ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್ ಯಾಕಾಯ್ತು?- ಹಿಟ್‌ಮ್ಯಾನ್ ನಾಯಕತ್ವ ಕುರಿತು ಟೀಕೆ

ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್ ಯಾಕಾಯ್ತು?-  ಹಿಟ್‌ಮ್ಯಾನ್ ನಾಯಕತ್ವ ಕುರಿತು ಟೀಕೆ

ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋತಿದೆ. ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲೂ ಸೋತ ಮೇಲಂತೂ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರತಿ ಟೆಸ್ಟ್​ ಸೋಲಿನೊಂದಿಗೆ, ರೋಹಿತ್ ಶರ್ಮಾ ಅವರ ನಾಯಕತ್ವ ಕುರಿತು ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: 6 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! – ಹೆಡ್ ಶತಕ ಸಿಡಿಸಿದ ಪಂದ್ಯಗಳಲ್ಲೆಲ್ಲಾ ಭಾರತದ ಸೋಲು ಫಿಕ್ಸ್!

ಬಾಂಗ್ಲಾ ಸರಣಿಯಿಂದ ಈಚೆಗೆ ರೋಹಿತ್ ಶರ್ಮಾ 7 ಟೆಸ್ಟ್ ಪಂದ್ಯಗಳಲ್ಲಿ 13 ಇನ್ನಿಂಗ್ಸ್ ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಒಂದು ಅರ್ಧ ಶತಕ ಬಂದಿರೋದು ಬಿಟ್ರೆ ಸಾಕಷ್ಟು ಸಲ ಸಿಂಗಲ್ ಡಿಜಿಟ್​​ನಲ್ಲೇ ಆಟ ಮುಗಿಸಿದ್ದಾರೆ.

ಭಾರತದಲ್ಲೇ ನಡೆದಿದ್ದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್ ಗಳಿಸಿದ ರೋಹಿತ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 5 ರನ್​ಗಳಿಗೆ ಔಟಾಗಿದ್ರು. ಸೆಕೆಂಡ್ ಮ್ಯಾಚ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಸೇರಿ 31 ರನ್ ಬಾರಿಸಿದ್ರು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 2 ರನ್ ಬಾರಿಸಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಆಫ್ ಸೆಂಚುರಿ ಸಿಡಿಸಿದ್ರು. ಆ ಬಳಿಕ ಸೆಕೆಂಡ್ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ ಡಕ್ ಔಟ್ ಆದ್ರೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 8 ರನ್ ಕಲೆ ಹಾಕಿದ್ರು. ಮೂರನೇ ಫೈಟ್​ನಲ್ಲಿ 18 ಮತ್ತು 11 ರನ್ ಗಳಿಸಿದ್ದೇ ಸಾಧನೆಯಾಯ್ತು. ಇನ್ನು ಆಸಿಸ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಸೆಕೆಂಡ್ ಪಂದ್ಯಕ್ಕೆ ಎಂಟ್ರಿ ಕೊಟ್ಟಿದ್ರು. ಸೆಕೆಂಡ್ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ 3 ರನ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 6 ರನ್​ಗಳಿಗೆ ಪೆವಿಲಿಯನ್ ಸೇರಿದ್ರು. ಸದ್ಯ ಗಾಬ್ಬಾದಲ್ಲಿ ನಡೆಯುತ್ತಿರೋ ಮೂರನೇ ಟೆಸ್ಟ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 10 ರನ್ ಗಳಿಸುವಷ್ಟ್ರಲ್ಲೇ ಔಟಾಗಿದ್ದಾರೆ. ಅಲ್ಲಿಗೆ ಕಳೆದ 13 ಇನ್ನಿಂಗ್ಸ್​ಗಳಿಂದ ರೋಹಿತ್ ಕಲೆ ಹಾಕಿರೋದು 152 ರನ್​ಗಳು ಅಷ್ಟೇ.

 

suddiyaana

Leave a Reply

Your email address will not be published. Required fields are marked *