ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲ್ಲ- ರನ್ ಗಳಿಕೆಯಲ್ಲಿ ಮಾನ ಕಾಪಾಡಿದ್ದು ಕನ್ನಡಿಗ ಕೆ.ಎಲ್ ರಾಹುಲ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲ್ಲ- ರನ್ ಗಳಿಕೆಯಲ್ಲಿ ಮಾನ ಕಾಪಾಡಿದ್ದು ಕನ್ನಡಿಗ ಕೆ.ಎಲ್ ರಾಹುಲ್

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಕಾಲಿಟ್ಟಾಗ ತುಂಬಾನೇ ಎಕ್ಸ್​ಪೆಕ್ಟೇಷನ್ಸ್ ಇತ್ತು. ಯಾಕಂದ್ರೆ ಇದೊಂದು ಜಸ್ಟ್ ಸರಣಿಯಾಗಿ ಉಳಿದಿರಲಿಲ್ಲ. ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ಗೆ ಟಿಕೆಟ್ ಕೊಡೋ ಫೈಟ್ ಆಗಿತ್ತು. ಹೀಗಿದ್ರೂ ಟೀಂ ಇಂಡಿಯಾ ಸೀರಿಯಸ್​ ಆಗಿ ಆಡೋ ಥರ ಕಾಣ್ತಿಲ್ಲ. ಫಸ್ಟ್ ಮ್ಯಾಚ್​ನಲ್ಲಿ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ಸಿಯಲ್ಲಿ ಸೂಪರ್ ಡೂಪರ್ ಪ್ರದರ್ಶನ ನೀಡಿದ್ದ ತಂಡ ಇದೀಗ ಎರಡು ಮತ್ತು ಮೂರನೇ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮಕಾಡೆ ಮಲಗಿದೆ. ಬ್ಯಾಟಿಂಗ್ ವಿಭಾಗ ಅಂತೂ ಕಂಪ್ಲೀಟ್ ಹಳ್ಳ ಹಿಡಿದಿದೆ. ಅದ್ರಲ್ಲೂ ಟೀಂ ಇಂಡಿಯಾದ ಜೋಡೆತ್ತು ಅಂತಾ ಕರೆಸಿಕೊಳ್ಳೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡೋಕೆ ಆಗ್ತಾನೇ ಇಲ್ಲ. ಒಂದು, ಇನ್ನೊಂದು, ಮತ್ತೊಂದು ಅಂತಾ ರನ್ ಗಳಿಸೋಕೆ ಒದ್ದಾಡ್ತಾನೇ ಇದ್ದಾರೆ. ಇವ್ರಿಬ್ಬರ ಈ ಆಟ ನೋಡ್ತಿದ್ರೆ ಕೆಎಲ್ ರಾಹುಲ್ ಸಾವಿರ ಪಟ್ಟು ಮೇಲು ಅನ್ನಿಸ್ತಿದೆ. ಟಿ-20 ವಿಶ್ವಕಪ್ ಬಳಿಕ ಈವರೆಗೂ ಮೂವರು ಆಟಗಾರರು 13 ಇನ್ನಿಂಗ್ಸ್​​ಗಳನ್ನ ಆಡಿದ್ದಾರೆ. ಈ ಅಂಕಿ ಅಂಶಗಳೇ ಇದನ್ನ ಸಾರಿ ಸಾರಿ ಹೇಳ್ತಿವೆ.

ಇದನ್ನೂ ಓದಿ:RO-KO 325 ರನ್.. KL 339 ರನ್.. ಕೊಹ್ಲಿ ಶರ್ಮಾಗಿಂತ ರಾಹುಲ್ ಬೆಸ್ಟ್! – 10 ವರ್ಷಗಳಲ್ಲೇ ಇದೆಂಥಾ ದುಸ್ಥಿತಿ?

ಕಳೆದ ಸೆಪ್ಟೆಂಬರ್​ನಲ್ಲಿ ತವರಿನಲ್ಲೇ ನಡೆದಿದ್ದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 16 ರನ್ ಗಳಿಸಿದ್ದ ಕೆಎಲ್ ರಾಹುಲ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 22 ರನ್ ಬಾರಿಸಿದ್ರು. ಹಾಗೇ ಎರಡನೇ ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲಿ 68 ರನ್ ಸಿಡಿಸಿ ಅಬ್ಬರಿಸಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಚಾನ್ಸ್ ಸಿಗುವಷ್ಟ್ರಲ್ಲಿ ಭಾರತ ಪಂದ್ಯವನ್ನ ಗೆದ್ದಾಗಿತ್ತು.  ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಡಕ್​ಔಟ್ ಆಗಿದ್ದ ಕೆಎಲ್ ಎರಡನೇ ಇನ್ನಿಂಗ್ಸ್​ನಲ್ಲಿ 12 ರನ್ ಗಳಿಸಿದ್ರು. ಎರಡೂ ಇನ್ನಿಂಗ್ಸ್​ನಲ್ಲಿ ಸದ್ದು ಮಾಡದ ಕೆಎಲ್​ರನ್ನ ಮುಂದಿನ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡಲಾಗಿತ್ತು. ಆ ಬಳಿಕ ಪರವಿರೋಧದ ನಡುವೆಯೇ ಆಸಿಸ್ ಸರಣಿಗೆ ಸೆಲೆಕ್ಟ್ ಆಗಿದ್ದ ಕೆಎಲ್ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಮೊದಲ ಪಂದ್ಯದ ಮೊದನ ಇನ್ನಿಂಗ್ಸ್​ನಲ್ಲಿ 26 ರನ್ ಬಾರಿಸಿದ್ದ ಕೆಎಲ್ ಎರಡನೇ ಇನ್ನಿಂಗ್ಸ್​ಗೆ 77 ರನ್ ಕಲೆ ಹಾಕಿದ್ರು. ಹಾಗೇ ಸೆಕೆಂಡ್ಸ್ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ 37 ರನ್ ಸೆಕೆಂಡ್ ಇನ್ನಿಂಗ್ಸ್​ಗೆ 7 ರನ್ ಬಾರಿಸಿದ್ರು. ಇದೀಗ ಗಾಬ್ಬಾದಲ್ಲಿ ನಡೆಯುತ್ತಿರೋ ಮೂರನೇ ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲಿ  84 ರನ್ ಬಾರಿಸಿ ಟೀಂ ಇಂಡಿಯಾಗೆ ಆಸರೆಯಾಗಿ ನಿಂತಿದ್ದು ಕೆ.ಎಲ್ ರಾಹುಲ್.

suddiyaana

Leave a Reply

Your email address will not be published. Required fields are marked *