ಶ್ವೇತಾ ಬಲೆಗೆ ಬಿದ್ದ ವರ್ತೂರು!- ಚಿನ್ನು.. ಅಂತಿದ್ದವ್ರು ಗೊತ್ತಿಲ್ಲವೆಂದಿದ್ದೇಕೆ?
ರಸಗುಲ್ಲ ರಹಸ್ಯ ಬಯಲಾಗುತ್ತಾ?
ನಾನು ಶ್ವೇತಾಗೌಡ.. ಸಮಾಜ ಸೇವಕಿ, ನಾನು ವರ್ತೂರ್ ಪ್ರಕಾಶ್ ಆಪ್ತೆ.. ಸಮಾಜ ಸೇವಕಿ ಅಂತ ಹೇಳ್ಕೊಳ್ತಿದ್ದ ಬಾಗಲಗುಂಟೆ ನಿವಾಸಿ ಶ್ವೇತಾಗೆ ಆಸೆ ಇದ್ದಿದ್ದೆಲ್ಲಾ ಚಿನ್ನದ ಮೇಲಷ್ಟೇ. ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕ್ಕೊಂಡು ಕೆಲ ದಿನಗಳ ಹಿಂದೆಯಷ್ಟೇ ಅವೆನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಗೆ ಎಂಟ್ರಿ ಕೊಟ್ಟಿದ್ಲು ಈ ಮಾಯಗಾರ್ತಿ. ಅಲ್ಲಿ ಸುಮಾರು 2.42 ಕೋಟಿ ರೂ ಮೌಲ್ಯದ ಆಭರಣವನ್ನು ಖರೀದಿಸಿದ್ಲು. ಹಣ ಕೇಳಿದ್ದಕ್ಕೆ ಚಿನ್ನದ ವ್ಯಾಪಾರಿಗೆ ಧಮ್ಕಿ ಹಾಕಿದ್ದಾಳೆ. ಬಳಿಕ ನಗರದ ಡಾಲರ್ಸ್ ಕಾಲೋನಿಯಲ್ಲಿರೋ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆ ಅಡ್ರೆಸ್ ಕೊಟ್ಟಿದ್ದರು. ಇನ್ನು ಶ್ಪೇತಾಗೌಡ ಗಣ್ಯರ ಹೆಸರನ್ನ ರಸಗುಲ್ಲ, ಗೂಲಾಬ್ಜಾಮೂನ್ ಅಂತಾ ಸೇವ್ ಮಾಡಿಕೊಳ್ಳುತ್ತಿದ್ದಳು..
ಶ್ವೇತಾ ಬಲೆಗೆ ಬಿದ್ದ ವರ್ತೂರು!
ಇದನ್ನೂ ಓದಿ : ICU ಸೇರಿದ ವಿನೋದ್ ಕಾಂಬ್ಳಿ – ಅಹಂ.. ಹೆಂಡ.. ಹೆಣ್ಣು.. ನೆತ್ತಿಗೇರಿ ಬದುಕೇ ಹಾಳಾಗಿತಾ?
ಯಾವಾಗ ಚಿನ್ನದ ಹಣ ಸಿಗದಿದ್ದಾಗ ಅಂಗಡಿ ಮಾಲೀಕ ಸಂಜಯ್ ಭಾಷ್ನ, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಎಸಿಪಿ ಗೀತಾ ಆರೋಪಿ ಹಿಂದೆ ಬೀಳ್ತಿದ್ದಂತೆ, ಟೆಂಟ್ ಎತ್ತಿದ ಶ್ವೇತಾಗೌಡ ಮೈಸೂರಿಗೆ ಎಸ್ಕೇಪ್ ಆಗಿದ್ದಾರೆ. ಆದ್ರೂ ಬೆನ್ನು ಬಿದ್ದ ಪೊಲೀಸರು, ಬಂಗಾರದ ಅಂಗಡಿಯವರಿಗೆ ಟೋಪಿ ಹಾಕಿದ್ದ ಶ್ವೇತಾ ಕೈಗೆ, ಸ್ಟೀಲ್ ಕೋಳ ತೊಡಿಸಿದ್ದಾರೆ. ಚಿನ್ನ, ಕಾರು ಸೇರಿದಂತೆ ಆಕೆಗೆ ಸಂಬಂಧಿಸಿದ ವಸ್ತುಗಳು ಜಪ್ತಿ ಮಾಡಿದ್ದಾರೆ. ವಿಚಾರಣೆ ವೇಳೆ ಪಡೆದ ಚಿನ್ನದ ಪೈಕಿ ವರ್ತೂರು ಪ್ರಕಾಶ್ಗೂ ಚಿನ್ನ ನೀಡಿದ್ದೇನೆ ಎಂದು ಶ್ವೇತಾಗೌಡ ಹೇಳಿಕೆ ನೀಡಿದ್ದಳು. ಅಲ್ಲದೇ ದೂರುದಾರ ಸಂಜಯ್ ಭಾಪ್ನಾ ಕೂಡ ಸ್ವತಃ ವರ್ತೂರು ಪ್ರಕಾಶ್ ಶ್ವೇತಗೌಡಳನ್ನು ಪರಿಚಯಿಸಿದ್ರು ಎಂದು ಹೇಳಿಕೆ ನೀಡಿದ್ದರು. ವರ್ತೂರು ಪ್ರಕಾಶ್ ಜ್ಯುವೆಲ್ಲರಿ ಮಾಲೀಕನಿಗೆ ಕರೆ ಮಾಡಿರುವ ಕಾಲ್ ರೆಕಾರ್ಡ್ಸ್, ಜ್ಯುವೆಲ್ಲರಿ ಶಾಪ್ಗೆ ಬಂದು ತೆರಳಿರುವ ಸಿಸಿಟಿವಿ ದೃಶ್ಯಾವಳಿ ಸಮೇತ ಎಸಿಪಿ ಗೀತಾ ಮುಂದೆ ಹೇಳಿಕೆ ದಾಖಲಿಸಿದ್ದರು.
ಚಿನ್ನು.. ಅಂತಿದ್ದವ್ರು ಗೊತ್ತಿಲ್ಲವೆಂದಿದ್ದೇಕೆ?
ಆರೋಪಿ ಶ್ವೇತಾ ಈ ಹಿಂದೆಯೂ ಇದೇ ರೀತಿ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಮೋಸ ಮಾಡಿ ಸಿಕ್ಕಿಬಿದ್ದಿದ್ಲು. ಈ ಪ್ರಕರಣದಲ್ಲಿ ಶ್ವೇತಾಗೌಡರನ್ನ ಯಲಹಂಕ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದ್ರೆ, ಜಾಮೀನು ಪಡೆದು ಹೊರ ಬಂದ್ರೂ ತನ್ನ ಹಳೇ ಚಾಳಿ ಮುಂದುವರೆಸಿದ್ದಾಳೆ. ಇಷ್ಟೇ ಅಲ್ಲ ರಾಜಕಾರಣಿ, ನಟ-ನಟಿಯರ ಜತೆ ಪೋಟೋ ಕ್ಲಿಕಿಸಿಕೊಳ್ಳುತ್ತಿದ್ದ ಫೋಟೋ ಬಳಸಿ ತನಗೆ ಗಣ್ಯರ ಸ್ನೇಹವಿದೆ ಅಂತ ಪರಿಚಿತರಲ್ಲಿ ಹೇಳಿಕೊಂಡಿದ್ದಾಳೆ. ಹೋದಲ್ಲಿ ಬಂದಲ್ಲಿ ನಾನು ವರ್ತೂರು ಪ್ರಕಾಶ್ ಆಪ್ತೆ ಅಂತ ಹೇಳಿಕೊಳ್ತಿದ್ದ ಶ್ವೇತ ಯಾರನ್ನೋದು ಅಸಲಿಗೆ ವರ್ತೂರ್ ಪ್ರಕಾಶ್ಗೆ ಗೊತ್ತೇ ಇಲ್ಲವಂತೆ. ಈ ಬಗ್ಗೆ ಖುದ್ದು ಮಾಜಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಶ್ವೇತಾಗೌಡ ಯಾರಂತ ನನಗೆ ಗೊತ್ತಿಲ್ಲ ಅಂತ ಮಾಜಿ ಸಚಿವರೂ ಹೇಳಿದ್ರೂ, ಅವ್ರ ಹೆಸರು ಥಳಕು ಹಾಕಿಕೊಂಡಿರೋದ್ರಿಂದ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಆದ್ರೆ, ಶ್ವೇತಾ ಮಾತ್ರ ಅದಿನ್ನೂ ಯಾಱರಿಗೆ ಯಾಱರ ಹೆಸರು ಹೇಳಿ ವಂಚಿಸಿದ್ದಾರೋ ಅವ್ರವರೇ ಹೊರ ಬಂದು ಕಂಪ್ಲೆಂಟ್ ಕೊಟ್ರೆ ಎಲ್ಲಾ ಬಂಡವಾಳ ಬಯಲಾಗಬಹುದು.
ಪೊಲೀಸರ ಮುಂದೆ ಸೈಲೆಂಟ್ ಆದ ವರ್ತೂರ್ ಪ್ರಕಾಶ್
ಫೆಸ್ಬುಕ್ನಲ್ಲಿ ಸುಂದರಿಯ ಶ್ವೇತಾಗೌಡ ಅಂದ ನೋಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೇ ವರ್ತೂರು ಪ್ರಕಾಶ್ ದೊಡ್ಡ ಮಿಸ್ಟೇಕ್ ಆಗೋಗಿದೆ. ಈ ಹಿಂದೆ 2 ಬಾರಿ ನೋಟೀಸ್ ಕೊಟ್ಟರು ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಮತ್ತೆ ನೋಟೀಸ್ ನೀಡಲಾಗಿತ್ತು. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಅರೆಸ್ಟ್ ಆಗೋ ಭಯದಲ್ಲಿಗ್ಗ ವರ್ತೂರ್ನ್ನ ಪುಲಿಕೇಶಿನಗರ ಎಸಿಪಿ ಗೀತಾ ಅವರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಾಜಿ ಸಚಿವ ವರ್ತೂರು ಪ್ರಕಾಶ ಪೋಲೀಸರ ಮುಂದೆ ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ, ಬಂಧನದ ಭೀತಿಯಿಂದಾಗಿ ಹಣ ಹಾಗೂ ಒಡವೆ ವಾಪಸ್ ನೀಡಲು ಮುಂದಾಗಿದ್ದಾರೆ. ಪೊಲೀಸರಿಗೆ 14 ಲಕ್ಷ ರೂ. ಹಣ ಹಾಗೂ ಒಡವೆಗಳನ್ನ ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಶ್ವೇತಾಗೌಡ ಮಾಡುತ್ತಾಳೆಂದು ನನಗೆ ಗೊತ್ತಿಲ್ಲ. ನನಗೂ ಶ್ವೇತಗೌಡಳಿಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಎಂದು ನನಗೆ ಆಕೆ ಕೆಲ ಒಡವೆ ನೀಡಿದ್ದಳು ಎಂದು ಪೊಲೀಸರ ಮುಂದೆ ವರ್ತೂರು ಪ್ರಕಾಶ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.