ಜನವರಿಯೊಳಗೆ ಸಿಎಂ ಆಗ್ತಾರಾ ಡಿಕೆಶಿ? – ಒದ್ದು ಸಿಎಂ ಸ್ಥಾನ ಕಿತ್ತುಕೊಳ್ತಾರಾ DCM?
ಬಂಡೆ ಜ್ಯೋತಿಷಿ ಭವಿಷ್ಯ ಬಿಚ್ಚಿಟ್ಟ ಅಶೋಕ್

ಜನವರಿಯೊಳಗೆ ಸಿಎಂ ಆಗ್ತಾರಾ ಡಿಕೆಶಿ? – ಒದ್ದು ಸಿಎಂ ಸ್ಥಾನ ಕಿತ್ತುಕೊಳ್ತಾರಾ DCM?ಬಂಡೆ ಜ್ಯೋತಿಷಿ ಭವಿಷ್ಯ ಬಿಚ್ಚಿಟ್ಟ ಅಶೋಕ್

ಸಿಎಂ ಚೇಂಜ್ ಆಗ್ತಾರೆ? ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿದು ಡಿಕೆ ಶಿವಕುಮಾರ್ ಆಗ್ತಾರೆ ಅನ್ನೋ ಮಾತುಗಳು ದಿನ ನಿತ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬೋರೋ ಮಾತು. ಈ ನಡುವೆ ಅಧಿಕಾರ ಹಂಚಿಕೆ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದ್ರೆ ಡಿಕೆಶಿ ಅವರು ಪಕ್ಕಾ ಪ್ಲ್ಯಾನ್ ಮಾಡೇ ಸಿಎಂ ಕುರ್ಚಿಗೆ ಸ್ಕೆಚ್ ಹಾಕಿದಂತೆ ಕಾಣುತ್ತಿದೆ.. ಮುಡಾ ಹಗರಣ ಕೇಳಿ ಬಂದಾಗ ಸಿಎಂ ಸಿದ್ದರಾಮಯ್ಯ ಪರವಾಗಿ ಮತನಾಡಿದ ಡಿಕೆಶಿ, ಒಳಗೊಳಗೆ ಮಸಲತ್ತು ಮಾಡಿದ್ದಾರಾ ಅನ್ನೋ ಅನುಮಾನ ಮೂಡಿದೆ. ಈ ನಡುವೆ ಜ್ಯೋತಿಷಿರು ಹೇಳಿದ ಮಾತು ರಾಜ್ಯರಾಜಕೀಯದಲ್ಲಿ ಮತ್ತಷ್ಟು ಹಲ್‌ಚಲ್ ಎಬ್ಬಿಸಿದೆ.. ಹಾಗಿದ್ರೆ ಜ್ಯೋತಿಷಿಗಳು ಹೇಳಿದ್ದೇನು?, ಆರ್ ಅಶೋಕ್ ಮಾಡಿದ ಆರೋಪವೇನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCBಗೆ ಬೆಸ್ಟ್ ಫಿನಿಶರ್ ಯಾರು? – DK ಬಾಸ್ ಸ್ಥಾನಕ್ಕೆ ಮೂವರ ರೇಸ್

ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಗ್ಯಾರಂಟಿ ಇಲ್ಲದಂತಾಗಿದೆ. ಯಾಕಂದ್ರೆ ಆ ಕುರ್ಚಿ ಮೇಲೆ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಕಣ್ಣು ಬಿದ್ದಿದೆ. ಸಿಎಂ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿ ಡಿಕೆಶಿಯಿದ್ರು, ಅದು ಅಷ್ಟು ಸುಲಭವಾಗಿ ಅವರ ಕೈಗೆ ಸಿಗೋದಿಲ್ಲ. ಅದಕ್ಕೆ ನೂರಾನು ವಿಘ್ನಗಳಿವೆ. ಈ ನಡುವೆ ಡಿಕೆಶಿಗೆ ಜ್ಯೋತಿಷಿಯೊಬ್ಬರು ಸಲಹೆಯನ್ನ ನೀಡಿದ್ದು, ರಾಜಕೀಯ ರಂಗದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಈ ವಿಚಾರ ಬೆಳಗಾವಿಯಲ್ಲಿ ನಡೆಯುತ್ತಿರೋ ಚಳಿಗಾಲದ ಅಧಿವೇಷನದ ವೇಳೆ ಹೊರ ಬಿದ್ದಿದೆ. ಅದನ್ನ ವಿಪಕ್ಷ ನಾಯಕ ಆರ್ ಅಶೋಕ್ ಬಹಿರಂಗ ಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಎಸ್ ಎಂ ಕೃಷ್ಣ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಡಿಕೆ ಶಿವಕುಮಾರ್, ಎಸ್‌ಎಂಕೆ ಜೊತೆಗಿನ ಹಳೆಯ ನೆನೆಪುಗಳನ್ನ ಮೆಲಕು ಹಾಕುತ್ತಿದ್ದರು.. ಎಸ್‌ಎಂ ಕೃಷ್ಣ ಅವರ ಜೊತೆಗಿನ ನನ್ನ ಸಂಬಂಧದ ಬಗ್ಗೆ ಮಾತನಾಡಿದ ಡಿಕೆಶಿ, ಮದ್ದೂರಿನಲ್ಲಿ ಅವರು ಸೋತಾಗ ಇಬ್ಬರ ರಾಜಕೀಯ ಜೀವನ ಒಟ್ಟಿಗೆ ಸಾಗ್ತು. ಎಸ್‌ ಕೆ ಕೃಷ್ಣ ಸರ್ಕಾರದಲ್ಲಿ ತನಗೆ ಮಂತ್ರಿಗಿರಿ ಕೈ ತಪ್ಪಿದ ಬಗ್ಗೆ ಡಿಕೆಶಿ ತಮ್ಮ ನೆನೆಪು ಮೆಲುಕು ಹಾಗಿದ್ರು, ಈ ವೇಳೆ ಏನಾಯ್ತು ಅಂತಾ ಡಿಕೆಶಿ ಹೇಳಿದ್ದಾರೆ.

ಜನವರಿಯೊಳಗೆ ಸಿಎಂ ಆಗ್ತಾರಾ ಡಿಕೆಶಿ?

ನಾನು ಟೀಕೆ ಮಾಡಲ್ಲ ಅಂತ ಮಾತು ಶುರುಮಾಡಿದ್ರು ಆರ್ ಆಶೋಕ್‌.. ಅವಾಗ ಒದ್ದು ಕಿತ್ತ್ಕೊಂಡ್ರಿ ಅದೇ ತರ ಇವಾಗ ಯಾವಾಗ ಸಿಎಂ ಕುರ್ಚಿನಾ ಒದ್ದು ಕಿತ್ತ್ಕೊಳ್ತೀರಾ ಅಂತಾ ಪ್ರಶ್ನೆ ಮಾಡಿದ್ರು.. ಡಿಕೆಶಿ ಜ್ಯೋತಿಷಿಗಳ ಬಳಿ ಹೋಗಿದ್ದನ್ನ ಆರ್ ಅಶೋಕ್ ಹೇಳಿದ್ದನ್ನ.. ನಿಮ್ಮ ಜ್ಯೋತಿಷ್ಯರು ಒದ್ದು ಕಿತ್ತ್ಕೊ ಬೇಕು ಎಂದಿದ್ದಾರೆ.. ನೀವು ಎಲ್ಲಿಗೆ ಹೋಗ್ತೀರಾ ಅಂತಾ ಗೊತ್ತು. ಅವರೇ ನನಗೆ ಹೇಳಿದ್ರು.. ಡಿಕೆಶಿಗೆ ನಾನು ಹೇಳಿದ್ದೇನೆ. ಜನವರಿಯೊಳಗೆ ನೀವು ಸಿಎಂ ಆದ್ರೆ ಒಳ್ಳೆಯದು, ಇಲ್ಲ ಕಷ್ಟ ಇದೆ ಅಂತಾ. ಯಾವಾಗ ಒದ್ದು ಕಿತ್ತ್ಕೋತೀರಾ.. ಆಮೇಲೆ ಗ್ರಹಗತಿ ಸರಿ ಇಲ್ಲ, ಅದ್ಕೆ ಬೇಗ ಸಿಎಂ ಕುರ್ಚಿ ಕಿತ್ಕ್ತೋಳ್ಳಿ ಎಂದು ಅಂತಾ ಆರ್ ಅಶೋಕ್ ಹೇಳಿದ್ರು. ಅಶೋಕ್‌ ಏನೇ ಹೇಳಿದ್ರು ಡಿಕೆಶಿ ಮುಗಳುನಗುತ್ತಾ ಸೈಲೆಂಟ್ ಆಗಿ ನಿಂತಿದ್ರು.. ಅದನ್ನ ನೋಡಿದ್ರೆ ಗೊತ್ತಾಗುತಿತ್ತು. ಇದೆಲ್ಲಾ ನಿಜ ಅಂತಾ.. ನಂತ್ರ ಮದ್ಯ ಬಾಯಿ ಹಾಕಿದ್ರು ಪ್ರಿಯಾಂಕಾ ಖರ್ಗೆ. ಪ್ರಿಯಾಂಕಾ ಅವರ ಈಮಾತಿಗೆ ಅರ್ ಆಶೋಕ್ ಮತ್ತೆ ಟಾಂಗ್ ಕೊಟ್ರು.

ತಮಾಷೆಯಾಗೇ ಮಾತನಾಡುತ್ತಾ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ ಆರ್ ಅಶೋಕ್. ಇಬ್ಬರ ಜಗಳದಲ್ಲಿ 3ನೇ ಅವರಿಗೆ ಲಾಭ ಆಗಬಹುದು ಹುಷಾರ್ ಡಿಕೆಶಿ ಅಂತಾ ಸಲಹೆಯನ್ನೂ ಕೂಡ ನೀಡಿದ್ದಾರೆ. ಇದನ್ನೆಲ್ಲಾ ನೋಡೋಕೆ ಮಜಾವಾಗಿದ್ರು.. ಸೂಕ್ಷವಾಗಿ ಗಮನಿಸಿದ್ರೆ ಸಿಎಂ ಬದಲಾವಣೆ ಪಕ್ಕಾ ಅನ್ನೋದು ಗೊತ್ತಾಗುತ್ತೆ.. ಡಿಕೆಶಿ ಜ್ಯೋತಿಷ್ಯರನ್ನ ಹೆಚ್ಚು ನಂಬುತ್ತಾರೆ.. ಯಾವುದೇ ದೊಡ್ಡ ಹೆಜ್ಜೆ ಇಡಬೇಕಾದ್ರೆ ಅವರ ಮಾರ್ಗದರ್ಶನದಲ್ಲೇ ಹೆಜ್ಜೆ ಇಡ್ತಾರೆ. ಹೀಗಾಗಿ ಜ್ಯೋತಿಷಿಗಳು ಹೇಳಿದಂತೆ ರಾಜ್ಯದಲ್ಲಿ ಜನವರಿಯೊಳಗೆ ಸಿಎಂ ಚೇಂಜ್ ಆಗ್ತಾರಾ? ಸಿದ್ದರಾಮಯ್ಯ ಕುರ್ಚಿ ಡಿಕೆಶಿ ಪಾಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *