Max FIRST Review! – ಕಥೆಯಲ್ಲಿ ಸಸ್ಪೆನ್ಸ್.. ನೋಡುಗರು ಥ್ರಿಲ್.. ಇದಕ್ಕಿಂತ ಇನ್ನೇನು ಬೇಕು?
ಕಿಚ್ಚನ ಮ್ಯಾಕ್ಸ್ ಸಿನಿಮಾ ಹೇಗಿದೆ?|

Max FIRST Review! – ಕಥೆಯಲ್ಲಿ ಸಸ್ಪೆನ್ಸ್.. ನೋಡುಗರು ಥ್ರಿಲ್.. ಇದಕ್ಕಿಂತ ಇನ್ನೇನು ಬೇಕು?ಕಿಚ್ಚನ ಮ್ಯಾಕ್ಸ್ ಸಿನಿಮಾ ಹೇಗಿದೆ?|

ಕರೆಕ್ಟಾಗಿ ಒಂದು ವರ್ಷದ ಹಿಂದೆ ಅಂದ್ರೆ 2023ರ ಡಿಸೆಂಬರ್‌ 25ರಂದು ಕಾಟೇರ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸಿತ್ತು.. ಇಯರ್‌ ಎಂಡ್‌ ಧಮಾಕಾ ಕೊಟ್ಟಿದ್ರು ದಾಸ ದರ್ಶನ್‌..ಈಗ ಮತ್ತೊಂದು ಇಯರ್‌ ಎಂಡ್‌ ಬಂದಿದೆ.. ಮತ್ತೊಂದು ಅಬ್ಬರದ ಸಿನಿಮಾ ಬಂದಿದೆ.. ಬಾಕ್ಸಾಫೀಸ್‌ ಧೂಳೆಬ್ಬಿಸುವ ರೀತಿಯಲ್ಲೇ ಬೆಳಬೆಳಗ್ಗೇ ಸೌಂಡ್‌ ಮಾಡೋದಿಕ್ಕೂ ಶುರುವಾಗಿದೆ.. ತೆರೆಯ ಮೇಲೆ ಮ್ಯಾಕ್ಸ್‌ ಸಿಂಹದ ರೀತಿಯಲ್ಲಿ ಬೇಟೆಯಾಡ್ತಿದ್ದರೆ, ಅಲ್ಲೇ ಪಕ್ಕದಲ್ಲಿ ದಾಸ ಕೂಡ ಇದ್ದಾನೆ.. ಪೊಲೀಸ್ ಕಾನ್ಸ್‌ಟೇಬಲ್‌ ವೇಷದಲ್ಲಿ.. ಹಾಗಿದ್ರೆ Max ಸಿನಿಮಾ ಹೇಗಿದೆ ಅನ್ನೋ ಬಗ್ಗೆ ಸುದ್ದಿಯಾನ ನೀಡುವ ಮಾಹಿತಿ ಇಲ್ಲಿದೆ.

ಕಿಚ್ಚ ಸುದೀಪ್‌ ಎರಡೂವರೆ ವರ್ಷದ ನಂತರ ತೆರೆಯ ಮೇಲೆ ಬಂದಿರುವ ವಿಶೇಷ ಒಂದೆಡೆಯಾದ್ರೆ.. ತೆರೆಯ ಮೇಲೆ ಸುದೀಪ್‌ ತೋರಿರುವ ಖದರ್ ಬೇರೆ.. ಒಂದು ರಾತ್ರಿಯ ಕತೆ ಅನ್ನೋದನ್ನು ಮೊದ್ಲೇ ಹೇಳಿದ್ದರಿಂದ ತಲೆಯೊಳಗೆ ಒಂದು ರಾತ್ರಿ ಏನಪ್ಪಾ ಮಾಡಿರುತ್ತಾರೆ ಎಂಬ ಪ್ರಶ್ನೆಯೊಂದಿಗೆ ಸಿನಿಮಾ ಥಿಯೇಟರ್‌ಗೆ ಎಂಟ್ರಿಯಾದ ಪ್ರೇಕ್ಷಕರನ್ನು ರಾತ್ರಿಯ ಕತೆಯೊಳಕ್ಕೆ ಕರೆದೊಯ್ದಿದ್ದಾರೆ  ನಿರ್ದೇಶಕ.. ಕರೆಕ್ಟಾಗಿ ಸೂರ್ಯ ಮುಳುಗುತ್ತಿದ್ದಂತೆ ಕತೆ ರಾತ್ರಿ 7 ಗಂಟೆ ದಾಟಿದ ಮೇಲೆ ಶುರುವಾಗ್ತದೆ.. ಬೆಳಕು ಹರಿಯುವ ವೇಳೆಗೆ ಎಲ್ಲಾ ಖುಲ್ಲಂ ಖುಲ್ಲಾ.. ಮೊದ್ಲೇ ಗೊತ್ತಿದ್ದಂತೆ ಕಿಚ್ಚ ಸುದೀಪ್‌ ಇಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌.. ಮ್ಯಾಕ್ಸ್‌ ಅನ್ನೋದು ಅಡ್ಡ ಹೆಸರು.. ಹಾಗಾಗಿ ಸಿನಿಮಾಗೆ ಯಾಕೆ ಇಂಗ್ಲಿಷ್‌ ಟೈಟಲ್ ಕೊಟ್ರಿ.. ಅಂತ ಕೇಳ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿನಿಮಾದ ತೆರೆಯ ಮೇಲೆ ಅದ್ದೂರಿಯಾಗಿಯೇ ಸಿಕ್ಕಿದೆ.. ಟೈಟಲ್‌ಗಳನ್ನು ಆಧರಿಸಿ, ಸಿನಿಮಾದ ಹಣೆಬರಹ ನಿರ್ಧರಿಸುವವರು ಸ್ವಲ್ಪ ಬದಲಾಗಬೇಕಿದೆ..

ಮ್ಯಾಕ್ಸ್‌ ಅನಾವರಣಕ್ಕೆ ಜಾಸ್ತಿ ಬಿಲ್ಡಪ್‌ ತೆಗೆದುಕೊಂಡಿಲ್ಲ.. ಕಾಲು ಗಂಟೆ ವೇಸ್ಟ್‌ ಮಾಡಿಲ್ಲ.. ಸಿನಿಮಾ ಶುರುವಾಗ್ತಿದ್ದಂತೆ ಮ್ಯಾಕ್ಸ್‌ ಕಾಣಿಸಿಕೊಳ್ಳೋಕೆ ಶುರುವಾಗೋದ್ರಿಂದ ಕತೆಯ ವೇಗಕ್ಕೆ ಯಾವುದೇ ಬ್ರೇಕ್‌ ಹಾಕುವ ಪ್ರಯತ್ನವನ್ನು ನಿರ್ದೇಶಕ ಮಾಡಿಲ್ಲ.. ಒಂದು ಕ್ಷಣ ಕೂಡ ಸಿನಿಮಾ ಬೋರ್‌ ಆಯ್ತಪ್ಪ ಅಂತ ಹೇಳಿಕೊಳ್ಳುವ ಸೀನ್‌ಗಳೂ ಇಲ್ಲ.. ಪೊಲೀಸ್‌ ಠಾಣೆಯೊಳಗೆ ನಡೆಯುವ ಘಟನೆಯ ಸುತ್ತಲೂ ಕತೆ ಇರೋದ್ರಿಂದ ಪೊಲೀಸ್‌ ಠಾಣೆಯೇ ಈ ಸಿನಿಮಾದ ಸೆಂಟರ್‌ ಆಫ್‌ ಅಟ್ರಾಕ್ಷನ್‌.. ಮಾಸ್‌ ಮೂವಿಗೆ ಬೇಕಾದ ಅಬ್ಬರವನ್ನು ಎಲ್ಲೂ ಸುಖಾ ಸುಮ್ಮನೆ ಬಳಸಿಲ್ಲ.. ಒಂದು ಸಿಂಪಲ್‌ ಆಗಿರುವ ಮೂವಿ ಮಾಡ್ಬೇಕು ಅನ್ನಿಸ್ತು.. ಅದ್ಕಾಗಿ ಮ್ಯಾಕ್ಸ್‌ ಮಾಡ್ತಿದ್ದೀನಿ ಅಂದಿದ್ದ ಕಿಚ್ಚ ಸುದೀಪ್‌ ಅವರು ಹೇಳಿದಷ್ಟೇನೂ ಈ ಸಿನಿಮಾ ಸಿಂಪಲ್ಲಾಗಿಲ್ಲ.. ಸಿನಿಮಾದ ಉದ್ದಕ್ಕೂ ಒಂದೊಂದು ಕ್ಷಣಕ್ಕೂ ತಿರುವುಗಳಿವೆ.. ಕ್ಲೈಮ್ಯಾಕ್ಸ್‌ ಹಂತದಲ್ಲಿ ಯಾರೂ ಅಂದುಕೊಳ್ಳದ ಟ್ವಿಸ್ಟ್‌ ಕೊಟ್ಟಿದ್ದಾರೆ.. ಇದರಿಂದಾಗಿ ಸೆಂಟಿಮೆಂಟ್‌ ಟಚ್‌ ಕೂಡ ಈ ಅಬ್ಬರದ ಮೂವಿಗೆ ಸಿಕ್ಕಿದೆ.. ಅಲ್ಲಿ ಸ್ವಲ್ಪ ಪ್ರೇಕ್ಷಕರ ಕಣ್ಣುಗಳು ಒದ್ದೆಯಾಗಬಹುದು.. ಉಳಿದಂತೆ ಹೆಚ್ಚು ಸಮಯವನ್ನು ಫ್ಯಾನ್ಸ್‌ ಶಿಳ್ಳೆ ಹೊಡೆದು ಸಂಭ್ರಮಿಸುವ ರೀತಿಯಲ್ಲಿ ಮಾಸ್‌ ಆಗಿಯೇ ಮಾಡಿದ್ದಾರೆ.. ಸಿನಿಮಾದಲ್ಲಿ ಲಾಜಿಕ್‌ ಹುಡುಕುತ್ತಾ ಹೋದ್ರೆ ಯಾವುದಕ್ಕೇ ಯಾವುದು ಎಂಬ ಪ್ರಶ್ನೆ ಕಾಡಬಹುದು.. ಸಿನಿಮಾದಲ್ಲಿ ಲಾಜಿಕ್‌ ಹುಡುಕೋದು ಮತ್ತು ಸಂತೇಲಿ ಮೌನ ಬಯಸೋದು ಎರಡೂ ಒಳ್ಳೆಯದಲ್ಲ.. ಯಾಕಂದ್ರೆ ಸಿನಿಮಾ ಇರೋದು ಲಾಜಿಕ್‌ಗಲ್ಲ.. ಅದು ಮನರಂಜನೆಗಾಗಿ..

ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಅದ್ಭುತವಾಗಿ ಕೊಟ್ಟಿದ್ದಾರೆ ಅಜನೀಶ್‌ ಲೋಕನಾಥ್‌.. ಕ್ಯಾಮರಾ ವರ್ಕ್‌ ಕೂಡಸೂಪರ್‌ ಆಗಿಯೇ ಮೂಡಿ ಬಂದಿದೆ.. ಸಿನಿಮಾದ ಮಾಸ್‌ ಲುಕ್‌ ಗೆ ಬೇಕಾದ ಎಲ್ಲಾ ಎಲಿಮೆಂಟ್‌ಗಳನ್ನು ಸೇರಿಸಲಾಗಿದೆ.. ಸುದೀಪ್‌ ಅಷ್ಟು ಸಿಗರೇಟ್‌ ಸೇದೋದಕ್ಕೇ, ಧೂಮಪಾನ ಒಳ್ಳೆಯದಲ್ಲ ಎಂಬ ಅಷ್ಟುದ್ದದ ಜಾಹೀರಾತು ಕೊಡ್ಬೇಕಾ ಎಂಬ ಪ್ರಶ್ನೆ ಮೂಡಿದ್ರೆ ಅದು ನಿಮ್ಮ ತಪ್ಪಲ್ಲ.. ಸಿನಿಮಾದಲ್ಲಿ ಹೀರೋಯಿನ್‌ ಹಾಕದ ನಿರ್ದೇಶಕರ ತಪ್ಪು ಅಂತ ಬೇಕಿದ್ರೆ ಹೇಳಬಹುದು.. ಇನ್ನು ಹೀರೋಯಿನ್‌ ಇಲ್ಲಾಂತೇಳಿ ಲೇಡಿ ಕ್ಯಾರೆಕ್ಟರ್‌ಗಳೇ ಇಲ್ಲ ಅಂತಲ್ಲ. ಇನ್ಸ್‌ಪೆಕ್ಟರ್‌ ಮ್ಯಾಕ್ಸ್ ಎದುರು ಲೇಡಿ ಇನ್ಸ್‌ಪೆಕ್ಟರ್‌ ರೂಪ ಇರೋದ್ರಿಂದ ಕತೆಯ ಓಟದಲ್ಲೊಂದು ಕುತೂಹಲ ಮನೆ ಮಾಡಿದೆ.. ವಿಲನ್‌ ಕ್ಯಾರೆಕ್ಟರ್‌ನಲ್ಲಿರುವ ಸುನಿಲ್‌ ಗೆಟಪ್‌ ಚೆನ್ನಾಗಿದೆ.. ಒಂದೇ ರಾತ್ರಿಯಲ್ಲಿ ಸಿನಿಮಾ ನಡೆದಿರೋದ್ರಿಂದ ಹಾಕಿರೋ ಒಂದೇ ಕಾಸ್ಟ್ಯೂಮ್‌ನಲ್ಲೇ ಚಿತ್ರ ಮುಗಿಸಿದ್ದಾರೆ.. ಮ್ಯಾಕ್ಸ್‌ನ ಜಾಕೆಟ್‌ ಮಾತ್ರ ಬದಲಾಗಿದೆ.. ಜಾಕೆಟ್‌ ಹೋಗಿ ಬನಿಯನ್‌ ಬಂದಿದ್ದೇ ಹೆಚ್ಚು.. ಇಡೀ ಸಿನಿಮಾದ ಹೈಲೈಟ್‌ ಫೈಟಿಂಗ್‌ ಸೀನ್‌ಗಳು. ಮ್ಯಾಕ್ಸ್‌ ಅಷ್ಟೆಲ್ಲಾ ಕೊಚ್ಚಿ ಕೆಡವಿದ್ರೂ ರಕ್ತದ ಕಲೆಗಳನ್ನು ಕತ್ತಲಲ್ಲೇ ತೋರಿಸಿದ್ದರಿಂದ ರಕ್ತವೂ ಕಪ್ಪಾಗಿಯೇ ಕಾಣುವಂತಾಗಿದೆ. ಹೀಗಾಗಿ ಮನೆಮಂದಿಯೊಂದಿಗೆ ಕುಳಿತು ಸಿನಿಮಾ ನೋಡೋದಕ್ಕೇನೂ ಅಡ್ಡಿಯಿಲ್ಲ.. ವಿಜಯ್‌ ಕಾರ್ತಿಕೇಯನ್‌ ಒಂದು ಒಳ್ಳೆಯ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಕೊಟ್ಟಿದ್ದಾರೆ.. ಸಿನಿಮಾ ಇಷ್ಟ ಆಗೋದಿಕ್ಕೆ ಹಲವು ಕಾರಣಗಳಿವೆ.. ಚೆನ್ನಾಗಿಲ್ಲ ಎನ್ನುವವರು ಎರಡಕ್ಕಿಂತ ಹೆಚ್ಚು ಬಾರಿ ನೋಡಿ, ಸರಿಯಾದ ಕಾರಣ ಕೊಟ್ಟರೆ ಅರ್ಥ ಮಾಡಿಕೊಳ್ಳೋದಕ್ಕೆ ಸುಲಭ ಆಗಬಹುದು.. ಉಳಿದಂತೆ ನೀವು ಸಿನಿಮಾ ನೋಡಿದ್ಮೇಲೆ ಕಮೆಂಟ್‌ ಮಾಡಿ.. ಕೊಟ್ಟ ದುಡ್ಡಿಗೆ ಮೋಸ ಮಾಡದೆ, ಫುಲ್‌ ಮೀಲ್ಸ್‌ ಮಾಸ್‌ ಮನರಂಜನೆಯನ್ನು ಕಿಚ್ಚ ಸುದೀಪ್‌ ಮತ್ತೊಮ್ಮೆ ಕೊಟ್ಟಿದ್ದಾರೆ.. ಇನ್ನೇನಿದ್ರೂ ವರ್ಷಕ್ಕೆ ಒಂದಾದ್ರೂ ಸಿನಿಮಾವನ್ನು ಸುದೀಪ್‌ ಕೊಡ್ತಿರಬೇಕು ಅನ್ನೋದಷ್ಟೇ ಕನ್ನಡ ಚಿತ್ರಪ್ರೇಮಿಗಳ ವಿನಂತಿ..

suddiyaana

Leave a Reply

Your email address will not be published. Required fields are marked *