Byv 150 ಕೋಟಿ ಆಮಿಷಕ್ಕೆ ಟ್ವಿಸ್ಟ್.. ವಿಜಯೇಂದ್ರ ಬೆನ್ನಿಗೆ ನಿಂತ್ರಾ ಯತ್ನಾಳ್‌? – ‘ಕೈ’ ಆರೋಪಕ್ಕೆ BJP ತಿರುಗುಮಂತ್ರ!

Byv 150 ಕೋಟಿ ಆಮಿಷಕ್ಕೆ ಟ್ವಿಸ್ಟ್.. ವಿಜಯೇಂದ್ರ ಬೆನ್ನಿಗೆ ನಿಂತ್ರಾ ಯತ್ನಾಳ್‌? – ‘ಕೈ’ ಆರೋಪಕ್ಕೆ BJP ತಿರುಗುಮಂತ್ರ!

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇರುತ್ತೆ.. ನೂರಾರು ಕೋಟಿ ಅವ್ಯವಹಾರ ಮಾಡಿದ್ದಾರೆ ಅಂತ ಒಬ್ಬರ ಮೇಲೋಬ್ಬರು ಮಾಡುತ್ತಾ ಇರ್ತಾರೆ. ಈಗ ಮತ್ತೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಕೋಟಿ ಕೋಟಿ ಆರೋಪ ಸದ್ದು ಮಾಡಿದೆ. ಆರೋಪ ಮಾಡಿದವರ ವಿರುದ್ಧವೇ ಆರೋಪ ಹೊತ್ತವರು ವಾಗ್ದಾಳಿ ನಡೆಸಿದ್ದಾರೆ. ಹಾಗಿದ್ರೆ ಏನಿದು ಆರೋಪ? ಯಾರ ಮೇಲೆ ಏನು ಆರೋಪ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಈ ಸಲನೂ RCBಯದ್ದೇ ಕಪ್.. ಸ್ಮೃತಿ ತಂಡಕ್ಕೆ ಮತ್ತೆ ನಾಲ್ವರ ಶಕ್ತಿ! – ಸ್ಲಂ ಗರ್ಲ್ ಸಿಮ್ರಾನ್ ಸಿಕ್ಕಾಪಟ್ಟೆ ಕಾಸ್ಟ್ಲಿ 

ಬಿ.ವೈ ವಿಜಯೇಂದ್ರ  ವಿರುದ್ಧ ಕಾಂಗ್ರೆಸ್‌ ಮಾಡಿರುv 150 ಕೋಟಿ ಆಫರ್ ವಿಚಾರಕ್ಕೆ  ಇದೀಗ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಅಂದಹಾಗೇ ಕಳೆದ ಶುಕ್ರವಾರ ವಕ್ಫ್ ವಿಚಾರವಾಗಿ ಸದನದಲ್ಲಿ ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದರು. ವಕ್ಫ್ ಹಗರಣದ ಬಗ್ಗೆ ಧ್ವನಿ ಎತ್ತದಂತೆ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವನ್ನು ಬಿಜೆಪಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒಡ್ಡಿದ್ದರು ಎಂದು ಹೇಳಿದ್ದರು. ಈ ಬಗ್ಗೆ ಅನ್ವರ್  ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಆದ್ರೆ ಈ ಆರೋಪ ಕಾಂಗ್ರೆಸ್‌ ಸರ್ಕಾರಕ್ಕೆ ಉಲ್ಟಾ ಆಗಿದೆ.

150 ಕೋಟಿ ರೂ. ಆಮಿಷ .. ಸಿಎಂಗೆ ಬಿವೈವಿ ಸವಾಲ್

ತನ್ನ ಮೇಲಿನ ₹ 150 ಕೋಟಿ ಆಮಿಷ ಆರೋಪಕ್ಕೆ ಸಂಂಧಿಸಿದಂತೆ ಅಧಿವೇಷನದಲ್ಲಿ ವಿಜಯೇಂದ್ರ ಆಡಳಿತ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ತನ್ನ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಗಂತ ತನಗೆ ಅವರ ಮೇಲೆ ಆಕ್ರೋಷವಿಲ್ಲ, ಬದಲಿಗೆ ಅನುಕಂಪ ಹುಟ್ಟುತ್ತಿದೆ, ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಮುಖ್ಯಮಂತ್ರಿಯವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬೇರೆಯವರು ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಿಎಂ ಅವರಿಗೆ ಸಿಬಿಐ ಬಗ್ಗೆ ಬಹಳ ವಿಶ್ವಾಸ ಇದೆ. ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋಟಿ ರೂ. ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ ಎಂದು ವಿಜಯೇಂದ್ರ ಆಗ್ರಹಿಸಿದರು. Byte flow..

ಕಾಂಗ್ರೆಸ್‌ಗೆ ತಿರುಗು ಮಂತ್ರ ಹಾಕಿದ ಅನ್ವರ್

ವಿಜಯೇಂದ್ರ ನನಗೆ 150 ಕೋಟಿ ರೂ. ಆಫರ್ ಮಾಡಿರಲಿಲ್ಲ ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸ್ಫಷ್ಟಪಡಿಸಿದ್ದಾರೆ. ವಿಜಯೇಂದ್ರ ನನ್ನ ಮನೆಗೆ ಬರಲೇ ಇಲ್ಲ, ನನ್ನ ಮನೆಯೂ ಅವರಿಗೆ ಗೊತ್ತಿಲ್ಲ. ನಮ್ಮ ಪಕ್ಷದ ಕಚೇರಿಗೆ ಬಂದಾಗ ವಿಜಯೇಂದ್ರ ಮತ್ತು ನಾನು ಮಾತನಾಡಿಕೊಂಡಿದ್ದೆವು. ಆದರೆ ಅವರು 150 ಕೋಟಿ ರೂ. ಆಫರ್ ಮಾಡಿಯೇ ಇಲ್ಲ’ ಎಂದಿದ್ದಾರೆ. ಹಾಗೇ 2013ರಲ್ಲೇ ಕಾಂಗ್ರೆಸ್​​ನವರು ನಾನು ಕೇಳಿದಷ್ಟು ಹಣ ಕೊಡುವ ಸ್ಥಿತಿಯಲ್ಲಿದ್ದರು. ಇದು 2.3 ಲಕ್ಷ ಕೋಟಿ ರೂ. ಹಗರಣವಾಗಿತ್ತು. ಅದರಲ್ಲಿ ದೊಡ್ಡ ದೊಡ್ಡ ತಲೆಗಳೇ ಭಾಗಿಯಾಗಿದ್ದವು. ಅದಕ್ಕೆ ಎಲ್ಲ ಸಾಕ್ಷಿಗಳೂ ಇವೆ ಎಂದು ಅನ್ವರ್ ಆರೋಪಿಸಿದ್ದಾರೆ .

ವಿಜಯೇಂದ್ರ ಬೆನ್ನಿಗೆ ನಿಂತ ಯತ್ನಾಳ್  

ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬೆನ್ನಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಿಂತಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್‌, ಕರ್ನಾಟಕ ಮುಖ್ಯಮಂತ್ರಿಗಳು ಯಾರದ್ದೋ ಮಾತುಕೇಳಿ ಮಾತನಾಡುವುದು ಸರಿ ಅಲ್ಲ. ಅದೇ ಅನ್ವರ್ ಮಾನಿಪಾಡ್ಡಿ ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ‌ ಅಂತಾ ಹೇಳ್ತಾರೆ. ಜವಾಬ್ದಾರಿ ಸಿಎಂ‌ ಆರೋಪ ಮಾಡಬೇಕಾದರೆ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಎಂದು ಕಿಡಿಕಾರಿದ್ದಾರೆ. ಒಟ್ನಲ್ಲಿ ಕಾಂಗ್ರೆಸ್ ಮಾಡಿರೋ ಆರೋಪವೇ ಉಲ್ವಾ ಹೊಡೆದಿದೆ. 150 ಕೋಟಿ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯಾವ ಹಂತಕ್ಕೆ ಹೋಗಿ  ತಲುಪುತ್ತೆ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *