ಶಿವಣ್ಣನ ಸರ್ಜರಿ ಎಷ್ಟು ಡೇಂಜರ್? – ಹೇಗಿರುತ್ತೆ ಆಪರೇಷನ್?
ದೊಡ್ಮನೆ ದೊಡ್ಮಗನಿಗಿರೋ ಶಕ್ತಿಯೇನು?
ಕನ್ನಡ ಸಿನಿಅಭಿಮಾನಿಗಳ ಪ್ರೀತಿಯ ದೊರೆ, ದೊಡ್ಮನೆ ದೊಡ್ಮಗ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸದ್ಯ ಅನಾರೋಗ್ಯಕ್ಕೆ ಒಳಗಾಗಿರೋ ವಿಷ್ಯ ಎಲ್ಲಾರಿಗೂ ಗೊತ್ತೇ ಇದೆ. ಸದಾ ಏರ್ಜನಿಯಲ್ಲಿ ಇರೋ ಶಿವಣ್ಣ ಅಮೆರಿಕಕ್ಕೆ ಸರ್ಜರಿಗೆ ಹೋಗಿದ್ದಾರೆ. ಶಿವಣ್ಣನನ್ನ ಕನ್ನಡ ಚಿತ್ರರಂಗದ ತಾರೆಯರು ಧೈರ್ಯ ತುಂಬಿ ಕಳುಹಿಸಿದ್ದಾರೆ. ಡಿಸೆಂಬರ್ 24ರಂದು ಅಮೇರಿಕದ ಮಿಯಾಮಿಯಲ್ಲಿ ಶಿವಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. Vis flow..
ಇದನ್ನೂ ಓದಿ :ಸಂಸತ್ ಭವನ ಆವರಣದಲ್ಲಿ ದೊಡ್ಡ ಹೈಡ್ರಾಮಾ – ಬಿಜೆಪಿ ಸಂಸದನನ್ನು ತಳ್ಳಿದ್ರಾ ರಾಹುಲ್ ಗಾಂಧಿ?
ಶಿವಣ್ಣ ಅಮೆರಿಕಕ್ಕೆ ಹೊರಡುವಾಗ ತುಂಬಾ ಬಾವುಕರಾಗಿ ಕಣ್ಣೀರು ಹಾಕಿದ್ರು.. ಲೆಕ್ಕವಿಲ್ಲದಷ್ಟು ಬಾರಿ ಶಿವಣ್ಣ ಫಾರಿನ್ ಟೂರ್ ಮಾಡಿದ್ರು, ಈ ಬಾರಿ ಮಾತ್ರ ಏನೋ ವಿಶೇಷ ಎನ್ನುವಂತಿತ್ತು.. ಅದನ್ನ ಅವರೇ ಹೇಳಿದ್ರು. ಇದನ್ನು ನೋಡಿದಾಗ ನನಗೆ ಎಮೋಷನಲ್ ಆಗುತ್ತಿದೆ. ಹೆಲ್ತ್ ಚೆಕಪ್ ಮಾಡಿಸಿದ್ದೀನಿ ಎಲ್ಲವೂ ಸರಿಯಾಗಿದೆ. ನನ್ನ ತಂಗಿ ಮತ್ತು ಸಂಬಂಧಿಕರನ್ನು ನೋಡುವಾಗ ಬೇಜಾರು ಆಯ್ತು. ಅಭಿಮಾನಿಗಳನ್ನು ನೋಡಿದಾಗ ದುಃಖ ಆಗುತ್ತದೆ. ಅದು ಬಿಟ್ಟರೆ ನಾನು ಧೈರ್ಯವಾಗಿದ್ದೀನಿ. ಜನವರಿ 26ಕ್ಕೆ ವಾಪಸ್ ಬರ್ತಿನಿ.. ನನ್ನ ನೆಲೆ ಬಿಟ್ಟು ಇಷ್ಟು ದಿನ ಬೇರೆ ದೇಶದಲ್ಲಿ ಇರೋಕೆ ಕಷ್ಟ ಆಗುತ್ತೆ ಎಂದು ಬಾವುಕರಾದ್ರು. ಹಾಗಿದ್ರೆ ಈ ಸರ್ಜರಿ ಹೇಗೆ ನಡೆಯುತ್ತೆ ಅನ್ನೋದನ್ನ ನೋಡೋಣ ಬನ್ನಿ..
ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ ಸರ್ಜರಿ ಬಳಿಕ ಶಿವಣ್ಣ ಒಂದು ತಿಂಗಳ ಅಮೆರಿಕದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಮೂತ್ರಕೋಶದ ಕ್ಯಾನ್ಸರ್‌ಗೆ ಶಿವಣ್ಣ ಟ್ರಟ್‌ಮೆಂಟ್ ಪಡೆಯಲಿದ್ದಾರೆ. ಮೂತ್ರಕೋಶದ ಒಳ ಪದರಲ್ಲಿ ಯುರೊಥೆಲಿಯಲ್ ಕೋಶಗಳು ಅಸಹಜವಾಗಿ ಮತ್ತು ನಿಯಂತ್ರಣ ಇಲ್ಲದೆ ಬೆಳೆಯಲು ಆರಂಭಿಸಿದಾಗ ಅದು ಮೂತ್ರ ಕೋಶದ ಕ್ಯಾನ್ಸರ್ ಎನಿಸಿಕೊಳ್ಳುತ್ತದೆ. ದೇಶದಲ್ಲಿ 2020ರಲ್ಲಿ ಸುಮಾರು 18,921 ಜನರು ಮೂತ್ರ ಕೋಶದ ಕಾಯಿಲೆಗೆ ಒಳಗಾಗಿದ್ದಾರೆ. ಪ್ರತಿ ಒಂದು ಲಕ್ಷ ಜನರಲ್ಲಿ ಪುರುಷರು 2.4 ರ ಅನುಪಾತದಲ್ಲಿ ಹಾಗೂ ಮಹಿಳೆಯರು 0.7 ಅನುಪಾತದಲ್ಲಿ ಒಳಗಾಗುತ್ತಿದ್ದಾರೆ. ಮರಣದ ಪ್ರಮಾಣ ಪುರುಷರಲ್ಲಿ 1.3 ಮತ್ತು ಮಹಿಳೆಯರಲ್ಲಿ 0.3 ರಷ್ಟಿದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಮೂತ್ರದ ಜತೆ ರಕ್ತ ಬರುವುದು – ಮೂತ್ರ ವಿಸರ್ಜಿಸುವಾಗ ನೋವಾದ್ರೆ ಇದ್ರ ಎಫೆಕ್ಟ್.
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಷ್ಟ್ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.
ಇನ್ನು ಶಿವಣ್ಣನಿಗೆ 62 ವರ್ಷವಾದ್ರು, ಎನರ್ಜಿಯಲ್ಲಿ ಇನ್ನೂ 22 ವರ್ಷದ ಹುಡುಗ .. ತನಗೆ ಇರೋ ಆರೋಗ್ಯದ ಸಮಸ್ಯೆ ನಡುವೆ ಭೈರತಿ ರಣಗಲ್ ಸೇರಿದಂತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ.. ಹೀಗಾಗಿ ಶಿವಣ್ಣ ದೇಹ ಕೂಡ ಟ್ರೀಟ್ಮೆಂಟ್‌ಗೆ ರಿಯಾಕ್ಟ್ ಮಾಡುತ್ತೆ. ಹೀಗಾಗಿ ಶಿವಣ್ಣ ಸರ್ಜರಿಯಾಗಿ ಒಂದೇ ಒಂದು ತಿಂಗಳಿಗೆ ಹಳೇ ಖದರ್‌ಗೆ ಬರಲಿದ್ದಾರೆ. ಅಮೆರಿಕದಿಂದ ಬರುತ್ತಿದ್ದಂತೆ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. 6 ತಿಂಗಳೊಗೆ ಸಮಸ್ಯೆ ಕ್ಲಿಯರ್ ಆಗಲಿದೆಯಂತೆ. ಹೀಗಾಗಿ ಎನರ್ಜಿ ಬೂಸ್ಟರ್ ಆಗಿರೋ ಶಿವಣ್ಣ ಆದಷ್ಟು ಬೇಗ ಗುಣಮುಖರಾಗಲಿದ್ದಾರೆ. ಹೀಗಾಗಿ ಸರ್ಜರಿ ನಡೆಯುವ ದಿನ ಅಂದ್ರೆ ಡಿ 24 ರಂದು ಶಿವಣ್ಣನ ಅಭಿಮಾನಿಗಳು ಮಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಮುಡಿ ಕೊಡಲಿದ್ದಾರೆ. ಹಾಗೇ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದ್ದು, ಅನ್ನಸಂತರ್ಪಣೆ ಕೂಡ ನಡೆಯಲಿದೆ. ಒಟ್ನಲ್ಲಿ ಶಿವಣ್ಣ ಒಂದೇ ಒಂದು ತಿಂಗಳಲ್ಲಿ ಮತ್ತೆ ಹಳೇ ಖದರ್‌ನಲ್ಲಿ ನಮ್ಮ ಮುಂದೆ ಬರಲಿದ್ದಾರೆ. ಶಿವಣ್ಣ ನಿಮ್ಮ ಮೇಲೆ ಕೋಟಿ ಕೋಟಿ ಅಭಿಮಾನಿಗಳು, ಹಾಗು ದೇವರ ಆಶೀರ್ವಾದ ಇದೆ.. ಗೆದ್ದು ಬನ್ನಿ ಶಿವಣ್ಣ..