ಪವಿತ್ರಾ ರಿಲೀಸ್..ಅಡಕತ್ತರಿಯಲ್ಲಿ ದಾಸ!.. ದರ್ಶನ್ನ ಬಿಡಲ್ವಾ ಪವಿತ್ರಾಗೌಡ? – ವಿಜಯಲಕ್ಷ್ಮೀ ಪ್ರಮಾಣ ಮಾಡಿಸಿಕೊಂಡ್ರಾ?
ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಪಾಲಾಗಿದ್ದ ನಟಿ ಪವಿತ್ರಾ ಗೌಡ ಬಂಧನದಿಂದ ಮುಕ್ತಿ ಸಿಕ್ಕಿದೆ. ಆದ್ರೆ ಹೊರಗೆ ಬಂದ ಮೇಲೆ ಪವಿತ್ರಾ ದಾಸನ ಫ್ಯಾನ್ಸ್ ಗೆ ಹೆದರಿದ್ರಾ ಅನ್ನೋ ಅನುಮಾನ ಶುರುವಾಗಿದೆ.. ಸೋಷಿಯ್ ಮೀಡಿಯಾದಲ್ಲಿ ಪವಿತ್ರಗೌಡಗೆ ನೆಗೆಟವ್ ಕಮೆಂಟ್ಸ್ ಕೇಳಿ ಬರ್ತಿದೆ.. ದರ್ಶನ್ ಜೈಲು ಶಿಕ್ಷೆ ಅನುಭವಿಸೋಕೆ ಕಾರಣನೇ ಪವಿತ್ರಗೌಡ ಅನ್ನೋ ಆಕ್ರೋಶ ದರ್ಶನ್ ಅಭಿಮಾನಿಗಳಿಗಿದೆ. ಹೀಗಾಗಿ ಜೈಲಿಗೆನಿಂದ ಹೋರ ಬರುತ್ತಿದ್ದಂತೆ ದಾಸನ ಫ್ಯಾನ್ಸ್ ಗೆ ಪವಿತ್ರಾಗೌಡ ಭಯಪಟ್ರಾ ಅನ್ನೋ ಚರ್ಚೆ ಹುಟ್ಟು ಹಾಕಿದೆ.. ಜೊತೆಗೆ ದರ್ಶನ್ & ಗ್ಯಾಂಗ್ಗೆ ಬೇಲ್ ಕೊಟ್ಟಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತೋಕೆ ಖಾಕಿ ಪಡೆ ಸಜ್ಜಾಗಿದೆ. ಹಾಗಿದ್ರೆ ಪವಿತ್ರಗೌಡ ಜೈಲಿನಿಂದ ರಿಲೀಸ್ ಆಗಿ ಏನೆಲ್ಲಾ ಮಾಡಿದ್ರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 15 ಇನ್ನಿಂಗ್ಸ್.. 1 ಶತಕ.. 318 ರನ್ ಗಳಿಸಿದ ಕೊಹ್ಲಿ!- ವಿರಾಟ್ ಕೊಹ್ಲಿ ಟೆಸ್ಟ್ ಫೇಲ್ಯೂರ್!
ದಾಸನ ಗೆಳತಿ. ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಯಾಗಿದ್ದ ಬೆಡಗಿ ಪವಿತ್ರಾಗೌಡ ಜೈಲಿನಿಂದ ರಿಲೀಸ್ ಆಗಿದ್ದಾರೆ. ಆದ್ರೆ ಜೈಲಿನಿಂದ ಹೊರ ಬಂದ ದರ್ಶನ್ ಅರಗಿಣಿಗೆ ತಾನು ಜೈಲಿಗೆ ಹೋಗಿ ಬಂದಿದ್ದು ಅನ್ನೋ ಚೂರೇ ಚೂರು ಪ್ರಶ್ಚಾತಾಪವಿಲ್ಲ.. ಯಾವುದೇ ಸಿನಿಮಾಗೇ ಹೋಗಿ ಥಿಯೇಟರ್ನಿಂದ ಹೋರ ಬಂದಂತೆ ನಗು ನಗುತ್ತಲೇ ಹೊರ ಬಂದಿದ್ದಾರೆ. ಇನ್ನೂಂದು ವಿಷ್ಯ ಅಂದ್ರೆ ಒಬ್ಬ ಸಾಮಾನ್ಯ ವ್ಯಕ್ತಿ ಜೈಲಿಗೆ ಹೋದ್ರೆ. ಅವನು ರಿಲೀಸ್ ಆದ ಮೇಲೆ ಅವನ ಅಕ್ಕಪಕ್ಕ ಯಾರು ಇರಲ್ಲ.. ಅನಾಥನಂತೆ ಹೊರಗೆ ಬರ್ತಾನೆ.. ಆದ್ರೆ ಪವಿತ್ರಗೌಡ ಜೈಲಿನಿಂದ ಹೊರ ಬರುತ್ತಿದ್ದಂತೆ ಅಬ್ಬಾಬ್ಬ.. ಅದೇನ್ ಜನ.. ಅದೇನ್ ಬಿಲ್ಡಪ್.. ಮಂತ್ರಿಗಳ ಅಕ್ಕಪಕ್ಕ ಇರುವಷ್ಟು ಪೊಲೀಸರು ಮತ್ತು ಜನ ಪವಿತ್ರಗೌಡ ಅಕ್ಕಪಕ್ಕ ಇದ್ದರು.. ಇದ್ದನೆಲ್ಲಾ ನೋಡಿದ್ರೆ, ದುಡ್ಡಿಗೆ ಇರೋ ಬೆಲೆ ಬೇರೆ ಯಾವುದಕ್ಕೂ ಇಲ್ಲ ಅಂತ ಜನರಿಗೆ ಅನಿಸದೇ ಇರದು. ನಿಜಕ್ಕೂ ಈ ದೃಶ್ಯ ಅಪರಾಧಿಗಳಿಗೆ ಮತ್ತಷ್ಟು ಬಲ ತಂದಿದೆ ಅಂದ್ರೆ ಸುಳ್ಳಲ್ಲ ಬಿಡಿ..
ದರ್ಶನ್ ಹೆಸರಲ್ಲಿ ಪವಿತ್ರಾ ಅರ್ಚನೆ
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಪವಿತ್ರಾ ಗೌಡ ಅವರು ಸೀದಾ ಮನೆಗೆ ತೆರಳದೇ ವಜ್ರ ಮುನೇಶ್ವರ ದೇವಸ್ಥಾನದಲ್ಲಿ ನಟ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಕನಕಪುರ ರಸ್ತೆಯ ತಲಘಟ್ಟಪುರದಲ್ಲಿರುವ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ ಪವಿತ್ರಾ ಗೌಡ ಅವರು ತೀರ್ಥಸ್ನಾನ ಮಾಡಿದರು. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ. ಪವಿತ್ರಾ ಗೌಡ ಅವರು ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದರು. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪವಿತ್ರಾ ತಾಯಿ ಭಾಗ್ಯಮ್ಮನವರು ಪೂಜಾರಿಗಳಿಗೆ ಹೇಳಿದರು. ಹೀಗಾಗಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಲಾಗಿದೆ. ಆದ್ರೆ ಪವಿತ್ರಗೌಡ ಸುತ್ತಮುತ್ತ ಪೊಲೀಸ್ಇದ್ದರು.. ಯಾಕಂದ್ರೆ ದರ್ಶನ್ ಫ್ಯಾನ್ಸ್ ಗೆ ಪವಿತ್ರಗೌಡ ಮೇಲೆ ಸಾಕಷ್ಟು ಕೋಪವಿದೆ. ಹೀಗಾಗಿ ಹೈ ಸೆಕ್ಯೂರಿ ನೀಡಲಾಗಿತ್ತು.. ಹಾಗೇ ಅವರ ತನ್ನ ಆರ್ ಆರ್ ನಗರದಲ್ಲಿರೋ ಮನೆಗೆ ಹೋಗದ ತನ್ನ ತಾಯಿ ಮನೆಗೆ ಹೋಗಿದ್ದಾರೆ.. ಯಾಕಂದ್ರೆ ದಾಸನ ಫ್ಯಾನ್ಸ್ ಅಲ್ಲಿಗೆ ಬಂದು ಕೂಡ ಕಿರಿಕಿರಿ ಮಾಡಬಹುದು ಅನ್ನೋ ಕಾರಣಕ್ಕೆ. 6 ತಿಂಗಳು ಜೈಲಿನಲ್ಲಿದ್ದರು ಪವಿತ್ರಾ ಸ್ವಲ್ಪವೇ ಸ್ವಲ್ಪ ಕುಗ್ಗದೇ, ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳದೇ ಹೇಗೆ ಇದ್ದರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಪವಿತ್ರಾ ಪೂಜೆ .. ದಾಸ ನೆಮ್ಮದಿ ಹಾಳು
ಕೊಲೆ ಕೇಸ್ನಲ್ಲಿ ಬೇಲ್ ಸಿಕ್ಕರೂ ದರ್ಶನ್ ನೆಮ್ಮದಿ ಇಲ್ಲದಂತಾಗಿದೆ. ಪವಿತ್ರಾ ಪೂಜೆಯ ನಂತರ ದಾಸನಿಗೆ ಹೊಸ ಪೀಕಲಾಟ ಶುರುವಾದಂತೆ ಕಾಣ್ತಿದೆ. ಹೆಂಡತಿ ಮಗನಿಗಾಗಿ ನಟ ದರ್ಶನ್, ಪವಿತ್ರಾಳಿಂದ ಅಂತರ ಕಾಯ್ದುಕೊಳ್ತಾರೆ ಎನ್ನಲಾಗ್ತಿತ್ತು. ಆದ್ರೆ ಪವಿತ್ರಾ ಗೌಡ ಮಾತ್ರ ದರ್ಶನ್ ನನ್ನು ಬಿಟ್ಟು ಕೊಡುವಂತೆ ಕಾಣ್ತಿಲ್ಲ. ಯಾಕಂದ್ರೆ ಜೈಲಿನಿಂದ ಹೊರ ಬರುತ್ತಿದ್ದಂತೆ ದರ್ಶನ್ ಹೆಸರಲ್ಲಿ ಪವಿತ್ರಾಗೌಡ ತಾಯಿ ಅರ್ಚನೆ ಮಾಡಿಸಿದ್ದಾರೆ. ನಾವು ದರ್ಶನ್ ಜೊತೆ ಇದ್ದೇ ಇರುತ್ತೇವೆ ಅನ್ನೋ ಸಂದೇಶವನ್ನ ಸಾರಿದ್ದಾರೆ. ಆದ್ರೆ ಕಾನೂನು ಹೋರಾಟ ಮಾಡಿ ದರ್ಶನ್ನನ್ನು ಹೊರಗೆ ತರುವಲ್ಲಿ ವಿಜಯಲಕ್ಷ್ಮಿ ಯಶಸ್ವಿ ಆಗಿದ್ರು. ಪತಿ ದರ್ಶನ್ಗಾಗಿ ಪತ್ನಿ ವಿಜಯಲಕ್ಷ್ಮಿ ಹೋರಾಟವನ್ನು ಜನ ಕೂಡ ಮೆಚ್ಚಿದ್ರು. ಪವಿತ್ರಾಳಿಂದ ದೂರ ಇರುವಂತೆ ದರ್ಶನ್ ಬಳಿ ವಿಜಯಲಕ್ಷ್ಮಿ ಆಣೆ-ಪ್ರಮಾಣ ಕೂಡ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈಗ ಪವಿತ್ರಗೌಡ ಅರ್ಚನೆ ಮಾಡಿಸಿರುವುದು ವಿಜಯಲಕ್ಷ್ಮೀಗೆ ಬರಸಿಡಿಲೇ ಬಡಿದಂತಾಗಿದೆ.
ದರ್ಶನ್ & ಗ್ಯಾಂಗ್ಗೆ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ
ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತೆ ಅಂತಾ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ. ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ದಯಾನಂದ್ ತಿಳಿಸಿದ್ದಾರೆ. ಒಟ್ನಲ್ಲಿ ದರ್ಶನ್ ಆಸ್ಪತ್ರೆಯಲ್ಲಿದ್ದರೇ , ಪವಿತ್ರಾಗೌಡ ಜೈಲಿನಿಂದ ನಗು ನಗುತ್ತಲೇ ಹೊರ ಬಂದಿದ್ದಾರೆ.. ಆದ್ರೆ ಪವಿತ್ರಾಗೌಡ ನಡೆ ವಿಜಯಲಕ್ಷ್ಮೀಗೆ ಬಿಗ್ ಶಾಕ್ ನೀಡಿದಂತು ಸತ್ಯ..