​ ಗೋಲ್ಡ್ ಸುರೇಶ್ ತುರ್ತು ನಿರ್ಗಮನ.. BBK​ ಕ್ವಿಟ್ ಮಾಡಿದ್ಯಾಕೆ ಸುರೇಶ್? – ದೊಡ್ಮನೆಗೆ ಮತ್ತೆ ಗೋಲ್ಡ್ ಎಂಟ್ರಿ?

​ ಗೋಲ್ಡ್ ಸುರೇಶ್ ತುರ್ತು ನಿರ್ಗಮನ.. BBK​ ಕ್ವಿಟ್ ಮಾಡಿದ್ಯಾಕೆ ಸುರೇಶ್? – ದೊಡ್ಮನೆಗೆ ಮತ್ತೆ ಗೋಲ್ಡ್ ಎಂಟ್ರಿ?

ಬಿಗ್ ಬಾಸ್​ ಕನ್ನಡ ಸೀಸನ್ 11ರಲ್ಲಿ ಈ ಬಾರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗ್ತಿದೆ. ಈ ಸೀಸನ್‌ನಲ್ಲಿ ಮಧ್ಯದಲ್ಲೇ ಮನೆಯಿಂದ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ, ಆರಂಭದಲ್ಲಿ ಅಬ್ಬರಿಸಿ ಬಳಿಕ ನನ್ನ ಕೈಯಲ್ಲಿ ಗೇಮ್ ಆಡಲು ಆಗ್ತಿಲ್ಲ. ಆರೋಗ್ಯ ಸಮಸ್ಯೆ ಉಂಟಾಗಿದೆ ಅಂತ ಹೇಳಿ ದೊಡ್ಮನೆಯಿಂದ ಅರ್ಧಕ್ಕೆ ಹೊರಗೆ ಹೋದ್ರು. ಇದೀಗ ಗೋಲ್ಡ್‌ ಸುರೇಶ್‌ ಬಿಗ್ ಬಾಸ್ ಆಟ ಕ್ವಿಟ್ ಮಾಡಿ​ ಹೊರಗೆ ಹೋಗಿದ್ದಾರೆ ಅಂತಾ ಕಲರ್ಸ್‌ ಕನ್ನಡದ ಪ್ರೋಮೋ ರಿಲೀಸ್‌ ಮಾಡಿತ್ತು. ಅಷ್ಟಕ್ಕೂ ಗೋಲ್ಡ್‌ ಸುರೇಶ್‌ ದೊಡ್ಮನೆಯಿಂದ ಆಚೆ ಬಂದ್ರಾ? ಅಷ್ಟಕ್ಕೂ ದೊಡ್ಮನೆಯಲ್ಲಿ ಆಗ್ತಿರೋದೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPL ಹರಾಜಿನಲ್ಲಿ KLಗೆ ಮೋಸ.. ಸ್ಟಾರ್ಕ್, ಮ್ಯಾಕ್ಸಿ, ಕಿಶನ್ ನಷ್ಟವೆಷ್ಟು? – ಸ್ಟಾರ್ಸ್ ಗೂ ಕೋಟಿ ಕೋಟಿ ಲಾಸ್ 

ದೊಡ್ಮನೆಯಲ್ಲಿ ಈ ವಾರ ಕ್ಯಾಪ್ಟನ್‌ ಆಗಿ ಗೋಲ್ಡ್‌ ಸುರೇಶ್‌ ಆಯ್ಕೆಯಾಗಿದ್ದಾರೆ.. ಭಾನುವಾರದ ಸಂಚಿಕೆ ಮುಗಿದ ಮೇಲೆ, ಬಿಗ್‌ ಬಾಸ್‌ ಗೋಲ್ಡ್ ಸುರೇಶ್ ಗೆ  ನಿಮ್ಮ ಕುಟುಂಬದ ಸದಸ್ಯರಲ್ಲಿ ತುರ್ತು ಪರಿಸ್ಥಿತಿ ಇದೆ. ಬಿಗ್ ಬಾಸ್‌ಗಿಂದ ನಿಮ್ಮ ಅಗತ್ಯತೆ ನಿಮ್ಮ ಕುಟುಂಬಸ್ಥರಿಗೆ ಹೆಚ್ಚಿದೆ. ಹೀಗಾಗಿ ತಡ ಮಾಡದೇ ಮನೆಯಿಂದ ಹೊರಡಬೇಕು ಎಂದು ಆದೇಶಿಸಿದರು. ಬಿಗ್‌ ಬಾಸ್‌ ಈ ಆದೇಶ ನೀಡುತ್ತಿದ್ದಂತೆ, ಕಣ್ಣೀರು ಹಾಕುತ್ತಾ ಮೈತುಂಬಾ ಚಿನ್ನ ಹಾಕಿಕೊಂಡು ದೊಡ್ಮನೆಯಿಂದ ಹೊರಟಿದ್ರು.. ಈ ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ಗೋಲ್ಡ್ ಸುರೇಶ್ ಹೊರ ಬಂದ ಕಾರಣ ಏನು ಅನ್ನೋದರ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.  ಸೋಷಿಯಲ್ ಮೀಡಿಯಾದಲ್ಲಿ ನಾನಾ ಪೋಸ್ಟ್‌ಗಳು ಹರಿದಾಡಿದೆ. ಗೋಲ್ಡ್ ಸುರೇಶ್ ಅವರ ತಂದೆಗೆ ಅನಾರೋಗ್ಯವಾಗಿದೆ. ಅವರ ತಂದೆ ನಿಧನರಾಗಿದ್ದಾರೆ. ಹೀಗಾಗಿ ಸುರೇಶ್​ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ ಅನ್ನೋ ಸುಳ್ಳು ಸುದ್ದಿಯನ್ನ ಹಬ್ಬಿಸಲಾಗಿತ್ತು. ಆದರೆ ಗೋಲ್ಡ್ ಸುರೇಶ್ ಅವರ ತಂದೆ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.

ಹೌದು, ಈ ಬಗ್ಗೆ ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೇನು ಆಗಿಲ್ಲ ನಾನು ಬದುಕೇ ಇದ್ದೇನೆ.. ಗೋಲ್ಡ್ ಸುರೇಶ ಮೊಳಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಆದ್ರೀಗ ಅಸಲಿ ವಿಚಾರ ರಿವೀಲ್‌ ಆಗಿದೆ. ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಆಚೆ ಹೋಗಲೇಬೇಕಾದ ಪರಿಸ್ಥಿತಿಯಿಂದ ಶೋ ಕ್ವಿಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಸುರೇಶ್ ಮನೆಯವರೇ ಬಿಗ್ ಬಾಸ್ ಟೀಮ್ ಬಳಿ ಸುರೇಶ್ ಅವರನ್ನು ಹೊರಗೆ ಕರೆಸುವಂತೆ ಕೇಳಿಕೊಂಡಿದ್ದಕ್ಕೆ ಆಟ ಕ್ವಿಟ್ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಬಿಗ್‌ ಬಾಸ್‌ ಟೀಮ್‌ ಗೋಲ್ಡ್‌ ಸುರೇಶ್‌ ಅವರಿಗೆ ಮನವರಿಕೆ ಮಾಡಿ, ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇದಕ್ಕೆಲ್ಲಾ ಸುರೇಶ್​ ಉತ್ತರ ಕೊಡಬೇಕಿದೆ.

Shwetha M

Leave a Reply

Your email address will not be published. Required fields are marked *