ದರ್ಶನ್ ಸರ್ಜರಿ ಸಿನಿಮಾ ಭರ್ಜರಿ ಸಕ್ಸಸ್ – ಅಪ್ಪ ಅನ್ನಲ್ವಂತೆ ಪವಿತ್ರಾ ಮಗಳು!
ಬೆನ್ನು ನೋವು ಅಂದ್ರೆ ಬೆನ್ನು ನೋವು.. ಒಂದ್ ಬ್ಯಾಗ್ ಕೂಡ ಎತ್ತೋಕೆ ಆಗಲ್ಲ. ಇಲ್ಲ ಇಲ್ಲ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಲ್ಲ ಅಂದ್ರೆ ಭಾರಿ ಕಷ್ಟ. ಏನ್ ಬೇಕಾದ್ರೂ ಆಗುತ್ತೆ.. ಪ್ರಾಣಕ್ಕೆ ಕುತ್ತು ಬರುತ್ತೆ.. ಲಕ್ವ ಹೊಡೆಯುತ್ತೆ.. ಮೊದಲು ಆಪರೇಷನ್ ಮಾಡಿಸಬೇಕು ಸಾರ್.. ಮಧ್ಯಂತರ ಜಾಮೀನು ಕೊಡ್ಬೇಕು ಸರ್ ಅಂತಾ ವಕೀಲರು ಕೋರ್ಟ್ಗೆ ಕತೆ ಹೇಳಿದ್ದೇ ಹೇಳಿದ್ದು. ಆದ್ರೆ ಇದೆಲ್ಲಾ ನಾಟಕ ಅಂತ ಒಂದಷ್ಟು ಜನ ಹೇಳಿದ್ರು, ಒಬ್ಬ ವ್ಯಕ್ತಿಯ ಜೀವದ ಪ್ರಶ್ನೆ ಅಂತಾ ಕೋರ್ಟ್ ಮಂದ್ಯತರ ಜಾಮೀನು ಮಂಜೂರು ಮಾಡಿತ್ತು. 7 ವಾರ ಆಸ್ಪತ್ರೆಯಲ್ಲಿ ಕಳೆದ ನಂತ್ರ ರೆಗ್ಯೂಲರ್ ಬೇಲ್ ಕೂಡ ಮಂಜೂರು ಮಾಡಿದೆ. ದರ್ಶನ್ಗೆ ರೆಗ್ಯೂಲರ್ ಬೇಲ್ ಸಿಗುತ್ತಿದ್ದಂತೆ ದಾಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದೆ ಹಿಂದೆ ಎಲ್ಲೂ ಆಪರೇಷನ್ ಆಗದೇ ಮನೆಗೆ ಹೋಗಿದ್ದಾರೆ. ಹಾಗಿದ್ರೆ ದರ್ಶನ್ ಆಪರೇಷನ್ ಮಾಡಿಸಿದ ಡಿಸ್ಚಾರ್ಜ್ ಆಗಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್ ಅಶ್ವಿನ್ ದಿಢೀರ್ ನಿವೃತ್ತಿಗೆ ಕಾರಣವೇನು? – ಬೆಂಚ್ ಕಾಯಿಸಿದ ನೋವು, ಒತ್ತಡ ತಂತ್ರವೋ?
ಸ್ಯಾಂಡಲ್ವುಡ್ನ ಡಿ ಬಾಸ್ ದರ್ಶನ್ಗೆ ರೇಣುಕಾಸ್ವಾಮಿ ಕೇಸ್ನಲ್ಲಿ ಬೇಲ್ ಸಿಕ್ಕಿದೆ. ಒಂದೂರು ತಿಂಗಳು ಆಸ್ಪತ್ರೆಯಲ್ಲಿದ್ದು ಕೋರ್ಟ್ಗೆ ಆಪರೇಷನ್ ದರ್ಶನ್ ಪಿಲ್ಮಿಂ ತೋರಿಸಿ ದಾಸ ಮೆನೆ ಕಡೆ ಹೋಗಿದ್ದಾರೆ.. ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್, ತನಗೆ ಅಪಾರ ಪ್ರಮಾಣದ ಬೆನ್ನುನೋವಿದ್ದು, ಕೂಡಲೇ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮಧ್ಯಂತರ ಜಾಮೀನು ಸಿಕ್ಕ ಬಳಿಕವೂ 49 ದಿನಗಳ ಕಾಲ ಆಸ್ಪತ್ರೆಯ ಬೆಡ್ ಮೇಲೆ ಹೊರಳಾಡಿ ಭರ್ಜರಿಯಾಗಿ ಸರ್ಜರಿ ಫಿಲ್ಮ್ಅನ್ನು ದರ್ಶನ್ ತೋರಿಸಿದ್ದರು. ಯಾವಾಗ ಹೈಕೋರ್ಟ್ ಈ ಕೇಸ್ನಲ್ಲಿ ರೆಗ್ಯುಲರ್ ಬೇಲ್ಅನ್ನು ದರ್ಶನ್ಗೆ ನೀಡಿತೋ, ಅಂದೇ ದರ್ಶನ್ ತಮಗೆ ಯಾವ ಸರ್ಜರಿ ಕೂಡ ಅಗತ್ಯವಿಲ್ಲ ಎಂದಿದ್ದರು. ಈಗ ಫಿಸಿಯೋಥೆರಪಿ ಮೂಲಕವೇ ನಾನು ಗುಣಮುಖನಾಗಿದ್ದೇನೆ ಎಂದು ದರ್ಶನ್ ಹೇಳಿದ್ದು, ಬುಧವಾರ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಬೆನ್ನಲ್ಲಿಯೇ ಮಗನ ಹೆಗಲ ಮೇಲೆ ಕೈ ಹಾಕಿಕೊಂಡು ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ನೇರವಾಗಿ ಹೊಸಕೆರೆಹಳ್ಳಿಯ ಪತ್ನಿ ಫ್ಲಾಟ್ಗೆ ಹೋದ್ರು..
ದರ್ಶನ್ ಸರ್ಜರಿ ಸಿನಿಮಾ ಭರ್ಜರಿ ಸಕ್ಸಸ್
ಕಳೆದ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದರು .ಕೊನೆಗೂ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೇವಲ ಫಿಸಿಯೋಥೆರಪಿ ಮಾಡಿಸಿ ಬೇಲ್ ಸಿಗ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಮಾಡಿಸಿಕೊಳ್ಳಲು ನಟ ದರ್ಶನ್ಗೆ ಭಯ ಶುರುವಾಗಿತ್ತು. ಹೀಗಾಗಿ ಸರ್ಜರಿ ಮಾಡಿಸಿಕೊಳ್ಳಲು ದರ್ಶನ್ ಹಿಂದೇಟು ಹಾಕಿದ್ದಾರೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮತ್ತೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ವೈದ್ಯರ ಸಲಹೆ ಮೇರೆಗೆ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ದರ್ಶನ್ ಗೆ ಅಪ್ಪ ಅನ್ನಲ್ವಂತೆ ಪವಿತ್ರಾ ಮಗಳು
ನಟಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಹೇಳಿಕೆ ಸಖತ್ ಸೌಂಡ್ ಮಾಡುತ್ತಿದೆ. ಸಂಜಯ್ ಸಿಂಗ್ ಒಂದು ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಅವರ ಮಗಳು ಖುಷಿಯ ವಿಚಾರವೂ ಒಂದು. ‘ನನ್ನ ಮಗಳು ನನಗೆ ಡ್ಯಾಡಿ, ನಾನಾ ಹಾಗೂ ದಾದಾ ಅಂತೆಲ್ಲ ಕರೆಯುತ್ತಾಳೆ. ಆಗಾಗ ನಾನು ಫೋನ್ನಲ್ಲಿ ಮಗಳು ಖುಷಿಯ ಜೊತೆ ಮಾತನ್ನಾಡುತ್ತೇನೆ. ಒಮ್ಮೆ ಅವಳು ನಟ ದರ್ಶನ್ ಬಗ್ಗೆ ಹೇಳುತ್ತ ‘ನಾನು ದರ್ಶನ್ಗೆ ಅಪ್ಪ ಅಂತ ಕರೆಯಲ್ಲ’ ಎಂದಿದ್ದಾಳೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಪವಿತ್ರಗೌಡ ಕೂಡ ಜೈಲಿನಿಂದ ಮನೆಗೆ ಹೋಗಿದ್ದಾರೆ. ದರ್ಶನ್ ಕೂಡ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಮುಂದೆ ಇವರಿಬ್ಬರ ಗೆಳತನ ಹೀಗೆ ಮುಂದು ವರಿಯುತ್ತಾ ? ಅದಕ್ಕೆ ವಿಜಯಲಕ್ಷ್ಮೀ ಬಿಡ್ತಾರಾ? ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.