ಹಾರ್ದಿಕ್ ಪಾಂಡ್ಯ ಎರಡನೇ ಮದುವೆ? – ಫಾರಿನ್ ನಟಿ ಜೊತೆ ಸೆಕೆಂಡ್ ಇನ್ನಿಂಗ್ಸ್?
ಎರಡು ಮಕ್ಕಳ ತಾಯಿ ಈ ಸುಂದರಿ!
ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್.. 2024 ರಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿದ್ದಿದ್ದು ಇದೇ ಪಾಂಡ್ಯ.. ಯಾಕಂದ್ರೆ ಹಾರ್ದಿಕ್ ಜೀವನದ ಹಾದಿ ಹಳಿತಪ್ಪಿತ್ತು.. ಕ್ರಿಕೆಟ್ ವೃತ್ತಿ ಜೀವನ ಹಾಗೇ ದಾಂಪತ್ಯ ಜೀವನ ಎರಡರಲ್ಲೂ ಬಿರುಗಾಳಿ ಎದ್ದಿತ್ತು.. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ರು.. ಅದಾದ್ಮೇಲೆ ಟಿ 20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಗ್ರೇಟ್ ಕಮ್ಬ್ಯಾಕ್ ಮಾಡಿದ್ರು.. ವಿಶ್ವಕಪ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.. ನತಾಶಗೆ ಡಿವೋರ್ಸ್ ನೀಡಿದ ಬಳಿಕ ಪಾಂಡ್ಯ ಮುಂದೇನು ಮಾಡ್ತಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆ ಆಗಿತ್ತು.. ಇದೀಗ ಪಾಂಡ್ಯ ಎರಡನೇ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿ ಕ್ರೀಡಾ ಲೋಕದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಪಾಂಡ್ಯ ಎರಡನೇ ಮದುವೆ ಆಗೋದು ಹೌದಾ? ಯಾರನ್ನ ಮದುವೆ ಆಗಲಿದ್ದಾರೆ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Byv 150 ಕೋಟಿ ಆಮಿಷಕ್ಕೆ ಟ್ವಿಸ್ಟ್.. ವಿಜಯೇಂದ್ರ ಬೆನ್ನಿಗೆ ನಿಂತ್ರಾ ಯತ್ನಾಳ್? – ‘ಕೈ’ ಆರೋಪಕ್ಕೆ BJP ತಿರುಗುಮಂತ್ರ!
ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮೂಲದ ಮಾಡೆಲ್, ಬಾಲಿವುಡ್ ನಟಿ ನತಾಶಾ ಸ್ಟ್ಯಾಂಕೋವಿಚ್ ಅನ್ನ ಪ್ರೀತಿಸಿ ಮದುವೆ ಆಗಿದ್ರು.. ಈ ಜೋಡಿ ಮೂರು ಬಾರಿ ಮದುವೆ ಆದ್ರೂ ಕೂಡ ಈ ಸಂಬಂಧ ಹೆಚ್ಚು ಕಾಲ ಉಳಿದಿಲ್ಲ. ಯಾವುದೋ ಕಾರಣಕ್ಕೆ ಪಾಂಡ್ಯ ಹಾಗೂ ನತಾಶ 4 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಹಾರ್ದಿಕ್ ಹಾಗೂ ನತಾಶ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ರು.. ಡಿವೋರ್ಸ್ ಬಳಿಕ ಪಾಂಡ್ಯ ಅಷ್ಟೊಂದಾಗಿ ತಲೆಕೆಡಿಸಿಕೊಂಡಿಲ್ಲ.. ಯಾಕಂದ್ರೆ ಹಾರ್ದಿಕ್ ಇರೋದೇ ಹಾಗೇ.. ಏನೇ ಆದ್ರೂ ಡೋಂಟ್ ಕೇರ್ ಅಂತಾರೆ.. ಬಿಂದಾಸ್ ಲೈಫ್ ಲೀಡ್ ಮಾಡ್ತಾರೆ.. ಡಿವೋರ್ಸ್ ಬಳಿಕ ಪಾಂಡ್ಯ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿದೆ.. ಮಾಡೆಲ್ಗಳ ಜೊತೆಗಿನ ಡೇಂಟಿಂಗ್.. ಮೀಟಿಂಗ್ ಗಾಸಿಪ್ಗಳು ಹರಿದಾಡ್ತಾನೆ ಇದೆ.. ಇದೀಗ ಹಾರ್ದಿಕ್ ಪಾಂಡ್ಯ ಜೀವನದ ಮತ್ತೊಂದು ಹಾಟ್ ನ್ಯೂಸ್ ಭಾರಿ ಸೌಂಡ್ ಮಾಡುತ್ತಿದೆ. ಅದೇನಪ್ಪಾ ಅಂದ್ರೆ ಹಾರ್ದಿಕ್ ಸೆಕೆಂಡ್ ಮ್ಯಾರೇಜ್. ಅಮೆರಿಕನ್ ಮಾಡೆಲ್ ಜೊತೆ ಮದುವೆಗೆ ಸಜ್ಜಾಗಿದ್ದರಂತೆ ಪಾಂಡ್ಯ.
ಅಮೆರಿಕ ಮಾಡೆಲ್ ಜೊತೆ ಪಾಂಡ್ಯ ಸೆಕೆಂಡ್ ಇನ್ನಿಂಗ್ಸ್
ಪಾಂಡ್ಯ ನತಾಶಗೆ ಗುಡ್ ಬೈ ಹೇಳಿ ಜಸ್ಟ್ ಆರೇ ಆರು ತಿಂಗಳು ಆಗಿದ್ದು.. ಆದ್ರೆ ನಮ್ಮ ಸ್ಟಾರ್ ಪ್ಲೇಯರ್ ಫುಲ್ ಬಿಂದಾಸ್.. ನತಾಶಗೆ ಡಿವೋರ್ಸ್ ಕೊಟ್ಟ ಬೆನ್ನಲ್ಲೇ ತನ್ನ ಜೀವನದ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗ್ತಿದೆ. ಅದು ಕೂಡ ಮತ್ತೊಬ್ಬ ವಿದೇಶಿ ನಟಿಯೊಂದಿಗೆ. ಹೌದು, ನತಾಶ ಡಿವೋರ್ಸ್ ಬಳಿಕ ಹಾರ್ದಿಕ್ ಮದುವೆ ಆದ್ರೂ ಭಾರತೀಯಳನ್ನೇ ಎರಡನೇ ಮದುವೆ ಆಗ್ಬೋದು ಅಂತಾ ಫ್ಯಾನ್ಸ್ ಅಂದ್ಕೊಂಡ್ರು.. ಆದ್ರೆ ಫ್ಯಾನ್ಸ್ ಲೆಕ್ಕಾಚಾರ ಇಲ್ಲೂ ಉಲ್ಟಾ ಆಗಿದೆ.. ಇದೀಗ ಅಮೆರಿಕನ್ ಮಾಡೆಲ್, ನಟಿ ಕೈಲಿ ಜೆನ್ನರ್ನ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಪಾಂಡ್ಯ ಮನ ಗೆದ್ದ ಸುಂದರಿ ಕೈಲಿ ಜೆನ್ನರ್ ಯಾರು?
ಅಂದ್ಹಾಗೆ ಈ ಕೈಲಿ ಜೆನ್ನರ್ ಅಮೆರಿಕದ ನಟಿ.. ಉದ್ಯಮಿ ಹಾಗೇ ಟಿವಿ ಸ್ಟಾರ್. 27 ವರ್ಷದ ಈಕೆ ಜಗತ್ತಿನ ಸೌಂದರ್ಯ ಲೋಕದ ರಾಣಿಯರಲ್ಲಿ ಒಬ್ಬಳು.. ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡಿದ್ದಾಳೆ.. 2007ರಲ್ಲಿ ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯಾನ್ಸ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕೈಲಿ, ಹಲವು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್ ಕೈಲಿ.. ಕೊಹ್ಲಿ ದಾಖಲೆ ಉಡೀಸ್!
ಕೈಲಿ ಜೆನ್ನರ್ ಜಗಮೆಚ್ಚಿದ ಸುಂದರಿ.. ಆಕೆಯ ಮೈಮಾಟಕ್ಕೆ ಮನಸೋಲದವರೇ ಇಲ್ಲ.. ಈ ಬ್ಯೂಟಿ ನಟನೆ, ಉದ್ಯಮ, ಮಾಡೆಲಿಂಗ್ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್.. ಕೈಲಿ ಜೆನ್ನರ್ ಮುಂದೆ, ವಿರಾಟ್ ಕೊಹ್ಲಿಯೂ ಲೆಕ್ಕಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಕೈಲಿಗೆ, ವಿಶ್ವದಲ್ಲೇ ಅತಿ ಹೆಚ್ಚು ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ 4ನೇ ವ್ಯಕ್ತಿ ಎನಿಸಿಕೊಂಡಿದ್ದಾಳೆ. ಬರೋಬ್ಬರಿ 395 ಮಿಲಿಯನ್ ಫಾಲೋವರ್ಗಳನ್ನ ಹೊಂದಿದ್ದಾಳೆ. ಮಹಿಳೆಯರ ಪೈಕಿ 2ನೇ ಅತಿ ಹೆಚ್ಚು ಫಾಲೋವರ್ ಹೊಂದಿರುವವರು ಈಕೆಯ ವೈಯಕ್ತಿಕ ಜೀವನ ಮತ್ತಷ್ಟು ಇಂಟ್ರೆಸ್ಟಿಂಗ್.
27 ವರ್ಷ.. ಎರಡು ಮಕ್ಕಳ ತಾಯಿ ಕೈಲಿ ಜೆನ್ನರ್!
ಕೈಲಿ ಜೆನ್ನರ್ ಗೆ 27 ವರ್ಷ.. ಆಕೆ ಇನ್ನೂ ಸಿಂಗಲ್ ಅಂತಾ ನೀವು ಅಂದ್ಕೊಂಡಿರ್ಬೋದು.. ಆದ್ರೆ ಆಕೆ ಎರಡು ಮಕ್ಕಳ ತಾಯಿ.. ಕೈಲಿ ಜೆನ್ನರ್, ರಾಪರ್ ಟ್ರಾವಿಸ್ ಸ್ಕಾಟ್ ಎನ್ನುವರನ್ನು 2017ರಲ್ಲಿ ಕೈಹಿಡಿದಿದ್ರು.. ಇವರಿಬ್ಬರ ವೈವಾಹಿಕ ಜೀವನಕ್ಕೆ ಪ್ರತಿರೂಪವಾಗಿ ಇಬ್ಬರು ಮಕ್ಕಳಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, 2019ರಲ್ಲಿ ಬೇರ್ಪಟಿದ್ದ ಈ ಜೋಡಿ, 2021ರಲ್ಲಿ ಮತ್ತೆ ಒಂದಾಗಿದ್ದರು. ಈ ವೇಳೆ ಮತ್ತೆ 2022ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ರು.. ಅದಾದ್ಮೇಲೆ ಮತ್ತೆ ಈ ಜೋಡಿ ಬೇರ್ಪಟ್ಟರು.. ಬಳಿಕ ಕೈಲಿ ಜೆನ್ನರ್, ಅಮೆರಿಕನ್ ನಟ ತಿಮೋತಿ ಚಾಲಮೆಟ್ ಜೊತೆ ರಿಲೇಷನ್ನಲ್ಲಿದ್ದಾರೆ ಎನ್ನಲಾಗ್ತಿದೆ.
ಒಂದಾಗುತ್ತಾರಾ ಕೈಲಿ ಪಾಂಡ್ಯ?
ಅಂದ್ಹಾಗೆ ಕೈಲಿ ಜೆನ್ನರ್ ಹಾಗೂ ಪಾಂಡ್ಯ ಮದುವೆ ಆಗೋ ಬಗ್ಗೆ ಇವರಿಬ್ಬರು ಎಲ್ಲೂ ಹೇಳಿಕೊಂಡಿಲ್ಲ.. ಹಾರ್ದಿಕ್ ಪಾಂಡ್ಯ ಹಾಗೂ ಕೈಲಿ ಜೆನ್ನರ್ ಲೈಫ್ನಲ್ಲಿ ಬಹುಪಾಲು ಸಾಮ್ಯತೆ ಇದೆ. ಹೀಗಾಗಿ ಇವರಿಬ್ಬರು ಐಪಿಎಲ್ ಆರಂಭಕ್ಕೂ ಮುನ್ನವೇ ಮದುವೆ ಆಗ್ತಾರೆ ಅನ್ನೋ ಗಾಸಿಪ್ ಹರಿದಾಡುತ್ತಿದೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಒಬ್ಬರನ್ನೊಬ್ಬರು ಮಾಡಿಲ್ಲ.. ಆದ್ರೂ ಇವರು ಮದುವೆ ಆಗ್ತಾರೆ ಅನ್ನೋ ಚರ್ಚೆ ಹುಟ್ಟಿಕೊಂಡಿದ್ದು ಯಾಕೆ ಅನ್ನೋದು ಮಿಲಿಯಲ್ ಡಾಲರ್ ಪ್ರಶ್ನೆಯಾಗಿದೆ.. ನಿಜಕ್ಕೂ ಮದುವೆ ಆಗ್ತಾರಾ? ಈ ಬಗ್ಗೆ ಕೈಲಿ ಹಾಗೂ ಪಾಂಡ್ಯ ಸ್ಪಷ್ಟನೆ ನೀಡ್ತಾರಾ ಅಂತಾ ಕಾದುನೋಡ್ಬೇಕು.