ಫೈರ್‌ ಬ್ರ್ಯಾಂಡ್‌ ‌ಹ್ಯಾಟ್ರಿಕ್‌ ಕಳಪೆ – ಚೈತ್ರಾ ಕುಂದಾಪುರಗೆ ಮತ್ತೆ ಜೈಲು

ಫೈರ್‌ ಬ್ರ್ಯಾಂಡ್‌ ‌ಹ್ಯಾಟ್ರಿಕ್‌ ಕಳಪೆ – ಚೈತ್ರಾ ಕುಂದಾಪುರಗೆ ಮತ್ತೆ ಜೈಲು

ಚೈತ್ರಾ ಕುಂದಾಪುರಗೆ ಜೈಲು ಅಂದ್ರೆ ಬಿಡಿಸಲಾರದ ನಂಟು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಜೈತ್ರಾಗೆ ಹ್ಯಾಟ್ರಿಕ್‌ ಕಳಪೆ ಸಿಕ್ತಾ ಇದೆ. ಚೈತ್ರಾ ಏನ್‌ ಮಾಡಿದ್ರು ಕಳಪೆಗೆ ಅದೇ ರೀಸನ್‌ ಆಗುತ್ತೆ. ಈ ವಾರ ಆಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಚೈತಾ ಜೈಲು ಸೇರುವಂತೆ ಆಗಿದೆ.

ಇದನ್ನೂ ಓದಿ: ಕಪ್ಪು ಬಿಳುಪಿನ ಉಪ್ಪಿಯ ಕಲ್ಕಿ ಲೋಕ.. ಬುದ್ಧಿವಂತರಿಗಲ್ಲ, ದಡ್ಡರಿಗೆ ಮಾತ್ರ!! – UI ಅರ್ಥವಾಗುತ್ತಾ? ಫುಲ್ ಕನ್ಫ್ಯೂಷನ್!

ಹೌದು, ಬಿಗ್ ಬಾಸ್ ಮನೆಯ ಆಟ ಇದೀಗ 90ನೇ ದಿನದತ್ತ ಮುನ್ನಗ್ಗುತ್ತಿದೆ. ಅಸಲಿ ಆಟ ಶುರುವಾಗಿರೋ ಮನೆಯಲ್ಲಿ ಚೈತ್ರಾರನ್ನು ಕಳಪೆ ಎಂದು ಮನೆ ಮಂದಿ ಜೈಲಿಗಟ್ಟಿದ್ದಾರೆ. ಎಂದಿನಂತೆ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನಮಂತು ಟಾಂಗ್ ನೀಡಿದ್ದಾರೆ.

ಟಾಸ್ಕ್‌ವೊಂದರಲ್ಲಿ ಚೈತ್ರಾ ಸರಿಯಾಗಿ ಉಸ್ತುವಾರಿ ಮಾಡದೇ ಬೇಕಂತಲೇ ಫೌಲ್ ಕೊಟ್ಟರೂ ಎಂಬ ಕಾರಣಕ್ಕೆ ಮೋಕ್ಷಿತಾ, ಧನರಾಜ್ ಸೇರಿದಂತೆ ಅನೇಕರು ಕಳಪೆ ಪಟ್ಟ ನೀಡಿದರು. ಬಳಿಕ ಕಳಪೆ ಪ್ರದರ್ಶನ ಎಂದ ಹನುಮಂತ ನಡುವೆ ವಾಕ್ಸಮರ ನಡೆದಿದೆ. ಕಳಪೆ ಕೊಡಲು ನಾನು ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇನ್ನೂ ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಆದರೆ ಬಿಗ್ ಬಾಸ್ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಐಶ್ವರ್ಯಾಗೆ ಠಕ್ಕರ್ ಕೊಟ್ಟು ಭವ್ಯಾ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.

Shwetha M

Leave a Reply

Your email address will not be published. Required fields are marked *