ನಿನ್‌ ಜಾಗದಲ್ಲಿ ಗಂಡ್‌ಮಕ್ಳು ಇರ್ತಿದ್ರೆ ಕಥೆನೇ ಬೇರೆ ಆಗ್ತಿತ್ತು!.. ಚೈತ್ರಾ ಮೇಲೆ ಸಿಡಿಮಿಡಿಗೊಂಡ ಹನುಮಂತ!  

ನಿನ್‌ ಜಾಗದಲ್ಲಿ ಗಂಡ್‌ಮಕ್ಳು ಇರ್ತಿದ್ರೆ ಕಥೆನೇ ಬೇರೆ ಆಗ್ತಿತ್ತು!.. ಚೈತ್ರಾ ಮೇಲೆ ಸಿಡಿಮಿಡಿಗೊಂಡ ಹನುಮಂತ!  

ಬಿಗ್‌ ಬಾಸ್ ಕನ್ನಡ ಸೀಸನ್‌ 11 ಫಿನಾಲೆ ಹಂತಕ್ಕೆ ಬಂದಿದೆ. ಆದ್ರೆ ದೊಡ್ಮನೆ ಮಾತ್ರ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇದೀಗ ದೊಡ್ಮನೆಯಲ್ಲಿ ಮತ್ತೆ ವಾಕ್ಸಮರ ತಾರಕಕ್ಕೇರಿ ನೂಕಾಟ, ತಳ್ಳಾಟ ನಡೆದಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಮತ್ತೆ ಜೈಲಿಗೆ ಹೋಗ್ತಾನಾ ಪುಷ್ಪ?

ಹೌದು, ಬಿಗ್‌ ಬಾಸ್‌ ಮನೆಯಲ್ಲಿ ಈಗ ಟಾಸ್ಕ್‌ಗಿಂತ ಜಾಸ್ತಿ ಸ್ಪರ್ಧಿಗಳ ಕಿತ್ತಾಟ ಹೈಲೈಟ್‌ ಆಗಿದೆ. ಇದೀಗ ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದು, ಇದರಿಂದ ಟಾಸ್ಕ್​ ಪೂರ್ಣಗೊಳಿಸೋದೇ ದೊಡ್ಡ ಸವಾಲ್ ಆಗಿದೆ. ಬೇಸತ್ತ ಬಿಗ್​ಬಾಸ್​ ಮತ್ತೊಂದು ಟಾಸ್ಕ್​ ರದ್ದು ಮಾಡಿದ್ದಾರೆ.

ಇದರಿಂದ ಕೆಲವು ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟಾಸ್ಕ್​ ರದ್ದಾಗುವಂತೆ ನಡೆದುಕೊಂಡ ಸ್ಪರ್ಧಿಗಳಿಗೆ ಶಿಕ್ಷೆಯಾಗಿ ಎಲ್ಲರೂ ನಾಮಿನೇಟ್ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ಚೈತ್ರಾ ಕುಂದಾಪುರ ಮೇಲೆ ಹನುಮಂತ ಗರಂ ಆಗಿರುವ ಪ್ರಸಂಗ ಕೂಡ ನಡೆದಿದೆ.

ಹೌದು, ಧನರಾಜ್‌ ಮೇಲೆ ಕೂಗಾಡುತ್ತಿದ್ದ ವೇಳೆ ಚೈತ್ರಾ ಕುಂದಾಪುರ ಸಿಟ್ಟಾಗಿದ್ದಾರೆ. ಟಾಸ್ಕ್ ವಿಚಾರವಾಗಿ ಚೈತ್ರಾ ಕುಂದಾಪುರ ಜೊತೆ ಧನರಾಜ್‌ ಹಾಗೂ ಹನುಮಂತು ವಾದ ಮಾಡ್ತಾರೆ. ‘ನಾನು ಇನ್ನೂ ಇಲ್ಲೇ ಇದ್ದೇನೆ. ನಿಯಮ ಮೀರಿ ಗೆರೆ ದಾಟಿಲ್ಲ. ನನ್ ತಲೆ ಆಫ್ ಆದ್ರೆ.. ಮೊದಲೇ ಸರಿ ಇಲ್ಲ. ಯಾರ್ ಗಂಡು ಮಕ್ಕಳಿದ್ರೆ ಈಗ ಇತ್ತ’ ಎಂದು ಹನುಂತ ಎಚ್ಚರಿಕೆ ನೀಡಿದ್ದಾರೆ. ಹನುಮಂತು ಹಾಗಲ್ಲ ರೊಚ್ಚಿಗೇಳಲ್ಲ. ಅವರ ಕೋಪಕ್ಕೆ ನಿಜವಾದ ಕಾರಣ ಏನು ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ.

Shwetha M

Leave a Reply

Your email address will not be published. Required fields are marked *