ಹಲವು ವರ್ಷಗಳ ಕಾಲ ಲಿವ್ಇನ್ ರಿಲೇಷನ್ಶಿಪ್ - 102 ವರ್ಷದ ಅಜ್ಜಿಯನ್ನು ಮದುವೆಯಾದ 100ರ ಅಜ್ಜ!
ಪ್ರೀತಿ ಯಾವಾಗ, ಯಾರ ನಡುವೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿ ಕುರುಡು ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ 90 ವರ್ಷಗಳ ಕಾಲ ಲಿವ್ಇನ್ ರಿಲೇಷನ್ಶಿಪ್ನದಲ್ಲಿದ್ದ ಜೋಡಿಯೊಂದು 100ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಪಾಕ್ ಪಂಚಸೂತ್ರ! – ಚಾಂಪಿಯನ್ಸ್ ಟ್ರೋಫಿಗೆ 3+2 ಫಾರ್ಮುಲಾ
ಹೌದು, ಅಚ್ಚರಿಯಾದ್ರು ಸತ್ಯ. ಈ ಘಟನೆ ನಡೆದಿದ್ದು ಪೆನ್ಸಿಲ್ವೇನಿಯಾದಲ್ಲಿ. ಪರಸ್ಪರ ಪ್ರೀತಿಸಿ 90 ವರ್ಷಗಳ ಕಾಲ ಲಿವ್ಇನ್ ರಿಲೇಷನ್ಶಿಪ್ ನಲ್ಲಿದ್ದ ಜೋಡಿಯೊಂದು ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. 100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿದಿದ್ದು, ಈ ಮೂಲಕ ವಿಶ್ವದ ಅತ್ಯಂತ ಹಳೆಯ ನವವಿವಾಹಿತರು ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಸದ್ಯ ಇವರ ಮದುವೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಮೇ 3 ರಂದು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಸದ್ಯ ಇವರ ಮದುವೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(www.instagram.com/guinnessworldrecords) ಯಲ್ಲಿ ಇವರ ಮದುವೆಯ ಕುರಿತ ವಿಡಿಯೋ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.