ಟೀಂ ಇಂಡಿಯಾದ ಯಂಗ್ ಪ್ರಿನ್ಸ್ ಸೈಲೆಂಟ್ – ಗಿಲ್ ಗೆ ಪ್ಲೇಯಿಂಗ್ 11ನಿಂದ ಗೇಟ್ ಪಾಸ್!

ಟೀಂ ಇಂಡಿಯಾದ ಯಂಗ್ ಪ್ರಿನ್ಸ್ ಸೈಲೆಂಟ್ – ಗಿಲ್ ಗೆ ಪ್ಲೇಯಿಂಗ್ 11ನಿಂದ ಗೇಟ್ ಪಾಸ್!

ಟೀಂ ಇಂಡಿಯಾದ ಯಂಗ್ ಪ್ರಿನ್ಸ್ ಅಂತಾನೇ ಕರೆಸಿಕೊಳ್ತಿದ್ದ ಶುಭ್​ಮನ್ ಗಿಲ್ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಂತೂ ರನ್ ಗಳಿಸೋಕೆ ಆಗ್ದೇ ಒದ್ದಾಡ್ತಿದ್ದಾರೆ. 2021ರ ಬಳಿಕ ಏಷ್ಯಾದ ಹೊರಗೆ ಆಡಿದ 16 ಇನಿಂಗ್ಸ್​ಗಳಲ್ಲಿ ಶುಭ್​ಮನ್ ಗಿಲ್ ಕಲೆಹಾಕಿರುವುದು ಕೇವಲ 267 ರನ್​ಗಳು ಮಾತ್ರ. ಈ ಪೈಕಿ ಒಂದು ಬಾರಿಯೂ ಅರ್ಧಶತಕವನ್ನೂ ಗಳಿಸೋಕೆ ಸಾಧ್ಯವಾಗಿಲ್ಲ. ಕೇವಲ 17.80ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಗಿಲ್, ಕಳೆದ 3 ಇನಿಂಗ್ಸ್​ಗಳಲ್ಲಿ ಕಲೆಹಾಕಿರುವುದು ಕೇವಲ 60 ರನ್​ಗಳು ಮಾತ್ರ. ಕೇವಲ 20 ರ ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ. ಅಲ್ದೇ ಮೊದ್ಲಿಂದಲೂ ಗಿಲ್ ಅಹಮದಾಬಾದ್​ ಪಿಚ್​ನಲ್ಲಿ ಮಾತ್ರ ಅಬ್ಬರಿಸುತ್ತಾರೆಂಬ ಆರೋಪಗಳಿವೆ. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಿಂದ ಗಿಲ್​ಗೆ ಗೇಟ್​ಪಾಸ್ ನೀಡೋ ಚಾನ್ಸಸ್ ಜಾಸ್ತಿ ಇದೆ.

ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ ಹಗ್ಗಾಜಗ್ಗಾಟ – ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಎಫೆಕ್ಟ್! 

ಮೋದಿ ಸ್ಟೇಡಿಯಮ್ ನಲ್ಲಿ ಮಾತ್ರನಾ ಗಿಲ್ ಗರ್ಜನೆ?

ಶುಭ್​ಮನ್ ಗಿಲ್ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. ಅಂದರೆ 2021 ರಿಂದ 2024 ರವರೆಗೆ ಗಿಲ್ ಅಹಮದಾಬಾದ್​ನಲ್ಲಿ 19 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 1079 ರನ್ ಕಲೆ ಹಾಕಿದ್ದಾರೆ. 4 ಶತಕಗಳನ್ನೂ ಸಹ ಬಾರಿಸಿದ್ದಾರೆ. ಆದ್ರೆ ಏಷ್ಯಾದ ಹೊರಗೆ 16 ಇನಿಂಗ್ಸ್​ಗಳಿಂದ ಗಳಿಸಿದ್ದು 267 ರನ್​ಗಳು ಮಾತ್ರ. ಅದು ಸಹ ಕೇವಲ 17.80 ರ ಸರಾಸರಿಯಲ್ಲಿ. ಹೀಗಾಗಿ ನಾಲ್ಕನೇ ಪಂದ್ಯಕ್ಕೆ ಗಿಲ್ ಆಡೋದು ಡೌಟಿದೆ. ಬಟ್ ಈಗ ಕೆಎಲ್ ಗಾಯಗೊಂಡಿರೋದ್ರಿಂದ ಪ್ಲೇಯಿಂಗ್ 11ನಲ್ಲಿ ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *