RCBಗೆ ಬೆಸ್ಟ್ ಫಿನಿಶರ್ ಯಾರು? – DK ಬಾಸ್ ಸ್ಥಾನಕ್ಕೆ ಮೂವರ ರೇಸ್
ಫ್ರಾಂಚೈಸಿ ಗೇಮ್ ವರ್ಕೌಟ್ ಆಗುತ್ತಾ?

RCBಗೆ ಬೆಸ್ಟ್ ಫಿನಿಶರ್ ಯಾರು? – DK ಬಾಸ್ ಸ್ಥಾನಕ್ಕೆ ಮೂವರ ರೇಸ್ಫ್ರಾಂಚೈಸಿ ಗೇಮ್ ವರ್ಕೌಟ್ ಆಗುತ್ತಾ?

2025ರ ಸೀಸನ್​ಗೆ ಕಪ್ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಳ್ಳೆ ಟೀಂ ಕಟ್ಟಿದೆ. ಈಗಾಗ್ಲೇ ದೇಶೀ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಇನ್ನೇನಿದ್ರೂ ಪ್ಲೇಯಿಂಗ್ 11 ಸೆಟ್ ಮಾಡಿ ಫೀಲ್ಡಿಗೆ ಇಳಿಸೋದಷ್ಟೇ ಬಾಕಿ. ಬಟ್ ಆರ್​ಸಿಬಿ ಪರ ಯಾರು ಫಿನಿಶರ್ ರೋಲ್ ಪ್ಲೇ ಮಾಡ್ತಾರೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಬೆಂಗಳೂರು ತಂಡ ಬೆಸ್ಟ್ ಫಿನಿಶರ್ ದಿನೇಶ್ ಕಾರ್ತಿಕ್ ಸ್ಥಾನ ತುಂಬೋದು ಅಷ್ಟು ಸುಲಭ ಇಲ್ಲ. ಹಾಗಾದ್ರೆ ಡಿಕೆ ಪ್ಲೇಸ್​ಗೆ ಯಾರು ರಿಪ್ಲೇಸ್ ಆಗ್ಬೋದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: KL Vs ROHIT.. ಓಪನರ್ ಯಾರು? – ಆಸಿಸ್ ವಿರುದ್ಧ 3ನೇ ಫೈಟ್ ಸವಾಲೇನು?

ಪ್ರತೀ ಸೀಸನ್ ಆರಂಭ ಆದಾಗ್ಲೂ ಬೌಲಿಂಗ್ ವಿಭಾಗ ವೀಕ್ ಇದೆ ಅಂತಾ ಕೊರಗ್ತಿದ್ದ ಬೆಂಗಳೂರು ಫ್ರಾಂಚೈಸಿ ಈ ಸಲ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿದೆ. ಇಂಗ್ಲೆಂಡ್​ನ ಸ್ಟಾರ್ ವಿಕೆಟ್​ಕೀಪರ್ ಬ್ಯಾಟರ್ ಫಿಲ್ ಸಾಲ್ಟ್, ಆರ್​ಸಿಬಿ ಪರ ಓಪನರ್ ಆಗಿ ವಿರಾಟ್ ಕೊಹ್ಲಿ ಜೊತೆ ಕಣಕ್ಕಿಳಿಯೋದು ಪಕ್ಕಾ.  ಹಾಗೇ ರಜತ್ ಪಟಿದಾರ್ ಮೂರನೇ ಸ್ಲಾಟ್​ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ನಾಲ್ಕನೇ ಸ್ಥಾನದಲ್ಲಿ ಆಡಬಹುದು. 5, 6ನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಬ್ಯಾಟ್ ಬೀಸಲಿದ್ದಾರೆ. ಸೋ ಸದ್ಯದ ಮಟ್ಟಿಗೆ ಲಿವಿಂಗ್ ಸ್ಟೋನ್, ಕೃನಾಲ್ ಪಾಂಡ್ಯ ಹಾಗೇ ಜಿತೇಶ್ ಶರ್ಮಾ ಫಿನಿಶರ್ ಆಗೋ ಲಿಸ್ಟ್​ನಲ್ಲಿದ್ದಾರೆ.

ಆರ್ ಸಿಬಿಯಲ್ಲೂ ಬೆಸ್ಟ್ ಫಿನಿಶರ್ ಆಗ್ತಾರಾ ಲಿವಿಂಗ್ ಸ್ಟೋನ್?

ಮೆಗಾ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ಇಂಗ್ಲೆಂಡ್ ತಂಡದ ಆಟಗಾರ ಲಿವಿಂಗ್‌ಸ್ಟೋನ್‌ ರನ್ನು 8.75 ಕೋಟಿ ಕೊಟ್ಟು ಖರೀದಿ ಮಾಡಿದೆ. ಇವ್ರನ್ನ ತಂಡಕ್ಕೆ ಸೇರಿಸಿಕೊಂಡಿರೋದು ಬೆಸ್ಟ್ ಮೂವ್ ಅಂತಾನೇ ವಿಶ್ಲೇಷಣೆ ಮಾಡಲಾಗ್ತಿದೆ. ಇಂಗ್ಲೆಂಡ್‌‌ನ ಬೆಸ್ಟ್‌ ಬ್ಯಾಟ್ಸ್‌‌ಮನ್‌ ಎನಿಸಿಕೊಂಡಿರುವ ಲಿವಿಂಗ್‌ಸ್ಟೋನ್‌ ಬೆಸ್ಟ್ ಫಿನಿಶರ್‌ ಅಂತಲೇ ಫೇಮಸ್‌. ಲಿವಿಂಗ್‌ಸ್ಟೋನ್‌ ಆಡಿರುವ 39 ಪಂದ್ಯಗಳಲ್ಲಿ 939 ರನ್‌ಗಳನ್ನು ಬಾರಿಸಿದ್ದು, 6 ಅರ್ಧಶತಕ ಗಳಿಸಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿ 9.14 ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದಾರೆ.

ಮಿಡಲ್ ಆರ್ಡರ್ ನಲ್ಲಿ ಬೆಂಗಳೂರು ಸ್ಟ್ರೆಂಥ್ ಆಗ್ತಾರಾ ಪಾಂಡ್ಯ?

ಕೃನಾಲ್ ಪಾಂಡ್ಯ ಅವ್ರನ್ನ 5.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೃನಾಲ್ ಕೂಡ ಮಿಡಲ್ ಆರ್ಡರ್ ನಲ್ಲಿ ತಂಡಕ್ಕೆ ಬಲವಾಗಿ ಆಡಬಲ್ಲರು. 2016 ರಲ್ಲಿ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡಿದ್ದ ಕೃನಾಲ್ ಪಾಂಡ್ಯ, ಆರ್​ಸಿಗೆ ಸೇರುವ ಮೊದಲು, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡದ ಪರ ಆಡಿದ್ದರು. ಐಪಿಎಲ್‌ನಲ್ಲಿ 127 ಪಂದ್ಯಗಳನ್ನು ಆಡಿರುವ ಕೃನಾಲ್ 132.82 ರ ಸ್ಟ್ರೈಕ್ ರೇಟ್ ಹಾಗೂ 22.56ರ ಸರಾಸರಿಯೊಂದಿಗೆ 1,647 ರನ್‌ ಕಲೆಹಾಕಿದ್ದಾರೆ. ಹಾಗೆಯೇ ಸ್ಪಿನ್ ಬೌಲರ್ ಆಗಿರುವ ಕೃನಾಲ್, ಇದುವರೆಗೆ ಆಡಿರುವ 127 ಪಂದ್ಯಗಳಲ್ಲಿ 34.28 ರ ಸರಾಸರಿ ಮತ್ತು 7.36 ರ ಎಕಾನಮಿ ದರದಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜಿತೇಶ್ ಶರ್ಮಾಗೆ 11 ಕೋಟಿ ಕೊಟ್ಟಿದ್ದು ಸಾರ್ಥಕವಾಗುತ್ತಾ?

ಕಳೆದ ಸೀಸನ್​ನಲ್ಲಿ ಮೂಲ ಬೆಲೆಯೊಂದಿಗೆ ಐಪಿಎಲ್ ಆಡಿದ್ದ ಜಿತೇಶ್ ಶರ್ಮಾ ಈ ಸಲ ಬರೋಬ್ಬರಿ 11 ಕೋಟಿ ರೂಪಾಯಿಗೆ ಆರ್​ಸಿಬಿ ಪಾಲಾಗಿದ್ದಾರೆ. ಅದಕ್ಕೆ ಕಾರಣ ಜಿತೇಶ್​​ರ ಪ್ರದರ್ಶನ. ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ವಿಕೆಟ್ ಕೀಪರ್ ಬ್ಯಾಟರ್​​ ಜಿತೇಶ್ ಶರ್ಮಾ ಅವರಿಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್​ ಇತ್ತು. ಆಕ್ರಮಣಕಾರಿಯಾಗಿ ಆಡೋದ್ರ ಜೊತೆಗೆ ವಿಕೆಟ್​ ಕೀಪಿಂಗ್​ನಲ್ಲೂ ಬೆಸ್ಟ್​ ಇದ್ದಾರೆ. ಹೀಗಾಗಿ ಡಿಕೆ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸೋ ಶಕ್ತಿ ಜಿತೇಶ್​ಗೂ ಇದೆ. ಸೋ ಅಂತಿಮವಾಗಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಯಶ್ ದಯಾಳ್​ರನ್ನ ಕಣಕ್ಕಿಳಿಸೋ ಸಾಧ್ಯತೆ ಇದೆ.

ಆರ್ ಸಿಬಿ ಪಾಲಿನ ಆಪತ್ಬಾಂಧವ ದಿನೇಶ್ ಕಾರ್ತಿಕ್!

ದಿನೇಶ್ ಕಾರ್ತಿಕ್ ಆಬ್ಸೆನ್ಸ್​ನ ಫ್ರಾಂಚೈಸಿ ಅಷ್ಟೊಂದು ಮಿಸ್ ಮಾಡಿಕೊಳ್ಳೋದಕ್ಕೆ ಕಾರಣವೂ ಇದೆ. 2008ರಲ್ಲೇ ಐಪಿಎಲ್ ಅಖಾಡಕ್ಕೆ ಧುಮುಕಿದ್ದ ಡಿಕೆ ಡೆಲ್ಲಿ, ಪಂಜಾಬ್, ಮುಂಬೈ, ಗುಜರಾತ್, ಕೊಲ್ಕತ್ತಾ ಮತ್ತು ಬೆಂಗಳೂರು ತಂಡಗಳ ಪರ ಕಣಕ್ಕಿಳಿದಿದ್ದಾರೆ. 2022ರಿಂದ2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ರು. ದಿನೇಶ್ ಕಾರ್ತಿಕ್ ಈವರೆಗೆ ಐಪಿಎಲ್‌ನಲ್ಲಿ ಒಟ್ಟು 257 ಪಂದ್ಯಗಳನ್ನು ಆಡಿದ್ದಾರೆ. 26.32ರ ಸರಾಸರಿಯಲ್ಲಿ 135.36 ಸ್ಟ್ರೈಕ್‌ ರೇಟ್‌ನಲ್ಲಿ 4842 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧ ಶತಕಗಳು ಸೇರಿವೆ. 97 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದೇ ಅವ್ರ ಬೆಸ್ಟ್ ಪರ್ಫಾಮೆನ್ಸ್ ಆಗಿದೆ. ಹಾಗೇ ವಿಕೆಟ್ ಕೀಪಿಂಗ್​ನಲ್ಲಿ  ದಿನೇಶ್ ಕಾರ್ತಿಕ್ ಅವರು ಈವರೆಗೆ ಐಪಿಎಲ್‌ನಲ್ಲಿ ಒಟ್ಟು 145 ಕ್ಯಾಚ್ ಮತ್ತು 37 ಸ್ಟಂಪಿಂಗ್ ಮಾಡಿದ್ದಾರೆ. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ.

ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ & ಮೆಂಟರ್!

ದಿನೇಶ್ ಕಾರ್ತಿಕ್ ಬಗ್ಗೆ ಅಭಿಮಾನಿಗಳು ಇಟ್ಟಿರೋ ಪ್ರೀತಿ ಮತ್ತು ಅವ್ರ ಪ್ರದರ್ಶನ ನೋಡಿರೋ ಬೆಂಗಳೂರು ಫ್ರಾಂಚೈಸಿ ಡಿಕೆ ನಿವೃತ್ತಿ ಬಳಿಕವೂ ಅವ್ರನ್ನ ತಂಡದಲ್ಲೇ ಉಳಿಸಿಕೊಂಡಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ತಂಡದ ಮೆಂಟರ್ ಆಗಿ ನೇಮಿಸಿದೆ. 2024ರ ಜುಲೈ 1ರಂದು ಫ್ರಾಂಚೈಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ದೊಡ್ಡ ಘೋಷಣೆ ಮಾಡಿತ್ತು. ಈ ಮೂಲಕ 2025ರ ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ಮತ್ತೆ ಆರ್‌ಸಿಬಿಗೆ ಮರಳಲಿದ್ದಾರೆ. ಈ ಬಾರಿ ಕಾರ್ತಿಕ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ತಂಡದ ಮಾಜಿ ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಜಿ ಸ್ಥಾನಕ್ಕೆ ಕಾರ್ತಿಕ್ ಬರಲಿದ್ದಾರೆ.

ಒಟ್ನಲ್ಲಿ ಆರ್​ಸಿಬಿ ಪರ ಆಡುವಾಗ ಡಿಕೆ ಇನ್ನೂ ಕ್ರೀಸ್​ನಲ್ಲಿ ಇದ್ದಾರೆ ಅಂದ್ರೆ ಅಲ್ಲೇನೋ ಮ್ಯಾಜಿಕ್ ಆಗುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. 2024ರ ಟೂರ್ನಿಯಲ್ಲೂ ಇದೇ ಆಗಿತ್ತು. ಇದೇ ಕಾರಣಕ್ಕೆ ಅವ್ರ ಸ್ಥಾನಕ್ಕೆ ಮತ್ತೊಬ್ಬ ಸಮರ್ಥ ಆಟಗಾರನ ಅವಶ್ಯಕತೆ ಇದೆ.

Shwetha M

Leave a Reply

Your email address will not be published. Required fields are marked *