BBK ನಲ್ಲಿ Elimination ಪಾಲಿಟಿಕ್ಸ್‌? – ಐಶ್ವರ್ಯಾ ಪದೇ ಪದೆ ಸೇವ್‌ ಯಾಕೆ?
ಸಿಂಧೋಗಿ ಅದೃಷ್ಟ or ಫೇವರಿಸಂ?

BBK ನಲ್ಲಿ Elimination ಪಾಲಿಟಿಕ್ಸ್‌? – ಐಶ್ವರ್ಯಾ ಪದೇ ಪದೆ ಸೇವ್‌ ಯಾಕೆ?ಸಿಂಧೋಗಿ ಅದೃಷ್ಟ or ಫೇವರಿಸಂ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ. ಆಟ 80 ದಿನದತ್ತ ಮುನ್ನುಗ್ಗುತ್ತಿದೆ.. ಆದ್ರೆ ಈ ಬಾರಿ ಟಾಸ್ಕ್‌ ಗಿಂತ ಜಾಸ್ತಿ ಸ್ಪರ್ಧಿಗಳ ವಿವಾದ, ಕಿತ್ತಾಟವೇ ಹೈಲೈಟ್‌.. ದೊಡ್ಮನೆಯಲ್ಲಾಗುತ್ತಿರುವ ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಆದ್ರೆ ಈ ಬಾರಿ ನಾಮಿನೇಷನ್‌ ಹಾಗೂ ಎಲಿಮಿನೇಷನ್‌ ವಿಚಾರ ಈಗ ಚರ್ಚೆಯಲ್ಲಿದೆ.. ನಾಮಿನೇಷನ್‌ ಆಗಿ ಎಲಿಮಿನೇಟ್‌ ಆಗ್ಬೇಕಾದ ಸ್ಪರ್ಧಿಯೊಬ್ಬರನ್ನ ಬಿಗ್‌ ಬಾಸ್‌ ಪದೇ ಪದೇ ಸೇವ್‌ ಮಾಡ್ತಾ ಇದೆ ಅನ್ನೋ ಆರೋಪ ಕೇಳಿ ಬಂದಿದೆ. ಆ ಸ್ಪರ್ಧಿ ಬೇರೆ ಯಾರು ಅಲ್ಲ ಐಶ್ವರ್ಯ ಸಿಂಧೋಗಿ.. ಅಷ್ಟಕ್ಕೂ ಐಶ್ವರ್ಯರನ್ನ ಪದೇ ಪದೇ ಸೇವ್‌ ಮಾಡ್ತಾ ಇರೋದು ಯಾಕೆ? ಸಿಂಧೋಗಿಗೆ ಇಷ್ಟೊಂದು ಅವಕಾಶ ಯಾಕೆ? ದೊಡ್ಮನೆಯಲ್ಲಿ ಪಾರ್ಶ್ಯಾಲಿಟಿ ನಡಿತಾ ಇದ್ಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೊರೊನಾಗಿಂತ ಡೇಂಜರ್ ಈ ವೈರಸ್! – ಕಣ್ಣಲ್ಲಿ ರಕ್ತ ತರುತ್ತೆ ಡೆಡ್ಲಿ ‘ಮಾರ್ಬರ್ಗ್’!

ದೊಡ್ಮನೆಯ ಆಟ ಈಗ ಭಾರಿ ಕುತೂಹಲ ಮೂಡಿಸಿದೆ.. ಟಾಸ್ಕ್‌ಗಿಂತ ಜಾಸ್ತಿ ಜಗಳ ಹೆಚ್ಚಾಗಿದೆ.. ನಾಮಿನೇಷನ್‌ ಟಾಸ್ಕ್‌ ವೇಳೆಯಂತೂ ದೊಡ್ಮನೆ ರಣರಂಗವಾಗಿ ಬಿಡುತ್ತೆ.. ಐಶ್ವರ್ಯಾ ಸಿಂಧೋಗಿ ಎರಡು ವಾರಗಳ ಕಾಲ ನಾಮಿನೇಷನ್‌ನಲ್ಲಿದ್ದರೂ, ಅದೃಷ್ಟವಶಾತ್ ಬಚಾವ್ ಆಗ್ತಾ ಬಂದಿದ್ದಾರೆ. ಇದೀಗ ಐಶ್ವರ್ಯ ಸೇವ್‌ ಆಗಿರೋ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗ್ತಿದೆ.

ಹೌದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಇಷ್ಟೊತ್ತಿಗಾಗಲೇ ಎಲಿಮಿನೇಟ್ ಆಗಿರುತ್ತಿದ್ದರು. ಆದರೆ, ಅವರು ಅದೃಷ್ಟ ರೀತಿಯಲ್ಲಿ ಬಚಾವ್ ಆದ್ರು. ಅವರನ್ನು ಇಷ್ಟೊಂದು ಸೇವ್ ಮಾಡ್ತಿರೋದು ಏಕೆ ಎಂಬ ಪ್ರಶ್ನೆ ಮೂಡಿದೆ. ಎರಡು ವಾರ ನಾಮಿನೇಷನ್​ ಲಿಸ್ಟ್​ನಲ್ಲಿ ಅವರಿದ್ದರು. ಆದರೆ, ಈ ವಾರ ಅವರ ಹೆಸರು ನಾಮಿನೇಷನ್​ ಪಟ್ಟಿಯಲ್ಲೇ ಇಲ್ಲ. ಹೀಗಾಗಿ, ಅವರು ನಿರಂತರವಾಗಿ ಸೇವ್ ಆಗುತ್ತಾ ಬರುತ್ತಿದ್ದಾರೆ.

ಎರಡು ವಾರಗಳ ಹಿಂದೆ ಐಶ್ವರ್ಯಾ ಹಾಗೂ ಶಿಶಿರ್ ಅಂತಿಮ ಸ್ಥಾನದಲ್ಲಿ ಇದ್ದರು. ಆಗ ಶೋಭಾ ಅವರು ಹೊರ ಹೋಗುತ್ತೇನೆ ಎನ್ನುವ ಹಠ ಹಿಡಿದ್ರು. ಅವರು ಹೊರ ಹೋಗಿದ್ದು ವೈಯಕ್ತಿಕ ನಿರ್ಧಾರ. ಆದರೆ, ಆ ದಿನ ಐಶ್ವರ್ಯಾ ಅಥವಾ ಶಿಶಿರ್ ಪೈಕಿ ಒಬ್ಬರನ್ನು ಎಲಿಮಿನೇಟ್ ಮಾಡಬಹುದಿತ್ತಲ್ಲ, ಈ ಮೂಲಕ ವೀಕ್ಷಕರ ವೋಟ್​ಗೆ ಬೆಲೆ ಕೊಡಬಹುದಿತ್ತಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನು ಹಿಂದಿನ ವಾರ ಕೂಡ ಐಶ್ವರ್ಯ ಅಂತಿಮ ಹಂತದಲ್ಲಿ ಇದ್ರು. ಆದರೆ ಆ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಅಷ್ಟೇ ಅಲ್ಲ ಕಳೆದ ಎರಡು ವಾರಗಳ ನಾಮಿನೇಷನ್ ಲಿಸ್ಟ್ ನೋಡಿದರೆ ಅತ್ಯಂತ ದುರ್ಬಲ ಸ್ಪರ್ಧಿ ಎಂಬ ಹಣೆಪಟ್ಟಿ ಐಶ್ವರ್ಯಾ ಅವರಿಗೆ ಇದೆ. ಆದ್ರೆ ಈ ವಾರ ಕೂಡ ಐಶ್ವರ್ಯ  ನಾಮಿನೇಟ್ ಆಗಿಲ್ಲ. ಇದರಿಂದ ವೀಕ್ಷಕರಿಗೆ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಅವರನ್ನು ಅಷ್ಟೊಂದು ಅವಕಾಶ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಐಶ್ವರ್ಯಾನ ಅಷ್ಟೊಂದು ಸೇವ್ ಮಾಡುವ ಅವಶ್ಯಕತೆ ಏನಿತ್ತು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಎಲಿಮಿನೇಷನ್‌ ವಿಚಾರದಲ್ಲೂ ಪಾರ್ಶ್ಯಾಲಿಟಿ ನಡಿತಿದ್ಯಾ? ಆಕೆಯನ್ನ ಉಳಿಸಿಕೊಂಡಿದ್ದು ಏಕೆ ಅಂತಾ ವೀಕ್ಷಕರು ಕೇಳ್ತಿದ್ದಾರೆ.. ಸದ್ಯ ದೊಡ್ಮನೆಯಲ್ಲಿ ಐಶ್ವರ್ಯಗೆ ಮೂರು ವಾರಗಳ ಹೆಚ್ಚಿನ ಕಾಲಾವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಾದ್ರೂ ಐಶ್ವರ್ಯ ಚೆನ್ನಾಗಿ ಆಟ ಆಡ್ತಾರಾ? ತನಗೆ ಸಿಕ್ಕಿರೋ ಚಾನ್ಸ್‌ ಅನ್ನ ಸರಿಯಾಗಿ ಬಳಸಿಕೊಳ್ತಾರಾ ಅಂತಾ ಕಾದುನೋಡ್ಬೇಕು.

Shwetha M