ರಜತ್ ರಾಂಗ್.. ಧನು ರಾಕ್.. – ಧನರಾಜ್ ಗುಗ್ಗು ಅಲ್ಲ ಗೊತ್ತಾಯ್ತಾ?
BBKಯಲ್ಲಿ ಕೈ ಮಾಡಿದ ರಜತ್ OUT?

ರಜತ್ ರಾಂಗ್.. ಧನು ರಾಕ್.. – ಧನರಾಜ್ ಗುಗ್ಗು ಅಲ್ಲ ಗೊತ್ತಾಯ್ತಾ?BBKಯಲ್ಲಿ ಕೈ ಮಾಡಿದ ರಜತ್ OUT?

ಬಿಗ್‌ ಬಾಸ್‌ ಮನೆ ಮತ್ತೆ ಅಕ್ಷರಶಃ ರಣರಂಗವಾಗಿದೆ. ರಜತ್‌ ಕಿಶನ್‌ ಹಾಗೂ ಧನರಾಜ್‌ ಆಚಾರ್‌ ನಡುವಿನ ಜಗಳ ತಾರಕಕ್ಕೇರಿದೆ.. ಮೊನ್ನೆ ಮೊನ್ನೆಯಷ್ಟೇ ಧನರಾಜ್‌ ಹಾಗೂ ರಜತ್‌ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಇದೀಗ ಮತ್ತೆ ಕಳಪೆ-ಉತ್ತಮ ಪ್ರಕ್ರಿಯೆ ಸಮಯದಲ್ಲಿ ಇದು ಬೇರೆ ಮಟ್ಟಕ್ಕೆ ಹೋಗಿದೆ. ಕಳಪೆ ಕೊಟ್ಟ ಕೂಡಲೇ ರಜತ್ ಕಿಶನ್ ಫುಲ್ ರಾಂಗ್ ಆಗಿದ್ದಾರೆ. ಇದರಿಂದ ಧನರಾಜ್‌ಗೆ ಹೊಡೆಯೋಕೆ ಹೋಗಿದ್ದಾರೆ ಕಿಶನ್‌. ಹಾಗಾದ್ರೆ ರಜತ್‌ ಧನರಾಜ್‌ ಗೆ ಹೊಡೆದೇ ಬಿಟ್ರಾ? ದೊಡ್ಮನೆಯಿಂದ ರಜತ್‌ ಆಚೆ ಬಂದ್ರಾ? ಅಷ್ಟಕ್ಕೂ ಬಿಗ್‌ ಬಾಸ್‌ ಮನೆಯಲ್ಲಿ ಆಗಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:18ನೇ ವಯಸ್ಸಿಗೆ ಚೆಸ್ ಚಾಂಪಿಯನ್ ಗುಕೇಶ್ – ವಿಶ್ವ ಚೆಸ್ ಸಾಮ್ರಾಟ ಪಟ್ಟಕ್ಕೇರಿದ ಭಾರತದ ಗುಕೇಶ್

ಬಿಗ್ ಬಾಸ್ ಕನ್ನಡ ಸೀಸನ್‌ 11ಮಲ್ಲಿ ಮೂರನೇ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ  ರಜತ್ ಕಿಶನ್ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ರು. ದೊಡ್ಮನೆಗೆ ಕಾಲಿಡುತ್ತಿದ್ದಂತೆ ಧೂಳ್ ಎಬ್ಬಿಸಿದ ಕಿಶನ್ ನಿಜಕ್ಕೂ ಟಫ್‌ ಸ್ಪರ್ಧಿ ಎಂದು ಮನೆ ಮಂದಿ ಮಾತ್ರವಲ್ಲ ವೀಕ್ಷಕರೂ ಕೂಡ ಅಂದುಕೊಂಡಿದ್ದರು.. ಆದರೆ ದಿನ ಕಳೆಯುತ್ತಿದ್ದಂತೆ ರಜತ್‌ ಗೆ ಬರೀ ಮಾತೇ ಮುಳುವಾಗಿದೆ.. ಆರಂಭದಲ್ಲೇ ‘ಗೋಲ್ಡ್’ ಸುರೇಶ್‌ ಜೊತೆಗೆ ಕುಸ್ತಿಗೆ ಬಿದ್ದಿದ್ದರು. ಅದಾದ್ಮೇಲೆ ಉಗ್ರಂ ಮಂಜು ಜೊತೆ ಕಾಲ್ಕೆರ್ಕೊಂಡು ಜಗಳಕ್ಕೆ ಬರ್ತಿದ್ರು.. ಇದೀಗ ರಜತ್‌ ಧನರಾಜ್‌ ಅನ್ನ ಟಾರ್ಗೆಟ್‌ ಮಾಡಿದಂತೆ ಇದೆ.

ಹೌದು, ಮೊನ್ನೆಯಷ್ಟೇ ರಜತ್ ಮತ್ತು ಧನರಾಜ್ ಸಿಕ್ಕಾಪಟ್ಟೆ ಜಗಳಾಡಿದ್ರು. ಧನರಾಜ್ ಒಂದು ಹೆಜ್ಜೆ ಮುಂದೆ ಹೋಗಿದ್ರು. ರಜತ್ ಗಲ್ಲ ಹಿಡಿದು ತಟ್ಟಿರೋದು ಇದೆ. ಇದರಿಂದ ಆ ದಿನ ವಾತಾವರಣ ಫುಲ್ ಹೀಟ್ ಆಗಿತ್ತು. ರಜತ್ ಮತ್ತು ಧನು ಕಿತ್ತಾಟವನ್ನ ಉಗ್ರಂ ಮಂಜು ಹಾಗೂ ಕ್ಯಾಪ್ಟನ್ ಗೌತಮಿ ಬಿಡಿಸಿದ್ದರು. ಇದೀಗ ಮತ್ತೊಮ್ಮೆ  ದೊಡ್ಮನೆಯಲ್ಲಿ ಧನರಾಜ್ ಆಚಾರ್ ಹಾಗೂ ರಜತ್ ಕಿಶನ್ ಜಗಳ ತಾರಕಕ್ಕೇರಿದೆ. ಕಳೆಪ-ಉತ್ತಮ ಪ್ರಕ್ರಿಯೆ ಸಮಯದಲ್ಲಿ ಇದು ಬೇರೆ ಮಟ್ಟಕ್ಕೆ ಹೋಗಿದೆ. ಕಳಪೆ ಕೊಟ್ಟ ಕೂಡಲೇ ರಜತ್ ಕಿಶನ್ ಸಿಟ್ಟಾಗಿದ್ದಾರೆ.. ಮಾತಿಗೆ ಮಾತು ಬೆಳೆದು.. ಈಗ ಕೈ ಕೈ ಮಿಲಾಯಿಸೋ ಮಟ್ಟಕ್ಕೆ ಈ ಜಗಳ ಬೆಳೆದಿದೆ.

ರಜತ್ ಕೈ ಮುರಿತಿನಿ ಅಂತಾರೆ. ಕಾಲು ಮುರಿತಿನ ಅಂತಾರೆ. ಅದಕ್ಕೇನೆ ಈ ವರ್ತನೆಗೆ ನಾನು ರಜತ್‌ಗೆ ಕಳಪೆ ಕೊಡ್ತೀನಿ ಅಂತಾ ಧನರಾಜ್ ಹೇಳ್ತಾರೆ.  ಧನರಾಜ್ ಕಳಪೆ ಕೊಟ್ಟಿದ್ದೇ ತಡ, ರಜತ್ ಕಿಶನ್ ರಾಂಗ್ ಆದ್ರು. ನೀನು ನನಗೆ ಮೃದುವಾಗಿಯೇ ಹೊಡೆದೆ ಏನೋ? ಎರಡೂ ಗಲ್ಲ ಹಿಡಿದು ಜೋರಾಗಿಯೇ ಹೊಡೆದಿರುವೆ, ಇದು ಸರೀನಾ? ನೀನು ಸರಿಯಾಗಿ ಇದಿಯಾ?. ನಾನು ಸರಿ ಇಲ್ಲ. ನನ್ನ ಬಗ್ಗೆ ನಿನಗೆ ಗೊತ್ತೇ ಇಲ್ಲ. ನಾನು ನಿನ್ನ ಹೊಡೆದೇ ಹೊರಗೆ ಹೋಗೋದು ಅಂತ ರಜತ್ ಕೆಂಡಕಾರಿದ್ದಾರೆ. ಯಾವಾಗ್ಲೂ ಕಣ್ಣೀರು ಹಾಕ್ತಿದ್ದ ಧನರಾಜ್‌ ಈ ಬಾರಿ ಸುಮ್ನೆ ಇರ್ಲಿಲ್ಲ.. ರಜತ್‌ ಮಾತಿಗೆ ಕೋಪಿಸಿಕೊಂಡ ಧನು, ಅದೇನೋ ಮುಕ-ಮೂತಿ ಹೊಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎನ್ನುತ್ತಾರೆ. ಅದಕ್ಕೆ ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗ್ತಾರೆ. ಅಷ್ಟಕ್ಕೂ ಸುಮ್ಮನಾಗದ ಧನು ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ. ರೊಚ್ಚಿಗೇಳುವ ರಜತ್, ಧನು ಮೇಲೆ ಕೈಮಾಡಲು ಹೋಗಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ರಜತ್‌ ಹಾಗೂ ಧನರಾಜ್‌ ಬಳಿ ಓಡಿ ಹೋಗಿದ್ದಾರೆ..

ಧನು ಆಕಾರ ನೋಡಿ ರಜತ್ ಇಷ್ಟು ದಿನ ವ್ಯಂಗ್ಯವಾಡ್ತಿದ್ರು. ಮನುಷ್ಯ ಆಕಾರದಲ್ಲಿ ಸ್ಟ್ರಾಂಗ್ ಅಲ್ಲ, ಮನಸ್ಸಲ್ಲೂ ಸ್ಟ್ರಾಂಗ್ ಅನ್ನೋದನ್ನ ಕೊನೆಗೂ ಧನರಾಜ್ ತೋರಿಸಿಕೊಟ್ಟಿದ್ದಾರೆ. ನಾನು ಬಂದಿರೋದು ಆಡೋದಕ್ಕೆ ಅನ್ನೋದನ್ನ ಮನೆಮಂದಿಗೂ ತೋರಿಸಿಕೊಟ್ಟಿದ್ದಾರೆ ಧನರಾಜ್. ಇಲ್ಲಿ ದೊಡ್ಡ ದೇಹ ಇದ್ರೆ ಟಾಸ್ಕ್ ವಿನ್, ಬಿಗ್‌ಬಾಸ್ ವಿನ್ ಅನ್ನೋ ಮಾತಿಗೆ ಟಾಂಗ್ ಕೊಟ್ಟಿದ್ದಾರೆ ಧನರಾಜ್.

ಧನರಾಜ್ ಜೊತೆ ರಜತ್‌ ಈ ರೀತಿ ವರ್ತನೆ ತೋರಿದ್ದಕ್ಕೆ ವೀಕ್ಷಕರು ಕೂಡ ಕಿಡಿ ಕಾರ್ತಿದ್ದಾರೆ.. ರಜತವರಿಗೆ ನಾಮಿನೇಟ್ ಅಥವಾ ಕಳಪೆ ಕೊಟ್ಟರೆ ಸಹಿಸುವುದಕ್ಕೆ ಆಗುವುದಿಲ್ಲ.. ಬಿಗ್‌ ಬಾಸ್‌ ಮನೆಯಲ್ಲಿ ಗುಂಡಾ ವರ್ತನೆ ಏಕೆ? ರಜತ್‌ ನ ದೊಡ್ಮನೆಯಿಂದ ಆಚೆ ಹಾಕಿ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *