ಶೋಭಿತಾ ನಾಗಚೈತನ್ಯ ಮಧ್ಯೆ ಮನಸ್ತಾಪ? – ಈ ವಿಷ್ಯ ಒಪ್ಪಿಕೊಳ್ಳಲೇಬೇಕು ಎಂದ ಚೈತನ್ಯ!
ಮಾತು ಬಿಟ್ರಾ ನವಜೋಡಿ?

ಶೋಭಿತಾ ನಾಗಚೈತನ್ಯ ಮಧ್ಯೆ ಮನಸ್ತಾಪ? – ಈ ವಿಷ್ಯ ಒಪ್ಪಿಕೊಳ್ಳಲೇಬೇಕು ಎಂದ ಚೈತನ್ಯ!ಮಾತು ಬಿಟ್ರಾ ನವಜೋಡಿ?

ನಟಿ ಸಮಂತಾಗೆ ಡಿವೋರ್ಸ್ ಕೊಟ್ಟ ಬಳಿಕ ನಾಗಚೈತನ್ಯ ಶೋಭಿತಾ ಧೂಳಿಪಾಲರನ್ನ ಪ್ರೀತಿಸಿ ಮದುವೆ ಆಗಿದ್ದಾರೆ.. ಎರಡು ಮೂರು ವರ್ಷಗಳ ಕಾಲ ಪ್ರೀತಿಸ್ತಿದ್ದ ಈ ಜೋಡಿ ಡಿಸೆಂಬರ್ 4 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇದೀಗ ಈ ದಂಪತಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮದುವೆ ಆದ ಬೆನ್ನಲ್ಲೇ ನಾಗಚೈತನ್ಯ ಶೋಭಿತಾಗೆ ಒಂದು ಕಂಡೀಷನ್ ಹಾಕಿದ್ದಾರಂತೆ.. ಅದನ್ನ ಚಾಚು ತಪ್ಪದೇ ಮಾಡಬೇಕು ಅಂತಾ ಶೋಭಿತಾಗೆ ಹೇಳಿದ್ದಾರಂತೆ. ಅಷ್ಟಕ್ಕೂ ನಾಗಚೈತನ್ಯ ಶೋಭಿತಾಗೆ ಹಾಕಿದ ಕಂಡೀಷನ್ ಏನು? ಮದುವೆಯಾದ ನಂತ್ರ ಶೋಭಿತಾ ಯಾವೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು.. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೊಸ ವರ್ಷದ ಆಚರಣೆಗೆ ಕಟ್ಟುನಿಟ್ಟಿನ ಕ್ರಮ – ಬೆಂಗಳೂರಿನಲ್ಲಿ ಖಾಕಿ ಅಲರ್ಟ್

ಶೋಭಿತಾ ಹಾಗೂ ನಾಗಚೈತನ್ಯ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ನಿಜ ಹೇಳ್ಬೇಕಂದ್ರೆ ನಾಗ ಚೈತನ್ಯ ಮತ್ತು ಶೋಭಿತಾ ಪ್ರೀತಿ ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸ್ತಾ ಇದ್ರು.. ಈ ವಿಷಯ ಅವರ ಅಭಿಮಾನಿಗಳಿಗೆ ತಿಳಿದಿರ್ಲಿಲ್ಲ. ಆದರೆ ಅವರಿಬ್ಬರು ಔಟಿಂಗ್ ಹೋಗಿದ್ದಾಗ ಕೆಲ ಫೋಟೋಸ್ ವೈರಲ್ ಆದವು.. ಇದ್ರಿಂದಾಗೇ ಅವರಿಬ್ಬರ ಮಧ್ಯೆ ಸಂಥಿಗ್ ಸಂಥಿಗ್ ಇದೆ ಅಂತಾ ಗೊತ್ತಾಗಿದ್ದು.. ಇದಾದ ಬಳಿಕ ಇವರಿಬ್ಬರ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದಿದ್ದು ಎಲ್ಲರಿಗೂ ಶಾಕ್ ಆಗುವಂತೆ ಆಗಿತ್ತು. ಇವರ ಪ್ರೀತಿ, ಮದುವೆ ಎಲ್ಲವೂ ಅಕ್ಕಿನೇನಿ ಅಭಿಮಾನಿಗಳಿಗೆ ಮಾತ್ರವ ಇನ್ನೂ ಕನಸಿನಂತೆಯೇ ಇದೆ.

ಈ ಜೋಡಿ ಮದುವೆ ಮುಗಿದೂ ಕೇವಲ ಎರಡು ವಾರ ಕಳೆದಿದೆ. ಇದರ ಬೆನ್ನಲ್ಲೆ   ನಾಗಚೈತನ್ಯ ತಮ್ಮ ಪ್ರೇಮ ಕಥೆಯನ್ನ ಮಾಧ್ಯಮಗಳೊಂದಿಗೆ ಹಂಚಿಕೊಂಡಿಡ್ರು.. ಈ ವೇಳೆ ಶೋಭಿತಾ ಧೂಳಿಪಾಲಾಗೆ ಕೊಟ್ಟ ಎಚ್ಚರಿಕೆ ಹಾಗೂ ಕಂಡೀಷನ್ ಬಗ್ಗೆಯೂ ಕೂಡ ಮಾತಾನಾಡಿದ್ದಾರೆ. ಖಡಕ್ ಕಂಡೀಷನ್ ಅಂದ್ರೆ ಮದುವೆಯಾದ ಬಳಿಕ ತುಂಡುಡುಗೆ ಹಾಕ್ಬಾರ್ದು, ಸಿನಿಮಾದಲ್ಲಿ ನಟಿಸ್ಬಾರ್ದು, ಹಾಟ್ ಫೋಟೋಶೂಟ್ ಮಾಡಿಸ್ಬಾರ್ದು ಎಂದು ಹೇಳಿರ್ಬೋದು ಅಂತಾ ನೀವು ಅಂದ್ಕೊಂಡಿರ್ಬೋದು. ಆದ್ರೆ ನಿಮ್ಮ ಊಹೆ ತಪ್ಪು.. ನಾಗಚೈತನ್ಯ ಭಾಷೆಯ ವಿಚಾರಕ್ಕೆ ಒಂದು ಖಡಕ್ ರೂಲ್ಸ್ ಹಾಕಿದ್ದಾರಂತೆ. ಇದಕ್ಕೆ ಶೋಭಿತಾ ಕೂಡ ಒಪ್ಪಿಗೆ ಸೂಚಿಸಿದ್ದಾರಂತೆ.

ಹೌದು, ಸಿನಿಮಾ ಇಂಡಸ್ಟ್ರಿಯಲ್ಲಿನ ನಟ-ನಟಿಯರು ತಮ್ಮ ಮಾತೃ ಭಾಷೆಗಿಂತಲೂ ಹೆಚ್ಚಾಗಿ ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಅದ್ರಲ್ಲೂ ನಟ ನಟಿಯರಿಗೆ ಇಂಗ್ಲಿಷ್ ಮೇಲೆ ಹೆಚ್ಚಿನ ವ್ಯಾಮೋಹ ಇದೆ.. ಇದೀಗ ನಾಗಚೈತನ್ಯ ತಮ್ಮ ಮನೆಯಲ್ಲಿಯೂ ಇದೆ ಸಮಸ್ಯೆ ಆಗಿದೆ. ಇದೀಗ ಇದಕ್ಕೆ ಸಂಬಂಧ ಪಟ್ಟಂತೆ ನಾಗಚೈತನ್ಯ ಅವರು ತಮ್ಮ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದಾರೆ ನಾಗಚೈತನ್ಯ.

ಅಕ್ಕಿನೇನಿ ಕುಟುಂಬದಲ್ಲಿ, ನಾಗಾರ್ಜುನ ಕುಟುಂಬ ತೆಲುಗು ಮಾತನಾಡುವುದು ತುಂಬಾ ಕಡಿಮೆ. ಅಮಲಾ ತೆಲುಗು ಅಲ್ಲ, ಅಮಲಾ, ಅಖಿಲ್, ನಾಗಾರ್ಜುನ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರಂತೆ. ಹೀಗಾಗಿ ನಾಗಚೈತನ್ಯ ಕೂಡ ಇಂಗ್ಲಿಷ್ ಮಾತನಾಡುತ್ತಾರೆ. ಹೀಗಾಗಿ ಅವರ ಮನೆಯಲ್ಲಿ ತೆಲುಗು ಕಡಿಮೆಯಾಗಿದೆ. ಹೀಗಾಗಿ ಶೋಭಿತಾ ಧೂಳಿಪಾಲ ಅವರಿಗೆ ನಾಗಚೈತನ್ಯ ತೆಲುಗಿನಲ್ಲಿ ಮಾತನಾಡವಂತೆ ಕಂಡೀಷನ್ ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಪ್ರೀತಿಯ ವಿಚಾರದಲ್ಲಿ ತೆಲುಗು ಭಾಷೆ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.. ತೆಲುಗಿನಲ್ಲಿ ಹೆಚ್ಚಾಗಿ ಮಾತನಾಡುವುದರಿಂದ ಹೆಚ್ಚು ಭಾಷೆಯಲ್ಲಿ ಸುಧಾರಿಸಿಕೊಳ್ಳಬಹುದು, ಈ ರೀತಿ ಶೋಭಿತಾ ಹೆಚ್ಚು ತೆಲುಗಿನಲ್ಲಿ ಮಾತ್ರ ಮಾತನಾಡಿದ ಕಾರಣ ನಾನು ಅವರನ್ನು ಹೆಚ್ಚು ಪ್ರೀತಿಸುವಂತೆ ಆಯ್ತು ಎಂದು ನಾಗಚೈತನ್ಯ ಹೇಳಿದ್ದಾರೆ. ಈ ರೀತಿ ಹೇಗೆ ನಾಗಚೈತನ್ಯ ತಮ್ಮ ಪತ್ನಿಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂಬುದನ್ನು ಅವರ ಮಾತುಗಳು ಹೇಳುತ್ತವೆ.

Shwetha M

Leave a Reply

Your email address will not be published. Required fields are marked *