ಬಾಕ್ಸ್ ಆಫೀಸ್ನಲ್ಲಿ UI ಅಬ್ಬರ – ಕರ್ನಾಟಕದಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು?
ಉಪೇಂದ್ರ ನಟನೆಯ ಬಹುನಿರೀಕ್ಷಿತ ಸಿನಿಮಾ UI ಬಹುಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ. ರಿಲೀಸ್ ಆದ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ. ರಿಲೀಸ್ ಆದ ಮೊದಲ ದಿನವೇ ಕರ್ನಾಟಕದಲ್ಲಿ ಯುಐ ಸಿನಿಮಾ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಇದನ್ನೂ ಓದಿ: ರಜತ್ ಬಾಯಿಗೆ ಕಡಿವಾಣ ಇಲ್ವಾ?.. ಚೈತ್ರಗೆ ಈ ಟಾಸ್ಕ್ ಕೊಟ್ರಾ? – ರಜತ್ ದೌಲತ್ತು.. ಬಿಗ್ ಬಾಸ್ ಸೈಲೆಂಟ್!
ಕರ್ನಾಟಕದಲ್ಲಿ ಯುಐ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ ಕರ್ನಾಟಕದಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಹೌಸ್ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಕೊಂಡಾಡಿದ್ದಾರೆ.
UI ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.