D ಬಾಸ್ ಬಾಳಲ್ಲಿ ಮತ್ತೆ ಸುಂಟರಗಾಳಿ – ಪವಿತ್ರಾ, ದಾಸ ಭೇಟಿಗೆ ಮುಹೂರ್ತ ಫಿಕ್ಸ್!
ವಿಜಯಲಕ್ಷ್ಮೀಗೆ ಮತ್ತೆ ಅನ್ಯಾಯವಾಗುತ್ತಾ?

D ಬಾಸ್ ಬಾಳಲ್ಲಿ ಮತ್ತೆ ಸುಂಟರಗಾಳಿ – ಪವಿತ್ರಾ, ದಾಸ ಭೇಟಿಗೆ ಮುಹೂರ್ತ ಫಿಕ್ಸ್!ವಿಜಯಲಕ್ಷ್ಮೀಗೆ ಮತ್ತೆ ಅನ್ಯಾಯವಾಗುತ್ತಾ?

 

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ A1 ಪವಿತ್ರಾ ಗೌಡ, A2 ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರಿಗೂ ಒಂದೇ ದಿನ ರೆಗ್ಯೂಲರ್ ಜಾಮೀನು ಮಂಜೂರಾಗಿದೆ. ಜೈಲಿನಿಂದ ಹೊರಬಂದ್ಮೇಲೆ ಪವಿತ್ರಾ ಗೌಡ ಹಾಗೂ ದರ್ಶನ್ ಮುಖಾ ಮುಖಿಯಾಗುತ್ತಾರಾ? ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಇದೂವರೆಗೂ ಈ ಜೋಡಿ ಭೇಟಿಯಾಗುವುದಕ್ಕೆ ಅವಕಾಶವೇ ಸಿಕ್ಕಿಲ್ಲ.. ರೆಗ್ಯೂಲರ್ ಜಾಮೀನು ಸಿಕ್ಕಿದ ಬಳಿಕ ದರ್ಶನ್ ಬಗ್ಗೆ ಪವಿತ್ರಾ ಗೌಡ ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಬೆಂಗಳೂರಿನಲ್ಲಿ ಭೇಟಿಯಾಗಬಹುದು? ಆರು ತಿಂಗಳ ಬಳಿಕ ಮತ್ತೆ ಒಟ್ಟಿಗೆ ಸೇರಿಕೊಳ್ಳಬಹುದು  ಎನ್ನಲಾಗಿತ್ತು. ಆದರೆ, ಇದೂವರೆಗೂ ಅದು ಸಾಧ್ಯವಾಗಿಲ್ಲ. ಪವಿತ್ರಾ ಗೌಡ ಕೈಗೆ ದರ್ಶನ್ ಸಿಕ್ಕೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.  ದರ್ಶನ್ ತಮ್ಮ ಫಾರ್ಮ್ ಹೌಸ್‌ನಲ್ಲಿ ಆರಾಮಾಗಿ ಓಡಾಡಿಕೊಂಡು,  ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದಾರೆ. ಆದರೆ, ಪವಿತ್ರಾ ಗೌಡ ಮಾತ್ರ ಗಲಿಬಿಲಿಗೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಪವಿತ್ರಾ ಗೌಡ ಮಾತ್ರ  ಸಂಬಂಧಿಯ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೂವರೆಗೂ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಪರಸ್ಪರ ಭೇಟಿಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಮುಡಾ ಕೇಸ್‌ ಗೆ ಬಿಗ್‌ ಟ್ವಿಸ್ಟ್‌ – ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ಸದ್ದಿಲ್ಲದೇ ತನಿಖೆ ಮುಗಿಸಿದ ಸರ್ಕಾರ

 

ದರ್ಶನ್ ಭೇಟಿಗೆ ಹಂಬಲಿಸಿದ ಪವಿತ್ರಗೌಡ ಮನ

ಕಳೆದ ಕೆಲವು ದಿನಗಳಿಂದ ದರ್ಶನ್ ಭೇಟಿಯಾಗುವುದಕ್ಕೆ ಪವಿತ್ರಾ ಗೌಡ ಹಂಬಲಿಸುತ್ತಿದ್ದರು ಎನ್ನಲಾಗಿದೆ. ಇನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿಗೆ ಕಾನೂನು ಅಡೆ ತಡೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಕೋರ್ಟ್ ಅನುಮತಿ ಪಡೆದು ಮೈಸೂರಿಗೆ ಹೋಗಿದ್ದರೆ. ಇತ್ತ ದರ್ಶನ್ ಭೇಟಿ ಮಾಡುವುದಕ್ಕೆ ಪವಿತ್ರಾ ಗೌಡ ಮೈಸೂರಿಗೆ ಹೋಗಬೇಕಿದ್ರೆ ಅವರೂ ಕೂಡ ಕೋರ್ಟ್ ಅನುಮತಿಯನ್ನು ಪಡೆಯಬೇಕಿದೆ.

ದರ್ಶನ್ ಭೇಟಿಯಾದ್ರೆ ವಿಜಯಲಕ್ಷ್ಮೀ ಕೆಂಡಾಮಂಡಲ!

ಪವಿತ್ರಗೌಡಗಾಗಿ ಜೈಲಿಗೆ ಹೋದ ದರ್ಶನ್‌ನನ್ನ ಒದ್ದಾಡಿ ಬಿಡಿಸಿದ್ದು ವಿಜಯಲಕ್ಷ್ಮೀ.. ಮತ್ತೆ ಎಲ್ಲಾದ್ರೂ ಪವಿತ್ರ ದರ್ಶನ್‌ ಗೆಳೆತನ ಮುಂದುವರಿದ್ರೆ  ವಿಜಯಲಕ್ಷ್ಮಿ ಕಾಳಿ ರೂಪ ತಾಳೋದು ಪಕ್ಕಾ. ಪವಿತ್ರಗೌಡಗಳನ್ನ ಸಂಬಂಧ ಬಿಡುವಂತೆ ಗಂಡನ ಹತ್ರ ಆಣೆ ಬಾಷೆ ಕೂಡ ಹಾಕಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ.. ಅಲ್ಲದ ಮಗನನ್ನ ಅಪ್ಪನ ಬಳಿಯೇ ಇರುವಂತೆ ವಿಜಯಲಕ್ಷ್ಮೀ ನೋಡಿಕೊಳ್ಳುತ್ತಿದ್ದಾರೆ. ಹಾಗೇ ಡಿ ಬಾಸ್ ಎಲ್ಲಿಗೆ ಹೋದ್ರು ಅಲ್ಲಿಗೆ ವಿಜಯ ಲಕ್ಷ್ಮೀ ಜೊತೆಯಲ್ಲಿ ಇರುತ್ತಿದ್ದಾರೆ.. ಹೀಗಾಗಿ ಎಲ್ಲಾದ್ರೂ ದರ್ಶನ್ ಭೇಟಿಗೆ ಪವಿತ್ರಗೌಡ ಬಂದ್ರೆ ದೊಡ್ಡ ಯುದ್ಧವೇ ನಡೆಯೋದು ಪಕ್ಕಾ.. ಅಲ್ಲದೇ ದರ್ಶನ್ ಜೈಲಿಗೆ ಹೋದ ಗಂಡನ ಬೆನ್ನಿಗೆ ನಿಂತ ವಿಜಯಲಕ್ಷ್ಮೀಯನ್ನ ನೋಡಿ ಫಾನ್ಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆಂಡತಿ ಅಂದ್ರೆ ಹೀಗ್ ಇರ್ಬೇಕು ಅಂತಾ ಹೇಳುತ್ತಿದ್ದಾರೆ.. ಹೀಗಾಗಿ ವಿಜಯ ಲಕ್ಷ್ಮೀ ಅನ್ನೋ ಗೊಡೆಯನ್ನ ದಾಟಿ ಪವಿತ್ರಗೌಡ  ದರ್ಶನ್ ಬಳಿ ಹೋಗುವುದು ಅಷ್ಟು ಸುಲಭ ಅಲ್ಲ.

ಪವಿತ್ರಾ ಗೌಡ ಸಹವಾಸ ಬೇಡವೆಂದ ದರ್ಶನ್?

ಜೈಲಿಗೆ ಹೋಗಿ ಬಂದ ಮೇಲೆ ದರ್ಶನ್ ಹೊಸ ಅಧ್ಯಾಯ ಶುರುವಾಗಿದೆ. ಮೈಸೂರಿನಲ್ಲಿರೋ ದಾಸ  ತನ್ನ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ ಜೊತೆ ಖುಷಿಯಲ್ಲಿದ್ದಾರೆ.  ಆದ್ರೆ ರಿಲೀಸ್ ಆದ ಬಳಿಕ ಪವಿತ್ರಾ ಗೌಡ ಮೀಟ್ ಮಾಡಲು ದರ್ಶನ್ ನಿರಾಕರಿಸಿದ್ದಾರಂತೆ. ಪವಿತ್ರಾಗೌಡ ಸಹವಾಸ ಬೇಡವೆಂದು ದೂರ ಉಳಿದಿದ್ದಾರೆ. ಪವಿತ್ರಾ ಗೌಡ ಜೊತೆ ಭೇಟಿ ಮಾಡಲ್ಲ & ಪವಿತ್ರಾ ಗೌಡ ಜೊತೆ ಮಾತನಾಡಲ್ಲ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಪವಿತ್ರಾ ಗೌಡಗೆ ಮೈಸೂರಿನ ತೋಟದ ಮನೆಯ ಕಡೆಗೆ ಬರಲೇಬೇಡ, ಅಂತಲೂ ಆಜ್ಞೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ದರ್ಶನ್ ತೂಗುದೀಪ್ ಅವರೇ ಆಗಲಿ ಅಥವಾ ಅವರ ಕುಟುಂಬ ಸದಸ್ಯರೇ ಆಗಲಿ, ಅಥವಾ ಪವಿತ್ರಾ ಗೌಡ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ.

ಯಾರ ಭೇಟಿಗೂ ಅವಕಾಶ ನೀಡದ ಡಿ ಬಾಸ್

ಪತ್ನಿ ಜೊತೆ ಫಾರ್ಮ್​ ಹೌಸ್​ನಲ್ಲಿರುವ ದರ್ಶನ್ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಫಾರ್ಮ್​ ಹೌಸ್​ಗೆ ಯಾರು ಬರಬೇಡಿ ಎಂದು ಮನವಿ ಮಾಡಿದ್ದಾರೆ. ಸಿನಿಮಾ ರಂಗದ ಗಣ್ಯರು ರಾಜಕೀಯ ಗಣ್ಯರು ಸೇರಿದಂತೆ ಯಾರು ಬರದಂತೆ ಹೇಳಿದ್ದಾರೆ. ಸದ್ಯ ಯಾರನ್ನೂ ಮೀಟ್ ಮಾಡಲ್ಲ ಎಂದು ಕುಟುಂಬಸ್ಥರ ಮೂಲಕ ಮನವಿ ಮಾಡಿದ್ದಾರೆ. ಸ್ವಲ್ಪ ದಿನಗಳ ನಂತರ ಎಲ್ಲರನ್ನೂ ನಾನೇ ಮೀಟ್ ಮಾಡ್ತೀನಿ ಎಂದಿದ್ದಾರೆ. ಹಾಗೇ ಪವಿತ್ರಗೌಡನ್ನ ಮೀಟ್ ಮಾಡೋಕೆ ದಾಸನಿಗೆ ಆಸೆ ಇಲ್ಲವಂತೆ..

ದರ್ಶನ್ , ಪವಿತ್ರಾ  ಭೇಟಿಗೆ ಮುಹೂರ್ತ ಫಿಕ್ಸ್

ಇನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ ಮುಖಿಗೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಜನವರಿ 10ರಂದು ಇಬ್ಬರೂ ಕೋರ್ಟ್‌ನಲ್ಲಿ ಭೇಟಿಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳು ವಿಚಾರಣೆಗೆ ತಪ್ಪದೆ ಹಾಜರಾಗಬೇಕಿದೆ. 57ನೇ ಸಿಸಿಎಚ್ ನ್ಯಾಯಾಧೀಶರ ಮುಂದೆ ಅಷ್ಟೂ ಜನ ಆರೋಪಿಗಳು ಹಾಜರಾಗಬೇಕು. ಅದೇ ದಿನ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಎದುರು ಬದುರಾಗುತ್ತಾರೆಂದು ನಿರೀಕ್ಷೆ ಮಾಡಲಾಗಿದೆ.

ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ವಿಜಯಲಕ್ಷ್ಮೀ

ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಇನ್ನು ದರ್ಶನ್ ತಾಯಿ ಮೀನಾ ತೂಗುದೀಪ್, ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. ದರ್ಶನ್ ಹೊರತುಪಡಿಸಿ ಕುಟುಂಬ ಸಮೇತ ದೇವಿ ದರ್ಶನ ಪಡೆದಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ದೇವಿಗೆ ಹರಕೆ ತೀರಿಸಿದ್ದಾರೆ. ಒಟ್ಟಾರೆ ಜಾಮೀನು ಸಿಕ್ಕ ಬಳಿಕ ದರ್ಶನ್ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಸಿನಿಮಾ ಶೂಟಿಂಗ್‌ಗೆ ಯಾವಾಗ ಹೋಗ್ತಾರೆ ಡೆವಿಲ್‌?

ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸಿನಿಮಾ ಶೂಟಿಂಗ್ ಶುರು ಮಾಡುವುದು ಯಾವಾಗ? ಅನ್ನೋ ಚರ್ಚೆ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎದುರಿಸಿ, ಇದೀಗ ಫ್ರೀ ಬರ್ಡ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮುಂದಿನ ಸಿನಿಮಾ ಶೂಟಿಂಗ್ ಶುರು ಮಾಡ್ತಾರೆ ಅಂತಾ ಇದೀಗ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.

Kishor KV

Leave a Reply

Your email address will not be published. Required fields are marked *