ಕಿಚ್ಚನ ಕ್ಲಾಸ್ ಗೂ ಬಗ್ಗದ ಭವ್ಯಾ.. ವಿಕ್ರಮ್ ನೆರಳು, ಉಳಿದವ್ರ ಕಂಡ್ರೆ ಉರಿ – ಅಯ್ಯೋ.. ಹೆಣ್ಮಗು ಪಾಪ ಅಂದ್ರು ಫ್ಯಾನ್ಸ್

ಕಿಚ್ಚನ ಕ್ಲಾಸ್ ಗೂ ಬಗ್ಗದ ಭವ್ಯಾ.. ವಿಕ್ರಮ್ ನೆರಳು, ಉಳಿದವ್ರ ಕಂಡ್ರೆ ಉರಿ – ಅಯ್ಯೋ.. ಹೆಣ್ಮಗು ಪಾಪ ಅಂದ್ರು ಫ್ಯಾನ್ಸ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗ ಫಿನಾಲೆ ಹಂತಕ್ಕೆ ಬಂದಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳು ಮುಕ್ಕಾಲು ಭಾಗ ಜರ್ನಿ ಮುಗಿಸಿದ್ದಾರೆ. ಇದೀಗ ತ್ರಿವಿಕ್ರಮ್‌ ಹಾಗೂ ಭವ್ಯಾ ಟಾಸ್ಕ್‌ ಹೊರತಾಗಿ ಬೇರೆ ಕಾರಣ ಸುದ್ದಿಯಲ್ಲಿದ್ದಾರೆ.. ದೊಡ್ಮನೆಯಲ್ಲಿ ಎಲ್ಲರೂ ಟಾಸ್ಕ್‌, ನಾಮೀನೇಷನ್‌ ಅಂತಾ ತಲೆಕೆಡಿಸಿಕೊಂಡಿದ್ರೆ ತ್ರಿವ್ಯಾ ಜೋಡಿ ಅವರದ್ದೇ ಆದ ಲೋಕದಲ್ಲಿ ತೇಲಾಡ್ತಿದ್ದಾರೆ. ಕಿಚ್ಚನ ಕ್ಲಾಸ್‌ ಗೂ ಬಗ್ತಿಲ್ಲ ಈ ಜೋಡಿ.. ಇದೀಗ ತಮ್ಮ ವಿಷ್ಯಕ್ಕೆ ಬಂದ ಸಹಸ್ಪರ್ಧಿಗಳ ಮೇಲೂ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ದೊಡ್ಮನೆಯಲ್ಲಿ ನಡೆಯುತ್ತಿರೋದೇನು? ತ್ರಿವ್ಯಾ ಮಧ್ಯೆ ಆಗ್ತಿರೋದೇನು? ಭವ್ಯಾ, ತ್ರಿವಿಕ್ರಮ್‌ ಎಲ್ಲರ ಟಾರ್ಗೆಟ್‌ ಆಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್! – ಭಾರತ-ಪಾಕ್ ಗೆ ಹೊಸ ಸ್ಟೇಡಿಯಂ?

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಗಮನ ಸೆಳೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಇವರಿಬ್ಬರ ಮಧ್ಯೆ ಆಪ್ತತೆ ಹೆಚ್ಚಾಗ್ತಾ ಇದೆ. ಇದೀಗ ತ್ರಿವ್ಯಾ ಜೋಡಿ ಅವರದ್ದೇ ಆದ ಪ್ರಪಂಚದಲ್ಲಿ ತೇಲಾಡ್ತಿದ್ದಾರಾ ಅನ್ನೋದು ವೀಕ್ಷಕರ ವಾದ.. ಯಾಕಂದ್ರೆ  ಫಾರ್ಫಾಮೆನ್ಸ್‌ ವಿಷ್ಯಕ್ಕೆ ಬಂದ್ರೆ ತ್ರಿವಿಕ್ರಮ್‌ ಆಟ ಅಷ್ಟೊಂದು ಸೊಗಸಾಗಿಲ್ಲ. ಇನ್ನು ಭವ್ಯಾ ಟಾಸ್ಕ್‌ ಚೆನ್ನಾಗಿ ಮಾಡಿದ್ರು ತ್ರಿವಿಕ್ರಮ್‌ ಗುಂಗಿನಲ್ಲೇ ಇರ್ತಾರೆ.. ಇಬ್ಬರ ಅಭಿಪ್ರಾಯ ಕೂಡ ಸೇಮ್‌ ಟು ಸೇಮ್‌ ಆಗಿರುತ್ತೆ.. ಭವ್ಯ ಏನ್‌ ಹೇಳ್ತಾರೋ ಅದೇ ತ್ರಿವಿಕ್ರಮ್ ಬಾಯಲ್ಲಿ ಬರುತ್ತೆ.. ತ್ರಿವಿಕ್ರಮ್‌ ಬಾಯಲ್ಲಿ ಏನ್‌ ಮಾತು ಬರುತ್ತೆ, ಅದಕ್ಕೆ ಭವ್ಯ ತಲೆ ಆಡಿಸ್ತಾರೆ. ಸಹ ಸ್ಪರ್ಧಿಗಳು ಕೂಡ ಅದೆಷ್ಟೋ ಬಾರಿ, ನೀನು ಎಲ್ಲೋ ಕಳೆದು ಹೋಗ್ತಿದ್ಯಾ.. ಟಾಸ್ಕ್‌ ಬಗ್ಗೆ ಸ್ವಲ್ಪ ಗಮನ ಕೊಡು ಎಂದು ಹೇಳಿದ್ರು.. ಈ ಮಾತಿಗೆ ತ್ರಿವಿಕ್ರಮ್‌ ಹಾಗೇನಿಲ್ಲ ಅಂತ ಹೇಳ್ತಾನೇ ಬಂದಿದ್ದಾರೆ.

ಇನ್ನು ಭವ್ಯ ಹಾಗೂ  ತ್ರಿವಿಕ್ರಮ್‌ ಒಳ್ಳೆ ಅಂಡಸ್ಟಾಂಡಿಂಗ್‌ ನಲ್ಲೇ ಮಾಡ್ತಿದ್ದಾರೆ.. ಭವ್ಯಾ,  ತ್ರಿವಿಕ್ರಮ್‌ ಸಪೋರ್ಟ್‌ ತಗೊಂಡು ಟಾಸ್ಕ್‌ ಚೆನ್ನಾಗೇ ಆಡ್ತಾರೆ.. ತುಂಬಾ ಟಾಸ್ಕ್‌ ಗಳಲ್ಲಿ ಗೆದ್ದಿದ್ದಾರೆ.. ತ್ರಿವಿಕ್ರಮ್‌ ಸಪೋರ್ಟ್‌ತಗೊಂಡು ಭವ್ಯ ಗೆಲ್ತಿರೋದು ನೋಡಿ ಸಹಸ್ಪರ್ಧಿಗಳು ಉರ್ಕೊಳ್ತಿರೋದಂತೂ ಸತ್ಯ. ಆದ್ರೆ ಸದಾ ತ್ರಿವಿಕ್ರಮ್ ಹಿಂದೆನೇ ಸುತ್ತಾಡ್ತಿರೋದು ವೀಕ್ಷಕರಿಗೂ ಇಷ್ಟ ಆಗ್ತಿಲ್ಲ.. ಇನ್ನು ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಭವ್ಯ  ಹಾಗೂ ತ್ರಿವಿಕ್ರಮ್‌ ಗೆ ಎಚ್ಚರಿಕೆ ನೀಡ್ತಾನೆ ಬಂದಿದ್ರು.. ಅಷ್ಟೇ ಅಲ್ಲ.. ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಬಂದಿರುವುದು ಆಟ ಆಡುವುದಕ್ಕಲ್ಲ ಬದಲಿಗೆ ಭವ್ಯಾ ಅವರಿಗೆ ಗೈಡ್ ಮಾಡುವುದಕ್ಕಾ ಅಂತಾ ಸುದೀಪ್‌ ಕೂಡ ಕೇಳಿದ್ರು.. ಅದಕ್ಕೆ ಹಾಗೇನಿಲ್ಲ ಅಂತಾ ತ್ರಿವಿಕ್ರಮ್‌ ಹೇಳಿದ್ರು.. ಹೀಗೇ ಆಟ ಆಡಿದ್ರೆ ನೀವು ಜಾಸ್ತಿ ದಿನ ಈ ಮನೆಯಲ್ಲಿ ಉಳಿಯಲ್ಲ ಅಂತಾ ಕಿಚ್ಚ ಹೇಳಿದ್ರು.. ಆದ್ರೆ ಭವ್ಯಾ ಫರ್ಫಾಮೆನ್ಸ್‌ ಚೆನ್ನಾಗೇ ಇದೆ.. ಆದ್ರೆ ತ್ರಿವಿಕ್ರಮ್‌ ಆಟ ಡಲ್‌ ಆಗಿರೋದಂತೂ ಸತ್ಯ. ಕಳೆದ ವಾರ ತ್ರಿವಿಕ್ರಮ್‌ ನೆರಳು ಭವ್ಯ ಅಂತನೂ ಸುದೀಪ್‌ ಹೇಳಿದ್ರು..

ಇನ್ನು ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ಕಿಚ್ಚನ ಮಾತು ವೇದವಾಕ್ಯ ಇದ್ದಂತೆ.. ಹೀಗಾಗಿ ಸ್ಪರ್ಧಿಗಳು ಕಿಚ್ಚ ಏನೇ ಹೇಳಿದ್ರು ಅದನ್ನ ಚಾಚುತಪ್ಪದೇ ಪಾಲಿಸ್ತಾರೆ.. ಆದ್ರೆ ತ್ರಿವ್ಯಾ ಜೋಡಿ ಮಾತ್ರ ಕಿಚ್ಚ ಮಾತಿಗೆ ಡೋಂಟ್‌ ಕೇರ್‌ ಅಂತಿದ್ದಾರೆ.

ಇನ್ನು ಐಶ್ವರ್ಯ ಹಾಗೂ ಭವ್ಯ ಮಧ್ಯೆ ಆಗಾಗ ಶೀತಲ ಸಮರ ನಡಿತಾನೇ ಇರುತ್ತೆ. ಈ ವಾರ ಭವ್ಯಾ ಐಶ್ವರ್ಯಗೆ ಸರಿಯಾಗೇ ಠಕ್ಕರ್‌ ಕೊಟ್ಟಿದ್ದಾರೆ. ಈ ವಾರ ಕ್ಯಾಪ್ಟನ್ಸಿ ಓಟಕ್ಕೆ ಭವ್ಯ ಹಾಗೂ ಐಶ್ವರ್ಯ ಸೆಲೆಕ್ಟ್‌ ಆಗಿದ್ರು.. ಇಬ್ಬರಿಗೂ ಬಿಗ್‌ಬಾಸ್‌ ಟಾಸ್ಕ್‌ ನೀಡಿದ್ದು ಭವ್ಯಾ ಈ ಆಟದಲ್ಲಿ ಗೆದ್ದುಕೊಂಡಿದ್ದಾರೆ. ಅದರಂತೆ ಈ ವಾರದ ಕ್ಯಾಪ್ಟನ್​ ಆಗಿ ಭವ್ಯಾ ಗೌಡ ಮುಂದುವರೆಯಲಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲೂ ತ್ರಿವಿಕ್ರಮ್‌ ಹಾಗೂ ಭವ್ಯಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡಿತಾ ಇದೆ.  ‘ತ್ರಿವ್ಯಾ’ ಹೆಸರಿನ ಫ್ಯಾನ್​ ಪೇಜ್​ಗಳು ಸೃಷ್ಟಿ ಆಗಿವೆ. ಇವರಿಬ್ಬರು ಒಟ್ಟಿಗೆ ಇರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಇವರನ್ನು ಅನೇಕರು ‘ಬೆಸ್ಟ್​ ಜೋಡಿ’ ಎಂದು ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಮಧ್ಯೆ ಪ್ರೀತಿ ಮೂಡುತ್ತದೆಯೇ ಅಥವಾ ಫ್ರೆಂಡ್​ಶಿಪ್​ಗೆ ಸೀಮಿತ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

Shwetha M

Leave a Reply

Your email address will not be published. Required fields are marked *