ಶಿವಣ್ಣ ಆಪರೇಷನ್ ಸಕ್ಸಸ್ – ಎಷ್ಟು ಗಂಟೆಯಲ್ಲಿ ಸರ್ಜರಿ ಆಯ್ತು?
ಈಗ ಹೇಗಿದ್ದಾರೆ ಕರುನಾಡ ಚಕ್ರವರ್ತಿ
ಶಿವರಾಜ್ ಕುಮಾರ್ ಅವರ ಮೂತ್ರಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಮೆರಿಕದಲ್ಲಿ ಯಶಸ್ವಿಯಾಗಿ ನಡೆದಿದೆ. ಹಲವು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬಸ್ಥರು ಈ ಸುದ್ದಿಯಿಂದ ಸಂತೋಷಗೊಂಡಿದ್ದಾರೆ. ಶಿವರಾಜ್ ಕುಮಾರ್ ಅವರು ಶೀಘ್ರದಲ್ಲೇ ಚೇತರಿಸಿಕೊಂಡು ಕರುನಾಡಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ : Max FIRST Review! – ಕಥೆಯಲ್ಲಿ ಸಸ್ಪೆನ್ಸ್.. ನೋಡುಗರು ಥ್ರಿಲ್.. ಇದಕ್ಕಿಂತ ಇನ್ನೇನು ಬೇಕು?
ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 24 ರ ಸಂಜೆ 6 ಗಂಟೆಗೆ ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ. ಈ ಬಗ್ಗೆ ಆಪ್ತ ಮೂಲಗಳು ಮಾಹಿತಿ ರಿವೀಲ್ ಮಾಡಿವೆ. ಶಿವರಾಜ್ಕುಮಾರ್ ಮೊದಲಿನಿಂದಲೂ ಪಾಸಿಟಿವ್ ಆಗಿ ಯೋಚಿಸುತ್ತಾ ಬಂದವರು. ಅವರು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸರ್ಜರಿ ನಡೆಯುತ್ತದೆ ಎಂದಾಗ ಅದನ್ನೂ ಪಾಸಿಟಿವ್ ಆಗಿ ತೆಗೆದುಕೊಂಡ್ರು. ಜೋಶ್ನಲ್ಲಿ ಅಮೆರಿಕ ತೆರಳಿದ ಅವರು ಶಸ್ತಚಿಕಿತ್ಸೆ ಪೂರ್ಣಗೊಳಿಸಿಕೊಂಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಶಿವರಾಜ್ ಕುಮಾರ್ ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಗಿತ್ತು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ.
ಶಿವಣ್ಣನಿಗೆ ಮೂತ್ರಕೋಶಧ ಕ್ಯಾನ್ಸರ್ ಇತ್ತು. ಇದಕ್ಕಾಗಿ ಅವರು ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. 4 ಗಂಟೆಗಳ ಕಾಲ ಆಪರೇಷನ್ ನಡೆದಿದೆ.