3ನೇ ಪಂದ್ಯ ಡ್ರಾ.. ಯಾವ ತಂಡಕ್ಕೆ ಪ್ಲಸ್? -2 ಪಂದ್ಯಗಳಲ್ಲಿ ಸೋತರೆ ಆಸ್ಟ್ರೇಲಿಯಾ ರೇಸ್ ನಿಂದ ಔಟ್!

3ನೇ ಪಂದ್ಯ ಡ್ರಾ.. ಯಾವ ತಂಡಕ್ಕೆ ಪ್ಲಸ್? -2 ಪಂದ್ಯಗಳಲ್ಲಿ ಸೋತರೆ ಆಸ್ಟ್ರೇಲಿಯಾ ರೇಸ್ ನಿಂದ ಔಟ್!

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಐದು ಪಂದ್ಯಗಳು ಭಾರತ ಮತ್ತು ಆಸ್ಟ್ರೇಲಿಯಾ ಪಾಲಿಗೆ ಮಹತ್ವದ್ದಾಗಿದೆ. ಯಾಕಂದ್ರೆ ಉಭಯ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ರೇಸ್​ನಲ್ಲಿದೆ. ಇದೀಗ ಈ ಸರಣಿಯ ಮೂರನೇ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ, ಟೀಮ್ ಇಂಡಿಯಾಗೆ ಚಿಂತೆಯಿಲ್ಲ. ಯಾಕಂದ್ರೆ ಭಾರತ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಫೈನಲ್​ಗೇರಬಹುದು. ಅಂದರೆ ಈ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಗೆದ್ದರೆ ಮಾತ್ರ ಫೈನಲ್​ಗೆ ಪ್ರವೇಶಿಸುವುದು ಬಹುತೇಕ ಖಚಿತ. ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಸೆಕೆಂಡ್ ಪ್ಲೇಸ್​ನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.

ಇದನ್ನೂ ಓದಿ: IND ಕಾಪಾಡಿದ್ದೇ ಬುಮ್ರಾ, ದೀಪ್..  ಫಾಲೋ-ಆನ್ ತಪ್ಪಿದ್ದೇಗೆ.. ಏನಿದು ರೂಲ್ಸ್? – AUS ವಿರುದ್ಧದ ಮ್ಯಾಚ್ ಡ್ರಾ ಆಗುತ್ತಾ?

ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಮುಂದಿನ ಎರಡು ಪಂದ್ಯಗಳಲ್ಲಿ ಸೋತರೆ ಫೈನಲ್ ರೇಸ್​ನಿಂದ ಹೊರಬೀಳಲಿದೆ. ಯಾಕಂದ್ರೆ ಟೀಮ್ ಇಂಡಿಯಾ 3-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದರೆ, ಆಸ್ಟ್ರೇಲಿಯಾ ತಂಡದ ಶೇಕಡಾವಾರು ಅಂಕ ಕಡಿಮೆಯಾಗಲಿದೆ. ಅಲ್ಲದೆ ಮುದೆ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದರೂ ಕೂಡ 57% ಅಂಕಗಳನ್ನು ಮಾತ್ರ ಪಡೆಯಲಿದೆ. ಇದರಿಂದ 60.52% ಅಂಕಗಳೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡುವುದು ಖಚಿತವಾಗಲಿದೆ. ಬಟ್ ಇದು ಸಾಧ್ಯ ಆಗ್ಬೇಕು ಅಂದ್ರೆ ಭಾರತ ತಂಡವು ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲೇಬೇಕು.

ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ಉಭಯ ತಂಡಗಳು ತಲಾ 1-1 ಪಂದ್ಯಗಳನ್ನು ಗೆದ್ದು ಸರಣಿ ಸಮಬಲ ಸಾಧಿಸಿವೆ. ಮೂರನೇ ಮ್ಯಾಚ್ ಡ್ರಾ ಆಗಿರೋದ್ರಿಂದ ಮುಂದಿನ 2 ಪಂದ್ಯಗಳೇ ಟರ್ನಿಂಗ್ ಪಾಯಿಂಟ್ ಆಗಲಿದೆ. ಹೀಗಾಗಿ ಮೆಲ್ಬೋರ್ನ್​ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ 4ನೇ ಮತ್ತು 5ನೇ ಪಂದ್ಯದಲ್ಲಿ ಭರ್ಜರಿ ಪೈಪೋಟಿ ಇರೋದಂತೂ ಪಕ್ಕಾ.

suddiyaana

Leave a Reply

Your email address will not be published. Required fields are marked *