ಕಪ್ಪು ಬಿಳುಪಿನ ಉಪ್ಪಿಯ ಕಲ್ಕಿ ಲೋಕ.. ಬುದ್ಧಿವಂತರಿಗಲ್ಲ, ದಡ್ಡರಿಗೆ ಮಾತ್ರ!! – UI ಅರ್ಥವಾಗುತ್ತಾ? ಫುಲ್ ಕನ್ಫ್ಯೂಷನ್!
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಬಹುಭಾಷೆಯಲ್ಲಿ ಇಂದು (ಡಿ.20) ಅದ್ಧೂರಿಯಾಗಿ ರಿಲೀಸ್ ಆಗಿದೆ. ಫಸ್ಟ್ ಡೇ, ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಚಿತ್ರ ನೋಡಿ ಮೆಚ್ಚಿದ್ದಾರೆ. ಸಿನಿಮಾ ಸ್ಟಾರ್ಟ್ ಆಗುತ್ತಿದ್ದಂತೆ ನೀವು ಬುದ್ಧಿವಂತರಾದ್ರೆ ಈಗಲೇ ಎದ್ದು ಹೋಗಿ..ದಡ್ಡರಾಗಿದ್ರೆ ಈ ಸಿನಿಮಾ ಪೂರ್ತಿ ನೋಡಿ ಅಂತ ಉಪ್ಪಿ ಹೇಳಿದ್ರು. ಹಾಗಾದ್ರೆ ಯುಐ ಹೇಗಿದೆ ಅನ್ನೋ ವಿಮರ್ಶೆ ಇಲ್ಲಿದೆ.
ಇದನ್ನೂ ಓದಿ: ನಿವೃತ್ತಿ ಸುಳಿವು ಬಿಟ್ಟುಕೊಟ್ಟ ರೋಹಿತ್ ಶರ್ಮಾ – ಕೊಹ್ಲಿಯೂ ಅದೇ ತೀರ್ಮಾನ ಮಾಡ್ತಾರಾ?
ಸಿನಿಮಾ ಶುರುವಾಗುತ್ತಿದ್ದಂತೆ ಮೆದುಳುಗಳ ಆಟದ ಜೊತೆ ಟೈಟಲ್ ಕಾರ್ಡ್ ಬರುತ್ತೆ.. ಇದನ್ನ ನೋಡಿದಲೇ ಗೊತ್ತಾಗತ್ತೆ.. ಈ ಸಿನಿಮಾ ಅರ್ಥ ಆಗ್ಬೇಕು ಅಂದ್ರೆ ತಲೆ ಇರಲೇಬೇಕು ಅಂತಾ.. ಆರಂಭದಲ್ಲಿಯೇ ಇದು ಬುದ್ಧಿವಂತರಿಗಲ್ಲ, ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕವೇ ಪ್ರೇಕ್ಷಕನನ್ನು ಬರಮಾಡಿಕೊಳ್ಳುತ್ತಾರೆ ಉಪ್ಪಿ. ಅಲ್ಲಿಂದ UI ಅನ್ನೋ ಹೊಸ ಪ್ರಪಂಚ ಓಪನ್ ಆಗುತ್ತೆ.. ಉಪೇಂದ್ರ ಪ್ರೇಕ್ಷಕರ ತಲೆಗೆ ಹುಳ ಬಿಡೋಕೆ ಶುರುವಾಗುತ್ತೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಸತ್ಯ ಮಿಥ್ಯದ ಕಥೆಯೇ UI. ರಾಜಕೀಯಕ್ಕೆ ಬಣದ ಲೇಪನ ಹಚ್ಚಿ ಮುಖವಾಡಿವನ್ನ ಬಿಚ್ಚಿಟ್ಟಿದ್ದಾರೆ ಉಪ್ಪಿ.. ತಾಯಿ ಸೆಂಟಿಮೆಂಟ್ ಕೂಡ ಈ ಸಿನಿಮಾದಲ್ಲಿದೆ.. ಇದ್ರಲ್ಲಿ ಉಪೇಂದ್ರ ಡಬಲ್ ಆ್ಯಕ್ಟಿಂಗ್ ಮಾಡಿದ್ದಾರ. ಸತ್ಯ ಒಳ್ಳೆಯವನಾಗಿದ್ರೆ, ಜಗತ್ತನೇ ಸರ್ವನಾಶ ಮಾಡುವ ಕಲ್ಕಿ ಇನ್ನೊಂದು ರೂಪ.. ಇವರಿಬ್ಬರು ಅಣ್ಣ ತಮ್ಮನಾಗಿದ್ರೂ, ಕೊನೆಗೆ ಯಾರು ಗೆಲ್ಲಾರೆ.. ತಾಯಿಗಾಗಿ ಕಲ್ಕಿ ಏನ್ ಮಾಡ್ತಾನೆ.. ಜಗತ್ತನ್ನ ಹೇಗೆ ಬದಲು ಮಾಡ್ತಾನೆ ಅನ್ನೋದೇ UI ಸಿನಿಮಾದ ಸ್ಟೋರಿ ಲೈನ್.. ಸಿನಿಮಾ ಹೇಗೆ ಆರಂಭ ಆಯ್ತು.. ಹೇಗೆ ಅಂತ್ಯ ಆಯ್ತು ಅನ್ನೋ ಥಿಯೇಟರ್‌ನಲ್ಲಿ ಕುಳಿತ ಪ್ರೇಕ್ಷಕನಿಗೆ ಗೊತ್ತೆ ಆಗಲ್ಲ..
ಫಸ್ಟ್ ಆಫ್‌ನಲ್ಲಿ ನೋಡುಗನಿಗೆ ತೆಲೆ ಹುಳ ಬಿಡುತ್ತಿದ್ದಾರೆ ಎನಿಸಿದರೂ, ಬರು ಬರುತ್ತ ಚಿತ್ರ ನಮ್ಮನ್ನು ಆವರಿಸಿಕೊಳ್ಳುತ್ತದೆ. ಉಪೇಂದ್ರ ಸಿನಿಮಾ ಅಂದ್ರೆ ಹೀಗೆ ಅಲ್ವನಾ ಅಂತ ಕೊನೆ ಕೊನೆಗೆ ಗೊತ್ತಾಗುತ್ತೆ..ಒಂದು ಹೊಸ ಲೋಕವನ್ನ ತೆರೆ ಮೇಲೆ ತಂದಿದ್ದಾರೆ ಉಪೇಂದ್ರ.. ಈ ಸಿನಿಮಾದಲ್ಲಿ ಬ್ಯಾಕ್‌ಗ್ರೌಂಡ್ ಮಾತ್ರ ಎದೆ ಝಲ್ ಎನ್ನುವಂತಿದೆ.. ನಮ್ಮ ಮೆದುಳಿಗೆ ಜುಮ್ ಎನಿಸುವ ಫೀಲ್ ನೀಡುತ್ತದೆ ಸಿನಿಮಾದ ಸೌಂಡ್. ಉಪ್ಪಿ ಕಲ್ಪನೆಯಲ್ಲಿ ಯುಐ ಸಾಮ್ರಾಜ್ಯವನ್ನು ತೋರಿಸಿರುವ ರೀತಿಯೂ ತ್ರಿಡಿ ಅನುಭವ ನೀಡುತ್ತದೆ. ಇದು 2ಡಿ ಸಿನಿಮಾ ಆದರೂ, 3D ಅನುಭವಾಗುತ್ತದೆ. ತಾಯಿ ಆದ ಅನ್ಯಾಯದ ಹೋರಾಟದ ಜೊತೆ ಜಾತಿ ಧರ್ಮದ ಗೋಡೆ ಸಮಾಜವನ್ನ ಹೇಗೆ ಹಾಳು ಮಾಡುತ್ತಿದೆ ಅನ್ನೋದ್ರ ಜೊತೆ ರಾಜಕೀಯ ಮತ್ತು ಪ್ರಜಾಕೀಯದ ಬಗ್ಗೆಯೂ ಉಪೇಂದ್ರ UIನಲ್ಲಿ ತೋರಿಸಿದ್ದಾರೆ. ಎಲ್ಲಿಯೂ ನಮ್ಮ ಸಮಾಜದಲ್ಲಿ ನಡೆಯುತ್ತಿರುವುದನ್ನ ನೇರವಾಗಿ ಹೇಳದೆ, ಪರೋಕ್ಷವಾಗಿಯೇ ಜನರ ಮುಂದಿಟ್ಟಿದ್ದಾರೆ. ಸಮಾಜದಲ್ಲಿ ನಡೆಯುವ ರಾಜಕೀಯವನ್ನು ತಮ್ಮದೇ ಸ್ಟೈಲ್‌ನಲ್ಲಿ ಪ್ರಸೆಂಟ್ ಮಾಡಿದ್ದಾರೆ ಉಪ್ಪಿ. ಇದನ್ನ ಅರ್ಥ ಮಾಡಿಕೊಂಡ್ರೆ ಉಪೇಂದ್ರ ಹೇಳುವು 100 ರೈಟ್ ಅನ್ಸುತ್ತೆ. ಅಷ್ಟೇ ಹೆಣ್ಣನ್ನ ಪ್ರಕೃತಿಗೆ ಹೋಲಿಸಿರುವ ಉಪ್ಪಿ, ಹೇಗೆ ಹೆಣ್ಣನ್ನ ಮತ್ತು ಪ್ರಕೃತಿಯನ್ನ ಮಾಫಿಯಾ ಕಿತ್ತು ತಿನ್ನುತ್ತಿದೆ ಅನ್ನೋದನ್ನ ಹೇಳುತ್ತಾರೆ.. ಅದ್ರಲ್ಲಿ ಹಣ್ಣು ಕಚ್ಚೋ ಮುನ್ನ, ಹೆಣ್ಣು ಬಿಚ್ಚೋ ಮುನ್ನ ಬೆಲೆ ಜಾಸ್ತಿ ಅನ್ನೋ ಡೈಲಾಗ್ ಥಿಯೇಟರ್‌ನಲ್ಲಿ ಶಿಳ್ಳೆ ಚಪ್ಪಾಳೆಯನ್ನ ಹೆಚ್ಚಿಸುತ್ತೆ.. ಟ್ರೋಲ್ ಆಗುತ್ತೆ ಸಾಂಗ್ ಕೂಡ ಸಿನಿಮಾದಲ್ಲಿದ್ದು, ಇದಕ್ಕೆ ಕತ್ತರಿ ಬಿದ್ದಿಲ್ಲ.. ಏನೆಲ್ಲಾ ಟ್ರೋಲ್ ಆಯ್ತು ಅನ್ನೋದನ್ನ ಉಪ್ಪಿ ಒಂದೇ ಸಾಂಗ್ನಲ್ಲಿ ಬಿಚ್ಚಿಟ್ಟಿದ್ದಾರೆ.. 2 ಗಂಟೆ 30 ನಿಮಷದ ಸಿನಿಮಾದಲ್ಲಿ ಉಪೇಂದ್ರ ಸಮಾಜಕ್ಕೆ ಒಳ್ಳೆಯ ಸಂದೇಶವನ್ನ ನೀಡಿದ್ದಾರೆ.. ಹಾಗೇ ಬ್ರಷ್ಟರಿಗೆ,ಜಾತಿ ಧರ್ಮದ ಹೆಸರಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವವರಿಗೆ ಬಟ್ಟೆ ಸುತ್ತಿಕೊಂಡು ಹೊಡೆದಿದ್ದಾರೆ..
ಸಿನಿಮಾದಲ್ಲಿ ಕಂಡು ಬರುವ ಉಪ್ಪಿಯ ಎರಡು ಪಾತ್ರಗಳು ಕಪ್ಪು ಹಾಗೂ ಬಿಳುಪು ಬಟ್ಟೆಯಲ್ಲಿಯೇ ಕಾಣಿಸಿದ್ದಾರೆ. ಇಲ್ಲಿ ಒಳ್ಳೆಯದು ಹಾಗೂ ಕೆಟ್ಟದು ಎನ್ನುವ ಕಾನ್ಸೆಪ್ಟ್ಗಳನ್ನು ತೋರಿಸಲಾಗಿದೆ. ಉಪ್ಪಿ ತುಂಬಾ ಕ್ಲಿಯರ್ ಕಟ್ ಆಗಿ ಜನರ ಮನಸ್ಥಿತಿಯನ್ನು ಇಲ್ಲಿ ರಿವೀಲ್ ಮಾಡಿದ್ದಾರೆ. ಎಷ್ಟು ಚೆನ್ನಾಗಿರುವುದನ್ನು ಕೊಟ್ಟರೂ ಜನರಿಗೆ ಕೆಟ್ಟದೇ ಬೇಕು ಎನ್ನುವುದನ್ನು ಉಪ್ಪಿ ಸ್ಕೀನ್ನಲ್ಲಿ ತೋರಿಸಿದ್ದಾರೆ. ಜನ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡು ಒಳ್ಳೆಯವರಿಂದ ಕೆಟ್ಟವರ ಬಳಿ ಹೋಗ್ತಾರೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾದಲ್ಲಿ ಹೀರೋಯಿನ್ ಹೀರೋ ಒಮ್ಮೆಯ ಭೇಟಿಯಾಗದೇ.. ಅವರವರ ಪ್ರಪಂಚದಲ್ಲಿ ಅವರವರರೇ ಇರ್ತಾರೆ. ಹೇಳೋದನ್ನು ಉಪ್ಪಿ ನೇರವಾಗಿ ಹೇಳಿದ್ದು, ಅವರು ಹೇಳುವ ಸಂದೇಶ ಅರ್ಥವಾದರೂ ಕನ್ಫ್ಯೂಷನ್ ಆಗುತ್ತೆ.