74ನೇ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ರಜನಿಕಾಂತ್ – ತಲೈವಾಗೆ ಶುಭಕೋರಿದ ಅಭಿಮಾನಿಗಳು
ಸೂಪರ್ ಸ್ಟಾರ್, ತಲೈವಾ, ಸ್ಟೈಲ್‌ಕಿಂಗ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 74ನೇ ವಸಂತಕ್ಕೆ ರಜನಿಕಾಂತ್ ಅವರು ಕಾಲಿಟ್ಟಿದ್ದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಬರುತ್ತಿದೆ ರಜನಿಕಾಂತ್ ಬಯೋಪಿಕ್! – ಬಂಡವಾಳ ಹೂಡುತ್ತಿರವುದು ಯಾರು ಗೊತ್ತಾ?
ಸೂಪರ್ ಸ್ಟಾರ್ ರಜನಿಕಾಂತ್ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 12, 1950 ರಂದು ರಜನಿಕಾಂತ್ ಜನಿಸಿದರು. ಭಾರತೀಯ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟರಲ್ಲಿ ರಜನಿಕಾಂತ್ ಕೂಡಾ ಒಬ್ಬರು. ಚೆನ್ನೈ ಅವರ ನಿವಾಸದ ಬಳಿ ರಾತ್ರಿ ಅಭಿಮಾನಿಗಳು ಬಂದು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ತಮಿಳುನಾಡಿನ ಮಧುರೈ ನಗರದಲ್ಲಿರುವ ರಜನಿಕಾಂತ್ ದೇವಾಲಯ ಇದ್ದು ಅಭಿಮಾನಿಗಳು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಭಾರತದ ಸಿನಿಮಾ ಕ್ಷೇತ್ರದ ಹಲವಾರು ನಟ, ನಟಿಯರು ಶುಭ ಕೋರುತ್ತಿದ್ದಾರೆ.
ರಜನಿಕಾಂತ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಜೈಲರ್’ ಅಲ್ಟಿಮೇಟ್ ಹಿಟ್ ಆದರೆ, ಈ ವರ್ಷ ರಿಲೀಸ್ ಆದ ‘ವೆಟ್ಟೈಯಾನ್’ ಸಾಧಾರಣ ಯಶಸ್ಸು ಕಂಡಿದೆ. ಅವರು ಶ್ರೀಮಂತ ನಟರಲ್ಲಿ ಒಬ್ಬರು. ಅವರು ಅತಿ ಹೆಚ್ಚು ಸಂಭಾವನೆ ಪಡೆಯು ನಟರ ಸಾಲಿನಲ್ಲಿ ಇದ್ದಾರೆ. ರಜನಿಕಾಂತ್ ಅವರ ಜೀವನ ಕೇವಲ ಚಲನಚಿತ್ರ ನಟನ ಕಥೆಯಲ್ಲ, ಅದು ಒಂದು ಸಾಧನೆಯ ಕಥೆ. ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿ, ಅವಮಾನ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಅವರು ಸೂಪರ್ ಸ್ಟಾರ್ ಆದವರು ಅಭಿಮಾನಿಗಳ ಪ್ರೀತಿಯ ರಜನಿಕಾಂತ್ .