BBK ಯಿಂದ ತ್ರಿವಿಕ್ರಮ್‌ ಔಟ್‌? – ದುರಂಹಕಾರಕ್ಕೆ Eliminate ಶಿಕ್ಷೆ
ಎಲಿಮಿನೇಟ್ or ಸೀಕ್ರೆಟ್ ರೂಮ್

BBK ಯಿಂದ ತ್ರಿವಿಕ್ರಮ್‌ ಔಟ್‌? – ದುರಂಹಕಾರಕ್ಕೆ Eliminate ಶಿಕ್ಷೆಎಲಿಮಿನೇಟ್ or ಸೀಕ್ರೆಟ್ ರೂಮ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕುತೂಹಲ ಮೂಡಿಸಿದೆ. ಪ್ರಬಲ ಸ್ಪರ್ಧಿಗಳೇ ಈಗ ದೊಡ್ಮನೆಯಿಂದ ಔಟ್‌ ಆಗ್ತಿದ್ದಾರೆ. ಕಳೆದ ವಾರ ಶಿಶಿರ್‌ ಎಲಿಮಿನೇಟ್‌ ಆಗಿದ್ರು.. ಇದೀಗ ಈ ವಾರವೂ ಬಿಗ್‌ ಬಾಸ್‌ ಪ್ರಬಲ ಸ್ಫರ್ಧಿಗೆ ಶಾಕ್‌ ಕೊಟ್ಟಿದೆ. ಇದೀಗ ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆದ್ರಾ ಅನ್ನೋ ಪ್ರಶ್ನೆ ಮೂಡಿದೆ. ತ್ರಿವಿಕ್ರಮ್‌ ದೊಡ್ಮನೆಯಿಂದ ಹೊರ ಬೆನ್ನಲ್ಲೇ ಭವ್ಯಾ ಗೌಡ ಐಶ್ವರ್ಯ ಮೇಲೆ ಕಾಫಿ ಚೆಲ್ಲಿದ್ದಾರೆ. ಅಷ್ಕಕ್ಕೂ ದೊಡ್ಮನೆಯಲ್ಲಿ ನಡೆತಿರೊದಾದ್ರೂ ಏನು? ತ್ರಿವಿಕ್ರಮ್‌ ಮನೆಯಿಂದ ಹೊರ ನಡೆದ್ರಾ? ಭವ್ಯ ಐಶ್ವರ್ಯ ಮೇಲೆ ಟೀ ಚೆಲ್ಲಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶೋಭಿತಾ ನಾಗಚೈತನ್ಯ ಮಧ್ಯೆ ಮನಸ್ತಾಪ? – ಈ ವಿಷ್ಯ ಒಪ್ಪಿಕೊಳ್ಳಲೇಬೇಕು ಎಂದ ಚೈತನ್ಯ!

ಬಿಗ್ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸಿದೆ. ವೀಕ್ಷಕರ ಲೆಕ್ಕಾಚಾರ ಕೂಡ ಉಲ್ಟಾ ಆಗ್ತಿದೆ. ಪ್ರಬಲ ಸ್ಪರ್ಧಿಗಳೇ ದೊಡ್ಮನೆಯಿಂದ ಹೊರ ಬರ್ತಿದ್ದಾರೆ. ಕಳೆದ ಬಾರ ಶಿಶಿರ್‌ ಎಲಿಮಿನೇಟ್‌ ಆಗಿದ್ದು ವೀಕ್ಷಕರಿಗೆ ಶಾಕ್‌ ಆಗಿತ್ತು. ಆ ಶಾಕ್‌ ನಿಂದ ಹೊರ ಬರುವಷ್ಟರಲ್ಲೇ ಈ ವಾರ ತ್ರಿವಿಕ್ರಮ್‌ ತ್ರಿವಿಕ್ರಮ್‌  ಅವರು ಔಟ್‌ ಎಂದು ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ.

ಕಳೆದ ವಾರ ಕಳೆದ ವಾರ ಟಸ್ಕ್‌ನಲ್ಲಿ ತ್ರಿವಿಕ್ರಮ್ ಸ್ಪರ್ಧಿಗಳ ಜೊತೆಗೆ ಚರ್ಚಿಸಿ ಒಬ್ಬರನ್ನು ನಾಮಿನೇಟ್ ಮಾಡಿ ಅಂತ ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್ ನಾನು ನನ್ನನ್ನೇ ನಾಮಿನೇಟ್ ಮಾಡಿಕೊಳ್ಳುತ್ತೇನೆ ಅಂತ ಹೇಳಿ ನಾಮಿನೇಟ್‌ ಮಾಡಿಕೊಂಡಿದ್ದರು.  ರಜತ್, ಹನುಮಂತ, ತ್ರಿವಿಕ್ರಂ ಮತ್ತು ಮೊಕ್ಷಿತಾ ಕೂಡ ನಾಮಿನೇಟ್‌ ಲಿಸ್ಟ್‌ನಲ್ಲಿ ಇದ್ರು.. ಇವರಲ್ಲಿ ಐಶ್ವರ್ಯಾ ಹಾಗೂ ತ್ರಿವಿಕ್ರಮ್‌ ಅವರು ಡೇಂಜರ್ಸ್‌ ಝೋನ್‌ನಲ್ಲಿ ಇದ್ದಿದ್ದರು. ಬಳಿಕ ಐಶ್ವರ್ಯಾ ಸೇಫ್‌ ಆಗಿದ್ದಾರೆ. ತ್ರಿವಿಕ್ರಮ್‌ ಔಟ್‌ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಆದ್ರೆ ತ್ರಿವಿಕ್ರಮ್‌ ಮನೆಯಿಂದ ಹೊರಡುತ್ತಿದ್ದಂತೆ ತನ್ನ ತಪ್ಪಿಗೆ ಪಶ್ಚಾತಾಪ ಪಟ್ಟುಕೊಂಡಿದ್ದಾರೆ. ನಾನು ಮಾಡಿದ ತಪ್ಪು ಯಾರೂ ಮಾಡಬೇಡಿ. ನಿಮ್ಮನ್ನೇ ನೀವು ನಾಮಿನೇಟ್‌ ಮಾಡಿಕೊಳ್ಳಬೇಡಿ ಎಂದು ಹೇಳಿ ಮನೆಯಿಂದ ಆಚೆ ಹೋಗಿದ್ದಾರೆ. ತ್ರಿವಿಕ್ರಮ್‌ ಅವರು ಮನೆಯಿಂದ ಆಚೆ ಹೋಗುತ್ತಿದ್ದಂತೆ ಭವ್ಯಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.

ಇನ್ನು ತ್ರಿವಿಕ್ರಮ್‌ ಅವರು ಮನೆಯಿಂದ ಆಚೆ ಹೋಗಿದ್ದಾರೆ ನಿಜ.  ಆದ್ರೆ ಇದು ಪ್ರ್ಯಾಂಕ್‌ ಎನ್ನಲಾಗುತ್ತಿದೆ. ಏಕೆಂದರೆ ಈ ವಾರ ವೋಟಿಂಗ್‌ ಲೈನ್ಸ್ ಓಪನ್‌ ಆಗಿರಲಿಲ್ಲ. ಎಲಿಮಿನೇಷನ್ ನಡೆಯದ ವಾರ ಈ ರೀತಿ ಮಾಡಲಾಗುತ್ತದೆ. ಇನ್ನು ಸ್ಪರ್ಧಿಗಳು ಎಲಿಮಿನೇಟ್‌ ಆದ್ರೆ ಅವರನ್ನ ಸುದೀಪ್‌ ವೇದಿಕೆ ಮೇಲೆ ಕರೆಸಿಕೊಳ್ತಿದ್ರು. ಆದ್ರೆ ತ್ರಿವಿಕ್ರಮ್‌ ಅನ್ನ ವೇದಿಕೆ ಮೇಲೆ ಕೂಡ ಕರೆಸಿಕೊಂಡಿಲ್ಲ. ಹೀಗಾಗಿ ತ್ರಿವಿಕ್ರಮ್‌ ಅನ್ನ ಸೀಕ್ರೆಟ್‌ ರೂಮ್‌ ನಲ್ಲಿ ಇಡಲಾಗಿದ್ಯಾ ಅನ್ನೋ ಪ್ರಶ್ನೆ ವೀಕ್ಷರನ್ನ ಕಾಡ್ತಿದೆ. ಇಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್‌ ಸರ್‌ಪ್ರೈಸ್‌ ಆಗಿ ಮನೆಗೆ ಎಂಟ್ರಿ ಕೊಡ್ತಾರಾ? ಎಂದು ಕಾದು ನೋಡಬೇಕಿದೆ

ಇನ್ನು ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ.   ಯಾರ ಬೆಂಬಲ ಪಡೆಯದೇ, ಸ್ವಂತ ಶ್ರಮದಿಂದ ಕ್ಯಾಪ್ಟನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ವಾರ ಭವ್ಯಾ ಗೌಡ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ.

ಇನ್ನು ಇವತ್ತಿನ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಎಚ್ಚೆತ್ತಿಕೊಳ್ಳಿ ಎಂಬ ಟಾಸ್ಕ್ ನೀಡಲಾಗಿದೆ. ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಈ ವೇಳೆ ಎಚ್ಚೆತ್ತುಕೊಳ್ಳಿ ಎಂದು ಹೇಳಿ ಐಶ್ವರ್ಯ ಮುಖಕ್ಕೆ ಭವ್ಯ ಗೌಡ ಟೀ ಚೆಲ್ಲಿದ್ದಾರೆ. ಇನ್ನು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ. ಈ ವೇಳೆ ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ಯಾವಳೇ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ. ಇಲ್ಲಿ ಒಂದಂತೂ ಸ್ಪಷ್ಟವಾಗಿ ಕಾಣೋದು ಏನಂದ್ರೆ ಚೈತ್ರಾಗೆ ಅವರ ಬಾಯಿಯೇ ಶತ್ರುವಾಗ್ತಿದೆ, ಇತ್ತ ಭವ್ಯಾಗೆ ಗೆಳೆಯನಿಲ್ಲದೇ ಆಟವಾಡಲು ಕಷ್ಟವಾಗ್ತಿದೆ.

Shwetha M

Leave a Reply

Your email address will not be published. Required fields are marked *