ಒಂದೇ ದಿನದಲ್ಲಿ ಶ್ರೀರಸ್ತು ಶುಭಮಸ್ತು ಎಂಡ್‌? – ತುಳಸಿ ಅಲ್ಲ.. ವೀಕ್ಷಕರ ಪ್ಲಾನ್‌ ಸಕ್ಸಸ್‌?

ಒಂದೇ ದಿನದಲ್ಲಿ ಶ್ರೀರಸ್ತು ಶುಭಮಸ್ತು ಎಂಡ್‌? – ತುಳಸಿ ಅಲ್ಲ.. ವೀಕ್ಷಕರ ಪ್ಲಾನ್‌ ಸಕ್ಸಸ್‌?

ಶ್ರೀರಸ್ತು ಶುಭಮಸ್ತು ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ತುಳಸಿ ಹಾಗೂ ಶಾರ್ವರಿ ಈಗ ಮುಖಾಮುಖಿಯಾಗಿದ್ದಾರೆ.. ಮನೆ ಸರ್ವನಾಶ ಮಾಡ್ತೀನಿ ಅಂತಾ ಶಾರ್ವರಿ ಹೊರಟಿದ್ರೆ.. ಮನೆನಾ ಉಳಿಸೇ ಉಳಿಸ್ತೀನಿ ಅಂತಾ ತುಳಸಿ ಪಣತೊಟ್ಟಿದ್ದಾಳೆ.. ಇದೀಗ ತುಳಸಿ ಶಾರ್ವರಿಗೆ ಪ್ಲಾನ್‌ಗಳನ್ನ ಉಳ್ಟಾ ಮಾಡುವಲ್ಲಿ ಯಶಸ್ವಿಯಾಗ್ತಾ ಇದ್ದಾಳೆ.. ಸೀರಿಯಲ್‌ ಸ್ಟೋರಿ ಏನೋ ಡೈರೆಕ್ಟರ್‌ ಅಂದುಕೊಂಡಂತೆ ಸಾಗ್ತಾ ಇದೆ.. ಆದ್ರೆ ನಮ್‌ ವೀಕ್ಷಕ ಡೈರೆಕ್ಟರ್‌ ಇದ್ದಾರಲ್ಲ.. ಅವ್ರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.. ಸೀರಿಯಲ್‌ ನ ಒಂದೇ ದಿನದಲ್ಲಿ ಮುಗಿಸೋ ಪ್ಲ್ಯಾನ್‌ ಮಾಡಿದ್ದಾರೆ..

ಇದನ್ನೂ ಓದಿ: ಪಿಂಕ್‌ ಟೆಸ್ಟಲ್ಲಿ ಭಾರತದ ಪ್ಲಾಫ್‌ ಶೋ! – ರೋಹಿತ್ ಶರ್ಮಾ ತಲೆದಂಡ ಫಿಕ್ಸ್

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಕತೆ ಈಗ ರೋಚಕ ತಿರುವು ಪಡೆದುಕೊಂಡಿದೆ.  ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ತುಳಸಿ ತುಳಸಿ.. ಆದ್ರೆ  ಎಲ್ಲರನ್ನೂ ಸರ್ವನಾಶ ಮಾಡಲು ತಾನು ಏನು ಬೇಕಾದರೂ ಮಾಡಲು ಸಿದ್ಧವಿರುವ ಶಾರ್ವರಿ.. ಇದೀಗ ಇಬ್ಬರು ಸೊಸೆಯಂದಿರ ಮೇಲೆ ಸೀರಿಯಲ್‌ ಕತೆ ಸಾಗ್ತಾ ಇದೆ.. ತನ್ನ ಅಕ್ಕನ ಸಾವಿಗೆ ಮಾಧವನೇ ಕಾರಣ ಎನ್ನುವುದು ಶಾರ್ವರಿ ಆರೋಪ. ಹೀಗಾಗಿಯೇ ಶಾರ್ವರಿ ಮಾಧವ ಹಾಗೂ ಆತನ ಮಕ್ಕಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಬಂದಿದ್ದಾಳೆ. ಇದೀಗ ಈ ವಿಚಾರ ತುಳಸಿಗೆ ಗೊತ್ತಾಗಿದೆ. ಮನೆಗೆ ಬೆಂಗಾವಲು ಆಗಿರ್ತೀನಿ ಅಂತಾ ತುಳಸಿ ಹೊರಟಿದ್ದಾಳೆ.. ಶಾರ್ವರಿ ಮಾಧವನ ಮೇಲೆ ಏನು ಆರೋಪ ಮಾಡಿದ್ರು ತುಳಸಿ ಅದನ್ನ ಒಪ್ಪಿಕೊಳ್ಳಲು ರೆಡಿ ಇಲ್ಲ.. ತನ್ನ ಗಂಡ ಹೀಗೆ ಮೋಸ ಮಾಡಲು ಸಾಧ್ಯವಿಲ್ಲ, ಅದರಲ್ಲೇನೋ ಆಗಬಾರದ್ದು ಆಗಿದೆ ಅನ್ನೋದು ತುಳಸಿ ವಾದ. ಆದರೆ ಶಾರ್ವರಿ ಮಾತ್ರ ಮಾಧವನ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ. ಆದ್ರೆ ತುಳಸಿ ಈಗ ಸ್ಮಾರ್ಟ್‌ ಆಗಿಯೇ ಶಾರ್ವರಿಗೆ ಸೋಲುಣಿಸುತ್ತಾ ಬಂದಿದ್ದಾಳೆ.. ಶಾರ್ವರಿ ಪ್ಲ್ಯಾನ್ ಗಳನ್ನ ಉಲ್ಟಾ ಮಾಡ್ತಾ ಇದ್ದಾಳೆ.

ಹೌದು, ಮನೆಯವರೆಲ್ಲಾ ಸೇರಿ ತುಳಸಿ ಹೆಸರಲ್ಲಿ ಕಂಪನಿ ಶುರು ಮಾಡುತ್ತಿದ್ದಾರೆ.. ಇದ್ರ ಮೇಲೆ ಶಾರ್ವರಿ ಕಣ್ಣು ಬಿದ್ದಿದೆ. ಈ ಕಂಪನಿ ಶುರು ಆಗ್ಬಾರು ಅಂತ ಶತ ಪ್ರಯತ್ನ ಮಾಡಿದ್ಲು.. ಆದ್ರೆ ಅದು ಸಾಧ್ಯ ಆಗಿರ್ಲಿಲ್ಲ. ಈಗ ಆ ಕಂಪನಿಯ ದುಡ್ಡು ಹೊಡೆಯಲು ಪ್ಲಾನ್‌ ಮಾಡಿದ್ದಾಳೆ.. ಆದ್ರೆ ತುಳಸಿ ಮಾಡಿದ ಉಪಾಯದಿಂದ ಆ ಪ್ಲಾನ್‌ ಉಲ್ಟಾ ಆಗಿದೆ.. ಈಗ ಕಂಪನಿ ಜವಾಬ್ದಾರಿಯನ್ನ ತುಳಸಿ ಮಕ್ಕಳಿಗೆ ವಹಿಸಿದ್ದಾಳೆ.. ಅಷ್ಟೇ ಅಲ್ಲ ಶಾರ್ವರಿಗೂ ಶಾಕ್‌ ಕೊಟ್ಟಿದ್ದಾಳೆ.. ಮನೆಗೋಸ್ಕರ ಶಾರ್ವರಿ ತುಂಬಾ ದುಡಿದಿದ್ದಾರೆ. ಇನ್ನೂ ಅವರನ್ನ ದುಡಿಸಿಕೊಳ್ಳೋದು ಎಷ್ಟು ಸರಿ ಎಂದು ಮನೆಯವರ ಬಳಿ ಹೇಳಿದ್ದಾಳೆ. ಇದೀಗ ಅಕೌಂಟ್‌ ಜವಬ್ದಾರಿ ಮಕ್ಕಳ ಕೈ ಸೇರಿದೆ..

ಆದ್ರೆ ವೀಕ್ಷಕರು ಮಾತ್ರ ಒಂದೇ ದಿನದಲ್ಲಿ ಸೀರಿಯಲ್‌ ಮುಗಿಸೋ ಆತುರದಲ್ಲಿದ್ದಾರೆ.. ಈಗ ಅವರೇ ಸ್ಕ್ರಿಪ್ಟ್‌, ಸ್ಕ್ರೀನ್‌ ಪ್ಲೇ ಬರೆದು ಸೀರಿಯಲ್‌ ಡೈರೆಕ್ಟರ್‌ ಮಾಡುತ್ತಿದ್ದಾರೆ.. ಒಂದೆರಡು ಗಂಟೆಗಳಲ್ಲಿ ಹೇಳುವ ಕಥೆಯನ್ನು ಐದಾರು ವರ್ಷ ಎಳೆಯುವುದಕ್ಕೇ ಧಾರಾವಾಹಿ ಎಂದು ಹೇಳುವುದು ಎನ್ನುವುದು ಹೊಸ ವಿಷಯವೇನಲ್ಲ. ಇರುವ ಚಿಕ್ಕಕಥೆಯನ್ನು ಟಿಆರ್‍‌ಪಿ ಹೆಚ್ಚಾಗುತ್ತಿದ್ದಂತೆಯೇ ರಬ್ಬರ್‍‌ನಂತೆ ಎಳೆದೂ ಎಳೆದೂ ಬೇಕಾಗಿರುವ, ಬೇಡದ್ದ ಎಲ್ಲಾ ಸನ್ನಿವೇಶಗಳನ್ನು ಆಕಥೆಯೊಳಗೆ ತುರುಕಿ, ತಮಗೆ ಬೇಕಿರುವ ಪಾತ್ರಗಳನ್ನು ಅಚಾನಕ್‌ ಸೃಷ್ಟಿ ಮಾಡುವ ತಾಕತ್ತು ನಿರ್ದೇಶಕರಿಗೆ ಇರುತ್ತದೆ. ಅದನ್ನು ಬೈಯುತ್ತಲೇ ಪ್ರತಿನಿತ್ಯವೂ ಸೀರಿಯಲ್‌ ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದೂ ಸುಳ್ಳಲ್ಲ. ಆದರೆ ಕಥೆಗಳು ಹೀಗಿರಬೇಕಿತ್ತು. ಬೇಗನೇ ಮುಗಿಸಬಹುದಿತ್ತು ಎಂದೆಲ್ಲಾ ಕಮೆಂಟ್‌ಗಳೂ ಇದೇ ವೇಳೆ ನಡೆಯುತ್ತಲೇ ಇರುತ್ತವೆ.

ಅದರಲ್ಲಿಯೂ ಸೋಷಿಯಲ್‌ ಮೀಡಿಯಾಗಳಲ್ಲಿ ಈಗ ವೀಕ್ಷಕರೂ ನಿರ್ದೇಶಕರಾಗುತ್ತಿದ್ದಾರೆ. ಅದೇ ರೀತಿ ಈಗ ತುಳಸಿ ಮತ್ತು ಶಾರ್ವರಿ ನಡುವಿನ ಈ ಸಂಭಾಷಣೆ ಬಳಿಕ ಒಂದೇ ದಿನದಲ್ಲಿ ಸೀರಿಯಲ್‌ ಮುಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಶಾರ್ವರಿ ಇಡೀ ಕುಟುಂಬವನ್ನು ಸರ್ವನಾಶ ಮಾಡುವುದಾಗಿ ಹೇಳುತ್ತಿದ್ದಾಳೆ. ತುಳಸಿ ಕೈಯಲ್ಲಿ ಮೊಬೈಲ್‌ ಇರುವುದು ಯಾಕೆ, ಅದರಲ್ಲಿ ರೆಕಾರ್ಡ್ ಮಾಡಿಕೊಂಡು ಮನೆಯ ಮಂದಿಯ ಮುಂದೆ ಪ್ಲೇ ಮಾಡಿದ್ರೆ ಅಲ್ಲೇ ಲಾಟರಿ, ಅಲ್ಲೇ ಡ್ರಾ ಆಗಿ ಹೋಗ್ತಿತ್ತಲ್ಲ. ಐದಾರು ವರ್ಷ ಚ್ಯೂಯಿಂಗ್‌ ಗಮ್‌ನಂತೆ ಕಥೆ ಎಳೆಯುವುದೇ ಬೇಕಿರಲಿಲ್ಲ ಎಂದು ಹೇಳುತ್ತಿದ್ದಾರೆ ನೆಟ್ಟಿಗರು!

ಇದೊಂದೇ ಸೀರಿಯಲ್‌ ಅಲ್ಲ, ಸಾಮಾನ್ಯವಾಗಿ ಎಲ್ಲಾ ಸೀರಿಯಲ್‌ಗಳಲ್ಲಿಯೂ ಹೀಗೆ ಅಲ್ವಾ? ವಿಲನ್‌ ಮತ್ತು ನಾಯಕಿ ನಡುವೆ ಸಂಭಾಷಣೆ ನಡೆಯುತ್ತದೆ. ಇಬ್ಬರ ಕೈಯಲ್ಲಿಯೂ ಮೊಬೈಲ್‌ ಫೋನ್‌ ಇರುತ್ತದೆ. ಮುಂದೆ ಇರುವವರ ಅರಿವಿಗೆ ಬಾರದೇ ರೆಕಾರ್ಡ್ ಮಾಡುವುದು ಈಗೇನೂ ಕಷ್ಟವೇ ಅಲ್ಲ. ಹಾಗಿದ್ದ ಮೇಲೆ ರೆಕಾರ್ಡ್ ಮಾಡದೇ ಯಾಕೆ ಸೀರಿಯಲ್‌ ಎಳೆಯುತ್ತೀರಾ ಎಂಬ ಪ್ರಶ್ನೆ ಮಾಡುವುದು ಕಾಮನ್‌ ಆಗಿದೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿಯೂ ಹಾಗೆಯೇ ಮಾಡಿ ಒಂದೆರಡು ದಿನಗಳಲ್ಲಿ ಸೀರಿಯಲ್‌ ಮುಗಿಸಿ ಎನ್ನುತ್ತಿದ್ದಾರೆ ನೆಟ್ಟಿಗರು! ಆದರೆ ಅದು ಹಾಗಾಗಲ್ಲ ಎನ್ನುವುದು ಅವರಿಗೂ ಗೊತ್ತು, ನಿರ್ದೇಶಕರಿಗೂ ಗೊತ್ತು.

Shwetha M

Leave a Reply

Your email address will not be published. Required fields are marked *