ಅಮಿತ್ ಶಾ ಅಂಬೇಡ್ಕರ್ ವಿಡಿಯೋ ಅಪ್ಲೋಡ್, ಕಾಂಗ್ರೆಸ್ಗೆ ಎಕ್ಸ್ನಿಂದ ನೋಟಿಸ್
ಹೆಬ್ಬಾಳ್ಕರ್ಗೆ CT ರವಿ ಪ್ರಾ**ಟ್ ಅಂದ್ರಾ?
ಅಂಬೇಡ್ಕರ್.. ಅಂಬೇಡ್ಕರ್.. ಸಂಸತ್ನಲ್ಲಿ ಇದೇ ವಿಚಾರ ಗದ್ದಲ್ಲ ಗಲಾಟೆಯನ್ನ ಎಬ್ಬಿಸಿದೆ.. ಕೇವಲ ಸಂಸತ್ನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಧಗಧಗಿಸೋಕೆ ಕಾರಣವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿ ಈ ವಿಚಾರ ಸಖತ್ ಸದ್ದು ಮಾಡಿದೆ. ಇಷ್ಟೆಲ್ಲಾ ಗಲಾಟೆ ಗದ್ದಲಕ್ಕೆ ಕಾರಣ ಅಮಿತ್ ಶಾ ಅವರ ಹೇಳಿಕೆ ಆಗಿದೆ. ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸತ್ನಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿ, ಕಾಂಗ್ರೆಸ್ಗೆ ಟಾಂಗ್ ನೀಡಲು ಮುಂದಾದ್ರು. ‘ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಜಪ ಮಾಡಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು, ಅವರ ಹೆಸರನ್ನು 100 ಸಲ ಬೇಕಿದ್ದರೂ ಹೇಳಿ. ಆದರೆ ಅವರ ಬಗ್ಗೆ ನಿಮ್ಮ ಭಾವನೆ ಏನು ಎಂದು ನಾನು ಹೇಳಲು ಬಯಸುತ್ತೇನೆ”.ಎಂದು ಮಾತು ಮುಂದುವರಿಸಿದ್ರು.. ಆದ್ರೆ ಇದನ್ನೇ ಅಸ್ತ್ರವಾಗಿ ಉರುಳಿಸಿದ ಕಾಂಗ್ರೆಸ್ ಆಡಳಿತ ಪಕ್ಷದ ಮೇಲೆ ಮುಗಿ ಬಿದ್ವು.. ಪ್ರತಿಭಟನೆ , ಕೂಗಾಟ ತಳ್ಳಾಟ ಜೋರಾಯ್ತು.. ಅಮಿತ್ ಶಾ ಹೇಳಿಕೆಗೆ ದೇಶ ವ್ಯಾಪಿ ಆಕ್ರೋಶ ಹೆಚ್ಚಾಯ್ತು..
ಬಿಜೆಪಿ ಸಂಸದರನ್ನ ತಳ್ಳಿದ್ರಾ ರಾಹುಲ್ ಗಾಂಧಿ?
ಸಂಸತ್ ಆವರಣದಲ್ಲಿ ಇದೇ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಹೈಡ್ರಾಮ ನಡೆದಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಗಾಯಗೊಂಡಿದ್ದಾರೆ. ಇವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದರೊಬ್ಬರನ್ನು ರಾಹುಲ್ ಗಾಂಧಿ ಅವರನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಗಾಂಧಿ ಅವರು ಸಂಸದ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದರಿಂದ ಅವರು ಬಿದ್ದು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇದೇ ವೇಳೆ ಬಿಜೆಪಿಯಿಂದ ವಿಡಿಯೋ ಕೂಡ ಬಿಡುಗಡೆಯಾಗಿದೆ. “ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ನನ್ನನ್ನು ತಳ್ಳಿದರು” ಎಂದು ಸಾರಂಗಿ ಆರೋಪ ಮಾಡಿದ್ದಾರೆ. ಪ್ರತಿಭಟನೆಯ ವೇಳೆ ಇಬ್ಬರು ಬಿಜೆಪಿ ಸಂಸದರ ಮೇಲೆ ರಾಹುಲ್ ಗಾಂಧಿ ಹಲ್ಲೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ ನಿರಾಕರಿಸಿದೆ.
Full Gfx: ಕಾಂಗ್ರೆಸ್ಗೆ ಟಾಂಗ್ ಕೊಟ್ಟ ಅಮಿತ್ ಶಾ