ರೋಹಿತ್ ನಾಯಕತ್ವದಲ್ಲಿ ಕಳಪೆ ಪ್ರದರ್ಶನ – ರೊಚ್ಚಿಗೆದ್ದ ಫ್ಯಾನ್ಸ್
ರೋಹಿತ್ ಸ್ಥಾನಕ್ಕೆ ಯಾರು ಬರ್ತಾರೆ?

ರೋಹಿತ್ ನಾಯಕತ್ವದಲ್ಲಿ ಕಳಪೆ ಪ್ರದರ್ಶನ  – ರೊಚ್ಚಿಗೆದ್ದ ಫ್ಯಾನ್ಸ್ರೋಹಿತ್  ಸ್ಥಾನಕ್ಕೆ ಯಾರು ಬರ್ತಾರೆ?

ರೋಹಿತ್ ಮೊದಲ ಟೆಸ್ಟ್‌ ಆಡಿಲ್ಲ. ಆಗ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಆದ್ರೆ ಎರಡನೇ ಟೆಸ್ಟ್ ನಿಂದ ತಂಡಕ್ಕೆ ಬಂದಾಗಿನಿಂದ ತಂಡದ ಪ್ರದರ್ಶನ ಮತ್ತೆ ಫೆಲ್ಯೂರ್ ಆಗಿದೆ. ಬ್ಯಾಟಿಂಗ್ ಮಾತ್ರವಲ್ಲ, ರೋಹಿತ್ ನಾಯಕತ್ವ ಕೂಡಾ ಟೀಕೆಗೊಳಗಾಗಿದೆ. ಹೀಗಾಗಿ ಕೆಲವು ಅಭಿಮಾನಿಗಳು ರೋಹಿತ್ ಇಲ್ಲದಿದ್ದರೇ ಒಳ್ಳೆಯದು. ಅದು ನಿಜಕ್ಕೂ ಗುಡ್ ನ್ಯೂಸ್. ಬುಮ್ರಾನೇ ನಾಯಕನಾಗಲಿ. ತಂಡ ಗೆಲ್ಲಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ ಸ್ಥಾನಕ್ಕೆ ಯಾರು ಬರ್ತಾರೆ?

ನಾಯಕ ರೋಹಿತ್ ಶರ್ಮಾ ಹೊರಗುಳಿದ್ರೆ ಅವರ ಸ್ಥಾನವನ್ನು ತುಂಬಲು ಅನೇಕ ಆಯ್ಕೆಗಳಿವೆ. ಟೀಮ್ ಮ್ಯಾನೇಜ್​ಮೆಂಟ್ ಬ್ಯಾಟಿಂಗ್ ಅನ್ನು ಬಲಪಡಿಸಲು ಅವರು ಧ್ರುವ್ ಜುರೆಲ್​ಗೆ ಅವಕಾಶ ನೀಡಬಹುದು. ಅಲ್ಲದೆ, ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಆಯ್ಕೆಯಾಗಬಹುದು. ಏಕೆಂದರೆ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಹುದು. ಒಂದು ವೇಳೆ ರೋಹಿತ್ ಹೊರಬಿದ್ದರೆ ಜಸ್ಪ್ರೀತ್ ಬುಮ್ರಾ ಮತ್ತೆ ತಂಡವನ್ನು ಮುನ್ನಡೆಸಬಹುದು ಈ ಮೊದಲು ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ನಾಲ್ಕನೇ ಟೆಸ್ಟ್​ಗೆ ಕೈ ಬಿಡಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿತ್ತು. ಆದರೆ ಪ್ರಮುಖ ಆಟಗಾರರೇ ಹೊರ ಬಿದ್ದರೆ ತಂಡದ ಬಲ ಕ್ಷೀಣಿಸಲಿದೆ ಎನ್ನುವ ಕಾರಣಕ್ಕೆ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಯಾರಿಗೆಲ್ಲಾ 11ರ ಬಳಗದಲ್ಲಿ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಹಾಗೇ ಪ್ರಾಕ್ಟಿಸ್ ವೇಳೆ ರೋಹಿತ್ ಬ್ಯಾಟಿಂಗ್‌ನಲ್ಲಿ ಒದ್ದಾಡಿದ ವಿಡಿಯೋ ವೈರಲ್ ಆದ ಮೇಲೆ ರೋಹಿತ್ ಟೆಸ್ಟ್‌ ನಿಂದ ಹೊರಗಿರಲಿ ಅಂತಾ ಫಾನ್ಸ್‌ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ..

Kishor KV

Leave a Reply

Your email address will not be published. Required fields are marked *