ಅಲ್ಲು ಕಿಸಕ್.. ಸಿನಿಮಾ ಧಮಾಕಾ! – ಶೇಖಾವತ್ ಖಾಲಿ.. ಡಾಲಿ ಜಾಲಿ?
ಪುಷ್ಪ.. ಪುಷ್ಪ.. ದಿ ರೂಲ್.. ಇದು ಪುಷ್ಪ ಒನ್ನಲ್ಲಿ ಫೈರ್ ಆಗಿದ್ರೆ.. ಪುಷ್ಪ ಟುನಲ್ಲಿ ವೈಲ್ಡ್ ಫೈರ್ ಆಗಿದೆ.. ತಗ್ಗದೇ ಇಲ್ಲ.. ಈ ಡೈಲಾಗ್ ಮತ್ತೆ ಥಿಯೇಟರ್ನಲ್ಲಿ ಅಬ್ಬರಿಸುತ್ತಿದೆ.. ಮೂವಿ ಅಂದ್ರೆ ಹೇಗಿರಬೇಕು ಎಂಬ ಕಲ್ಪನೆಯನ್ನು ಬೇರೆಯದ್ದೇ ರೇಂಜ್ಗೆ ಕೊಂಡೊಯ್ದಿದೆ ಈ ವೈಲ್ಡ್ಫೈರ್ ಪುಷ್ಪ.. ಎಲ್ಲರೂ ಪುಷ್ಪ ಪಾರ್ಟ್ 1 ನೋಡಿ ನಂತ್ರ ಯಾವಾಗಪ್ಪ ಪುಷ್ಪ 2 ಬರುತ್ತೆ ಅಂತಾ ಕಾಯುತ್ತಿದ್ದರು.. ಪೋಸ್ಟರ್, ಟ್ರೈಲರ್ ನೋಡಿ ಇದ್ರ ಕ್ರೇಜ್ ಇನ್ನೂ ಜಾಸ್ತಿ ಆಗಿತ್ತು.. ಫೈನಲಿ ಪಾರ್ಟ್ 2 ತೆರೆಮೇಲೆ ಭರ್ಜರಿಯಾಗಿ ಅಬ್ಬರಿಸಿದೆ. ಪಾರ್ಟ್ 2 ನೋಡಿದ ಫ್ಯಾನ್ಸ್ ನಿದ್ದೆ ಬಿಟ್ಟು ಪಾರ್ಟ್ 3ಗೆ ಕಾಯುವಂತೆ ಮಾಡಿಬಿಟ್ಟಿದ್ದಾರೆ ನಿರ್ದೇಶಕ ಸುಕುಮಾರ್.. ಅದು ನ್ಯಾಷನಲ್ ಅಲ್ಲ.. ಇಂಟರ್ನ್ಯಾಷನಲ್ ಅನ್ನೋದ್ರಲ್ಲಿ ಈಗ ಯಾವ ಅನುಮಾನ ಕೂಡ ಉಳಿದಿಲ್ಲ.. ಅದಕ್ಕೂ ಮುಂಚೆ ಪಾರ್ಟ್ ಪುಷ್ಪ 2 ಹೇಗಿದೆ ಎಂದು ವಿಮರ್ಶೆ ಮಾಡಲಾಗಿದೆ.
ಇದನ್ನೂ ಓದಿ: ಭಾಗ್ಯ ಜ್ವಾಲಾಮುಖಿ.. ಶ್ರೇಷ್ಠಾ ದ್ವೇಷ ಬೀದಿಗೆ ಬಿದ್ದ ತಾಂಡವ್? – ತಪ್ಪು ಮಾಡಿದ್ಲಾ ಕುಸುಮಾ ಸೊಸೆ?
ಎಂಟ್ರಿ ಫುಲ್ ಆಕ್ಷನ್ & ಫುಲ್ ಥ್ರಿಲ್. .ಆಕ್ಷನ್ ಇಷ್ಟಪಡೋ ಮಂದಿಗೆ ಕಿಕ್ಕೋ ಕಿಕ್ಕು. ಹಾಗಂತ ಕೆೇವಲ ಆಕ್ಷನ್ ಗೆ ಮಾತ್ರ ಸೀಮಿತವಾಗಿಲ್ಲ.. ಫ್ಯಾಮಿಲಿ ಅಟ್ಯಾಚ್ಮೆಂಟು.. ಸೆಂಟಿಮೆಂಟು ಎಲ್ಲಾ ಸೇರಿಕೊಂಡಿದೆ.. ಶ್ರೀಲೀಲಾ ಬಳ್ಳಿಯಂತೆ ಸೊಂಟ ಬಳುಕಿಸಿದ್ರೆ ಪಕ್ಕದಲ್ಲೇ ಹೆಂಡ್ತಿ ಶ್ರೀವಲ್ಲಿ ಗಂಡನನ್ನು ಕಿಚಾಯಿಸುತ್ತಾ ಸಾಗುವುದೇ ಪುಷ್ಪದ ಸ್ಪೆಷಾಲಿಟಿ.. ಪುಷ್ಪ ಪಾರ್ಟ್ 1 ನೋಡಿದವರಿಗೆ ಶೇಖಾವತ್ ಪಾತ್ರ ತುಂಬಾ ಮಜಾ ಕೊಟ್ಟಿತ್ತು. ಪಾರ್ಟ್ 2 ನಲ್ಲೂ ಶೇಖಾವತ್ ಪಾತ್ರದಲ್ಲಿ ನಟಿಸಿರುವ ಫಹಾದ್ ಫಾಸಿಲ್ ನಿಮ್ಮನ್ನ ಹುಚ್ಚರಂತೆ ಕಾಡಿ ನೆನಪಿನಲ್ಲಿ ಉಳಿಯೋ ರೀತಿ ಮಾಡಿಬಿಡುತ್ತಾರೆ. ಅಷ್ಟೂ ಅದ್ಭುತವಾಗಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪಾತ್ರ ಸ್ಕ್ರೀನ್ ಮೇಲೆ ಥ್ರೀಲ್ ಕೊಡುತ್ತೆ. 3 ಗಂಟೆ 20ನಿಮಿಷದ ಸಿನಿಮಾ ಹೇಗಿರುತ್ತೋ ಅನ್ನೋರಿಗೆ ನಿರ್ದೇಶಕರು ಎಲ್ಲೂ ಬೋರ್ ಹೊಡಿಸಿಲ್ಲ. ಸಿನಿಮಾ ಮುಗಿಯೋದೇ ಗೊತ್ತಾಗಲ್ಲ.. ಪುಷ್ಪನ ಆರ್ಭಟ, ಶ್ರೀವಲ್ಲಿಯ ಸಾಥ್.. ಶ್ರೀಲೀಲಾ ಡಾನ್ಸ್, ಶೇಖಾವತ್ ಅಬ್ಬರ.. . ಕಂಪ್ಲೀಟ್ ಪುಷ್ಪ ಪಾರ್ಟ್ 2 ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತೆ.. ಅಳುವಂತೆ ಮಾಡುತ್ತೆ, ಕಣ್ಣೀರು ಬರುವಷ್ಟರಲ್ಲಿ ಹೊಟ್ಟೆ ತುಂಬಾ ನಗುವಂತೆ ಮಾಡುತ್ತೆ, ಸೀಟಿನ ಅಂಚಿನಲ್ಲಿ ತಂದು ಕೂರಿಸುತ್ತೆ. ಎಸ್ಪಿ ಭನ್ವರ್ ಸಿಂಗ್ ಶೇಖಾವತ್ಗೆ ಪುಷ್ಪರಾಜ್ ಸವಾಲು ಹಾಕುವುದರೊಂದಿಗೆ ಪುಷ್ಪ ಎಂಡ್ ಆಗಿತ್ತು. ಪಾರ್ಟ್-2ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಪ್ರೆಸಿಡೆಂಟ್ ಆಗಿ ‘ಪುಷ್ಪ’ ಮೆರೆಯೋಕೆ ಶುರು ಮಾಡ್ತಾನೆ. ಹಂತ ಹಂತವಾಗಿ ಬೆಳೆದು ಹಣದ ಹೊಳೆಯನ್ನ ಹರಿಸುತ್ತಾನೆ. ಹಣಯಿದ್ರೆ ಏನೆಲ್ಲಾ ಮಾಡಬಹುದು ಅನ್ನೋದನ್ನ ಪುಷ್ಪ ತೋರಿಸುತ್ತಾನೆ. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ದಂಧೆ ಅಡ್ಡ ಬಂದ ಪೊಲೀಸ್ ಠಾಣೆಯ ಅಷ್ಟು ಸಿಬ್ಬಂದಿಯನ್ನೇ ಆಡಿಸುವುದರ ಮೂಲಕ ಶೇಖಾವತ್ಗೆ ತನ್ನ ತಾಕತ್ತು ಏನ್ ಅನ್ನೋದನ್ನ ಸಿನಿಮಾದಲ್ಲಿ ತೋರಿಸುತ್ತಾನೆ. ಶ್ರೀವಲ್ಲಿ ಜೊತೆ ಸಂಸಾರ ಮಾಡೋ ಪುಷ್ಪ ಹೆಂಡತಿಯ ಚಿಕ್ಕ ಆಸೆ ತಿರಿಸೋಕೆ ರಾಜ್ಯದ ಸಿಎಂಗೆ ಹಾಕುವ ಸವಾಲು ಇದ್ಯಲ್ಲಾ.. ಹೀರೋಯಿಸಂ ಅಂದ್ರೆ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿ..ಅದಕ್ಕಾಗಿ ದೊಡ್ಡಮೊತ್ತದ ಹಣ ಬೇಕು. ಒಂದು ದೊಡ್ಡ ಡೀಲ್ ಮಾಡಿ ಹಣ ಹೊಂದಿಸಲು ಮುಂದಾಗುತ್ತಾನೆ. ಈ ಹಾದಿಯಲ್ಲಿ ಶೇಖಾವತ್ಗೆ ಚಳ್ಳೆಹಣ್ಣು ತಿನ್ನಿಸಿ, ಪುಷ್ಪ ತಗ್ಗೊದೇ ಇಲ್ಲ ಎಂದು ಡೈಲಾಗ್ ಹೊಡಿತ್ತಾನೆ. ನದಿಯಲ್ಲಿ ರಕ್ತಚಂದನ ಸಾಗಿಸುವ ರೀತಿ.. ನಂತ್ರ ಶೇಖಾವತ್ನನ್ನು ದಾರಿತಪ್ಪಿಸಲು ಕೊಟ್ಟಿರುವ ಟ್ವಿಸ್ಟ್ ಮಾತ್ರ ಸೂಪರ್. ಪುಷ್ಪ 1 ನಲ್ಲಿ ಅವಮಾನ ಮಾಡಿದ್ದಕ್ಕೆ ಮೊದಲ ಕಮೀಷನ್ನಲ್ಲಿ ಕಾರನ್ನೇ ಖರೀದಿ ಮಾಡಿದವನು ಪುಷ್ಪರಾಜ್. ಈಗ ದ್ವೀತೀಯಾರ್ಧದಲ್ಲೂ ಪುಷ್ಪರಾಜ್ಗೆ ಅದೇ ಆ್ಯಟಿಟ್ಯೂಡ್ ಇದೆ. ಅದು ಬದಲಾಗಿಲ್ಲ. ಈತನ ಬಳಿ ದುಡ್ಡಿಗೆ ಬೆಲೆ ಇಲ್ಲ, ಅಧಿಕಾರಕ್ಕೆ ಹೆದರಲ್ಲ. ಈ ಮೊದಲು ಒಮಿನಿ ಖರೀದಿಸುತ್ತಿದ್ದ ಪುಷ್ಪರಾಜ್ ಈಗ ಹೆಲಿಕ್ಯಾಪ್ಟರ್ ಕೊಂಡುಕೊಳ್ಳುತ್ತಾನೆ.
ದ್ವಿತಿಯಾರ್ಧದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಕಥೆ ಪಕ್ಕಕ್ಕೆ ಸರಿಯುತ್ತದೆ. ‘ಪುಷ್ಪ’ರಾಜ್ ಫ್ಯಾಮಿಲಿ ಕಥೆ ಮುಂದಕ್ಕೆ ಬರುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಪುಷ್ಪರಾಜ್ ಬಯಸಿದ್ದ ಮನೆತನದ ಹೆಸರು ಗಳಿಸಲು ಸಿಗುವ ಅವಕಾಶವನ್ನು ಹೇಗೆ ಬಳಸಿಕೊಂಡಿದ್ದಾನೆ ಅನ್ನೋದೇ ಹೈಲೈಟ್ ಆಗುತ್ತಾ ಹೋಗುತ್ತೆ.. ಅದರಲ್ಲೂ ಗಂಗಮ್ಮ ಜಾತ್ರೆಯಲ್ಲಿ ಹರಕೆ ತೀರಿಸಲು ವಿಭಿನ್ನ ಲುಕ್ನಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಸಖತ್ ಆಗಿದೆ. ಅತಿಹೆಚ್ಚು ಖರ್ಚು ಮಾಡಿದ ಆ ಸಾಂಗ್ ಸೀನ್ ಅನ್ನು ನಿರ್ದೇಶಕ ಸುಕುಮಾರ್ ಬಳಸಿಕೊಂಡ ರೀತಿಯನ್ನು ಗಮನಿಸಿದ್ರೆ, ದುಡ್ಡು ಇರೋದು ದುಂದುವೆಚ್ಚಕ್ಕೆ ಅಲ್ಲ.. ಅದ್ದೂರಿತನದ ಜೊತೆಗೆ ಖರ್ಚು ಮಾಡಿದ ದುಡ್ಡನ್ನು ಸರಿಯಾಗಿ ಬಳಸೋದು ಹೇಗೆ ಅನ್ನೋದಕ್ಕೆ ಅದೇ ಸಾಕ್ಷಿ..
ಇನ್ನು ಪುಷ್ಪದಲ್ಲಿ ಒಂದು ಸೀನ್ ನಿಮಗೆ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನೆನಪಿಸೋದು ಪಕ್ಕಾ.. ಕಾಂತಾರಾದಲ್ಲಿ ಶಿವನ ಹೊಡೆದಾಟವನ್ನು ಹೋಲುತ್ತೆ ಪುಷ್ಪನ ಹೊಡೆದಾಟ.. ಆದ್ರೆ ಸಿನಿಮಾದ ಅದ್ದೂರಿತನ.. ಸುಮಾರು ಐದಾರು ನಿಮಿಷ ಸಾಗುವ ಬಡಿದಾಟದ ದೃಶ್ಯ ಎದೆ ನಡುಗಿಸುವುದು ಮಾತ್ರವಲ್ಲ.. ಅಬ್ಬರದ ಸೌಂಡ್ ಎಫೆಕ್ಟ್.. ಅದಕ್ಕೆ ಒಪ್ಪುವಂತಹ ಶ್ಲೋಕ.. ಅಬ್ಬಬ್ಬಾ.. ಅದನ್ನು ಕಣ್ತುಂಬಿಕೊಳ್ಳುವುದರಲ್ಲೇ ಪುಷ್ಪ ನೆಕ್ಸ್ಟ್ ಲೆವೆಲ್ ಮೂವಿ ಅಂತ ಸಾಬೀತುಪಡಿಸುತ್ತದೆ.. ಇಡೀ ಕತೆಗೆ ಕಡೆಗೊಂದು ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.. ಅದು ಗೊತ್ತಾಗ್ಬೇಕು ಅಂದ್ರೆ ಸಿನಿಮಾ ನೋಡ್ಲೇಬೇಕು.. ಆದ್ರೆ ಈ ಸಿನಿಮಾದಲ್ಲಿ ನಿಜಕ್ಕೂ ಏನಿದೆ ಅಂತ ಯಾರಾದ್ರೂ ಕೇಳಿದ್ರೆ ಒಂದು ಮಾತಂತೂ ಖಂಡಿತವಾಗಿಯೂ ಹೇಳಬಹುದು.. ಇದೊಂದು ಪಕ್ಕಾ ಎಂಟರ್ಟೈನ್ಮೆಂಟ್ ಇರುವ ಮಾಸ್ ಹಾಗೂ ಕ್ಲಾಸ್ಗೂ ಒಪ್ಪುವ ಇಂಡಿಯನ್ ಸಿನಿಮಾ.. ಭಾರತದ ಸಿನಿಮಾ ಮಾರುಕಟ್ಟೆಯನ್ನೇ ಬೇರೆಯದ್ದೇ ಲೆವೆಲ್ಗೆ ಪುಷ್ಪ-2 ಕೊಂಡೊಯ್ದಿದೆ..
ಇಷ್ಟೆಲ್ಲಾ ಹೇಳಿದ್ಮೇಲೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಬಗ್ಗೆ ಹೇಳಲೇಬೇಕು.. ಕಿರಿಕ್ಪಾರ್ಟಿಯ ಈ ಕಿರಿಕ್ ಬೆಡಗಿ, ಪುಷ್ಪ -2ನಲ್ಲಿ ನಿಜಕ್ಕೂ ಮಿಂಚಿದ್ದಾರೆ.. ಅದರಲ್ಲೂ ಜಾತ್ರೆಯಲ್ಲಿ ಪುಷ್ಪನ ಮಲಸಹೋದರನ ಮುಂದೆ ಶ್ರೀವಲ್ಲಿಯ ಡೈಲಾಗ್ ಮತ್ತು ಕೆಲವೊಂದು ಕಡೆ ಕೇವಲ ಕಣ್ ಸನ್ನೆಯ ಮೂಲಕವೇ ಮಾಡುವ ಸಂಭಾಷಣೆ ಇವೆಲ್ಲವೂ ರಶ್ಮಿಕಾ ಮಂದಣ್ಣ ಖ್ಯಾತಿ ಹಾಗೂ ಬ್ಯೂಟಿಯನ್ನು ಮತ್ತಷ್ಟು ಹೆಚ್ಚಿಸಿದೆ..
ಪುಷ್ಪಾ-3ಗೆ ದಿ ರ್ಯಾಂಪೇಜ್ ಅಂದಿದ್ದಾರೆ.. ಆದರೆ ಅಸಲಿಗೆ ಪುಷ್ಪ-2ನಲ್ಲೇ ಅಂತಹ ರ್ಯಾಂಪೇಜ್ಅನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.. ಹೀಗಾಗಿ ಸುಕುಮಾರ್ ಪ್ಲ್ಯಾನ್ನ ಪೇಜ್ ಇನ್ಯಾವ ಲೆವೆಲ್ನಲ್ಲಿ ಇರುತ್ತೆ ಎನ್ನುವ ಕುತೂಹಲ ಮಾತ್ರ ಈಗ ಉಳಿದಿದೆ.. ಇದರ ಜೊತೆಗೆ ಡಾಲಿ ಧನಂಜಯ್ ಬಗ್ಗೆಯೂ ಪುಷ್ಪ-3 ತನ್ನೊಳಗೆ ಕುತೂಹಲವನ್ನು ಉಳಿಸಿಹೋಗಿದೆ..