್ರೆ ಅದು ಬಾಕ್ಸಿಂಗ್ ಡೇ ಮ್ಯಾಚ್ ಆಗೋದಿಲ್ಲ. ಓನ್ಲಿ ಡಿಸೆಂಬರ್ 26..ಕ್ರಿಸ್ಮಸ್ ಮರುದಿನ ಟೆಸ್ಟ್ ಮ್ಯಾಚ್ ಶುರುವಾಗುತ್ತೆ ಅನ್ನೋದಾದ್ರೆ ಮಾತ್ರ ಅದು ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಆಗುತ್ತೆ.
ಡಿಸೆಂಬರ್ 26ನ್ನ ಬಾಕ್ಸಿಂಗ್ ಡೇ ಅಂತಾ ಕರಿಯೋಕೆ ಇಲ್ಲೊಂದು ಇಂಟ್ರೆಸ್ಟಿಂಗ್ ರೀಸನ್ ಕೂಡ ಇದೆ. ಕ್ರಿಸ್ಮಸ್ ಮರುದಿನ ಅಂದ್ರೆ ಡಿಸೆಂಬರ್ 26ನೇ ತಾರೀಖನ್ನ ಬ್ರಿಟೀಷರ ಆಡಳಿತಕ್ಕೊಳಗಾದ ದೇಶಗಳು ಅಂದ್ರೆ ಕಾಮೆನ್ವೆಲ್ತ್ ರಾಷ್ಟ್ರಗಳ ಪೈಕಿ ಕೆಲ ದೇಶಗಳಲ್ಲಿ ಡಿಸೆಂಬರ್ 26ನ್ನ ಬಾಕ್ಸಿಂಗ್ ಡೇ ಅಂತಾ ಸೆಲೆಬ್ರೇಟ್ ಮಾಡಲಾಗುತ್ತೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಕೆನಡಾ, ನೈಜೀರಿಯಾ, ಟ್ರಿನಿಡಾಡ್ & ಟೊಬೆಗೋ ಮತ್ತು ಸೌತ್ ಆಫ್ರಿಕಾದಲ್ಲಿ ಬಾಕ್ಸಿಂಗ್ ಡೇ ಆಚರಣೆ ಮಾಡಲಾಗುತ್ತೆ. ಈ ಬಾಕ್ಸಿಂಗ್ ಡೇ ಅನ್ನೋ ಹೆಸರು ಬರೋಕೆ ಇನ್ನೊಂದು ಕಾರಣ ಕೂಡ ಇದೆ. 1800ನೇ ಇಸವಿಯಲ್ಲಿ ಬ್ರಿಟನ್ ರಾಣಿ ವಿಕ್ಟೋರಿಯಾ ಆಡಳಿತದ ಸಂದರ್ಭದಲ್ಲಿ ಕೆಳ ಮಟ್ಟದ ಬ್ರಿಟಿಷ್ ಸಮಾಜಕ್ಕೆ ಕ್ರಿಸ್ಮಸ್ ಹಬ್ಬದ ವೇಳೆ ಗಿಫ್ಟ್ ನೀಡಲಾಗ್ತಿತ್ತು. ಜೊತೆಗೆ ಕ್ರಿಸ್ಮಸ್ನಂದು ಅಂದ್ರೆ ಡಿಸೆಂಬರ್ 25ಕ್ಕೆ ಹಬ್ಬದ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ನೌಕರರಿಗೆ ಕ್ರಿಸ್ಮಸ್ ಮರುದಿನ ಡಿಸೆಂಬರ್ 26ಕ್ಕೆ ಬಾಕ್ಸ್ನಲ್ಲಿ ಗಿಫ್ಟ್ ನೀಡಲಾಗುತ್ತೆ. ಆ ಗಿಫ್ಟ್ ಬಾಕ್ಸ್ಗೆ ಕ್ರಿಸ್ಮಸ್ ಬಾಕ್ಸ್ ಅಂತಾ ಹೆಸರಿಡಲಾಗಿತ್ತು. ನಂತರ ಅದನ್ನ ಬಾಕ್ಸಿಂಗ್ ಡೇ ಅಂತಾನೆ ಕರೆಯಲಾಯ್ತು.
ಬಾಕ್ಸಿಂಗ್ ಡೇ ಅಂದ್ರೆ ಗಿಫ್ಟ್ ಬಾಕ್ಸ್ಗಳನ್ನ ನೀಡೋ ದಿನ. ಗಿಫ್ಟ್ ಬಾಕ್ಸ್ಗಳನ್ನ ನೀಡೋದ್ರ ಜೊತೆಗೆ ಡಿಸೆಂಬರ್ 26 ರಿಂದ ಡಿಸೆಂಬರ್ 30ರವರೆಗೂ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ವಿವಿಧ ಕ್ರೀಡಾಕೂಟಗಳನ್ನ ಕೂಡ ಆಯೋಜಿಸಲಾಗ್ತಿತ್ತು. ಹೀಗಾಗಿ ಬಾಕ್ಸಿಂಗ್ ಡೇ ಮ್ಯಾಚ್ ಅನ್ನೋ ಹೆಸರು ಕೂಡ ಬಂತು. ಆ್ಯಕ್ಚುವಲಿ ಕ್ರಿಕೆಟ್ನಲ್ಲಿ ಬಾಕ್ಸಿಂಡ್ ಡೇ ಮ್ಯಾಚ್ ಅನ್ನೋದು ಶುರುವಾಗಿದ್ದು 1892ರಲ್ಲಿ. ಫಸ್ಟ್ ಟೈಮ್ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಲೋಕಲ್ ಟೀಂಗಳ ಮಧ್ಯೆ ಬಾಕ್ಸಿಂಗ್ ಡೇ ಮ್ಯಾಚ್ ನಡೆಯುತ್ತೆ. ಆದ್ರೆ 1950ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ಫಸ್ಟ್ ಬಾಕ್ಸಿಂಗ್ ಡೇ ಇಂಡರ್ನ್ಯಾಷನಲ್ ಮ್ಯಾಚ್ ನಡೆಯುತ್ತೆ. 1980ರ ಬಳಿಕ ಪ್ರತಿ ವರ್ಷ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ನ್ನ ಹೋಸ್ಟ್ ಮಾಡ್ತಾ ಬಂದಿದೆ. ಸಾಮಾನ್ಯವಾಗಿ ಬಾಕ್ಸಿಂಗ್ ಡೇನಂದು ಟೆಸ್ಟ್ ಮ್ಯಾಚ್ನ್ನ ನಡೆಸಲಾಗುತ್ತೆ. ಅಪರೂಪಕ್ಕೊಮ್ಮೆ ವಂಡೇ ಮ್ಯಾಚ್ ಕೂಡ ನಡೆದಿದೆ.
ಬಾಕ್ಸಿಂಗ್ ಡೇನಂದು ಟೆಸ್ಟ್ ಮ್ಯಾಚ್ನ್ನ ನಡೆಸೋದು ಆಸ್ಟ್ರೇಲಿಯಾದಲ್ಲಿರೋ ಸಂಪ್ರದಾಯ. ಇನ್ನು ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಯಾವಗಲೂ ಮೆಲ್ಬೋರ್ನ್ ಗ್ರೌಂಡ್ನಲ್ಲೇ ನಡೆಯೋದು. ಎಂಸಿಜಿ ಬಿಟ್ಟು ಆಸ್ಟ್ರೇಲಿಯಾ ಇನ್ಯಾವುದೇ ಗ್ರೌಂಡ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ನ್ನ ಹೋಸ್ಟ್ ಮಾಡೋದಿಲ್ಲ. ಆದ್ರೆ ಡಿಸೆಂಬರ್ 26 ಅಂದ್ರೆ ಟೆಸ್ಟ್ ಮ್ಯಾಚ್ ಫಸ್ಟ್ಡೇಯಂತೂ ಎಂಸಿಜಿ ಹೌಸ್ಫುಲ್ ಆಗಿರುತ್ತೆ. ಈ ಹಿಂದೆ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾದಲ್ಲಿ ಹಲವು ಬಾಕ್ಸಿಂಗ್ ಡೇ ಮ್ಯಾಚ್ಗಳನ್ನ ಆಡಿದೆ. 1985, 1991, 1999, 2003, 2007, 2011, 2014, 2018 ಮತ್ತು 2020ರಲ್ಲಿ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಆಡಿತ್ತು. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಕೂಡ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ಗಳನ್ನ ಆಯೋಜಿಸ್ತಿದೆ. ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೆ ಸಾಕು ಅದಕ್ಕೊಂದು ಸ್ಪೆಷಲ್ ಹೈಪ್ ಇರುತ್ತೆ. ಪ್ಲೇಯರ್ಸ್ಗಳು ಅಷ್ಟೇ ಎಕ್ಸ್ಟ್ರಾ ಜೋಶ್ನಲ್ಲಿ ಆಡ್ತಾರೆ. ಹೀಗಾಗಿ ಬ್ಯಾಕ್ಸಿಂಗ್ ಡೇನಂದು ಯಾರು ಹೆಚ್ಚು ಪಂಚ್ ಕೊಡ್ತಾರೋ, ಕಾಂಗರೂಗಳ ನಾಡಲ್ಲಿ ನಮ್ಮ ಹುಲಿಗಳು ಎಗರುತ್ತಾರೋ ಅಥವಾ ಎಡವುತ್ತಾರೋ ನೋಡ್ಬೇಕಿದೆ.