KL Vs ROHIT.. ಓಪನರ್ ಯಾರು? – ಆಸಿಸ್ ವಿರುದ್ಧ 3ನೇ ಫೈಟ್ ಸವಾಲೇನು?
ಟೀಂ ಇಂಡಿಯಾ ಸ್ಟ್ರಾಟರ್ಜಿ ಹೇಗಿದೆ?
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಬಟ್ ಅಡಿಲೇಡ್‌ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿದ್ರು. ಉಭಯ ತಂಡಗಳು ಸಮಬಲ ಸಾಧಿಸಿದ್ದು, ಮೂರನೇ ಪಂದ್ಯಕ್ಕಾಗಿ ರೆಡಿಯಾಗ್ತಿದ್ದಾರೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ಗೆ ಸೆಲೆಕ್ಟ್ ಆಗಲು ಈ ಸರಣಿ ಕೈವಶ ತುಂಬಾನೇ ಮಹತ್ವದ್ದು. ಇದೇ ಕಾರಣಕ್ಕೆ ಟೀಂ ಇಂಡಿಯಾ 3ನೇ ಫೈಟ್ಗೆ ಒಂದಷ್ಟು ಸ್ಟ್ರಾಟರ್ಜಿಗಳನ್ನ ರೆಡಿ ಮಾಡ್ಕೊಂಡಿದೆ. ಪ್ಲೇಯಿಂಗ್ 11ನಲ್ಲೂ ಟ್ವಿಸ್ಟ್ ಇರಲಿದೆ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಆಟಕ್ಕೆ ಹೆದರಿದ್ರಾ ಗೌತಮಿ ? – ಬೇಕಂತಾನೇ ಸೈಡ್‌ಲೈನ್ ಮಾಡಿದ್ದಕ್ಕೆ ಕಣ್ಣೀರಿಟ್ಟ ಚೈತ್ರಾ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಬೇನ್ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನ ಭಾರತ ತಂಡವು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಯಾಕಂದ್ರೆ ಒಂದ್ವೇಳೆ ಮ್ಯಾಚ್ ಸೋತ್ರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಇದೇ ಕಾರಣಕ್ಕೆ ಈ ಪಂದ್ಯವನ್ನ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಸೀರಿಯಸ್ ಆಗಿ ತೆಗೆದುಕೊಂಡಿದೆ.
ಓಪನಿಂಗ್ ಸ್ಲಾಟ್ ಕೆಎಲ್ ಗೋ ಅಥವಾ ರೋಹಿತ್ ಗೋ?
ಅಡಿಲೇಡ್ ಸೋಲಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಟಾಪ್ 2 ರೇಸ್ನಲ್ಲಿ ಇರ್ಬೇಕು ಅಂದ್ರೆ ಮುಂದಿನ ಮೂರು ಪಂದ್ಯಗಳನ್ನ ಗೆಲ್ಲಲೇಬೇಕು. ಒಂದು ಸೋಲು ಕೂಡ ತಂಡವನ್ನು ಫೈನಲ್ ರೇಸ್‌ನಿಂದ ಹೊರಗಿಡಬಹುದು. ಹೀಗಾಗಿ ಸರಣಿಯಲ್ಲಿ ಪುಟಿದೇಳಲು ಬ್ರಿಸ್ಬೇನ್ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ ಕಣಕ್ಕಿಳಿಸೋಕೆ ಮ್ಯಾನೇಜ್‌ಮೆಂಟ್ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಒಂದಷ್ಟು ಬದಲಾವಣೆಗಳನ್ನು ಮಾಡೋ ಸಾಧ್ಯತೆ ಇದೆ. ಕಳೆದ ಎರಡೂ ಪಂದ್ಯಗಳಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಮತ್ತೆ ಅಗ್ರ ಕ್ರಮಾಂಕದಲ್ಲಿ ಮುಂದುವರೆಯುತ್ತಾರಾ ಅನ್ನೋದೇ ಈಗಿರೋ ಪ್ರಶ್ನೆ. ಬಟ್ ಕೆಲ ಮಾಜಿ ಕ್ರಿಕೆಟರ್ಸ್ ರೋಹಿತ್ ಶರ್ಮಾ ಓಪನಿಂಗ್ ಸ್ಲಾಟ್ ಗೆ ಕಮ್ ಬ್ಯಾಕ್ ಮಾಡ್ಲಿ ಅಂತಾ ಸಜೇಷನ್ ಕೊಡ್ತಿದ್ದಾರೆ.
ರಾಹುಲ್ ಗೆ ಓಪನಿಂಗ್ ಸ್ಲಾಟ್ ಫಿಕ್ಸ್ ಎಂದ ರೋಹಿತ್!
ಸ್ಲಾಟ್ ವಿಚಾರವಾಗಿ ಸ್ಪಷ್ಟನೆ ಕೊಟ್ಟಿರೋ ಕ್ಯಾಪ್ಟನ್ ರೋಹಿತ್ ಶರ್ಮಾ ಕೆಎಲ್ ರಾಹುಲ್ ಆರಂಭಿಕ ಸ್ಥಾನದಲ್ಲೇ ಕಂಟಿನ್ಯೂ ಆಗ್ತಾರೆ ಎಂದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ಧ ರಾಹುಲ್ ರನ್ನ ಅಗ್ರಕ್ರಮಾಂಕದಿಂದ ಕೆಳಗಿಳಿಸಲ್ಲ. ಇದು ಹೀಗೆಯೇ ಕಂಟಿನ್ಯೂ ಆಗಲಿದೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಅಡಿಲೇಡ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ 64 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ, ಮತ್ತೊಮ್ಮೆ ಉತ್ತಮ ಆರಂಭದ ಸೂಚನೆ ನೀಡಿದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 7 ರನ್‌ಗಳಿಗೆ ಔಟಾಗಿದ್ರು. ಬಟ್ ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಹೀಗಾಗಿ ರೋಹಿತ್ ಮತ್ತೆ ಓಪನರ್ ಸ್ಥಾನಕ್ಕೆ ಮರಳಿದ್ರೂ ಅಚ್ಚರಿಯಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಅಗ್ರಸ್ಥಾನದಲ್ಲಿ ಆಡಿಯೂ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್, ಯಾವ ನಿರ್ಧಾರ ಕೈಗೊಳ್ತಾರೆ ನೋಡ್ಬೇಕು. ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಆರಂಭಿಕ ಆಟಗಾರನಾಗೇ ಕಂಟಿನ್ಯೂ ಆಗಲಿದ್ದಾರೆ. ಮೂರನೇ ಸ್ಲಾಟ್ನಲ್ಲಿ ಶುಭ್ಮನ್ ಗಿಲ್, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 5ರಲ್ಲಿ ರಿಷಭ್ ಪಂತ್ ಆಡಲಿದ್ದಾರೆ. 6ನೇ ಕ್ರಮಾಂಕದಲ್ಲಿ ರೋಹಿತ್ ಕಣಕ್ಕಿಳಿಯಬಹುದು. ಬಳಿಕ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ.
ಮೂರನೇ ಟೆಸ್ಟ್ ನಲ್ಲಿ ಬೆಂಚ್ ಕಾಯಿಸ್ತಾರಾ ಆರ್.ಅಶ್ವಿನ್?
ಗಬ್ಬಾ ಟೆಸ್ಟ್‌ನಲ್ಲಿ ಆರ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್ ಸುಂದರ್ ಆಡಿಸುವ ಸಾಧ್ಯತೆ ಇದೆ. ಅಡಿಲೇಡ್‌ನಲ್ಲಿ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಗಬ್ಬಾದಲ್ಲಿ ಹೆಚ್ಚುವರಿ ಬ್ಯಾಟಿಂಗ್ ಬಲದ ನಿರೀಕ್ಷೆಯಲ್ಲಿರುವ ತಂಡವು, ಜಡೇಜಾ ಅಥವಾ ಸುಂದರ್ ಇಬ್ಬರಲ್ಲಿ ಒಬ್ಬರನ್ನು ಆಡಿಸಬಹುದು. ಇನ್ನು ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹರ್ಷಿತ್ ರಾಣಾ ಉತ್ತಮ ಪ್ರದರ್ಶನ ನೀಡಿದರು. ಆದರೆ, ಅಡಿಲೇಡ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಗಬ್ಬಾ ಪಿಚ್ ವೇಗ ಮತ್ತು ಬೌನ್ಸ್ ಕೂಡಾ ಹೊಂದಿರವುದರಿಂದ ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಚಾನ್ಸ್ ಪಡೆಯಬಹುದು. ಸೋ ಫೈನಲ್ಲಾಗಿ ಗಬ್ಬಾ ಟೆಸ್ಟ್‌ಗೆ ಪ್ಲೇಯಿಂಗ್ 11 ನೋಡೋದಾದ್ರೆ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಅಥವಾ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿಯಬಹುದು.
ಆಟಗಾರರಿಗೆ ಕನ್ಫ್ಯೂಸಿಂಗ್ ಆಗಿರುವ ಗಾಬ್ಬಾ ಸ್ಟೇಡಿಯಂ!
ಕೆಲ ಮೈದಾನಗಳ ಅಂಕಿ ಅಂಶಗಳನ್ನ ನೋಡಿದಾಗ ಟಾಸ್ ಮೇಲೆಯೇ ಯಾವ ತಂಡ ಗೆಲ್ಲುತ್ತೆ ಅನ್ನೋದನ್ನ ಡಿಸೈಡ್ ಮಾಡಿಬಿಡಬಹುದು. ಬಟ್ ಗಾಬ್ಬಾ ಮೈದಾನದಲ್ಲಿ ಮಾತ್ರ ಅದು ಸಾಧ್ಯನೇ ಇಲ್ಲ. ಯಾಕೆಂದರೆ ಇಲ್ಲಿನ ಚಾನ್ಸ್ 50:50 ಇದೆ. ಇಲ್ಲಿ ಈವರೆಗೆ 66 ಟೆಸ್ಟ್ ಪಂದ್ಯಗಳು ನಡೆದಿವೆ. ಅವುಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ತಂಡ 26 ಬಾರಿ ಗೆದ್ದಿವೆ. ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡ 27 ಬಾರಿ ಗೆಲುವು ಸಾಧಿಸಿದೆ. ಇನ್ನು ಉಳಿದ 13 ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿದೆ. ಹೀಗಾಗಿಯೇ ಈ ಪಿಚ್ ಹೇಗೆ ಅನ್ನೋದನ್ನ ಡಿಸೈಡ್ ಮಾಡೋಕೆ ಆಗಲ್ಲ. ವೇಗದ ಬೌಲರ್‌ಗಳಿಗೆ ಸ್ವರ್ಗ ಎಂದೇ ಕರೆಯಲ್ಪಡುವ ಗಾಬಾ ಪಿಚ್ ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿ.
ಪಂದ್ಯಕ್ಕೆ ಮಳೆ ಭೀತಿ.. ಮ್ಯಾಚ್ ರದ್ದಾದರೆ ಭಾರತಕ್ಕೆ ನಷ್ಟ!
ಡಿಸೆಂಬರ್ 14ರಿಂದ ಶುರುವಾಗಲಿರುವ ಈ ಮ್ಯಾಚ್ಗೆ ಮಳೆ ಭೀತಿಯೂ ಇದೆ. ಆಸ್ಟ್ರೇಲಿಯಾ ಸರ್ಕಾರದ ಹವಾಮಾನ ಬ್ಯೂರೋ ಪ್ರಕಾರ.. ಪಂದ್ಯ ನಡೆಯುವ ಐದು ದಿನಗಳಲ್ಲೂ ಮಳೆಯಾಗೋ ಸಾಧ್ಯತೆ ಇದೆ. ಹಾಗೇನಾದ್ರೂ ಮಳೆಯಿಂದಾಗಿ ಪಂದ್ಯ ರದ್ದಾದ್ರೆ ಭಾರತಕ್ಕೆ ನಷ್ಟವಾಗಲಿದೆ. ಯಾಕಂದ್ರೆ ಪರ್ತ್‌ನಲ್ಲಿ ಗೆದ್ರೂ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋತಿದೆ. ಮೂರನೇ ಟೆಸ್ಟ್ ಮಳೆಯಲ್ಲಿ ಕೊಚ್ಚಿ ಹೋದರೆ ಟೀಂ ಇಂಡಿಯಾಗೆ ಭಾರೀ ನಷ್ಟವಾಗಲಿದೆ. ಹೀಗಾಗಿ ಎಲ್ಲಾ ಅಡೆತಡೆಗಳನ್ನ ಮೆಟ್ಟಿ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಆಟಗಾರರು ಸಿಲುಕಿದ್ದಾರೆ.