ಮಹಾಕುಂಭ ಮೇಳದ ವಿಶೇಷತೆಯೇನು? – 45 ದಿನ.. 3.2 ಲಕ್ಷ ಕೋಟಿ ರೂ. ಆದಾಯ!
40 ಕೋಟಿ ಜನಕ್ಕೆ ಹೈಟೆಕ್ ವ್ಯವಸ್ಥೆ

ಮಹಾಕುಂಭ ಮೇಳದ ವಿಶೇಷತೆಯೇನು? – 45 ದಿನ.. 3.2 ಲಕ್ಷ ಕೋಟಿ  ರೂ. ಆದಾಯ!40 ಕೋಟಿ ಜನಕ್ಕೆ ಹೈಟೆಕ್ ವ್ಯವಸ್ಥೆ

ಕೋಟಿ ಕೋಟಿ ಜನ ಸೇರುವ ಕುಂಭ ಮೇಳ ದೇಶದ ಅತೀ ದೊಡ್ಡ ಹಬ್ಬ.. ಮೂರು ವಿಧಗಳ ಕುಂಭವಿದ್ದು, ಅವುಗಳನ್ನ ಬೇರೆ ಬೇರೆ ವರ್ಷಗಳಲ್ಲಿ ಆಯೋಜಿಸಲಾಗುತ್ತದೆ. ಹರಿದ್ವಾರ, ಉಜ್ಜೈನಿ, ಪ್ರಯಾಗರಾಜ್‌ ಮತ್ತು ನಾಸಿಕ್‌ನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭ ಎಂದು ಕರೆಯಲಾಗುತ್ತೆ.. ಹಾಗೇ ಹರಿದ್ವಾರ ಮತ್ತು ಪ್ರಯಾಗ್ರಾಜ್‌ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಹಾಗೇ  ಪ್ರಯಾಗರಾಜ್‌ಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎಂದು ಕರೆಯಲಾಗುತ್ತದೆ. ಇದಲ್ಲದೆ, ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳವೆಂದು ಕರೆಯಲಾಗುತ್ತದೆ. ಮುಂದಿನ ತಿಂಗಳು ಅಂದ್ರೆ ಜನವರಿ 13 ರಿಂದ ಫ್ರೆಬವರಿ 26 ರ ತನಕ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯಲಿದೆ.

ಇದನ್ನೂ ಓದಿ : ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ – ಬಾಂಗ್ಲಾದಲ್ಲಿ ನಿಲ್ಲದ ದುಷ್ಟರ ಅಟ್ಟಹಾಸ

ಮಹಾಕುಂಭ ಮೇಳಕ್ಕೆ ಸಜ್ಜಾದ ಪ್ರಯಾಗರಾಜ್

 ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಜನವರಿ 13ರಂದು ಆರಂಭವಾಗಿ, ಸತತ 45 ದಿನಗಳ ಕಾಲ ನಡೆಯಲಿದೆ. ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸುಮಾರು 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.   ಇದು ಕೇವಲ ಒಂದು ಆಧ್ಯಾತ್ಮಿ, ಭಕ್ತಿಯ ಕಾರ್ಯಕ್ರಮವಾಗಿದೇ ಉತ್ತರಪ್ರದೇಶದ ಆರ್ಥಿಕತೆಯೂ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಲಾಭ ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. 1882 ರಿಂದಲೂ ಕುಂಭಮೇಳ ನಡೆಯುತ್ತಲೇ ಬಂದಿದೆ. ಈ ಬಾರಿ ಒಟ್ಟು 25 ಸಾವಿರ ಕೋಟಿ ರೂಪಾಯಿ ಲಾಭಗಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಮಹಾಕುಂಭ ಮೇಳದ ಸಂದರ್ಭದಲ್ಲಿ 3000 ವಿಶೇಷ ರೈಲು ಸೇರಿದಂತೆ 13000 ರೈಲುಗಳು ಸಂಚಾರ ಮಾಡಲಿವೆ. ಹಾಗೇ ಯಾತ್ರಿಗಳ ಏಣಿಕೆಗೆ ಎಐ ಕ್ಯಾಮರಾಗಳನ್ನ ಅಳವಡಿಸೋಕೆ ನಿರ್ಧರಿಸಲಾಗಿದೆ. ಇದ್ರಿಂದ 95 ರಷ್ಟು ನಿಖರವಾದ ಫಲಿತಾಂಶ ಬರಲಿದೆ.  ಈಗಾಗಲೇ 4 ಸಾವಿರ ಹೆಕ್ಟರ್ ಪ್ರದೇಶವನ್ನು ಗುರುತಿಸಲಾಗಿದೆ. ಈ ಬಾರಿಯ ಮಹಾಕುಂಭಮೇಳದಲ್ಲಿ 40 ರಿಂದ 45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇದು ವಿಶ್ವದಲ್ಲಿ ಒಂದೇ ಕಡೆ ಅತಿಹೆಚ್ಚು ಜನರು ಸೇರುವ ಒಂದು ಆಧ್ಯಾತ್ಮಿಕ ಕಾರ್ಯವಾಗಿದೆ. ಇದರ ಬಜೆಟ್​ ಒಟ್ಟು 6382 ಕೋಟಿ ರೂಪಾಯಿಯಷ್ಟು ಇದೆ. ಈಗಅಗಲೇ 5600 ಕೋಟಿ ರೂಪಾಯಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಅಲಾಟ್ ಮಾಡಲಾಗಿದೆ. ಸರ್ಕಾರ ಸುಮಾರು 3,700 ಕೋಟಿ ರೂಪಾಯಿಯನ್ನು ಈ ಹಿಂದೆ 2019ರಲ್ಲಿ ನಡೆದ ಕುಂಭಮೇಳಕ್ಕೆ ನೀಡಿತ್ತು. ಈ ಬಾರಿಯ ಮಹಾಕುಂಭಮೇಳವನ್ನು ಬಹಳ ಲೆಕ್ಕಾಚಾರ ಹಾಕಿ ನಡೆಸಲಾಗುತ್ತಿದೆ. ಕುಂಭಮೇಳಕ್ಕೆ ಬರುವ ಒಬ್ಬ ಯಾತ್ರಿಕ ಸುಮಾರು 8 ಸಾವಿರ ರೂಪಾಯಿಯನ್ನು ಖರ್ಚು ಮಾಡಿದರೆ ಒಟ್ಟು 3.2 ಲಕ್ಷ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ. ಪ್ರಯಾಗರಾಜ್ ಮಾತ್ರವಲ್ಲ ಅಕ್ಕಪಕ್ಕದಲ್ಲಿರುವ ಧಾರ್ಮಿಕ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯ, ಮಥುರಾ ಮತ್ತು ವಿಧ್ಯಾವಾಸಿನಿ ಧಾಮಕ್ಕೂ ಕೂಡ ಸಾವಿರಾರು ಭಕ್ತರು ಭೇಟಿ ಕೊಡಲಿದ್ದಾರೆ. ಈಗಾಗಳೇ 45ಸಾವಿರ ಕುಟುಂಬಗಳು ಈ ಮಹಾಕುಂಭಮೇಳದಿಂದ ಉದ್ಯೋಗ ಪಡೆದುಕೊಂಡಿವೆ. ಒಂದು ಮೂಲಗಳ ಪ್ರಕಾರ ಆರು ತಿಂಗಳಿಗೆ ಹರಿದು ಬರುವ ಬಂಡವಾಳವನ್ನು ಈ ಒಂದೇ ಒಂದು ಕುಂಭಮೇಳದಿಂದ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಐಆರ್​​ಸಿಟಿಸಿ ಸುಸಜ್ಜಿತವಾದ ಅತ್ಯಾಧುನಿಕ ಟೆಂಟ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಎರಡು ವಿಧದ ಟೆಂಟ್ ವ್ಯವಸ್ಥೆ ಇದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಬೆಳಗಿನ‌ ಉಪಹಾರ, ಭೋಜನವೂ ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಮಹಾ ಕುಂಭ ಮೇಳಕ್ಕೆ ಪ್ರಯಾಗರಾಜ್‌ ಸಜ್ಜಾಗಿದ್ದು, ದೇಶ  ವಿದೇಶದ ಜನ ಸಜ್ಜಾಗಿದ್ದಾರೆ.

Kishor KV

Leave a Reply

Your email address will not be published. Required fields are marked *