18ನೇ ವಯಸ್ಸಿಗೆ ಚೆಸ್ ಚಾಂಪಿಯನ್ ಗುಕೇಶ್ – ವಿಶ್ವ ಚೆಸ್ ಸಾಮ್ರಾಟ ಪಟ್ಟಕ್ಕೇರಿದ ಭಾರತದ ಗುಕೇಶ್

18ನೇ ವಯಸ್ಸಿಗೆ ಚೆಸ್ ಚಾಂಪಿಯನ್ ಗುಕೇಶ್ – ವಿಶ್ವ ಚೆಸ್ ಸಾಮ್ರಾಟ ಪಟ್ಟಕ್ಕೇರಿದ ಭಾರತದ ಗುಕೇಶ್

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಚೀನಾದ ಡಿಂಗ್ ಲಿರೆನ್​ನನ್ನು ಸೋಲಿಸುವ ಮೂಲಕ ತಮಿಳುನಾಡು ಮೂಲದ 18ನೇ ವರ್ಷದ ಗುಕೇಶ್​​ ವಿಶ್ವ ಚೆಸ್​​ ಸಾಮ್ರಾಟದ ಪಟ್ಟಕ್ಕೇರಿದ್ದಾರೆ.

ಇದನ್ನೂ ಓದಿ:RCBಗೆ ಬೆಸ್ಟ್ ಫಿನಿಶರ್ ಯಾರು? – DK ಬಾಸ್ ಸ್ಥಾನಕ್ಕೆ ಮೂವರ ರೇಸ್

ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್​ರನ್ನು ಸೋಲಿಸುವ ಮೂಲಕ ಗುಕೇಶ್, ವಿಶ್ವ​ ಚಾಂಪಿಯನ್​ ಆದರು. ಈ ಗೆಲುವಿನ ಮೂಲಕ ಗುಕೇಶ್, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶ್ವನಾಥ್​​ ಆನಂದ್​ ಬಳಿಕ ಚದುರಂಗದ ಕಿಲಾಡಿ ಆದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಗುಕೇಶ್​​ಗೆ ಸೇರಿದೆ. ಡಿ.ಗುಕೇಶ್​. ಮೂಲತಃ ತಮಿಳುನಾಡಿನವರು. ತಮ್ಮ 7ನೇ ವಯಸ್ಸಿಗೆ ಚೆಸ್​​ ಆಡಲು ಶುರುಮಾಡಿದ ಗುಕೇಶ್​, 12ನೇ ವಯಸ್ಸಿಗೆ ಚೆಸ್‌ ಗ್ರ್ಯಾಂಡ್ ಮಾಸ್ಟರ್​​​​​​​ ಆಗಿ ದೊಡ್ಡ ಸಾಧನೆ ಮಾಡಿದರು. ಇದೀಗ 18ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

suddiyaana

Leave a Reply

Your email address will not be published. Required fields are marked *