ಖಡಕ್ ಅಣ್ಣಾಮಲೈ ಅರೆಸ್ಟ್ ಆಗಿದ್ದೇಕೆ? – ಉ*ಗ್ರನಿಗೆ ಬೆಂಬಲ ಕೊಟ್ಟಿದ್ದು ಯಾರು?
ಸ್ಟಾಲಿನ್ ಸರ್ಕಾರದ ವಿರುದ್ಧ ಸಮರ!  

ಖಡಕ್ ಅಣ್ಣಾಮಲೈ ಅರೆಸ್ಟ್ ಆಗಿದ್ದೇಕೆ? – ಉ*ಗ್ರನಿಗೆ ಬೆಂಬಲ ಕೊಟ್ಟಿದ್ದು ಯಾರು?ಸ್ಟಾಲಿನ್ ಸರ್ಕಾರದ ವಿರುದ್ಧ ಸಮರ!  

ಬಿಜೆಪಿ ನಾಯರಿಗೆ ಅದೇನ್ ಆಗಿದ್ಯೋ ಏನೋ ಗೊತ್ತಿಲ್ಲ.. ಒಬ್ಬರ ಹಿಂದೆ ಒಬ್ಬರಂತೆ ಪೊಲೀಸರ ಕೈಯಲ್ಲಿ ಲಾಕ್ ಆಗುತ್ತಿದ್ದಾರೆ. ಸಿಟಿ ರವಿ ಅರೆಸ್ಟ್ ಆಗುತ್ತಿದ್ದಂತೆ ಅಣ್ಣಮಲೈ ಅರೆಸ್ಟ್ ಆಗಿದ್ದು, ಕಮಲ ಪಾಳಯ ಇಕ್ಕಟ್ಟಿಗೆ ಸಿಲುಕಿದೆ. ಹಾಗಿದ್ರೆ ಕರುನಾಡ ಸಿಗಂ ಆಗಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಮಲೈ ಅರೆಸ್ಟ್ ಆಗಿದ್ದು ಯಾಕೆ. ಬಾಂಗ್ಲಾ ಪಾಕ್ ಮತ್ತು ಚೀನಾ ಜೊತೆ ಸೇರಿ ಏನೆಲ್ಲಾ ಷಡ್ಯಂತರ ಮಾಡುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KLಗೆ ಗಾಯ.. 4ನೇ ಟೆಸ್ಟ್ ಗೆ OUT? – ಆಸಿಸ್ ಬೌಲರ್ಸ್ ಕಾಡಿದ್ದೇ ರಾಹುಲ್

ಅಣ್ಣಮಲೈ.. ಕರುನಾಡಿನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕ್ರಿಮಿನಲ್‌ಗಳಿಗೆ ಬಿಸಿ ಮುಟ್ಟಿಸಿದವರು.. ತನ್ನ ಪೊಲೀಸ್ ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಇಳಿದ್ರು.. ತಮಿಳುನಾಡಿನಲ್ಲಿ ಬಿಜೆಪಿಯನ್ನ ಕಟ್ಟಿ ಬೆಳಸೋಕೆ ಹಗಲಿರಳು ಹೋರಾಡುತ್ತಿದ್ದಾರೆ. ಆದ್ರೆ ಅಣ್ಣಮಲೈ ಅರೆಸ್ಟ್ ಆಗಿದ್ದು, ತಮಿಳುನಾಡಿನಲ್ಲಿ ಸಾಕಷ್ಟು ಸಂಚಲ ಮೂಡಿಸಿದೆ..

ಕೊಯಮತ್ತೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಇತರ ಹಲವು ಮುಖಂಡರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. 1998ರ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅವರನ್ನು ವೈಭವೀಕರಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಣ್ಣಾಮಲೈ ಅವರನ್ನು ಬಂಧಿಸಲಾಗಿದೆ.

1998ರಲ್ಲಿ ನಡೆದ ಸ್ಫೋಟದಲ್ಲಿ 56 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು. ಈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅನಾರೋಗ್ಯದ ಕಾರಣ ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಬಾಷಾ ಜೈನಿನಿಂದ ಹೊರಬಂದು ಡಿ.17ರಂದು ಮೃತಪಟ್ಟಿದ್ದಾನೆ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ಆದರೆ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಈತನ ಸಾವಿನ ಬಳಿಕ ಸಾವಿರಾರು ಜನರು ಈತನನ್ನು ನೋಡಲು ಆಗಮಿಸಿದರು. ಇದಕ್ಕಾಗಿ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. 56 ಜನರ ಸಾವಿಗೆ ಕಾರಣನಾದ ಅಪರಾಧಿ ಭಯೋತ್ಪಾದಕನ ಶವಯಾತ್ರೆಗೆ ಅನುಮತಿ ನೀಡಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಒಬ್ಬ ಭಯೋತ್ಪಾದಕನ ಸಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪ ಮಾಡಿದ್ದಾರೆ. ಇದನ್ನು ಖಂಡಿಸಿ   ಪ್ರತಿಭಟನೆ ಮಾಡುವ ವೇಳೆ ಅಣ್ಣಾಮಲೈ ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಸ್ಟಾಲಿನ್‌ ಸರ್ಕಾರದ ವಿರುದ್ಧ ಕಮಲ ಆಕ್ರೋಶ

ಭಯೋತ್ಪಾದಕರ ಅಂತಿಮ ಸಂಸ್ಕಾರಕ್ಕೆ ಭದ್ರತೆ ಒದಗಿಸುವ ಮೂಲಕ ಡಿಎಂಕೆಯು ವೋಟ್ ಬ್ಯಾಂಕ್ ರಾಜಕಾರಣದ ಆಟ ಆಡುತ್ತಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ತಮಿಳುನಾಡಿನ ಜನರು ಶೀಘ್ರದಲ್ಲೇ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಅಣ್ಣಾಮಲೈ ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಂತರ ಕೇಂದ್ರ ಸಚಿವ ಎಲ್ ಮುರುಗನ್ ಕೂಡ ತಮಿಳುನಾಡು ಸರ್ಕಾರವನ್ನು ಟೀಕಿಸಿದ್ದಾರೆ. 56 ಜನರ ಸಾವಿಗೆ ಕಾರಣವಾದ 1998ರ ಕೊಯಮತ್ತೂರು ಸ್ಫೋಟದಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಡಿಎಂಕೆ ಸರ್ಕಾರ ಬೆಂಬಲಿಸುತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ. ತಮಿಳುನಾಡಿನಲ್ಲಿ ಪಕ್ಷ ಕಟ್ಟೋಕೆ ಹೋರಾಡುತ್ತಿರುವ ಅಣ್ಣಮಲೈ ಆಡಳಿತ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *