ಬೆಡ್‌ರೂಮ್‌ನಲ್ಲಿ ಅಲ್ಲು ಅರ್ಜುನ್ ಅರೆಸ್ಟ್ – ಪತ್ನಿಗೆ ಮುತ್ತು ಕೊಟ್ಟು ಖಾಕಿ ಜೊತೆ ನಡೆದ ಪುಷ್ಪರಾಜ್
ತಗ್ಗೋದಿಲ್ಲ ಅಂತಾ ತೆರೆ ಮೇಲೆ ಅಬ್ಬರಿಸಿದ ಅಲ್ಲು ಅರ್ಜುನ್ ರಿಯಲ್ ಲೈಫ್‌ನಲ್ಲಿ ಪೊಲೀಸರ ಮುಂದೆ ತಗ್ಗಿದ್ದಾರೆ. ಪುಷ್ಪ 2 ಮೂವಿಯ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಪ್ರಾಣ ಬಿಟ್ಟಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ಹೈದರಾಬಾದ್ನ ಚಿಕ್ಕಡಪಲ್ಲಿ ಪೊಲೀಸರು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಪ್ರಯೋಗ.. ಡ್ರೋನ್ ಪ್ರತಾಪ್ ಅರೆಸ್ಟ್! – ಬುದ್ಧಿ ಕಲಿಯೋದೇ ಇಲ್ವಾ ಪ್ರತಾಪ್?
ಅಲ್ಲು ಅರ್ಜುನ್ ಮನೆಯಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಬಂಧಿಸಲೆಂದು ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಬಂದಾಗ ಅವರ ಕುಟುಂಬಸ್ಥರು ಎಲ್ಲರೂ ಸೇರಿದ್ದರು. ಅಲ್ಲು ಅರ್ಜುನ್ ಅವರ ತಂದೆ, ಪತ್ನಿ ಹಾಗೂ ಸಹೋದರ ಸೇರಿದಂತೆ ಎಲ್ಲರೂ ಜೊತೆಯಲ್ಲೇ ಇದ್ದರು. ಪೊಲೀಸರು ಬಂದರೂ ಕೂಡಾ ಅಲ್ಲು ಅರ್ಜುನ್ ಕಾಫಿ ಕುಡಿಯುತ್ತಿದ್ದರು. ಈ ವೇಳೆ ಬಟ್ಟೆ ಬದಲಿಸಿಕೊಂಡು ಬರುತ್ತೇನೆ ಅಂತಾ ನಟ ಹೇಳಿದ್ದಾರೆ. ಪೊಲೀಸರು ಅದಕ್ಕೆ ಒಪ್ಪಿಗೆ ನೀಡದೇ ನಮ್ಮ ಜೊತೆಯಲ್ಲೇ ಬರಬೇಕೆಂದು ಹೇಳಿದರು. ನಂತರ ಹೆಂಡತಿಗೆ ಮುತ್ತು ಕೊಟ್ಟ ಅಲ್ಲು ಅರ್ಜುನ್, ಪೊಲೀಸರ ಜೊತೆಯಲ್ಲೇ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ತೆರಳಿದರು.
ಅಲ್ಲು ಅರ್ಜುನ್‌ನ್ನ ಅರೆಸ್ಟ್ ಮಾಡೋಕೆ ಕಾರಣ ಡಿಸೆಂಬರ್ 4 ರಂದು ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದ ಘಟನೆ.. ಆವತ್ತು ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಿದ್ದರು. ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಇದೆ. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅರೆಸ್ಟ್ ಆಗೋ ಭಯದಿಂದ ಹೈದರಾಬಾದ್ ಕೋರ್ಟ್ಗೆ ನಟ ಅರ್ಜಿ ಸಲ್ಲಿಸಿದ್ದರು. ನಟ ಅಲ್ಲು ಅರ್ಜುನ್.. ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್.. ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗ ಅಲ್ಲು ಅರ್ಜುನ್ ಅವರನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.