ನಿವೃತ್ತಿ ಸುಳಿವು ಬಿಟ್ಟುಕೊಟ್ಟ ರೋಹಿತ್ ಶರ್ಮಾ – ಕೊಹ್ಲಿಯೂ ಅದೇ ತೀರ್ಮಾನ ಮಾಡ್ತಾರಾ?

ನಿವೃತ್ತಿ ಸುಳಿವು ಬಿಟ್ಟುಕೊಟ್ಟ ರೋಹಿತ್ ಶರ್ಮಾ – ಕೊಹ್ಲಿಯೂ ಅದೇ ತೀರ್ಮಾನ ಮಾಡ್ತಾರಾ?

ಈಗಾಗ್ಲೇ ಟಿ-20 ಫಾರ್ಮೆಟ್​ಗೆ ಗುಡ್ ಬೈ ಹೇಳಿರುವ ರೋಹಿತ್ ಶರ್ಮಾ ಕೂಡ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈಗಾಗಲೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ. ಅದ್ಭುತ ಆಟ ಪ್ರದರ್ಶಿಸುವವರಿಗೆ ಟೀಮ್ ಇಂಡಿಯಾ ಬಾಗಿಲು ತೆರೆದಿದೆ ಎನ್ನುವ ಮೂಲಕ ಕಳಪೆ ಫಾರ್ಮ್​ನಲ್ಲಿರೋರಿಗೆ ಗೇಟ್​ಪಾಸ್ ನೀಡೋದಾಗಿ ಹೇಳಿದ್ರು. ಅದೇನು ಕಾಕತಾಳೀಯವೋ ಏನೋ ಟಿ-20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಕಂಪ್ಲೀಟ್ ಕಳಪೆ ಫಾರ್ಮ್​ನಿಂದ ಬಳಲ್ತಿದ್ದಾರೆ. ಅಶ್ವಿನ್​ ಗಿಂತ ಮೊದಲು ಟೀಮ್ ಇಂಡಿಯಾ ಸೇರಿದ್ದ ರೋಹಿತ್ ಇಂದಿಗೂ ಕೂಡ ಆಡುತ್ತಿದ್ದಾರೆ. ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕೆ ರಹಾನೆ, ಚೇತೇಶ್ವರ್​ ಪೂಜಾರ, ಮತ್ತು ರವೀಂದ್ರ ಜಡೇಜಾ ಇವ್ರೆಲ್ಲಾ ಒಂದೇ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ಸೇರಿದವರು.

ಇದನ್ನೂ ಓದಿ : ಕಣಕ್ಕಿಳಿಯದ ಪಂದ್ಯದಲ್ಲಿ ಸ್ಪಿನ್ ದಿಗ್ಗಜನ ವಿದಾಯ- ಅಶ್ವಿನ್‌ಗೆ ವಿಶೇಷ ಗಿಫ್ಟ್ ನೀಡಿದ ಆಸ್ಟ್ರೇಲಿಯಾ ಆಟಗಾರರು

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಉಳಿದ ಎರಡು ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ ಪಂದ್ಯಗಳಾಗಿವೆ ಈ ಟೆಸ್ಟ್ ಪಂದ್ಯಗಳ ಮೇಲೆಯೇ ಹಲವರ ಭವಿಷ್ಯ ನಿಂತಿದೆ. ಕೋಚ್ ಗೌತಮ್ ಗಂಭೀರ್​​​​​​​​​​​​​​​​​​​, ಕ್ಯಾಪ್ಟನ್ ರೋಹಿತ್ ಶರ್ಮಾ ಸಪೋರ್ಟಿಂಗ್ ಸ್ಟಾಫ್ ಸೇರಿದಂತೆ, ಸೂಪರ್​ಸ್ಟಾರ್ ಆಟಗಾರರ ಫ್ಯೂಚರ್ ಡಿಸೈಡ್ ಮಾಡೋದೂ, ಇದೇ ಸರಣಿ. ಹಾಗೇನಾದ್ರೂ ಸರಣಿ ಸೋತ್ರೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್​ನಿಂದ ಹೊರಬೀಳುತ್ತೆ.  ಇದೇ ಸೋಲು ಹಲವರು ಭವಿಷ್ಯದ ಮೇಲೂ ತೂಗುಗತ್ತಿಯಾಗಿ ನೇತಾಡಲಿದೆ. ಅದ್ರಲ್ಲಿ ನಂಬರ್ 1 ಕೋಚ್​ ಗೌತಮ್ ಗಂಭೀರ್​. ಟಿ-ಟ್ವೆಂಟಿ ಫಾರ್ಮೆಟ್ ಬಿಟ್ರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಗಂಭೀರ್ ರೆಕಾರ್ಡ್ಸ್​ ಅದ್ಭುತವಾಗಿ ಏನಿಲ್ಲ. ಸೋ ಲೆಕ್ಕಾಚಾರ ಉಲ್ಟಾ ಆದ್ರೆ ಆಸಿಸ್ ಟೆಸ್ಟ್ ಸರಣಿಯ ನಂತರ ಗಂಭೀರ್, ವೈಟ್​ಬಾಲ್​​​​ ಕ್ರಿಕೆಟ್​​ಗೆ ಮಾತ್ರ ಕೋಚ್ ಆಗಿ ಉಳಿಯಲಿದ್ದಾರೆ. ಟೆಸ್ಟ್​ ಕ್ರಿಕೆಟ್​​ಗೆ ಬಿಸಿಸಿಐ ಹೊಸ ಕೋಚ್ ನೇಮಿಸಿದ್ರೂ ಅಚ್ಚರಿ ಇಲ್ಲ.

2025ರ ಜೂನ್ ಬಳಿಕ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಹೊಸ ಸೈಕಲ್ ಶುರುವಾಗುತ್ತದೆ. ಹೊಸ ವರ್ಷಕ್ಕೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಕೂಡ ಮಾಡಲಾಗುತ್ತದೆ. ಅಂದ್ರೆ ತಂಡದಲ್ಲಿ ಹಿರಿಯರಿಗೆ ಕೊಕ್ ಕೊಟ್ಟು, ಯುವ ತಂಡವನ್ನ ಕಟ್ಟಲು ಬಿಸಿಸಿಐ ಪ್ಲ್ಯಾನ್ ಮಾಡಿದೆ. ಹಾಗೇ ಹೊಸ ಕೋಚಿಂಗ್ ಸ್ಟಾಫ್ ಕೂಡ ಆಯ್ಕೆ ಮಾಡೋ ಸಾಧ್ಯತೆ ಹೆಚ್ಚಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೇ ರವೀಂದ್ರ ಜಡೇಜಾದಿಂದ ತಂಡದಲ್ಲಿ ಚಾನ್ಸ್ ಸಿಗದೇ ಇರಬಹುದು. ಹೀಗಾಗಿ ಬಿಸಿಸಿಐ ಟೀಮ್​ನಿಂದ ತೆಗೆಯೋ ಮುನ್ನ ಗೌರವಯುತವಾಗಿ ಆಟಗಾರರೇ ವಿದಾಯ ಹೇಳಬಹುದು.

ಸದ್ಯದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಕಳ್ಕೊಂಡಿದ್ದಾರೆ. ಹೀಗಾಗಿ ಟೀಕೆಗಳೂ ಜಾಸ್ತಿಯಾಗ್ತಿವೆ. ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿ ಅಂತಾ ಟ್ರೋಲ್ ಮಾಡ್ತಿದ್ದಾರೆ. ಸೋ ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಿದ್ರೆ 2025ರಲ್ಲಿ ಭಾರತ ಕ್ರಿಕೆಟ್​ ತಂಡದಲ್ಲಿ ಶಾಕಿಂಗ್ ಡವಲಪ್​ಮೆಂಟ್ಸ್ ಆಗೋದಂತೂ ಪಕ್ಕ. 2025 ರಲ್ಲಿ ಆನ್​ಫಿಲ್ಡ್ ಅಥವಾ ಆಪ್​ಫಿಲ್ಡ್​ನಲ್ಲಿ ಹಲವು ಕ್ರಿಕೆಟಿಗರು ತಮ್ಮ ಕ್ರಿಕೆಟ್ ಕರಿಯರ್ ಮುಗಿಸಲಿದ್ದಾರೆ.

 

Shantha Kumari

Leave a Reply

Your email address will not be published. Required fields are marked *