ಭಾಗ್ಯ ಜ್ವಾಲಾಮುಖಿ.. ಶ್ರೇಷ್ಠಾ ದ್ವೇಷ ಬೀದಿಗೆ ಬಿದ್ದ ತಾಂಡವ್? – ತಪ್ಪು ಮಾಡಿದ್ಲಾ ಕುಸುಮಾ ಸೊಸೆ?
ತಾಂಡವ್ – ಶ್ರೇಷ್ಠಾ ಸಂಬಂಧ ಗೊತ್ತಾದ ಭಾಗ್ಯ ಈಗ ಜ್ವಾಲಾಮುಖಿಯಾಗಿದ್ದಾರೆ.. ತಾಂಡವ್ ಯಾವಾಗ ತಾಳಿಗೆ ಅಪಮಾನ ಮಾಡಿದ್ನೋ ಅವಾಗಲೇ ತಕ್ಕ ಶಾಸ್ತಿ ಮಾಡಿದ್ದಾಳೆ.. ಇದೀಗ ತಾಂಡವ್ ಭಾಗ್ಯಳನ್ನ ಮನೆಯಿಂದ ಆಚೆ ಹಾಕಿದ್ದು, ಆಕೆ ದೃಢ ನಿರ್ಧಾರ ತೆಗೆದುಕೊಂಡೇ ಬಿಟ್ಟಿದ್ದಾಳೆ.. ಅಷ್ಟಕ್ಕೂ ಮನೆಯಿಂದ ಆಚೆ ಬಂದ ಭಾಗ್ಯ ಮುಂದೇನು ಮಾಡ್ತಾಳೆ? ತಾಂಡವ್ ಗೆ ಕೇಡುಗಾಲ ಶುರುವಾಯ್ತಾ? ವೀಕ್ಷಕರು ಹೇಳ್ತಿರೋದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ರಾಜಕೀಯ ದಿಲ್ಲಿಗೆ ಶಿಫ್ಟ್ – 2 ಬಣಗಳ ವಿರುದ್ಧ ಸಿಡಿದೆದ್ದ 3ನೇ ಬಣ
ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಈಗ ಭಾಗ್ಯ ಆಟ ಶುರುವಾಗಿದೆ.. ಹೋಟೆಲ್ ನಲ್ಲಿ ಭಾಗ್ಯಾಗೆ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರು ಪ್ರೀತಿ ಮಾಡ್ತಿದ್ದಾರೆ ಎಂಬ ಸತ್ಯ ಗೊತ್ತಾಗ್ತಿದ್ದಂತೆ ಭಾಗ್ಯಾ ಏನು ಮಾಡ್ತಾಳೆ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡಿತ್ತು. ಆಕೆ ಇಡೀ ರಾತ್ರಿ ಅತ್ತಿದ್ದನ್ನು ನೋಡಿ ವೀಕ್ಷಕರು, ಭಾಗ್ಯ ನೋವಿನಲ್ಲೇ ದಿನ ಕಳೆಯುತ್ತಾಳೆ ಅಂದ್ಕೊಂಡಿದ್ದರು. ಆದ್ರೆ ಭಾಗ್ಯ ಹಾಗೆ ಮಾಡ್ಲಿಲ್ಲ. ವೆಡ್ಡಿಂಗ್ ಆನಿವರ್ಸರಿ ದಿನ ಭಾಗ್ಯಾ ಮನೆಯವರಿಗೆಲ್ಲ ಶಾಕ್ ನೀಡಿದ್ದಳು. ಇದು ವಿಶೇಷ ದಿನ ಎನ್ನುತ್ತಲೇ ಮದುವೆ ಮಂಟಪವನ್ನೆಲ್ಲ ಸಿದ್ಧ ಮಾಡಿದ್ಲು.. ಭಾಗ್ಯ ವರ್ತನೆ ಎಲ್ಲರಿಗೂ ಅನುಮಾನ ಮೂಡಿಸಿತ್ತು. ಆದ್ರೂ ಭಾಗ್ಯಾಗೆ ಸತ್ಯ ತಿಳಿದಿಲ್ಲ ಎನ್ನುವ ನಂಬಿಕೆಯಲ್ಲೇ ಇದ್ರು. ಮದುವೆ ದಿನ ಮತ್ತೆ ತಾಳಿ ಕಟ್ಟಲು ತಾಂಡವ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಭಾಗ್ಯ ಜ್ವಾಲಾಮುಖಿಯಾದ್ಲು.. ತಾಂಡವ್ ಹಾಗೂ ಶ್ರೇಷ್ಠಾ ವಿಷ್ಯವನ್ನು ಮನೆಯವರ ಮುಂದೆ ತೆರೆದಿಟ್ಟಿದ್ದಳು. ಆಗ ನಾನು ಶ್ರೇಷ್ಠಾಳನ್ನ ಮದುವೆ ಆಗೇ ಆಗುತ್ತೇನೆ, ನನಗೆ ನೀನು ಇಷ್ಟವಿಲ್ಲ ಅಂತ ತಾಂಡವ್ ಭಾಗ್ಯಾ ಮೇಲಿರುವ ತನ್ನ ಭಾವನೆಯನ್ನು ಹೊರ ಹಾಕಿದ್ದ. ಇತ್ತ ಶ್ರೇಷ್ಠಾ, ತಾಂಡವ್ ನಾನು ಪ್ರೀತಿ ಮಾಡಿದ್ದೇವೆ ಎಂದಿದ್ದಳು. ನಮ್ಮಿಬ್ಬರ ಮಧ್ಯೆ ಬಂದ ಶ್ರೇಷ್ಠಾ ಎಷ್ಟು ತಪ್ಪು ಮಾಡಿದ್ದಾಳೆ ಎಂಬುದನ್ನು ಭಾಗ್ಯ ತಿಳಿಸಿ ಹೇಳಿದ್ರು ಅದನ್ನು ಒಪ್ಪಿಕೊಳ್ಳಲಿಲ್ಲ ಶ್ರೇಷ್ಠಾ. ತಾಳಿಗೇನು ಬೆಲೆ ಇದೆ ಅಂತಾ ಹೇಳಿದ ಶ್ರೇಷ್ಠಾ ಹಾಗೂ ತಾಂಡವ್ ಗೆ ತಕ್ಕ ಶಾಸ್ತಿ ಮಾಡಿದ್ದಾಳೆ. ಇಬ್ಬರಿಗೂ ಸರಿಯಾಗಿ ಕೆನ್ನೆಗೆ ಬಾರಿಸಿದ್ದಾಳೆ ಭಾಗ್ಯ.
ಆರಂಭದಲ್ಲಿ ತನ್ನ ಗಂಡನನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಅಂತ ಶ್ರೇಷ್ಠಾಗೆ ಎದುರಾಗಿ ನಿಂತಿದ್ದ ಭಾಗ್ಯ, ಕೊನೆಯಲ್ಲಿ ತಾಂಡವ್ ನಿಂದ ಬೇರೆಯಾಗಿದ್ದಾಳೆ. ನೀವಿಲ್ಲದೆ ಬದುಕಿ ತೋರಿಸುತ್ತೇನೆ ಅಂತಾ ಭಾಗ್ಯ ತಾಂಡವ್ ಗೆ ಸೆಡ್ಡು ಮನೆಯಿಂದ ಹೊರ ಬಂದಿದ್ದಾಳೆ.. ಬದುಕು ನಂದು, ನಿರ್ಧಾರ ನಂದು ಮತ್ತು ಮಕ್ಕಳು ನನ್ನವರು, ಅತ್ತೆ ಮಾವ ಕೂಡ ನಮ್ಮವರೇ ಎನ್ನುತ್ತಲೇ ಭಾಗ್ಯ ಮನೆಯಿಂದ ಹೊರಟಿದ್ದಾಳೆ.. ಭಾಗ್ಯ ಮನೆಯಿಂದ ಆಚೆ ಹೋಗುತ್ತಿದ್ದಂತೆ ತಾಂಡವ್ ಹುಚ್ಚನಂತೆ ಆಡುತ್ತಿದ್ದಾನೆ.. ಮಕ್ಕಳು, ತಂದೆ ತಾಯಿ ತನ್ನೊಂದಿಗೆ ಇರ್ಬೇಕು ಅಂತಾ ಬಯಸ್ತಿದ್ದಾನೆ.. ಆದ್ರೆ ಭಾಗ್ಯ ತಾನೇ ಎಲ್ಲರನ್ನ ನೋಡಿಕೊಳ್ಳುತ್ತೇನೆ ಅಂತ ಹೊರಟಿದ್ದಾಳೆ.
ಇದೀಗ ರೆಬಲ್ ಭಾಗ್ಯಳನ್ನ ವೀಕ್ಷಕರು ಮೆಚ್ಚಿದ್ದಾರೆ. ಭಾಗ್ಯಾ ಒಳ್ಳೆ ತೀರ್ಮಾನಕ್ಕೆ ಬಂದಿದ್ದಾಳೆ. ನಾಲಾಯಕ್ ಗಂಡನ ಜೊತೆ ಬದುಕುವ ಬದಲು, ದೂರ ಇರುವುದು ಒಳ್ಳೆಯದು ಎಂದು ವೀಕ್ಷಕರು ಹೇಳಿದ್ದಾರೆ. ತಾಂಡವ್ ಭಾಗ್ಯಳನ್ನ ಬಿಟ್ಟು ತಪ್ಪು ಮಾಡಿದ್ದಾನೆ.. ಭಾಗ್ಯ ಇಲ್ಲದೇ ಅವನ ಲೈಫ್ ಶೂನ್ಯ ಅಂತಾ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಶೋಕಿ ಮಾಡೋ ಶ್ರೇಷ್ಠಾ ಜೊತೆ ಇರೋದು ಕಷ್ಟ, ಅವಳು ಈತನಿಗೆ ಸರಿಯಾಗಿ ಬುದ್ಧಿ ಕಲಿಸ್ತಾಳೆ, ಶ್ರೇಷ್ಠಾ ಅಂತ ಮೆರೆಯುತ್ತಿದ್ದ ವ್ಯಕ್ತಿ ಮುಂದೊಂದು ದಿನ ಭಾಗ್ಯಾ ಕಾಲಿಗೆ ಬೀಳ್ತಾನೆ.. ಅವನಿಗೆ ಬುದ್ಧಿ ಬರಬೇಕು ಅಂತಾ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.. ಇನ್ನೂ ಕೆಲ ಭಾಗ್ಯಾ ಹಾಗೂ ಆಕೆ ಅತ್ತೆ – ಮಾವ ಮನೆಬಿಟ್ಟು ಹೋಗಿದ್ದು ಇಷ್ಟವಾಗಿಲ್ಲ. ಭಾಗ್ಯಾ ಇದೇ ಮನೆಯಲ್ಲಿ ಇರ್ಬೇಕಾಗಿತ್ತು. ತಾಂಡವ್ ನನ್ನು ಮನೆಯಿಂದ ಹೊರಗೆ ಹಾಕ್ಬೇಕಿತ್ತು. ಈಗ ಅವನಿಗೆ ಅವನು ಕೇಳಿದ್ದು ಸಿಕ್ಕಿದೆ ಎಂದಿದ್ದಾರೆ ವೀಕ್ಷಕರು.