ಚೈತ್ರಾ ಕುಂದಾಪುರ ಆಟಕ್ಕೆ ಹೆದರಿದ್ರಾ ಗೌತಮಿ ? – ಬೇಕಂತಾನೇ ಸೈಡ್‌ಲೈನ್ ಮಾಡಿದ್ದಕ್ಕೆ ಕಣ್ಣೀರಿಟ್ಟ ಚೈತ್ರಾ
ನಾಯಕತ್ವಕ್ಕಾಗಿ ನಾನಾ ಕಸರತ್ತು ಎಂಬ ಟಾಸ್ಕ್ ಬಿಗ್‌ಬಾಸ್ ಮನೆಯಲ್ಲಿ ಶುರುವಾಗಿದೆ. ಇದರಲ್ಲಿ ಚೈತ್ರಾ ಕುಂದಾಪುರ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಚೈತ್ರಾ ಕುಂದಾಪುರ ಕಣ್ಣೀರಿಗೆ ಕಾರಣವಾಗಿತ್ತು ಪಾಸಿಟಿವಿಟಿ ಗೌತಮಿ.
ಇದನ್ನೂ ಓದಿ:ಸಿಂಗಲ್ ಸಿಂಹ ಅಂತೆ ಚೈತ್ರಾ ಕುಂದಾಪುರ – ಮಾತಿನ ಮಲ್ಲಿಯ ಸವಾಲ್‌ಗೆ ಹೆದರಿದ್ರಾ ಐಶ್, ಶಿಶಿರ್?
ಮಾತಿನ ಮಲ್ಲಿ, ಜಗಳವಿದ್ದಲ್ಲಿ ಚೈತ್ರಾ ಇರಬೇಕು ಅಂತಾ ತನ್ನ ಮಾತಿನ ಯುದ್ಧದ ಮೇಲೆ ನಂಬಿಕೆಯಿಟ್ಟುಕೊಂಡಿದ್ದ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನನಗೆ ಈ ಮನೆಯಲ್ಲಿ ಆಟ ಆಡಲು ಅವಕಾಶ ಕೊಡೋದಿಲ್ಲ. ನಂತರ ನಾಮಿನೇಷನ್ನಲ್ಲಿ ಇದೇ ಕಾರಣ ಕೊಡುತ್ತಾರೆ. ಈ ಬಾರಿ ನಾಮಿನೇಟ್ ಆಗಿ ಎಲಿಮಿನೇಷನ್ ಅಂದ್ರೆ ಏನು ಅನ್ನೋದನ್ನು ಅನುಭವಿಸಿ ಬಂದಿದ್ದೇನೆ. ಆಡಲು ನನಗೆ ಅವಕಾಶ ಬೇಕು. ಆದರೆ ಅವಕಾಶ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಇದಕ್ಕೆಲ್ಲಾ ಕಾರಣ ಕ್ಯಾಪ್ಟನ್ ಗೌತಮಿ ಜಾಧವ್ ನಿರ್ಧಾರ.
ಸ್ಪರ್ಧಿಗಳನ್ನು ಆರಿಸೋ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತಿಗೆ ಗೌತಮಿ ಮತ್ತು ಹನುಮಂತ ಅವರು ಚೈತ್ರಾ ಅವರ ಹೆಸರನ್ನು ತೆಗೆದುಕೊಂಡಿದ್ದರು. ಬಹುತೇಕ ಸಂದರ್ಭಗಳಲ್ಲಿ ಚೈತ್ರಾ ಅವರನ್ನು ಉಸ್ತುವಾರಿಗೇನೆ ಹಾಕಲಾಗಿತ್ತು. ಹಾಗಾಗಿ ನಾಮಿನೇಷನ್ ಸಂದರ್ಭಗಳಲ್ಲಿ ಚೈತ್ರಾ ಅವರ ಆಟ ನೋಡಿಲ್ಲ ಎಂಬ ಮಾತುಗಳು ವ್ಯಕ್ತವಾಗಿದ್ದವು. ಈಗಲೂ ಗೌತಮಿ ಅವರು ಚೈತ್ರಾರಿಗೆ ಉಸ್ತುವಾರಿ ಜವಾಬ್ದಾರಿ ಕೊಡಲು ಮುಂದಾಗಿದ್ದಾರೆ. ಇದು ಚೈತ್ರಾರನ್ನು ಕೆರಳಿಸಿದೆ. ಹಾಗಾಗಿ ಕಣ್ಣೀರಿಟ್ಟು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಒಮ್ಮೆ, ನೀವು ಆಡುತ್ತೀರಾ ಎಂದಾದರೆ ನಾನು ನಿಮ್ಮನ್ನು ಸುಮ್ಮನೇ ಕೂರಿಸುವುದಲ್ಲ ಎಂದು ಚೈತ್ರಾ ಬಳಿ ಗೌತಮಿ ತಿಳಿಸಿದ್ದರು. ನಂತರ ಟಾಸ್ಕ್ ಕೊಟ್ಟಾಗ ನಾನು ಆಡುತ್ತೇನೆ ಎಂದು ಚೈತ್ರಾ ತಿಳಿಸಿದ್ರೂ ಕೂಡಾ ಗೌತಮಿ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ. ಅಷ್ಟು ಕೇಳಿಕೊಂಡರೂ ತಮಗೆ ಅವಕಾಶ ಕೊಡಲಿಲ್ಲ ಎಂದು ಚೈತ್ರಾ ಕಣ್ಣೀರಿಟ್ಟಿದ್ದಾರೆ.