ಕೆರಾಡಿಗೆ ಬಂದ ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

ಕೆರಾಡಿಗೆ ಬಂದ ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

‘ಕಾಂತಾರ’ ಮೂಲಕ ಜನಪ್ರಿಯತೆ ಪಡೆದ ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಹೀರೋ. ಇದೀಗ ಡಿವೈನ್ ಸ್ಟಾರ್ ‘ಕಾಂತಾರ ಚಾಪ್ಟರ್ 1’ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಬಳಿಕ ರಿಷಭ್‌ ಗೆ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಫುಲ್‌ ಡಿಮ್ಯಾಂಡ್‌ ಶುರುವಾಗಿದೆ. ಇದೀಗ ಕೆಲ ಸ್ಟಾರ್ಸ್‌ ರಿಷಭ್‌ ಊರಿಗೆ ಭೇಟಿ ನೀಡುತ್ತಾ ಇದ್ದಾರೆ. ಇದೀಗ ತೆಲುಗು ನಟ ರಾಣಾ ದಗ್ಗುಬಾಟಿ ಕುಂದಾಪುರದ ಕೆರಾಡಿಗೆ ಭೇಟಿ ನೀಡಿದ್ದು, ಈ ವೇಳೆ ಅವರಿಗೆ  ರಿಷಬ್ ಶೆಟ್ಟಿ ಕನ್ನಡ ಕಲಿಸಿದ್ದಾರೆ. ಅಷ್ಟೇ ಅಲ್ಲ, ರಿಷಬ್ ಬಳಿ ರಾಜ್‌ಕುಮಾರ್ ಸಿನಿಮಾದ ಡೈಲಾಗ್ ಕೂಡ ಕಲಿತಿದ್ದಾರೆ.

ಇದನ್ನೂ ಓದಿ: ವಿಂಡೀಸ್ ಮಣಿಸಿ ಸರಣಿ ಗೆದ್ದ ಇಂಡಿಯಾ – ಸ್ಮೃತಿ ಮಂಧಾನ ವಿಶ್ವದಾಖಲೆ, ರಿಚಾ ಘೋಷ್… ವೇಗದ ಅರ್ಧಶತಕ

ಒಟಿಟಿ ಪ್ರಸಾರವಾಗುತ್ತಿರುವ ‘ದಿ ರಾಣಾ ದಗ್ಗುಬಾಟಿ ಶೋ’ ಎಂಬ ಶೋವನ್ನ ರಾಣಾ ದಗ್ಗುಬಾಟಿ ನಡೆಸಿಕೊಡುತ್ತಿದ್ದಾರೆ. ಇದೀಗ ರಾಣಾ ರಿಷಬ್‌ರನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ರಾಣಾ ಭೇಟಿ ಕೊಟ್ಟಿರೋದು ವಿಶೇಷ. ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಸಿನಿಮಾ ಮಾಡುಬೇಕು ಎಂದರೆ ನಗರಕ್ಕೆ ಬರಬೇಕು ಎಂಬುದನ್ನು ಅವರು ಸುಳ್ಳು ಮಾಡಿದ್ದಾರೆ. ಕುಂದಾಪುರದಲ್ಲಿ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ರಾಜ್‌ಕುಮಾರ್ ಅವರ ‘ಹೇಳು ಪಾರ್ಥ’ ಡೈಲಾಗ್ ಅನ್ನು ರಾಣಾಗೆ ರಿಷಬ್ ಹೇಳಿ ಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

Shwetha M

Leave a Reply

Your email address will not be published. Required fields are marked *