HITಮ್ಯಾನ್ ಬ್ಯಾಟ್ ಸೈಲೆಂಟ್.. 11 ಇನ್ನಿಂಗ್ಸ್.. ಗಳಿಸಿದ್ದು 134 ರನ್! – ರೋಹಿತ್ ಕ್ಯಾಪ್ಟನ್ಸಿ ಬುಮ್ರಾ ಪಾಲು?
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ನಲ್ಲಿರೋ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ತುಂಬಾನೇ ಇಂಪಾರ್ಟೆಂಟ್. 5 ಪಂದ್ಯಗಳ ಟೆಸ್ಟ್ ಸರಣಿಯನ್ನ 4-1 ಅಂತರದಲ್ಲಿ ಗೆದ್ದರಷ್ಟೇ ಡಬ್ಲ್ಯುಟಿಸಿ ಫೈನಲ್ಗೆ ಎಂಟ್ರಿ ಕೊಡ್ಬೋದು. ಈಗಾಗ್ಲೇ ಒಂದು ಮ್ಯಾಚ್ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನಿಡೋ ಜೋಶ್ನಲ್ಲಿತ್ತು. ಬಟ್ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸಿಸ್ ಆಟಗಾರರು ಮೇಲುಗೈ ಸಾಧಿಸಿದ್ದಾರೆ. ಇದೇ ಈಗ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ತಲೆಬಿಸಿ ತಂದಿಟ್ಟಿದೆ. ತಂಡದ ಪರ್ಫಾಮೆನ್ಸ್ಗಿಂತ ಕ್ಯಾಪ್ಟನ್ ರೋಹಿತ್ ರ ಪ್ರದರ್ಶನವೇ ಹೆಚ್ಚು ಚಿಂತೆಗೀಡು ಮಾಡಿದೆ. ಕಳಪೆ ಫಾರ್ಮ್ ನಿಂದ ಒದ್ದಾಡ್ತಿರೋ ರೋಹಿತ್ ಶರ್ಮಾ ಪರ್ಫಾಮೆನ್ಸ್ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್? – ಸುಳಿವು ನೀಡಿದ ಹೆಚ್ಡಿ ದೇವೇಗೌಡ
ರೋಹಿತ್ ಶರ್ಮಾ. ಟೀಂ ಇಂಡಿಯಾದಲ್ಲಿ ಹಿಟ್ಮ್ಯಾನ್ ಅಂತಾನೇ ಕರೆಸಿಕೊಳ್ಳೋ ಸ್ಟಾರ್ ಬ್ಯಾಟರ್. ಅದ್ರ ಜೊತೆಗೆ ಯಶಸ್ವೀ ಕ್ಯಾಪ್ಟನ್. ಬಟ್ ಟಿ-20 ವಿಶ್ವಕಪ್ ಬಳಿಕ ರೋಹಿತ್ ಕಳಪೆ ಫಾರ್ಮ್ನಿಂದ ಒದ್ದಾಡ್ತಿದ್ದಾರೆ. ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲೋಕೂ ಆಗ್ದೇ ರನ್ ಗಳಿಸೋಕೆ ಆಗ್ದೇ ವಿಕೆಟ್ ಒಪ್ಪಿಸ್ತಿದ್ದಾರೆ. ಇದೀಗ ಆಸಿಸ್ ಸರಣಿಯಲ್ಲೂ ಕೂಡ ಇದೇ ಕಂಟಿನ್ಯೂ ಆಗಿದೆ.
ರೋಹಿತ್ ಆಬ್ಸೆನ್ಸ್ ನಲ್ಲಿ ಫಸ್ಟ್ ಮ್ಯಾಚ್ ಗೆದ್ದಿದ್ದ ಕ್ಯಾಪ್ಟನ್ ಬುಮ್ರಾ!
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಗುಳಿದಿದ್ರು. ರೋಹಿತ್ ಇಲ್ಲದ ಕಾರಣ ವೈಸ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾವನ್ನ ಲೀಡ್ ಮಾಡಿದ್ದರು. ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ 295 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಶುಕ್ರವಾರದಿಂದ ಸ್ಟಾರ್ಟ್ ಆಗಿರೋ ಆಡಿಲೇಡ್ ಟೆಸ್ಟ್ಗೆ ರೋಹಿತ್ ತಂಡವನ್ನು ಸೇರಿಕೊಂಡಿದ್ದಾರೆ. ಈ ವರ್ಷ ರೋಹಿತ್ ಬ್ಯಾಟ್ ಟೆಸ್ಟ್ ಫಾರ್ಮೆಟ್ನಲ್ಲಿ ಅಬ್ಬರಿಸದೇ ಇದ್ದರೂ ಸಹ ತಂಡದ ಮ್ಯೇನೆಜ್ಮೆಂಟ್ ವಿಶ್ವಾಸವನ್ನು ಇಟ್ಟಿದೆ.
ಓಪನರ್ ಆಗಿ ಕೆಎಲ್.. 6ನೇ ಸ್ಲಾಟ್ ನಲ್ಲಿ ಕಣಕ್ಕಿಳಿದಿದ್ದ ರೋಹಿತ್!
ಪರ್ತ್ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿರು 201 ರನ್ಗಳ ಜೊತೆಯಾಟವಾಡಿದ್ರು. ಹೀಗಾಗಿ ಎರಡನೇ ಟೆಸ್ಟ್ಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ತಮ್ಮ ಓಪನರ್ ಸ್ಲಾಟ್ನ ಕೆಎಲ್ ರಾಹುಲ್ಗೆ ಬಿಟ್ಟು ತಾವು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳ್ದಿದ್ರು. ಬಟ್ ಬ್ಯಾಡ್ಲಕ್ ಏನಂದ್ರೆ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ಔಟಾದ್ರು. 37 ರನ್ ಗಳಿಸಿ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ರು. ತಂಡದ ಹಿತಕ್ಕಾಗಿ ಮಧ್ಯಮ ಕ್ರಮಾಂಕದಲ್ಲಿ ಆಡೋದಾಗಿ ಹೇಳಿದ್ದ ರೋಹಿ್ತ ಶರ್ಮಾ ದೊಡ್ಡ ಇನಿಂಗ್ಸ್ ಆಡಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ.
23 ಬಾಲ್ ಗಳಲ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಹಿಟ್ ಮ್ಯಾಚ್!
ಟೀಂ ಇಂಡಿಯಾ ಪರ ಟಾಪ್ ಆರ್ಡರ್ ಬ್ಯಾಟರ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದಾಗ ರೋಹಿತ್ ಶರ್ಮಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ರು. ಈ ವೇಳೆ 23 ಎಸೆತಗಳಲ್ಲಿ ಫೇಸ್ ಮಾಡಿ ಮೂರು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಜೋಶ್ ಹ್ಯಾಜಲ್ವುಡ್ ಸ್ಥಾನದಲ್ಲಿ ಆಸಿಸ್ ತಂಡ ಸೇರಿದ್ದ ಸ್ಕಾಟ್ ಬೋಲ್ಯಾಂಡ್ ರೋಹಿತ್ ಶರ್ಮಾರ ವಿಕೆಟ್ ತೆಗೆದಿದ್ರು. ಈ ಮೂಲಕ ಟೆಸ್ಟ್ ನಲ್ಲಿ ರೋಹಿತ್ ಅವರ ಕಳಪೆ ಫಾರ್ಮ್ ಮತ್ತೊಮ್ಮೆ ಕಂಟಿನ್ಯೂ ಆಯ್ತು. ಅಡಿಲೇಡ್ ಟೆಸ್ಟ್ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಫೇಲಾಗಿದ್ರು. 11 ಎಸೆತಗಳನ್ನ ಎದುರಿಸಿದ ಕ್ಯಾಪ್ಟನ್ ರೋಹಿತ್, ಕೇವಲ 3 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.
ಕಳೆದ 11 ಇನ್ನಿಂಗ್ಸ್ ಗಳಿಂದ ಗಳಿಸಿದ್ದು ಒಂದೇ ಅರ್ಧ ಶತಕ!
ರೋಹಿತ್ ಶರ್ಮಾ ಹೇಳಿ ಕೇಳಿ ಹೊಡಿಬಡಿ ಆಟಕ್ಕೆ ಫೇಮಸ್ ಆದವ್ರು. ಆದ್ರೆ ಟೆಸ್ಟ್ ಫಾರ್ಮೆಟ್ನಲ್ಲಿ ಅದ್ಯಾಕೋ ಬ್ಯಾಟ್ ಮಾತ್ರ ಸೈಲೆಂಟ್ ಆಗಿದೆ. ಕಳೆದ 11 ಇನ್ನಿಂಗ್ಸ್ಗಳಲ್ಲಿ ಅವರು ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಅದೂ ಕೂಡ ಸರಾಸರಿ ಕೇವಲ 12.36. ಈ ಅಂಕಿ ಅಂಶಗಳೇ ಇದೀಗ ರೋಹಿತ್ ಶರ್ಮಾ ಕಳಪೆ ಫಾರ್ಮ್ನಿಂದ ಬಳಲ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿವೆ. ಇನ್ನು ಭಾರತದಲ್ಲೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕೂಡ ರೋಹಿತ್ ಶರ್ಮಾ ಫೇಲ್ಯೂರ್ ಅನುಭವಿಸಿದ್ರು. ಮೂರು ಪಂದ್ಯಗಳ 6 ಇನ್ನಿಂಗ್ಸ್ಗಳಿಂದ ಕೇವಲ 91 ರನ್ಗಳಿಸಲಷ್ಟೇ ಶಕ್ತರಾಗಿದ್ರು.
ಬುಮ್ರಾಗೆ ಕ್ಯಾಪ್ಟನ್ಸಿ ನೀಡುವಂತೆ ಕ್ರಿಕೆಟ್ ಫ್ಯಾನ್ಸ್ ಒತ್ತಾಯ!
ಇನ್ನು ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸೋಕೆ ಒದ್ದಾಡ್ತಿರೋರನ್ನ ನೋಡಿದ ಅಭಿಮಾನಿಗಳು ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸುವಂತೆ ಒತ್ತಾಯಿಸಿದ್ದಾರೆ. ಅದ್ರಲ್ಲೂ ಪರ್ತ್ ಟೆಸ್ಟ್ ಮ್ಯಾಚ್ನ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಗೆದ್ದ ಮೇಲೆ ಈ ಕೂಗು ಮತ್ತಷ್ಟು ಜೋರಾಗಿದೆ. ಅಭ್ಯಾಸ ಪಂದ್ಯದಲ್ಲಿ ರೋಹಿತ್ ಫೇಲ್ಯೂರ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ರು. ಮುಂದಿನ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪ್ಲೇಯಿಂಗ್ 11ನಲ್ಲಿ ಆಡೋದು ಬೇಡ. ಟೀಮ್ ಮ್ಯಾನೇಜ್ಮೆಂಟ್ ವಿನ್ನಿಂಗ್ ಕಾಂಬಿನೇಷನ್ ಬದಲಿಸುವುದು ಸರಿಯಲ್ಲ ಎಂದು ಸಲಹೆ ನೀಡಿದ್ದರು.
ಉಳಿದ ಪಂದ್ಯಗಳಲ್ಲಾದ್ರೂ ಅಬ್ಬರಿಸಲೇಬೇಕಿದೆ ಹಿಟ್ ಮ್ಯಾನ್!
ರೋಹಿತ್ ಶರ್ಮಾ ಒಬ್ಬ ಬೆಸ್ಟ್ ಪ್ಲೇಯರ್ ಹಾಗೇ ಕ್ಯಾಪ್ಟನ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇವರ ಕ್ಯಾಪ್ಟನ್ಸಿಯಲ್ಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಌಕ್ಚುಲಿ ಟಿ-20 ವಿಶ್ವಕಪ್ನಲ್ಲಿ ಭಾರತ ಪರ ಅತೀಹೆಚ್ಚು ಸ್ಕೋರ್ ಮಾಡಿದ್ದು ಕೂಡ ರೋಹಿತ್ರೇ. ಬಟ್ ಟೆಸ್ಟ್ ಮ್ಯಾಚ್ ಅಂತಾ ಬಂದಾಗ ಎಲ್ಲೋ ಒಂದ್ಕಡೆ ಡಲ್ ಆಗ್ತಿದ್ದಾರೆ. ಇದೇ ಈಗ ಟೀಂ ಮ್ಯಾನೇಜ್ಮೆಂಡ್ ಚಿಂತೆಯನ್ನು ಹೆಚ್ಚು ಮಾಡಿದೆ. ರೋಹಿತ್ ಶರ್ಮಾ ಅವರಿಗೆ ಮುಂದೆ ಇನ್ನು ಒಂದು ಇನಿಂಗ್ಸ್ ಹಾಗೂ ಮೂರು ಟೆಸ್ಟ್ಗಳು ಬಾಕಿ ಇವೆ. ಈ ವೇಳೆ ರೋಹಿತ್ ಅಬ್ಬರಿಸಲೇಬೇಕಿದೆ. ಕಳಪೆ ಫಾರ್ಮ್ನಿಂದ ಹೊರಬಂದು ತಮ್ಮೊಳಗೆ ಇನ್ನೂ ಕೂಡ ಸ್ಟ್ರೆಂಥ್ ಇದೆ ಅನ್ನೋದನ್ನ ಪ್ರೂವ್ ಮಾಡ್ಬೇಕಿದೆ.
ಸದ್ಯ ಆಡಿಲೇಡ್ನಲ್ಲಿ ನಡೆಯುತ್ತಿರುವ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಿ 180 ರನ್ಗಳಿಗೆ ಆಲೌಟ್ ಆಗಿತ್ತು. ಮತ್ತೊಂದೆಡೆ ಆಸ್ಟ್ರೇಲಿಯಾ ಇಷ್ಟೂ ರನ್ಗಳನ್ನ ಬೀಟ್ ಮಾಡಿದ್ದು ಲೀಡ್ ತೆಗೆದುಕೊಂಡಿದೆ. ಹೀಗಾಗಿ ಮ್ಯಾಚ್ನಲ್ಲಿ ಆಸಿಸ್ ಮೇಲುಗೈ ಸಾಧಿಸಿದ್ದು ಸೆಕೆಂಡ್ ಇನ್ನಿಂಗ್ಸ್ನಲ್ಲಾದ್ರೂ ಭಾರತದ ಬ್ಯಾಟರ್ಸ್ ಭರ್ಜರಿ ಪರ್ಫಾಮೆನ್ಸ್ ನೀಡ್ಲೇಬೇಕು.