ಪನೀರ್ ಅಂದ್ರೆ ಪ್ರಾಣಕ್ಕೆ ಸಂಚಕಾರ! – ನೀವು ತಿನ್ನೋ ಪನೀರ್ ಅಸಲಿಯೋ.. ನಕಲಿಯೋ?
ಕಲಬೆರಕೆ ಕಂಡುಹಿಡಿಯೋದು ಹೇಗೆ?
ಪನ್ನೀರ್.. ಈ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವಾ.. ಕೇವಲ ಬಾಯಿ ರುಚಿಗೆ ಮಾತ್ರವಲ್ಲ.. ಪೌಷ್ಠಿಕಾಂಶದ ದೃಷ್ಟಿಯಿಂದಲೂ ಪನೀರ್ ಬಹಳ ಪ್ರಯೋಜನಕಾರಿ. ಇನ್ನು ಮಕ್ಕಳಿಗೂ ಪನೀರ್ ಅನ್ನ ತುಂಬಾ ಇಷ್ಟ ಪಟ್ಟು ತಿಂತಾರೆ. ಇದೀಗ ಮಾರುಕಟ್ಟೆಯಲ್ಲಿ ಪನೀರ್ಗೆ ಹೆಚ್ಚಿನ ಬೇಡಿಕೆ ಇದೆ. ಡಿಮ್ಯಾಂಡ್ ಹೆಚ್ಚಾಗ್ತಿದ್ದಂತೆ ಸಿಂಥೆಟಿಕ್ ಪನೀರ್ ಅಂದ್ರೆ ನಕಲಿ ಪನೀರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದನ್ನು ತಿಂದ್ರೆ ಬಂದರೆ ಪ್ರಾಣಕ್ಕೆ ಸಂಚಕಾರ ಬರ್ಬೋದು.. ಇಲ್ದಿದ್ರೆ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ನೀವು ಖರೀದಿಸುವ ಪನೀರ್ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಮುಖ್ಯ.
ಇದನ್ನೂ ಓದಿ : ಪ್ರಾಕ್ಟಿಸ್ ವೇಳೆ ರೋಹಿತ್ ಗೆ ಮುಜುಗರ.. ಫ್ಯಾನ್ಸ್ ಶಾಪ ಹಾಕಿದ್ದೇಕೆ?
ನೀವು ಪನೀರ್ ಖರೀದಿಸುವಾಗ ಯಾವಾಗಲೂ ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿ. ಅಸಲಿ ಪನೀರ್ ನಲ್ಲಿ ಹಾಲು ಮತ್ತು ಆಮ್ಲ ಅಂದ್ರೆ ವಿನೆಗರ್ ನಂತಹ ಪದಾರ್ಥಗಳಾಗಿ ಮಾತ್ರ ಪಟ್ಟಿ ಮಾಡಬೇಕು. ನಕಲಿ ಪನೀರ್ ಸಾಮಾನ್ಯವಾಗಿ ಸಸ್ಯಜನ್ಯ ಎಣ್ಣೆಗಳು ಮತ್ತು ಪಿಷ್ಟಗಳನ್ನು ಒಳಗೊಂಡಿರುತ್ತದೆ.
ಇನ್ನು ಪನೀರ್ ನಕಲಿಯಾ ಅಂತಾ ಬೇಳೆಯಿಂದ ಪರೀಕ್ಷಿಸಬಹುದು. ಪನೀರ್ ಅನ್ನು ಕುದಿಸಿ. ಅದಕ್ಕೆ ಸ್ವಲ್ಪ ಬೇಳೆ ಪುಡಿಯನ್ನು ಸೇರಿಸಿ.. 10 ನಿಮಿಷಗಳ ನಂತರ ನೀರು ತಿಳಿ ಕೆಂಪು ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಯೂರಿಯಾ ಕಂಟೆಟ್ ಇದೆ ಅಂತ ಅರ್ಥ.
ಪನೀರ್ ವಿನ್ಯಾಸ ಮತ್ತು ಅದ್ರ ರುಚಿಯನ್ನು ಗಮನಿಸಿ. ಅಸಲಿ ಪನೀರ್ ಒತ್ತಿದಾಗ ಪೌಡರ್ ರೀತಿ ಆಗುತ್ತದೆ ಮತ್ತು ಹಾಲಿನ ಪರಿಮಳವನ್ನು ಹೊಂದಿರುತ್ತದೆ. ನಕಲಿ ಪನೀರ್ ಹುಳಿಯಾಗಿರುತ್ತೆ.. ಹಾಗೇ ಅದು ರಬ್ಬರಿನಂತೆ ಗಟ್ಟಿಯಾಗಿರುತ್ತೆ.
ಇನ್ನು ಪನೀರ್ ರೇಟ್ ಮೂಲಕವೇ ಅದು ಅಸಲಿಯೋ ನಕಲಿಯೋ ಅಂತಾ ಕಂಡು ಹಿಡಿಬೋದು. ಅಸಲಿ ಪನೀರ್ ಕಾಸ್ಟ್ಲಿ.. ಕೆಜಿಗೆ 400 ರೂಪಾಯಿ ಇರುತ್ತೆ.. ಆದ್ರೆ ನಕಲಿ ಪನೀರ್ ಅನ್ನು ನೈಜ ಪನೀರ್ಗಿಂತ ಕಡಿಮೆ ಬೆಲೆಗೆ ಮಾರಾಟ ಸೇಲ್ ಮಾಡ್ತಾರೆ. ಹೀಗಾಗಿ ಪನೀರ್ ಖರೀದಿಸುವಾಗ ಎಚ್ಚರದಿಂದ ಇರಿ. ಹೀಗಾಗಿ ನೀವು ಆದಷ್ಟು ಮನೆಯಲ್ಲಿ ಪನೀರ್ ತಯಾರಿಸಿಕೊಳ್ಳಿ.. ಮನೆಯಲ್ಲಿ ತಯಾರಿಸಲು ಆಗದಿದ್ರೆ ಸ್ಪಲ್ಪ ದುಡ್ಡು ಖರ್ಚಾದ್ರೂ ಪರವಾಗಿಲ್ಲ.. ಉತ್ತಮ ಗುಣಮಟ್ಟದ ಪನೀರ್ ಖರೀದಿಸಿ,