ರಜತ್ ತಪ್ಪು.. ಧನರಾಜ್‌ಗೆ ಶಿಕ್ಷೆ! – ದೊಡ್ಮನೆ ಜಗಳಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್!
ವೀಕೆಂಡ್ ಬಂದಾಯ್ತು.. ಕಿಚ್ಚನ ಪಂಚಾಯ್ತಿಗೆ ಕೌಂಟ್‌ಡೌನ್ ಶುರುವಾಯ್ತು.. ಈ ಶನಿವಾರ ಸುದೀಪ್ ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ.. ಯಾರ್ಯಾರಿಗೆ ಕ್ಲಾಸ್ ಕಾದಿದೆ ಅನ್ನೋದು ವೀಕ್ಷಕರ ಕುತೂಹಲ. ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ.
ಇದನ್ನೂ ಓದಿ: IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?
ಪ್ರತಿ ವಾರದಂತೆ ಕಿಚ್ಚ ಸುದೀಪ್ ಅವರು ಈ ವಾರದ ಪಂಚಾಯ್ತಿ ಆಗಮಿಸಿದ್ದಾರೆ. ಇಡೀ ವಾರ ಮನೆಯಲ್ಲಾದ ಕೆಲವು ಗಲಾಟೆ, ಜಗಳಗಳಿಗೆ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಕಳೆದ ವಾರವೇ ಕಿಚ್ಚ ಸುದೀಪ್ ಅವರು ಕೆಲವರಿಗೆ ಕಿವಿ ಹಿಂಡುವ ಕೆಲಸ ಮಾಡಿದ್ದರು. ತ್ರಿವಿಕ್ರಮ್ ಅವರು ಬಿಗ್ ಬಾಸ್ ನಿಯಮ ಮೀರಿ ಮಾತನಾಡಿದ್ದಕ್ಕೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರ ರಜತ್, ಧನರಾಜ್ ಮಧ್ಯೆ ಫೈಟ್ ನಡೆದಿತ್ತು. ಕೈ, ಕೈ ಮಿಲಾಯಿಸೋ ಘಟನೆ ನಡೆದಿರೋದು ಸುದೀಪ್ ಕೋಪಕ್ಕೆ ಕಾರಣವಾಗಿದೆ.
ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಾನ್ಫಿಡೆನ್ಸ್‌ನಿಂದ ಆಡುತ್ತಿರುವ ಆಟಗಾರರನ್ನ ಬೆನ್ನು ತಟ್ಟಿ ಬೆಳೆಸುತ್ತೀವಿ ನಾವು. ಅದೇ ಕಾನ್ಫಿಡೆನ್ಸ್ ಅತಿಯಾಗಿ ದಿಕ್ಕು ತಪ್ಪಿದರೆ ಸ್ವಲ್ಪ ತಲೆ ಮೇಲೆ ತಟ್ಟಿ ಸೈಡಿಗೆ ಕೂರಿಸುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ ಮನೆಯ ವಾತಾವರಣ ಹಾಳು ಮಾಡಿದ ರಜತ್ ಹಾಗೂ ಧನರಾಜ್ ಗೆ ಶಿಕ್ಷೆಯನ್ನೂ ನೀಡಿದ್ದಾರೆ ಸುದೀಪ್. ರಜತ್ ನ ಜೈಲಿಗೆ ಹಾಕಿ, ಧನರಾಜ್ ಅದನ್ನ ಎಳೆದುಕೊಂಡು ಹೋಗುವಂತಹ ಶಿಕ್ಷೆ ನೀಡಿದ್ದಾರೆ.